ಶಂಕರಾಚಾರ್ಯರಿಗೆ ನಮನ
ಆಚಾರ್ಯ ಶಂಕರರೇ.
ವಂದಿಪೆ ನಿಮಗೆ ಗುರುವರರೇ …
ಆರ್ಯಾಂಬಾ-ಶಿವಗುರುವಿನ ಮಗನಾಗಿ ಜನಿಸಿ,
ಆದಿಶಕ್ತಿಯ ಆಶೀರ್ವಾದ ಗಳಿಸಿದಿರಿ.
ಹಿಂದೂ ವೇದಾಂತ ಮತವನು ಪುನರುತ್ಥಾನಗೊಳಿಸಿ
ಅಧ್ಯಾತ್ಮ ಚಿಂತನೆ ಹರಿಸಿದಿರಿ..
ಆಚಾರ್ಯ ಶಂಕರರೇ
ವಂದಿಪೆ ನಿಮಗೆ ಗುರುವರರೇ..1
ಅಲ್ಪ ಸಮಯದಲಿ
ಅಗಾಧ ಪಾಂಡಿತ್ಯ ಗಳಿಸಿ
ಅಖಂಡ ಭಾರತಯಾತ್ರೆಗೈದಿರಿ.
ಶೃಂಗೇರಿ,ಬದರಿ,ಪುರಿ.ದ್ವಾರಕಾ ದಲ್ಲಿ ಪೀಠಗಳನ್ನು ಸ್ಥಾಪಿಸಿ ಅದ್ವೈತ ಮತವನ್ನು ಪ್ರಚುರಪಡಿಸಿದಿರಿ.
ಭಾರತ ವರ್ಷದ ಹೆಮ್ಮೆ ಎನಿಸಿದಿರಿ..
ಆಚಾರ್ಯ ಶಂಕರರೇ
ವಂದಿಪೆ ನಿಮಗೆ ಗುರುವರರೇ..2
ಅಹಂ ಬ್ರಹ್ಮಾಸ್ಮಿ ಎಂಬ ತತ್ವವನು
ಜಗತ್ತಿನಾದ್ಯಂತ ಸಾರಿದಿರಿ,,
ಆಸೆಗೆ ಕಾರಣವಾದ ದೇಹಭಾನವ ಬಿಟ್ಟು
“ಆತ್ಮನಾಗಿ ನಾನೇ ಎಲ್ಲದರಲ್ಲಿ ಇರುವೆನು” ಎಂಬ ಸತ್ಯವನು ಅರಿತುಕೊಳ್ಳಲು ಹೇಳಿದಿರಿ..
ಆಚಾರ್ಯ ಶಂಕರರೇ
ವಂದಿಪೆ ನಿಮಗೆ ಗುರುವರರೇ..3
ಕರ್ಮದಿಂದ ಭಕ್ತಿ,ಭಕ್ತಿಯಿಂದ ಜ್ಞಾನ,ಜ್ಞಾನದಿಂದ ಮುಕ್ತಿ ಎಂದು ಪ್ರತಿಪಾದಿಸಿದಿರಿ..
ಅಮೋಘ ಭಜನಾಮೃತ “ಭಜ ಗೋವಿಂದಮ್” ರಚಿಸಿದಿರಿ,
ಆ ಮೂಲಕ ಜೀವನದ ತಿರುಳನ್ನು ಎಲ್ಲರಿಗೂ ಸರಳ ರೀತಿಯಲ್ಲಿ ತಿಳಿಯಪಡಿಸಿದಿರಿ,
ಆಚಾರ್ಯ ಶಂಕರರೇ
ವಂದಿಪೆ ನಿಮಗೆ ಗುರುವರರೇ..4
ಇಂದು ನಿಮ್ಮಯ ಜನ್ಮದಿನ
ಭಕ್ತವೃ಼ಂದ ಹೆಮ್ಮೆ ಪಡುವ ದಿನಾ,
ಆಗಿದೆ ಈಗದು ದಾರ್ಶನಿಕ ದಿನಾ
ವಿಜೃಂಭಣೆಯಿಂದ ಆಚರಿಸುವೆವು ನಾವಿದನಾ,,
ಆಚಾರ್ಯ ಶಂಕರರೇ
ವಂದಿಪೆ ನಿಮಗೆ ಗುರುವರರೇ..5
“ಎಲ್ಲರಿಗೂ ಶಂಕರ ಜಯಂತಿಯ ಶುಭಾಶಯಗಳು”
-ಮಾಲತೇಶ ಎಂ ಹುಬ್ಬಳ್ಳಿ