ಲಹರಿ

ಮೊಗ್ಗರಳುವ ಮೊದಲೇ…

Share Button

ಅದೊಂದು  ಸಂಜೆ  ಮನೆಯ  ಅಂಗಳದಲ್ಲಿ  ಹೂಗಿಡಗಳನ್ನು  ನೋಡುತ್ತಾ  ನಿಂತಿದ್ದೆ. ಪಾತರಗಿತ್ತಿಯೊಂದು  ಗುಲಾಬಿಯ ಎಳೆ ಮೊಗ್ಗಿನ  ಮೇಲೆ  ಕುಳಿತು  ತದೇಕಚಿತ್ತದಿಂದ  ಮಕರಂದ  ಹೀರುತ್ತಿತ್ತು.  ಸುಮಾರು  20  ನಿಮಿ‍ಷಗಳು  ಕಳೆದರೂ  ಅದೇ ಧ್ಯಾನಮಗ್ನ  ಸ್ಠಿತಿ. ಮನಸನ್ನು  ಅತಿಯಾಗಿ  ಕಾಡಿದ  ಆ  ದೃಶ್ಯವನ್ನು  ಮೊಬೈಲ್  ಕ್ಯಾಮರಾದಲ್ಲಿ  ಸೆರೆ  ಹಿಡಿದೆ. ಇನ್ನೂ  ಎಷ್ಟು ಹೊತ್ತು  ಆ  ಸ್ಠಿತಿಯಲ್ಲಿ  ಇರುತ್ತಿತ್ತೋ  ಪಾತರಗಿತ್ತಿ!  ಅರ್ಧ  ಘಂಟೆಯ  ಬಳಿಕ  ಗುಲಾಬಿ  ಗಿಡದ  ಗೆಲ್ಲನ್ನು  ಮೆಲ್ಲನೆ ಮುಟ್ಟಿದೆ. ಪಾತರಗಿತ್ತಿ  ಹಾರಿ  ಹೋಯಿತು. ನನ್ನ  ಮನದಲ್ಲಿ  ಹಲವು  ಯೋಚನೆಗಳು…….

“ಮೊಗ್ಗರಳುವ  ಮೊದಲೇ  ಈ  ಪಾತರಗಿತ್ತಿಗೆ  ಮಕರಂದ  ಹೀರುವ  ತವಕ  ಯಾಕೋ” . ಮೊಗ್ಗು  ನಲುಗಿತ್ತು. ಅದೇ ದಿನ  ವೃತ್ತ ಪತ್ರಿಕೆಯಲ್ಲಿ  ಬಂದಿತ್ತು  ಸುದ್ದಿ -“ಅಪ್ರಾಪ್ತ  ಬಾಲಕಿಯ  ಅತ್ಯಾಚಾರ  ಮಾಡಿ  ಕೊಲೆ”. ನಲುಗಿದ  ಎಳೆ  ಮೊಗ್ಗು, ವಿಕೃತ  ಕಾಮಿಯ  ಕಾಮಲಾಲಸೆಗೆ  ಬಲಿಯಾದ ಎಳೆ  ಹೆಣ್ಣು  ಮಗು- ಎರಡನ್ನೂ  ಮನ  ಸಮೀಕರಿಸಿತು. ಪಾತರಗಿತ್ತಿಗೂ  ತವಕ. ಹೂವರಳುವ  ತನಕ  ಕಾಯುವ  ವ್ಯವಧಾನವಿಲ್ಲ. ಎಳೆಯ  ಹೆಣ್ಣು  ಮಗುವನ್ನು ಭೋಗಿಸಿ  ಕೊಲೆ  ಮಾಡಿದ  ಆ  ವಿಕೃತ ಕಾಮಿಯ ಕ್ರೂರತೆ ಪುಟ್ಟ ಕಂದಮ್ಮನ ಬದುಕುವ ಹಕ್ಕನ್ನು ಕಸಿದಿತ್ತು. ಹೂವಾಗಿ ಅರಳಬೇಕಿದ್ದ ಮೊಗ್ಗು ಕಮರಿತ್ತು. ಹೂವೂ- ಹೆಣ್ಣೂ ಎರಡೂ…..

 

 

-ಕೃಷ್ಣಪ್ರಭಾ, ಮಂಗಳೂರು

7 Comments on “ಮೊಗ್ಗರಳುವ ಮೊದಲೇ…

  1. ಹೂವು – ಹೆಣ್ಣು ಎರಡರ ನಡುವೆಯೂ ಅದೆಷ್ಟೊಂದು ಸಾಮ್ಯತೆ . ಪುಟ್ಟ ಹೆಣ್ಣು ಮಕ್ಕಳೂ ಅತ್ಯಾಚಾರದಂತಹ ಹೀನ ಕೃತ್ಯಕ್ಕೆ ಒಳಗಾಗುತ್ತಿರುವುದು ದುರಂತವೇ ಸರಿ .

  2. ಲೇಖನ ತುಂಬಾ ಚೆನ್ನಾಗಿ ಬಂದಿದೆ..ಭಾಷೆಯ ಹಿಡಿತ ಅದ್ಭುತ ..

  3. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

Leave a Reply to Krishnaprabha Cancel reply

 Click this button or press Ctrl+G to toggle between Kannada and English

Your email address will not be published. Required fields are marked *