ಸುಮವರಳಿ ನಕ್ಕಾಗ….
ಎನ್ನ ತೋಟದಲರಳಿ ನಗುತಿರುವ ಸುಮವೊಂದು…..
ಎಲ್ಲ ಕಣ್ಣಿಗು ಮುದವ ನೀಡುತಿಹುದು………. !
ಎನ್ನ ನೋಟದಲಿರುವ ಪ್ರೀತಿ-ಮಮತೆಯನರಿತು…
ಅಕ್ಕರೆಯಲೆನ್ನೊಡನೆ ಸ್ನೇಹ ಬೆಸೆದಿಹುದೂ…….!!
ಎನ್ನ ಹೃದಯದ ಒಳಗೆ ಮುಚ್ಚಿಟ್ಟ ಭಾವಗಳು
ನಿನ್ನ ನೋಡಲು ಹೊರಗೆ ಹೊಮ್ಮುತಿಹುದು……….!.
ಯಾರಿಗೂ ಅರಿಯದಿಹ ಮೌನ ಭಾಷೆಯೇ ನಮದು
ಎಲ್ಲ ನೋವನು ಮರೆಸೊ ಶಕ್ತಿ ಇದಕಿಹುದೂ…………!!
ಎನ್ನ ಹೃದಯದಒಳಗೆ ಹೆಪ್ಪುಗಟ್ಟಿದ ನೋವು
ಎಲ್ಲ ಮರೆಯುತ ನಾನು ನಿನ್ನಬೆಳೆಸಿದೆನು…………!
ಕಕ್ಕುಲತೆಯಲೊಂದೊಂದು ಹನಿ ನೀರು ಗೊಬ್ಬರವುಣಿಸಿ
ಬೆಳೆಯುತಿಹ ಹೂ ಗಿಡವ ಮಮತೆಯಲೆ ಮೈದಡವಿ
ಯಾರ ವಕ್ರದ ದೃಷ್ಟಿ ತಾಕದಿರಲಿದಕೆಂದು ಜತನದಲೇ ಕಾಪಾಡಿ ಪೋಷಿಸಿಹೆನೂ ………..!!
ನೀ ನಕ್ಕು ಅರಳಿದರು ಪರಿಮಳವ ಹರಡಿದರು
ಅಹಮಿಕೆಯ ಬೆಳೆಸದಿರು ಓ ಎನ್ನ ಸುಮವೇ…….!
ಬಿಸಿಲ ಬೇಗೆಗೆ ಬೆಂದು ಒಳಗೊಳಗೇ ನೊಂದರೂ
ತಂಪಿಡಲು ಮಳೆ ಹನಿಯು ಬರಬಹುದು ಸುಮವೇ…!!
–ಪ್ರಮೀಳ ಚುಳ್ಳಿಕಾನ
ನಗುವ ಹೂ ..ಕವನ ಪರಿಮಳವ ಬೀರುತಿದೆ ..
ಮಾಲಿಂಗನ ಬಳ್ಳಿ ಅಂದರೆ ಯಾವದು ಅದಕ್ಕೆ ಇಂಗ್ಲೀಷ್ ನಲ್ಲಿ ಏನು ಕರೆಯುತ್ತಾರೆ tilisi