ನಿನ್ನ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು
ನಿನಗಾಗಿ ಬರುತ್ತಾ ಇದ್ದರೆ
ನೀನು ಕಾಣೆದೆ ಇರಬಹುದು
ಆದರೆ, ನಿನ್ನ ಜೊತೆ ನಡೆದಂತಾಗುತ್ತದೆ!
ಸುಂದರವಾದ ನಿನ್ನ ಪಾದದ ಮುದ್ರೆಗಳು
ಕಣ್ಣಿಗೆ ಕಾಣುವವರೆಗೆ
ಅದನ್ನು ನೋಡುತ್ತಾ ಎಷ್ಟು ದೂರವಾದರೂ
ಆಯಾಸವಿಲ್ಲದೆ ನಡೆಯುಲಾಗುತ್ತದೆ
ಆಶೆಗಳ ತೀರದ ಆಕಡೆ,ಏನಿದೆಯೋ
ನನ್ನನ್ನು ಸದಾ ಬರಲು ಆಹ್ವಾನ ನೀಡುತ್ತಾ
ಹೇಗೆಗೋ ಕೀಟಲೆ ಮಾಡುತ್ತಾಯಿರುತ್ತದೆ
ನಿನ್ನ ಮುಖದಲ್ಲಿ ಬೆಳಕುವ ಮುಗುಳ್ನಗೆಯಂತೆ.
.
ಹಸಿರುತನ ಹರಡಿದಂತಿದ್ದ
ರಸ್ತೆಯ ಉದ್ದಕ್ಕೂ ನಿನ್ನ ಹೆಜ್ಜೆಗಳ ಪ್ರಾಯ
ಹೋ ಮಳೆ ಸುರಿಸಿದಂತೆ ಕಾಣುತ್ತಾ
ನಿನ್ನ ಬರುವಿಕೆ ನನಗೆ ನೆನಪು ಮಾಡುವಂತಾಗುತ್ತದೆ
ಕಾಲು ಗೆಜ್ಜೆಗಳ ಸಣ್ಣ ನಾದ ಕೇಳುತ್ತಾ
ಹೋ ಬಾಲಿಕೆಯರು ತಾಳ ಹಾಕಿದಂತೆ ತಲೆತೂಗುತ್ತಾಯಿದ್ದರೆ
ಆಗ,ನೀನು ಇಲ್ಲೇ, ಹತ್ತಿರದಲ್ಲಿದ್ದಂತೆ ಅನಿಸುತ್ತದೆ
ನನ್ನ ಮನಸ್ಸು ಯಾಕೋ….ಪರವಶವಾಗುತ್ತದೆ!
ಏನೋ ಆಕರ್ಷಣೆ ನಿನ್ನ ನಡಿಗೆಯಲ್ಲಿದೆ
ನಿನ್ನಕಡೆ ಅಯಸ್ಕಾಂತದಂತೆ ಎಳೆಯುತ್ತದೆ
ನಿನ್ನ ಸ್ಮೃತಿಯಲ್ಲಿ ನಿನ್ನ ಚರಣ ಮುದ್ರೆಗಳು ಪ್ರತಿಷ್ಠಿತವಾಗಿ
ನನಗೆ ತಿಳಿಯದೆ ನಿನ್ನಲ್ಲಿ ಮಿಲನವಾಗುತ್ತಿದೆ!!.
ನುಡಿಗಳಾಗಿ ನನ್ನಬಳಿ ಬರದಂತಾಗಿದೆ ಈವತ್ತು
ಒಂದು ಮಲಯಾನಿಲ ಸೇರಿದ ಆ….ಪಿಸುನುಡಿಗಳು
ನೀನಂದರೇನು?ಎಂದು ವಿವರಿಸುತ್ತವೆ.
ನನಗೆ ನಿನ್ನನ್ನು ಒಂದು ಬಾರಿಯಾದರೂ ನೋಡಬೇಕೆಂದು ಇದೆ
ನಿನ್ನ ಪಾದ ತಾಕಿದ ಕೂಡಲೇ ಹೇಗೆ ಚಿತ್ರಾಂಗಿ ಜೊತೆ
ಬಂಡೆ ಕಲ್ಲಿನ ನೆಲೆ ಮೃದುವಾಗಿ ಕರಗಿ ಹೋಯಿತೆಂದು
ಕೇಳುವಂತೆ ಮನಸುಮಾಡುವ
ತುಂಟಾಟ ನನಗೆ ಯಾಕೋ ಸಂತೋಷವಾಗುತ್ತಿದೆ!
.
ಕರುಣಿಸಿ ನನ್ನನ್ನು ಸೇರಿಸಿಕೊಳ್ಳುತ್ತಿದಿಯೋ
ಅಪರಿಚಿತನೆಂದು ದೂರ ಮಾಡುತ್ತಿದಿಯೋ
ನಿನಗೆ ನಾನು ಯಾರೆಂದು ತಿಳಿಯದಿದ್ದರೂ, ಸರಿ
ನನಗೆ ನೀನಂದರೆ ಏನೆಂದು ಹೇಳಲಾಗುತ್ತದೆ!
ದಡ ಸೇರ ಬೇಕೆಂಬ ಆಶೆ ಉಳ್ಳವ ತರಂಗ ನಾನಾದರೆ
ಗಡಿ ದಾಟ ಬೇಡ ಎಂಬ ಗೆರೆ ಗೀಚುವಳು ನೀನೆ
ನೀನು ನಿನ್ನನ್ನು ಸೇರ ಬಾರದೆಂದು ಎಷ್ಟೇ ಕಟ್ಟು ಮಾಡಿದ್ದರೂ
ನನ್ನ ಪ್ರಯತ್ನ ನಾನೆಂದಿಗೂ ಬಿಡುವುದಿಲ್ಲ!
-ಡಾ.ಸುರೇಂದ್ರ, ಅನುವಾದ : ಪ್ರಭಾಶಾಸ್ತ್ರಿ ಜೋಶ್ಯುಳ, ಮೈಸೂರು.
.