ವೀರ ಪುಲ್ವಾಮ ಯೋಧರೇ….
ಮನೆ ಮಂದಿಯ ತೊರೆದಿರೇಕೆ
ದೇಶ ಸೇವೆಯ ಅರಸಿದಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ
ಎನದೆ ಹುತಾತ್ಮರಾಗಿ ಹೋದಿರೇಕೆ …
ಹೊನ್ನು ಹಣ ಕಡೆಗಾಣಿಸಿದಿರೇಕೆ
ದೇಶದ ಋಣವ ತೀರಿಸಿದಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ
ಎನದೆ ಹುತಾತ್ಮರಾಗಿ ಹೋದಿರೇಕೆ …
ಸುಖ ಲಾಲಸೆ ಬೇಡವೆಂದಿರೇಕೆ
ದೇಶ ಭಕ್ತಿಯ ಮೆರೆದಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ
ಎನದೆ ಹುತಾತ್ಮರಾಗಿ ಹೋದಿರೇಕೆ …
ಜಾತಿ ಧರ್ಮ ಎಣಿಸಲಿಲ್ಲವೇಕೆ
ದೇಶಕೆ ಕುಲವೊಂದೆ ಎಂದಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ
ಎನದೆ ಹುತಾತ್ಮರಾಗಿ ಹೋದಿರೇಕೆ …
ಉಸಿರ ಹಂಗ ನೀಗಿದಿರೇಕೆ
ದೇಶ ವಾಸಿಗಳ ಸಲಹಿದಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ
ಎನದೆ ಹುತಾತ್ಮರಾಗಿ ಹೋದಿರೇಕೆ …
ಬೇಗೆ ಬವಣೆಯ ಭರಿಸಿದಿರೇಕೆ
ದೇಶ ಕಾಯ್ವ ಹೊಣೆಯ ಹೊತ್ತಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ
ಎನದೆ ಹುತಾತ್ಮರಾಗಿ ಹೋದಿರೇಕೆ …
ಕ್ರೂರ ಜಗವಿದೆಂದು ಅರಿಯಲಿಲ್ಲವೇಕೆ
ದೇಶದ ಮಕ್ಕಳಿಗಾಗಿ ದೇಹವೆಂದಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ
ಎನದೆ ಹುತಾತ್ಮರಾಗಿ ಹೋದಿರೇಕೆ …
ಬದುಕ ಭೂಮಿಗೆ ಮೀಸಲಾಗಿಸಿದಿರೇಕೆ
ದೇಶ ಭಾರತವೆ ಉಸಿರೆಂದಿರೇಕೆ
ದೇಶವಿತ್ತಿತೇನಗೆ ದೇಶವೇನಾದರೇನಗೆ
ಎನದೆ ಹುತಾತ್ಮರಾಗಿ ಹೋದಿರೇಕೆ …
-ಭಾರತಿ ಪಿ.ಜಿ
ಕೇಳಲೇ ಬೇಕಾದ ಪ್ರಶ್ನೆಗಳು. ಪುಲ್ವಾಮಾ ಘಟನೆ ಎಂತಹವರನ್ನು ಕಣ್ಣೀರು ಮಿಡಿಯುವಂತೆ ಮಾಡಿದೆ .