ದಿಲ್ಲಿ- ಆಗ್ರಾ ರೋಟಿ-ಪಾರ್ಟಿ

Share Button

ಜನವರಿ  ತಿಂಗಳಿನ  ಕೊನೆಯ  ವಾರದಲ್ಲಿ  ನಾನು ನನ್ನ  ಸಹೋದ್ಯೋಗಿಗಳಾದ  ರೇಖಾ, ಕಿರಣ್ ಹಾಗೂ ಶ್ರವಣ್ ಜತೆಯಲ್ಲಿ ದಿಲ್ಲಿಗೆ ಕೆಲಸದ ಪ್ರಯುಕ್ತ  ಹೋಗುವ  ಕಾರ್ಯಕ್ರಮವಿತ್ತು. ಹೇಗೂ  ದಿಲ್ಲಿ ವರೆಗೆ ಬಂದವರು  ಆಗ್ರಾ ನೋಡಲು  ಹೋಗದಿದ್ದರೆ ಏನು ಪ್ರಯೋಜನ  ಎಂದು ಚರ್ಚೆ ಮಾಡಿಕೊಂಡು, ಇರುವ ಅಲ್ಪ  ಸಮಯಾವಕಾಶದಲ್ಲಿ  ಆಗ್ರಾಕ್ಕೆ ಹೋಗುವ ಆಲೋಚನೆ ಮಾಡಿದೆವು.

 

mustard flowersನಮ್ಮ ಗುಂಪಿನ ವ್ಯವಹಾರ ಚತುರೆ ರೇಖಾ ಕೂಡಲೇ  ಕಾರ್ಯೋನ್ಮುಖರಾದರು. ಸರಿ, ಅತಿ ಹೆಚ್ಚು ಪ್ರವಾಸಿ ತಾಣಗಳನ್ನು , ಅತಿ ಕಡಮೆ ದರದಲ್ಲಿ ತೋರಿಸುತ್ತೆeವೆಂದು  ಹೇಳಿಕೊಂಡ ಒಬ್ಬಾತನ ಕಾರನ್ನು ಬಾಡಿಗೆಗೆ ಒಪ್ಪಿಸಿದರು.  ಬೆಳ್ಳಂ ಬೆಳ್ಳಗ್ಗೆ , ನಮ್ಮ ಪಟಾಲಂ  ದಿಲ್ಲಿಯಿಂದ ಹೊರಟಿತು. ನಾವು ಉಳಕೊಂಡಿದ್ದ ಹೋಟೆಲಿನಿಂದ  ಅನತಿ ದೂರದಲ್ಲಿದ್ದ  ‘ಕುತುಬ್ ಮಿನಾರ್’  ಅನ್ನು ಹೊರಗಡೆಯಿಂದ ವೀಕ್ಷಿಸಿದೆವು. ಹಲವಾರು   ಮೊಘಲ ದೊರೆಗಳ ಸಮಾಧಿಗಳನ್ನು ನೋಡಿ ಬಂದೆವು. ಅಷ್ಟು  ಬೆಳಗ್ಗೆ ಅಲ್ಲಿ   ಯಾರೂ ಇರಲಿಲ್ಲ. 

ಕಾರು ಆಗ್ರಾ ಕಡೆಗೆ ಚಲಿಸಿತು .ದಾರಿಯುದ್ದಕ್ಕೂ ಎಕ್ಕೆಲಗಳಲ್ಲಿ ಸಾಸಿವೆ ಬೆಳೆಯುವ ಹೊಲಗಳಲ್ಲಿ ಅರಳಿ ನಿಂತ ಹಳದಿ ಬಣ್ಣದ ಹೂವುಗಳು ಮನಸಿಗೆ ಮುದ ಕೊಟ್ಟವು.

 

Punjabi food 2ಮಧ್ಯದಲ್ಲಿ   ಸುಮಾರು  ಒಂಭತ್ತು ಘಂಟೆಗೆ,  ತಿಂಡಿಗೆಂದು  ಒಂದು   ಡಾಭಾ ಮುಂದೆ ಕಾರು ನಿಂತಿತು. ನಾನು ಗಮನಿಸಿದ ಒಂದು ಅಂಶವೆಂದರೆ ಅಲ್ಲೆಲ್ಲೂ ದೊಡ್ಡದಾದ ಹೋಟೆಲ್ ಗಳು  ಕಾಣಿಸಲಿಲ್ಲ.  ದಕ್ಷಿಣ ಭಾರತದ  ಸಸ್ಯಾಹಾರಿಗಳಾದ ನಮಗೆ ಉತ್ತರ ಭಾರತದ ಎಲ್ಲಾ ತಿನಿಸುಗಳು ಅಷ್ಟಾಗಿ ರುಚಿಸಲಿಲ್ಲ.  ಆದರೆ  ಚಳಿ-ಚಳಿ ಹವೆಯಲ್ಲಿ ಬಿಸಿ-ಬಿಸಿ ರೋಟಿ ಹಾಗೂ ಟೀ ತುಂಬ ಇಷ್ಟವಾಯಿತು.

 

tanduri

 

ನಾವು ಕುಳಿತಲ್ಲಿಗೆ ಅಡುಗೆಮನೆ ಕಾಣಿಸುತ್ತಿತ್ತು. ತಂದೂರಿ ಒಲೆಯಲ್ಲಿ ರೋಟಿ ಮಾಡುವವನ  ಕೈಚಳಕ ನೋಡಿ ಫೋಟೋ ತೆಗೆಯಬಹುದೇ ಎಂದು ಗಲ್ಲಾಪೆಟ್ಟಿಗೆಯಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಕೇಳಿದೆ.  ನನ್ನ  ಕ್ಯಾಮೆರಾವನ್ನು ಪಡೆದುಕೊಂಡು ಅಡುಗೆಮನೆಗೆ ಹೋಗಿ ಫೋಟೋ ಕ್ಲಿಕ್ಕ್ಕಿಸಿ ಕ್ಯಾಮೆರಾವನ್ನು ಕೊಟ್ಟರು. ಆತನ  ಸೌಜನ್ಯತೆ ಇಷ್ಟವಾಯಿತು.

 

 

ಮುಂದೆ ದಾರಿಯುದ್ದಕ್ಕೂ ನಮಗೆ ಅದೇ ಲಭಿಸಿದ್ದು. ಆದರೆ ಎರಡು ದಿನಗಳಲ್ಲಿ  ರೋಟಿ ಸಾಕು ಸಾಕೆನಿಸಿತು.

 

– ನೀಹಾರಿಕಾ

2 Responses

  1. Sangeeta Muraleedhar says:

    ನೀಹಾರಿಕಾ ಅವರೇ, ಒಳ್ಳೆಯ ಬರಹ. ಇನ್ನಷ್ಟು ಪಯಣಾನುಭವಗಳನ್ನು ಬರೆಯಿರಿ.

  2. ಚಿಕ್ಕ ಚೊಕ್ಕ ಲೇಖನ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: