ಅಪ್ಪನಿಗೊಂದು ಪ್ರೀತಿಯ ಪತ್ರ
ಅಪ್ಪ ನೀನೇಕೆ ಹೀಗೆ
ಅಪ್ಪಾ ನೀನಿಲ್ಲದಿರುವ ದಿನ
ಪ್ರತಿ ದಿನವು
ಬರಿ ನೆನಪು
ಒಂದೊಂದು ಮಾತಿನ ಇಂಪು
ಆ ನಿನ್ನ ಧ್ವನಿಯು
ನಮ್ಮನೆಲ್ಲ ಇಂದಿಗೂ
ಕಾಡುತಿಹುದು
ನನ್ನ ಹೆಸರ ಕೂಗಲು ತಪ್ಪಿ
ಅಕ್ಕನ ಹೆಸರು ಸೇರಿಸಿ ಕೂಗುವೆ
ಒಮ್ಮೆಗೇ ಎಲ್ಲರೂ ಓಡೋಡಿ
ನಿನ್ನ ಕಣ್ಣ ಮುಂದೆ ಬರುವೆವು
ಆಗೆಲ್ಲಾ ನಮಗೆ ಸಂತಸದ ದಿನಗಳು
ಅಪ್ಪ ಎಲ್ಲೆಲ್ಲಿ ಹೋಗಲಿ
ಬರಿ ನಿನ್ನ ನೆನಪು
ನಾವೆಂದೂ ನಿನ್ನ ಅಗಲಿ
ಹೊಸಿಲು ದಾಟಿರಲಿಲ್ಲ
ನೀನೇ ಪ್ರಪಂಚ ನೀನೇ ಎಲ್ಲ
ಈಗ ನಿನ್ನ ಬಿಟ್ಟು
ಇಡೀ ಪ್ರಪಂಚವೇ ಸುತ್ತಿ ಬಂದರೂ
ಎಲ್ಲಿಯೂ ನೀನೂ ಕಾಣಲಿಲ್ಲ
ನೀನು ತೋರಿಸಿದ ಪ್ರಪಂಚ ಬೇರೆ
ಈಗ ಇರುವ ಪ್ರಪಂಚ ಬೇರೆ
ಕಾಲಕ್ಕೆ ನೀನು ಏಕೆ ಮರೆಯಾಗಿರುವೆ ಅಪ್ಪ
ಈಗಲೇ ಬಂದುಬಿಡಪ್ಪ
ನೀ ಏಕೆ ಬಾರದ ಲೋಕಕ್ಕೆ
ಹೋಗಿರುವೆ
ನನಗೆ ಅರಿವಿಲ್ಲದ ವಯಸ್ಸದು
ನಿನ್ನ ಕಳೆದುಕೊಂಡ ದಿನವದು
ಇಂದಿಗೂ ನೆನಪಿದೆ ನನಗೆ
ಆ ದಿನದ ಗೋಳಾಟ
ಅಪ್ಪ ನೀನೇ ನನ್ನ ಸ್ಫೂರ್ತಿ
ಈ ಜಗದ ಉಸಿರು ನನ್ನೆದೆಯ ತಾಕಲೂ ನೀನೇ ಕಾರಣ
ಅಪ್ಪ ಬಾರದ ಲೋಕಕ್ಕೆ ಏಕೆ ಹೋಗಿರುವೆ
ನೀನಿಲ್ಲದ ಜಗವು ನಮಗೇಕೆ
ಕಾಲ ನಮಗೂ ಹೀಗೆ ನಿಲ್ಲದು
ಮುಂದೊಂಮ್ಮೆ ನಾ ನಿನ್ನಲ್ಲೆ ಬಂದಾಗ
ಆ ದೇವರನ್ನೇ ಪ್ರಶ್ನಿಸುವೆ….?
ಹೀಗೇಕೆ ಮಾಡಿರುವೆ ಎಂದು
ಅಪ್ಪಾ…. ನನ್ನೊಲವಿನ ಅಪ್ಪಾ
ಅಪ್ಪಾ…. ನನ್ನ ಪ್ರೀತಿಯ ಅಪ್ಪಾ…
-ರಾಜೇಶ್ವರಿ, ಚಿತ್ರದುರ್ಗ
ಚೆನ್ನಾಗಿದೆ . ನೋವಿದ್ದರೂ ಮನದಾಳದ ಭಾವ ಸಹಜವಾಗಿ ಮೂಡಿ ಬಂದಿದೆ .
ಭಾವನಾತ್ಮಕತೆ ತುಂಬಿ ಮನಸ್ಸಿಗೆ ತಟ್ಟುತ್ತದೆ. ಉತ್ತಮ.
ಅಪ್ಪ… ಬರೆಯುತ್ತಿರಿ ರಾಜೇಶ್ವರಿ.
Super
ಭಾವನಾತ್ಮಕ ಕವಿತೆ… ಚೆನ್ನಾಗಿದೆ.