ಒಲವು ನಲಿವಿನ ದೀಪಾವಳಿ
ದೀಪಾವಳಿ ಎಂದರೆ ಬೆಳಕಿನ ಹಬ್ಬ.ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ತರುವ ಹಬ್ಬ.
ಹಳ್ಳಿಮನೆಯ ಕೂಡುಕುಟುಂಬದಲ್ಲಿ ಒಂದು ವಾರದ ಮೊದಲೇ ಹಬ್ಬದ ತಯಾರಿ ಆರಂಭವಾಗುತ್ತದೆ . ಆಗೆಲ್ಲಾ ಈಗಿರುವ ಸೌಕರ್ಯ ಇರಲಿಲ್ಲ . ಅಡುಗೆ ಮಾಡಲು, ನೀರು ತರಲು, ಎಲ್ಲದಕ್ಕೂ ನಮ್ಮ ಎರಡು ಕೈಗಳು. ಕಷ್ಟದ ಜೀವನ ಆದರೂ ಹಬ್ಬವನ್ನು ಸಡಗರದಿಂದಲೇ ಆಚರಿಸುತ್ತಿದ್ದೆವು .ಅದೇ ನಮ್ಮ ನಂಸ್ಕೃತಿಯ ಜೀವಾಳ ಅಲ್ಲವೇ?
ಅಮಾವಾಸ್ಯೆ ದಿನ ಕತ್ತಲನ್ನು ಹೊಗಲಾಡಿಸುವ ಹಬ್ಬ ಹಣತೆ ಹಚ್ಚಿ ದೀಪ ಬೆಳಗಿಸುವ ಹಬ್ಬ. ಬಲಿಪಾಡ್ಯಮಿಯಂದು ಗೋವಿನ ಪೂಜೆ. ತುಳಸಿ ಪೂಜೆ . ಕೊಟ್ಟಿಗೆ ತುಂಬಿರುತ್ತಿದ್ದ ಹಸುಕರುಗಳನ್ನುಸ್ನಾನ ಮಾಡಿಸಿ, ಅವಕ್ಕೆ ಕುಂಕುಮ ಬೊಟ್ಟು ಇಟ್ಟು, ಪಾರೆ ಹೂವಿನ ಮಾಲೆ ತೊಡಿಸಿ ಸಿಂಗರಿಸುತ್ತಿದ್ದೆವು . ಅಪ್ಪ ಹಸುಕರುಗಳಿಗೆ ಆರತಿ ಮಾಡುತ್ತಿದ್ದರು .ಅಮ್ಮ ಹಬ್ಬಕ್ಕೆಂದು ವಿಶೇಷವಾಗಿ ಮುಳ್ಳು ಸೌತೆಕಾಯಿ, ಅಕ್ಕಿ ಬೆರೆಸಿ ತಯಾರಿಸುತ್ತಿದ್ದರು. ಹಸುಕರುಗಳಿಗೆ ಕಡುಬನ್ನು ತಿನ್ನಿಸುತ್ತಿದ್ದೆವು.
