ಶಾರದೆ
ಉದ್ದ ಲಂಗ ನೆರಿಗೆ ಚಿಮ್ಮಿ
ಹೊಲಿಗೆ ತೇಪೆ ಕಾಣದಂತೆ,
ಕುಣಿದು ಓಡಿ ಶಾಲೆಗೆ
ಬೆಳೆಯುತಿರುವ ಶಾರದೆ
ಎರಡು ಜಡೆಯ ಶಾರದೆ
ಅಗಲ ಕಣ್ಣು, ನೆಟ್ಟ ನೋಟ
ಪಾಠ ಪದ್ಯ ತೆಕ್ಕೆಯೊಳಗೆ
ಡಬ್ಬಿ ಚಿತ್ರಾನ್ನದೂಟ
ಸಾಕು ಎನುವ ಶಾರದೆ
ಎರಡು ಜಡೆಯ ಶಾರದೆ
ಪಟ ಪಟ ಪಟ ಮಾತ ಧೀರೆ
ಕುಂಟುಪಿಲ್ಲೆ ಕವಡೆ ಚತುರೆ
ನಗುತಲೋಡಿ ಮನೆಯಕಡೆಗೆ
ಚುರುಕು ಚಿತ್ರ ಶಾರದೆ
ಎರಡು ಜಡೆಯ ಶಾರದೆ
ಮೂರು ಮನೆಯ ಅಡುಗೆ ಕೆಲಸ
ಅಮ್ಮ ಮುಗಿಸಿ ಬರುವ ಮೊದಲೆ
ಎಲ್ಲ ಕೆಲಸ ಮಾಡಿಬಿಡುವ
ಸುಗುಣ ಬಾಲೆ ಶಾರದೆ
ಎರಡು ಜಡೆಯ ಶಾರದೆ
ಪಕ್ಕಮನೆಯ ಬಾಗಿಲಲ್ಲೆ
ಇಣುಕು ನೋಟ ಟೀವಿ ಕಡೆಗೆ
ಅಷ್ಟೆ ಸಾಕು, ಲೋಕವರಿತ
ಚುರುಕು ಮೆಣಸು ಶಾರದೆ
ಎರಡು ಜಡೆಯ ಶಾರದೆ
ಮಂಕು ದೀಪ ಉರಿದರೇನು
ಅರ್ಧ ಹೊಟ್ಟೆ ಆದರೇನು
ಮಲಗು ಮೊದಲು ಕವನ ಸಾಲು
ಬರೆವಳದೊ ಶಾರದೆ
ಎರಡು ಜಡೆಯ ಶಾರದೆ
ಧಮನಿ ಧಮನಿ ಸೂಸು ಭಾವ
ಸ್ಪಂದನೆಯಲಿ ಜೀವದಂದ
ತಡೆಗಳೇನು ಬಾರದೆ? ಬಂದರೇನು?
ನೆಲದ ಗಂಧ, ಮನದ ಬೆಳಕು
ಎರಡು ಜಡೆಯ ಶಾರದೆ!
-ಕೆ.ಆರ್.ಎಸ್.ಮೂರ್ತಿ
ಚೆನ್ನಾಗಿದೆ
ಚಂದ.. ‘ಶಾರದೆ’
ಕವನ ನನ್ನಾ ಶಾರದೆಯ (,ಮಗಳು) ಕುರಿತಾಗಿ ಬರೆದ ಹಾಗಿದೆ . ಸೇಮ್ ಕವಿತೆಯಲ್ಲಿ ವಿವರಿಸಿದ ರೀತಿಯೇ ನನ್ನ ಶಾರದೆ ತಯಾರಾಗಿ ಸ್ಕೂಲ್ಗೆ ಹೋದ್ಲು. Very nice
ಕವನ ನನ್ನಾ ಶಾರದೆಯ (,ಮಗಳು) ಕುರಿತಾಗಿ ಬರೆದ ಹಾಗಿದೆ . ಸೇಮ್ ಕವಿತೆಯಲ್ಲಿ ವಿವರಿಸಿದ ರೀತಿಯೇ ನನ್ನ ಶಾರದೆ ತಯಾರಾಗಿ ಸ್ಕೂಲ್ಗೆ ಹೋದ್ಲು. Very nice
Very ನೈಸ್ poem
ತುಂಬಾ ಚೆನ್ನಾಗಿದೆ