ಕಾಫಿಯೊಡನೆ
ಕಾಫಿಯೊಡನೆ ಬಹಳಷ್ಟು ಸಂಭವಿಸಬಹುದಂತೆ
ಕುಳಿತಿದ್ದಾರೆ ಕಾಫಿತಾಣದಲಿ ಜನ ದ್ವೀಪದಂತೆ
ನಲ್ಲನಲ್ಲೆಯರ ಪಿಸುದನಿಯ ಸವಿಮಾತು
ಕನಸುಗಳನೂ ಹೆಣೆಯುತಿಹರು ಅಲ್ಲಿ ಕುಳಿತು
ಮದುವೆಯಾದ ಜೋಡಿಗಳಿಗೂ ಇಲ್ಲುಂಟು ಸ್ಥಳ
ತರಬಹುದು ತಮ್ಮೊಡನೆ ಜಂಜಡ,ಮನಸ್ತಾಪ ಜಗಳ
ಅಲ್ಲೊಂದು ಜೋಡಿ ನಡುವೆ ಇದೆ ಕಾಫಿ ಬಟ್ಟಲು
ಉಳಿದಂತೆ ಆ ಟೇಬಲಿನಲ್ಲಿ ಮೌನದ್ದೇ ದರ್ಬಾರು
ಮನದಾಳದ ಮಾತುಗಳಿಗೆ ಏನೋ ತಡೆಗೋಡೆ
ಇದ್ದು ಜಯಿಸುವುದೇ ಅಥವಾ ಅಗಲಿಕೆ ಹಿತವೆ?
ಅಲ್ಲಿ ಆ ಮೂಲೆಯಲಿ ಮೊಬೈಲು ಹಿಡಿದ ಒಬ್ಬಂಟಿ.
ಈಗಂತೂ ಸಾಮಾಜಿಕ ಜಾಲತಾಣವೇ ಅವನ ಸಂಗಾತಿ
ಹೌದು ಕಾಫಿಯೊಡನೆ ಬಹಳಷ್ಟು ಸಂಭವಿಸಬಹುದು
ನೋವು-ನಲಿವು,ಸಿಟ್ಟು -ಸೆಡವು ಕೊನೆಗೆ ದುರಂತ -ಸಾವು
–ಮಹಾಬಲ. ಕೆ.ಎನ್
ಸರ್, ಕೊನೆಯ ಸಾಲುಗಳು ಕಾಫಿ ಡೇ ಯ ಮಾಲೀಕನ ದುರಂತ ವನ್ನು ನೆನಪಿಸುವಂತಿದೆ.
“ಕಾಫಿ ಯೊಂದು ಕಾರಣ,
ಬೆರೆತು, ಕಲೆಯಲು ಎರಡು ಮನ”.
ಧನ್ಯವಾದಗಳು
ಧನ್ಯವಾದಗಳು
ಹೌದು, ಏನೆಲ್ಲಾ ಸಂಭವಿಸಬಹುದು… ಬದುಕು ಕಟ್ಟಬಹುದು, ಕೆಡವಬಹುದು, ಉಳಿಸಬಹುದು ಹಾಗೆಯೇ ಅಳಿಯಲೂಬಹುದು. ಹದಿನಾಲ್ಕು ಸಾಲುಗಳಲ್ಲಿ, ಒಂದು ಕಪ್ ಕಾಫಿಯಲ್ಲಿ ಏನೆಲ್ಲಾ ಅಡಗಿದೆಯಲ್ಲ!
ಧನ್ಯವಾದ
ಕಾಫಿಯ ಬಗ್ಗೆ ಸೊಗಸಾದ ಕವನ..ಬಿಸಿ ಬಿಸಿ ಕಾಫಿ ಕುಡಿದಂತಾಯ್ತು!