ಕವಿತೆ ಹುಟ್ಟುವ ಸಮಯ…
ಮನದಾಳದ ಭಾವಗಳು ಒಂದೊಂದೇ ಹೊರಹೊಮ್ಮಿ
ಮನಕೆ ತಂಪೆರೆಚಲು ಕವಿತೆ ಹುಟ್ಟಿತು ಅಲ್ಲೇ…………
ನಿಂತಲ್ಲೆ ಕುಳಿತಲ್ಲೆ ಬಗೆಬಗೆಯ ಭಾವದಲೆ
ಪದಗಳನು ಜೋಡಿಸುತ ನೇಯ್ದು ಬಿಡಲೇ………
ಕೆಲವೊಮ್ಮೆ ಮನದಲ್ಲೆ ಮನೆ ಮಾಡಿ ನಿಲ್ಲುವುದು..
ಭಾವನೆಯೇ ಜೀವಾಳ ಕವಿತೆಗಳಿಗೇ. . ……..
ಗಾಳಿ ಬಂದೆಡೆ ಚದುರಿ ಹೋಗದಿರಿ
ಗಾಳಿ ಬಂದೆಡೆ ಚದುರಿ ಹೋಗದಿರಿ
ಭಾವಗಳೆ ನಿಲ್ಲಿ ಒಂದೆಡೆ ನಿಲ್ಲಿ
ಮನದ ಪದ ಪುಂಜಗಳೇ
ಹೊಳೆಹೊಳೆದು ಕಂಡಲ್ಲೆ ಮಾಯವಾಗದಿರೀ………
.
.
ಒಮ್ಮೊಮ್ಮೆ ಕವಿತೆಗಳು ಮಿಂಚಿ ಮರೆಯಾದರು
ಮನದಲ್ಲೆ ಸುಖಿಸುವೆನು ಚಿಂತೆಯಿಲ್ಲಾ………..
ಭಾವದಲೆ ಅಲೆಯಾಗಿ ತೇಲಿತಲ್ಲ………….
ಯಾರದೂ ಹಂಗಿಲ್ಲ ಯಾರಿಗಿದು ಹೊರೆಯಲ್ಲ
ಎನ್ನದೆನ್ನದು ಎನಲು ಮುತ್ತುರತ್ನಗಳಲ್ಲ……..
ಭಾವಗಳ ಒರತೆಯದು ಭಾವ-ನಿಧಿಯೂ………….
ಮನದ ಭಾವಗಳೆಲ್ಲ ಚದುರಿದರು ನೋವಿಲ್ಲ
ಅಳಿದು ಹೋದರು ಚಿತ್ತಕೊತ್ತಡವು ಇಲ್ಲಾ….
.
.
ಯಾವ ನೋವಿಲ್ಲದಿರೆ ನಿರ್ಲಿಪ್ತ ಮೌನಗಳೆ ಅಂತರಂಗದ ಒಳಗೆ ಸುತ್ತುತಿಹುದೂ..
-ಪ್ರಮೀಳ ಚುಳ್ಳಿಕಾನ.
.
.
ಕವಿತೆ ಹುಟ್ಟುವ ಸಮಯವೂ ಕವಯಿತ್ರಿ ಚೆನ್ನಾಗಿ ಹೇಳಿದ್ದಾರೆ.