ಗಿಡಗಳನ್ನರಸುವವರಿಗೆ ಒಂದು ತುಣುಕು
ಇಳೆಯ ಎಳೆಯನ್ನು ಅರಸುವವರಿಗಾಗಿ
ಮಳೆಗಾಲ ವ್ಯಾಪಕವಾದೊಡನೆ, “ನಮಗೆ ನೆಡಲು ಗಿಡವುಂಟೇ?” ಎಂದು ಅರಸುತ್ತಿರುವವರಿಗಾಗಿ ಒಂದಿಷ್ಟು ವಿಚಾರಗಳು. ಮಳೆಗಾಲದ ಆರಂಭದಲ್ಲಿ ಮೊದಲು ವನಮಹೋತ್ಸವ ಜೂನ್ ೫ ಕ್ಕೆ ಇದ್ದು, ಎಲ್ಲರಿಗೂ ಗಿಡ ನೆಡುವ ಬಗ್ಗೆ ಮನನ ಮಾಡಿ ಪ್ರೋತ್ಸಾಹ ಉಂಟುಮಾಡುವುದು ಸಂತಸದ ಪರಿಸರ ದಿನಾಚರಣೆಯ ಅವಿಭಾಜ್ಯ ಚಟುವಟಿಕೆ. ನಂತರ ಬೇಸಾಯ, ತರಕಾರಿ ಬೀಜ ಬಿತ್ತನೆ, ನಂತರ ಗಿಡ ಮರ, ಫಲ ವೃಕ್ಷಗಳ ಕೃಷಿಯ ಉತ್ಸಾಹ, ಬೇಸಿಗೆಯಲ್ಲಿ ನೀರಿಗೆ ಬವಣೆ, ಗಿಡ ನಾಶ, ಪುನಃ ಮಳೆಗಾಲ, ಹೀಗೆ ಇಳೆಯ ಹಸುರಿನ ಕಥೆ (ವ್ಯಥೆ!).
ಹೊಲದಲ್ಲಿ ನಾಟಿಮಾಡುವ ಬೆಳೆಗಳಲ್ಲಿ ಹಾಗೂ ಬಹು ವಾರ್ಷಿಕ ಬೆಳೆಗಳಲ್ಲಿ ಗಿಡಗಳ ಆಯ್ಕೆ ಬಲು ಮುಖ್ಯ. ಆದ್ದರಿಂದ ಅಂಗೀಕೃತ
ತಳಿಗಳನ್ನು ನಂಬಲರ್ಹ ಸ್ಥಳಗಳಿಂದ ಕಾಳಜಿಯಿಂದ ಆಯ್ಕೆ ಮಾಡುವುದು ಅತೀ ಅಗತ್ಯ. ಇತ್ತೀಚೆಗೆ ಕೊಯ್ಲಿಗಾಗಿ ಕಷ್ಟಪಡಬೇಕಾದ ಪರಿಸ್ಥಿತಿ ಇರುವುದರಿಂದ ಕುಬ್ಜ ಹಾಗೂ ಹೈಬ್ರಿಡ್ ತಳಿಗಳಿಗೆ ಹೆಚ್ಚು ಬೇಡಿಕೆಯಿದೆ. ಪ್ರಸ್ತುತ ಮಾರುಕಟ್ಟೆಯಲ್ಲೂ ಸುದೃಢ ಧಾರಣೆ ಇರುವುದರಿಂದ ನೆಡುವವರ ಆತುರತೆಯು ಸ್ವಾಭಾವಿಕ.
ಸ್ವಚ್ಚ ಭಾರತ, ಸಮೃದ್ಧ ಭಾರತ ಆಗುವಲ್ಲಿ ಗಿಡ ನೆಡುವ ಮುನ್ನ ಪರಿಸರ ಶುಚೀಕರಣ, ಸ್ಥಳದ ತಯಾರಿ, ಈಗಾಗಲೇ
ರೋಗಗ್ರಸ್ಥವಾದ ಹಾಗೂ ಸತ್ತು ಹೋದ ಗಿಡ-ಮರಗಳ ಉನ್ಮೂಲನ ಮಾಡುವುದರಿಂದ ಮುಂದೆ ನೆಡುವ ಗಿಡಗಳು ಸ್ವಸ್ಥವಾಗಿ
ಬೆಳೆಯಲು ಅನುಕೂಲವಾಗುತ್ತದೆ. ಭೂಮಿಯ ಸಮರ್ಪಕವಾದ ಬಳಕೆಗೆ ಗಿಡಗಳ ಅಂತರವನ್ನು ಘನ-ಸಾಂದ್ರ ರೀತಿಯಲ್ಲಿ ಸಮರ್ಪಕವಾಗಿ ನೆಡುವುದರಿಂದ, ಸರಕಾರದ ಬೆಳೆ ಇಮ್ಮಡಿ ಯೋಜನೆಗೆ ಕೈಜೋಡಿಸಿದಂತಾಗುತ್ತದೆ.