ನಂತರ ತುಳಸಿ ಪೂಜೆ. ಅದಕ್ಕೂ ಅವಲಕ್ಕಿ ಕಜ್ಜಾಯ ಮಾಡುವರು . .ಬಲಿಯೇಂದ್ರ ಬಲಿಯೇಂದ್ರ ಹಾಕುವ ಗೌಜಿ ಸೂರ್ಯ ಮುಳುಗುವ ವೇಳೆಗೆ .ತುಳಸಿ ಕಟ್ಟೆ ಬಲಭಾಗದಲ್ಲಿ , ಬಾಳೆಗಿಡದಿಂದ ಅಥವಾ ಹಾಲೆಮರದ ಕಾಂಡದಿಂದ ಬಲಿಯೇಂದ್ರನನ್ನು ಸ್ಥಾಪಿಸಿ ಪೂಜಿಸುವುದು ನಮ್ಮೂರ ಪದ್ದತಿ. ನಂತರ ಹಣತೆ ಹಚ್ಚಿ ಬಲಿಯೇಂದ್ರನನ್ನು ಪೂಜಿಸಿ, ನೈವೇದ್ಯವನ್ನು ಅರ್ಪಿಸುವ ವಾಡಿಕೆ. ಹಣತೆಯನ್ನು ಉರಿಸಿ ಅದರ ಮಂದ ಬೆಳಕಿನ ಜೊತೆಗೆ ಮಕ್ಕಳ ಪಟಾಕಿ ಸಿಡಿಸುವ ಕಾರ್ಯಕ್ರಮವೂ ಸಂಪನ್ನಗೊಳ್ಳುತ್ತದೆ. ಮಕ್ಕಳು ಪಟಾಕಿ ಸಿಡಿಸುವ ಸಂಭ್ರಮವನ್ನು ನೋಡಲು ಎರಡು ಕಣ್ಣು ಸಾಲದು. ಬದಲಾದ ಈಗಿನ ಕಾಲದಲ್ಲಿ ಕೂಡು ಕುಟುಂಬಗಳು ವಿರಳವಾಗಿವೆ . ಎರಡೇ ಜನ ಇರುವ ಕುಟುಂಬಗಳೇ ಹೆಚ್ಚು. ಹಾಗಾಗಿ , ಅಕ್ಕಪಕ್ಕದ ಮನೆಯವರು ಒಟ್ಟಾಗಿ ಹಬ್ಬವನ್ನು ಆಚರಿಸಿ ಕತ್ತಲನ್ನು ಹೋಗಲಾಡಿಸಬಹುದಲ್ಲವೇ? ಅದೇ ಸಂಭ್ರಮವನ್ನು ಪಡೆಯಬಹುದಲ್ಲವೇ? ಆದರೆ ನಾವು ಈಗಲೂ ಈ ಬೆಳಕಿನ ಹಬ್ಬವನ್ನು ಮಾಡುತ್ತಾ ಬಂದಿರುತ್ತೇವೆ.
ಇಂತಹ ಹಬ್ಬಗಳನ್ನು ಮನೆ ಮಂದಿ ಸೇರಿ ಮಾಡಿದರೆ ಕತ್ತಲನ್ನು ದೂರ ಮಾಡಿ ಒಂಟಿತನವನ್ನು ಹೋಗಲಾಡಿಸಿ ಬೇಸರ ಎಲ್ಲವೂ ಕರಗಿ ಹೋಗಿ. ಹಬ್ಬಗಳಿಗೆ ಜೀವ ತುಂಬುವ ಶಕ್ತಿ ಇರಬಹುದಲ್ಲವೇ ಎಂದು ನನ್ನ ಅನಿಸಿಕೆ .
– ಆಶಾ ನೂಜಿ.
ಬಾಲ್ಯದ ದೀಪಾವಳಿ ಪೂರ್ತಿ ನೆನಪಿಗೆ ತಂದದ್ದಕ್ಕಾಗಿ ಧನ್ಯವಾದಗಳು. ಇಂದಿನ ತರಾತುರಿಯ ದಿನಗಳಲ್ಲಿ ದಂಪತಿಗಳು ಸಿನಿಮಾ, ಮಾಲ್ ಸುತ್ತಾಡಿ,ಹೋಟೆಲ್‌ನಲ್ಲಿ ತಿಂದು ಬರುವುದು, ಪಟಾಕಿ ಹಚ್ಚುವುದಷ್ಟೇ ಆಗಿದೆ.
ಸುಂದರ ಸಂಜೆಯಲ್ಲಿ ನಾವೆಲ್ಲ ಭಾಗಿಯಾದದ್ದೇ ಸಂತೋಷ
ಧನ್ಯವಾದಗಳು
Very nice article….
Nice article.
Thanks
ಚಂದದ ಲೇಖನ