ದುಬೈ: ‘ಸಂಕೀರ್ಣ’ ನೃತ್ಯ ವೈಭವ

Share Button

ದುಬೈಯ ಭಾರತೀಯ ದೂತಾವಾಸದ  ಸಭಾಂಗಣದಲ್ಲಿ  ಏಪ್ರಿಲ್ 13 ರ  ಸಂಜೆ ಜರುಗಿದ “ಸಂಕೀರ್ಣ”  ನೃತ್ಯ ಶಾಲೆಯ 6ನೇ ವಾರ್ಷಿಕೋತ್ಸವವನ್ನು ಕಾರ್ಯಕ್ರಮದ ಅತಿಥಿಗಳು, ಗುರು, ವಿದುಷಿ, ಶ್ರೀಮತಿ  ಸಪ್ನಾ  ಕಿರಣ್  ಹಾಗು  ಶ್ರೀ  ಕಿರಣ್  ಕುಮಾರ್  ಕದ್ರಿ ಯವರು ಸಾಂಪ್ರದಾಯಿಕ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು .

 
ನಾಟ್ಯ ದೇವಾ ನಟರಾಜನಿಗೆ ಭಕ್ತಿ ಪೂರ್ವಕ “ಪುಷ್ಪಾಂಜಲಿಯೊಂದಿಗೆ ನಾಟ್ಯ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಸಂಕೀರ್ಣದ ವಿದ್ಯಾರ್ಥಿನಿಯರುನಂತರ ವಿಘ್ನ ವಿನಾಶಕ ಗಣಪನನ್ನು ಗಣೇಶ ಕೌತುವಂ ,ಶಕ್ತಿಯನ್ನು ಕಾಳಿ ಕೌತುವಂ ಮೂಲಕಥೊಡ್ಯಾ ಮಂಗಳಂ ನಲ್ಲಿ ಮಹಾವಿಷ್ಣುವನ್ನುಭಕ್ತ  ಕನಕದಾಸರ ಹಾಡಿನ ಮೂಲಕ ದೇವಿ ಸರಸ್ವತಿಯನ್ನುಪುರಂದರ ದಾಸರ ‘ಭಾಗ್ಯದ ಲಕ್ಷ್ಮಿ ಬಾರಮ್ಮ”   ಮೂಲಕ  ದೇವಿಲಕ್ಷ್ಮೀ ಗೆ ನಾಟ್ಯ ವಂದನೆ ಸಲ್ಲಿಸಿದರು .

ಈ ಕಾರ್ಯಕ್ರಮದಲ್ಲಿ ಅಡವು, ಅಜ್ಹಾಗು ದೇವಾ, ಆಡಿದ ನಾಡಿದ ,ಕೊರವಂಜಿ, ಗೋವಿಂದ ನಿನ್ನ , ಮುಂತಾದ ನೃತ್ಯ ವೈವಿದ್ಯಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದ ನರ್ತಕಿಯರು ,ತುಂಟ ಕೃಷ್ಣ ಮುಗ್ದರಾಧೆಯರ ಬಾಲ್ಯದಾಟವನ್ನು ‘ವಿಷಮಕರ ಕಣ್ಣನ್ ‘ ಮೂಲಕ ನರ್ತಿಸಿ ಜನರ ಮನ ಗೆದ್ದರು. ಅಯಗಿರಿ ನಂದಿನಿಯ ಮೂಲಕ ನವದುರ್ಗೆಯರು ನೆರೆದವರನ್ನು ರೋಮಾಂಚನಗೊಳಿಸಿದರೆ ,ಕೊನೆಯದಾಗಿ ಪ್ರದರ್ಶನಗೊಂಡ ‘ಧರ್ಮಕ್ಷೇತ್ರ ‘ ಕೃಷ್ಣಾರ್ಜುನರ ಗೀತೋಪದೇಶದ ನೃತ್ಯವನ್ನು ಪ್ರೇಕ್ಷಕರು ಉಸಿರು ಬಿಗಿ ಹಿಡಿದು ನೋಡುವಂತಿತ್ತು.

‘ಸಂಕೀರ್ಣ’ನೃತ್ಯ ಶಾಲೆಯ ಕಿರು ಪರಿಚಯ

2011ನೇ ಇಸವಿಯಲ್ಲಿ ಸಾಕಾರಗೊಂಡ ಗುರು , ವಿದುಷಿ ಶ್ರೀಮತಿ ಸಪ್ನಾ ಕಿರಣ್ ಅವರ ಸ್ವಪ್ನ ಇದು. ಇಲ್ಲಿ ಭಾರತದಾದ್ಯಂತದ ವಿದ್ಯಾರ್ಥಿನಿಯರು ಭರತನಾಟ್ಯಂ ಅನ್ನು ಶಾಸ್ತ್ರೀಯವಾಗಿ ಗುರು ಪರಂಪರೆಯ ಮಾದರಿಯಲ್ಲಿ ಅಭ್ಯಾಸ ಮಾಡುತ್ತಾರೆ .ಗುಣಮಟ್ಟ ಹಾಗು ಸಾಂಪ್ರದಾಯಿಕ ಶೈಲಿಗೆ ಹೆಸರಾದ ‘ಸಂಕೀರ್ಣ’ ಯು .ಎ .ಇ ಯಲ್ಲಿ ಹಾಗು ಭಾರತದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದು ಬಹುತೇಕ ಪ್ರತಿವರ್ಷವೂ ಇಲ್ಲಿನ ಒಂದು ಅಥವಾ ಎರಡು ವಿದ್ಯಾರ್ಥಿನಿಯರು ರಂಗ ಪ್ರವೇಶ ಮಾಡುತ್ತಾರೆ.
ಕಿರುವಯಸ್ಸಿನಲ್ಲೇ ನೃತ್ಯಲೋಕಕ್ಕೆ ಪಾದಾರ್ಪಣೆ ಮಾಡಿದ ಗುರು ವಿದುಷಿ ಸಪ್ನಾಕಿರಣ್ ಸ್ವತಃ ಒಬ್ಬ ಅದ್ಭುತ ನೃತ್ಯಗಾರ್ತಿ , ರಂಗ ನಟಿ ಹಾಗೂ ಭರತನಾಟ್ಯ ಕಲಾವಿದರ ಕುಟುಂಬದಿಂದ ಬಂದವರು .

 

ವರದಿ : ಆರತಿ ಅಡಿಗ , ಶಾರ್ಜಾ

2 Responses

  1. Muzammil Anjikar says:

    ಶುಭವಾಗಲೀ

  2. Hema says:

    ‘ಸಂಕೀರ್ಣ’ದ ಎಲ್ಲಾ ಪದಾಧಿಕಾರಿಗಳಿಗೂ, ಕಲಾವಿದರಿಗೂ ಅಭಿನಂದನೆಗಳು.

Leave a Reply to Muzammil Anjikar Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: