ಬೆಳಕು-ಬಳ್ಳಿ

ಧಗೆ

Share Button

ಅದು ನಾಲ್ಕನೆಯ ಪಂಚಾಯಿತಿ ಬಾವಿ
ನೀರಿತ್ತೆನ್ನುವ ಕುರುಹೆಲ್ಲಿ ?
ಹುಡುಕುವ ಕಣ್ಣೆವೆಗಳಿಗೆ ಯುದ್ಧ
ಮುಂದೆ ಸಾಗಿ ಪ್ರಯೋಜನವಾದರೂ ಏನು

ಬಿಸಿಲ ಧಗೆಗೆ ರಿವರ್ಸ್ ಗೇರ್ ಹಾಕಿದ
ಭಯದ ಬೆವರ ಹನಿ
ಕಣ್ಣುಗಳಿಗೆ ಬೀಗ ಜಡಿದು
ಕಂಡಿದ್ದ ಜಲರಾಶಿ ಮತ್ತೆ ಕಂಡೆ

ಕಣ್ಣ ಹನಿ, ಬೆವರ ಹನಿ
ಜೊತೆಗೂಡಿ ಬಿಟ್ಟ ಕಣ್ಣು
ಆಲಿಕಲ್ಲು ಅರಸಿ
ಎಡವಿದ ಕಲ್ಲಿಗೆ ರಕ್ತದೋಕುಳಿ

ಆಕಾಶದ ಹೃದಯ ಕಲ್ಲಾಗಿದೆ
ಪಾದಪಗಳೂ ಚಲನ ಹೀನ
ನದಿಯ ಬೆಸುಗೆಯಲ್ಲೂ ವಿರಸ
ನರರ ವಿಲಾಸಿ ಜೀವನ

ಈಗ ಸಣಕಲಾದ ಇಳೆ
ಒಗಟು ಮಾತ್ರ
ಬಾವಿಯ ಎಡಭಾಗದ ಮೂರನೆಯ
ಒಣಗಿದ ಗದ್ದೆ ನಕ್ಕು ಹೇಳಿದೆ

 – ಸುನೀತಾ, ಕುಶಾಲನಗರ

7 Comments on “ಧಗೆ

  1. ಧಗೆಯನು ಹೊಸದಾಗಿ ಕಂಡರಿಸಿದ ಬಗೆ ಬಹಳ ಇಷ್ಟ ವಾಯಿತು

  2. ನಿಮ್ಮ ಈ ಧಗೆ…
    ನನಗೆ ಕಂಡಿತು ಹೊಸ ಬಗೆ..

  3. ನೈಸ್. ಪ್ರಕೃತಿಯ ಪ್ರತಿ ಕಾಳಜಿ ತುಂಬಿದೆ ನಿಮ್ಮ ಸಾಲುಗಳಲ್ಲಿ .

Leave a Reply to Nayana Bajakudlu Cancel reply

 Click this button or press Ctrl+G to toggle between Kannada and English

Your email address will not be published. Required fields are marked *