ಅಹಾ….ಚಹಾ
.
ಎದ್ದ ಕೂಡಲೇ ನೀನಿಲ್ಲದಿದ್ದರೆ ನಮಗೆ ಒಂದು ತರಹ ಕಸಿವಿಸಿ,
ನೀನು ಬಿಸಿಬಿಸಿಯಾಗಿ ನಮ್ಮೊಳು ಹೊಕ್ಕಾಗಲೆ ಕಡಿಮೆಯಾಗುವದು ನಮ್ಮ ತಲೆ ಬಿಸಿ,
ನೀನಿಲ್ಲದಿರೆ ನಮಗೆ ಒಂದು ಥರಾ ಖಿನ್ನತೆ,
ನೀನಿದ್ದರೇನೇ ಹೆಚ್ಚುವದು ನಮ್ಮ ಕಾರ್ಯದಕ್ಷತೆ,
ಸೊಸೈ”ಟೀ”ಯಲ್ಲ್ಲಾಗಲಿ
ಪಾರ್”ಟೀ” ಯಲ್ಲಾಗಲಿ ನಿನಗಿದೆ ಬಹಳ ಮಾನ್ಯತೆ,
ನೀನು ಪೇಯಗಳಲ್ಲೇ ಒಬ್ಬ ಸಿಲೆಬ್ರಿ”ಟೀ”ಯಾಗಿ ಹೆಚ್ಚಿಸಿಕೊಂಡಿರುವೆ ನಿನ್ನ ಘನತೆ,
ಲೇಮನ್ ಟಿ
ಮಸಾಲಾ ಟೀ
ತುಳಸಿ ಟೀ ಶುಗರಲೆಸ್,ವಿತ್ ಶುಗರ್ ಹೀಗೆ ಎಷ್ಟೆಲ್ಲಾ ಇದೆ ನಿನ್ನಲ್ಲಿ ವರೈಟೀ,
ನಿನ್ನ ಹಾಗೂ ನಿನ್ನ ಸಮ ಬೆಳೆಯುತ್ತಿರುವ ಕಾಫಿಗೆ ಇಲ್ಲ ಬಿಡು ಯಾವ ಪೇಯವೂ ಸರಿಸಾಟಿ,
ನಮ್ಮೆಲ್ಲರ ನೆಚ್ಚಿನ “ಚಹಾ”ನಾಮದ ಪೇಯವೇ
ನಿನಗೆ ಇನ್ನೂ ಹೆಚ್ಚಿನ ಅಭಿಮಾನಿಗಳು ಸಿಗಲಿ ಹಾಗು
ಆಲ್ ಮೈ”ಟೀ”ಯ ಆಶೀರ್ವಾದ ಸದಾ ನಿನ್ನ ಮೇಲಿರಲಿ
ಎಂಬುದು ನಮ್ಮ ಶುಭ ಹಾರೈಕೆ..
.
-ಮಾಲತೇಶ ಎಂ ಹುಬ್ಬಳ್ಳಿ
,
-ಮಾಲತೇಶ ಎಂ ಹುಬ್ಬಳ್ಳಿ
,
ಚಾ ಕುಡಿದಂತೆ ಆಯಿತು ,ನನಗೆ .ಅಹಾ!ಚಹಾ .
Sir , nice. ವಿಧ ವಿಧವಾದ ಚಹಾ,
ಪದಗಳಲ್ಲಿ ಕಷ್ಟ ಅದು ತುಂಬುವ ಉತ್ಸಾಹ .
ರುಚಿಯಾದ ಚಹಾ ಚೆನ್ನಾಗಿದೆ.