ತೆಂಗಿನ ತಳಿಗಳು
ಕೊಬ್ಬರಿಗೂ ಎಳನೀರಿಗೂ ಅನುಯೋಜ್ಯ ತೆಂಗಿನ ತಳಿಗಳು:
ಕಲ್ಪ ಶತಾಬ್ಧಿ, ಕಲ್ಪ ಪ್ರತಿಭಾ, ಕಲ್ಪ ಹರಿತ, ಕೇರ ಚಂದ್ರ, ಕಲ್ಪ ಸಮೃದ್ಧಿ, ಕಲ್ಪ ಶ್ರೇಷ್ಟ ಹಾಗೂ ಚಂದ್ರ ಸಂಕರ
ಗಿಡ್ಡ ತೆಂಗಿನ ತಳಿಗಳು:
ಚೌಘಾಟ್ ಕಿತ್ತಳೆ ಗಿಡ್ಡ, ಕಲ್ಪ ಸೂರ್ಯ ಮತ್ತು ಕಲ್ಪ ಜ್ಯೋತಿ
ಶುಷ್ಕ ಹವಾಮಾನಕ್ಕೂ ಒಗ್ಗುವ ತಳಿಗಳು
ವೆಸ್ಟ್ ಕೋಸ್ಟ್ ಟಾಲ್, ಚಂದ್ರ ಕಲ್ಪ, ಕಲ್ಪತರು, ಕಲ್ಪ ಮಿತ್ರ, ಕಲ್ಪ ಧೇನು, ಕೇರ ಸಂಕರ ಹಾಗೂ ಚಂದ್ರ ಲಕ್ಷ
ಇವುಗಳಲ್ಲಿ ಕಲ್ಪ ಸಮೃದ್ಧಿ, ಕಲ್ಪ ಶ್ರೇಷ್ಟ, ಚಂದ್ರ ಸಂಕರ, ಕೇರ ಸಂಕರ ಹಾಗೂ ಚಂದ್ರ ಲಕ್ಷ, ಇವು ಹೈಬ್ರಿಡ್ ತಳಿಗಳು.
ಅಡಿಕೆಯ ತಳಿಗಳು
ದ.ಕ. ಸ್ಥಳೀಯ, ಮಂಗಳ, ಸುಮಂಗಳ, ಶ್ರೀಮಂಗಳ, ಮೋಹಿತ್ ನಗರ್, ಮಧುರ ಮಂಗಳ, ಸ್ವರ್ಣಮಂಗಳ, ಕಾಹಿಕುಚಿ, ನಲ್ಬಾರಿ ಹಾಗೂ ಶತಮಂಗಳ
ಅಡಿಕೆಯ ಹೈಬ್ರಿಡ್ ಗಳು
ವಿ.ಟಿ.ಎಲ್. ಎ.ಹೆಚ್. 1 ಮತ್ತು ವಿ.ಟಿ.ಎಲ್. ಎ.ಹೆಚ್. 2
ಕೊಕ್ಕೋ ತಳಿಗಳು
ಕಸಿ ತಳಿಗಳು
ವಿ.ಟಿ.ಎಲ್. ಸಿ.ಸಿ.1, ವಿ.ಟಿ.ಎಲ್.ಸಿ.ಎಸ್.1 ಮತ್ತು ವಿ.ಟಿ.ಎಲ್. ಸಿ.ಎಸ್.2
ಕಸಿ ಹೈಬ್ರಿಡ್ ತಳಿಗಳು
ವಿ.ಟಿ.ಎಲ್. ಸಿ.ಎಚ್.1 ರಿಂದ 4 ಹಾಗೂ ನೇತ್ರ ಸೆಂಚುರಾ.
ತಳಿಗಳು ನಾಟಿ ಜಾತಿಗಿಂತ ಖಂಡಿತವಾಗಿಯೂ ಉತ್ತಮ. ಅದು ನಮ್ಮ ಪರಿಸರಕ್ಕೆ ಒಗ್ಗುತ್ತವೆಯೇ ಎಂದಷ್ಟೇ
ಯೋಚಿಸಿದರೆ ಸಾಕು. ಎರಡು ಗಿಡಗಳ ಅವಶ್ಯಕತೆ ಇರುವವರು, ಇನ್ನೆರಡು ಕೂಡಾ ಪರಿಸರ ಸೇವೆಗಾಗಿ (ರೋಗ
ರುಜಿನ, ಕೀಟ ಪೀಡೆಯೆಂಬ ಕೆಲವು ವೈಜ್ಞಾನಿಕ ಸಂಗತಿಗಳು, ಅತಿವೃಷ್ಟಿ, ಬರಗಾಲವೆಂಬ ಅಸಮತೋಲನ)
ಸಮರ್ಪಣಾ ಭಾವದೊಂದಿಗೆ ನೆಟ್ಟರೆ, ನಮ್ಮ ಹಸಿವು ನೀಗಿ ತಂಪು ನೀಡುವುದರಲ್ಲಿ ಸಂಶಯವಿಲ್ಲ.
ಉತ್ತಮ ತೆಂಗಿನ ಗಿಡಗಳು ಕಾಸರಗೋಡಿನ ಸಿ.ಪಿ.ಸಿ.ಆರ್.ಐ. ಯಲ್ಲಿ ಲಭ್ಯವಾಗಿವೆ. ಮುಖ್ಯ ದ್ವಾರದ ಬಲಬದಿಯ
ATIC ಯನ್ನು ಸಂಪರ್ಕಿಸಿರಿ.
04994 232895 extn 270
E-mail: directorcpcri@gmail.com
ಉತ್ತಮ ಅಡಿಕೆ, ಕೊಕ್ಕೋ ಗಿಡಗಳು ವಿಟ್ಲ ಸಿ.ಪಿ.ಸಿ.ಆರ್.ಐ. ಯಲ್ಲಿ ಇವೆ.
08255 239238, 265289
E-mail: cpcrivtl@gmail.com
– ಮುರಲಿಕೃಷ್ಣ ಹಳೆಮನೆ
Dayavittu agroforestry bagge tilisi. 1 acre nali enenu nedabeku.. mattu yaava return anta
Thanks