ತಿಳಿದವರು ಹೇಳಿದ ಅಳಿಯದ ಮಾತು
ಇಂದು ಅದೆಕೋ ಮಾಹಾಭಾರತದ ಒಂದು ಬಹು ಮುಖ್ಯ ಪಾತ್ರದ ನೆನಪಾಗುತ್ತಿದೆ.ತನ್ನಲ್ಲಿರುವ ಸ್ನೇಹಭಾವದಿಂದಲೇ ಪ್ರಸಿದ್ಧಿಯಾದ, ತನ್ನನ್ನು ನಂಬಿದವರಿಗಾಗಿ ಜೀವವನ್ನೇ ನೀಡಿದ ಆ ವ್ಯಕ್ತಿ ಬೇರಾರೂ ಅಲ್ಲ, ಆತನೇ ದುರ್ಯೋಧನ…
ಇತ ಪಾಂಡವ ದ್ವೇಷಿಯಾದರು ಸಹ ಅರ್ಜುನನಿಗೆ ಸರಿ ಸಮಾನವಾಗಿ ನಿಲ್ಲಬಲ್ಲ ಕರ್ಣನ ವಿಧ್ಯೆಯನ್ನು ನೋಡಿ ಅದಕ್ಕೆ ತಕ್ಕಂತೆ ತನ್ನ ಅಂಗ ರಾಜ್ಯದ ರಾಜನಾಗಿ ಮಾಡಿ ತನ್ನ ಪರಮ ಆಪ್ತ ಮಿತ್ರನ ಸ್ಥಾನವನ್ನು ಮನಃಸ್ಪೂರ್ವಕವಾಗಿ ನೀಡಿದ ಮಹನೀಯ ಇತ.. ಜಗತ್ತಿಗೆ ಜಗತ್ತೇ ಇವರ ಸ್ನೇಹದ ಬಗ್ಗೆ ಕೊಂಡಾಡುತ್ತದೆ.
ಮಹಾಭಾರತ ಯುದ್ಧದಲ್ಲಿ ಅತೀ ಬಲಿಷ್ಠವಾದ ಸೇನೆ ಇದ್ದರೂ , ಸೇನಾಧಿಪತಿ ಇದ್ದರೂ ಸಹ ದುರ್ಯೋಧನನ ಸಹಾಯಕ್ಕೆ ಯಾರು ಬರಲಿಲ್ಲ, ಅವರವರಿಗೆ ಬೇರೆ ಅನಿವಾರ್ಯ ಕಾರಣ ಇದ್ದಿದ್ದಿರಬಹುದು ಆದರೆ ತನ್ನನ್ನವರು ಎಂದು ಪ್ರಾಣವೇ ಇಟ್ಟುಕೊಂಡ ಈತನ ಅಂತ್ಯ ಕಾಲಕ್ಕೆ ಯಾರು ಸಹಾಯಕ್ಕೆ ಬರಲಿಲ್ಲ.. ಇದುವೇ ಶಲ್ಯ ಯುದ್ಧ ಭೂಮಿಯಲ್ಲಿ ಕರ್ಣನಿಗೆ ಹೇಳಿ ತನ್ನ ಬೇಸರವನ್ನು ವ್ಯಕ್ತಪಡಿಸಿದ್ದ.
ಜೀವನದಲ್ಲಿ ನಮ್ಮನ್ನು ಗುರುತಿಸಿ, ಯಾರು ಬೆಳೆಸುತ್ತಾರೋ ಅವರನ್ನು ತುಳಿದು ಮೇಲೆ ಹೋಗುವವರು ಕೆಲವರು ಹಾಗೂ ತಮ್ಮನ್ನು ಬೆಳೆಸಿದವರಿಗೆ ಕೃತಜ್ಞತೆ ತೋರದೆ ಕೃತಘ್ನನಾಗಿ ವರ್ತಿಸುವುದು ಮಹಾ ಪಾಪ. ತಿಂದ ಮನೆಗೆ ದ್ರೋಹ ಬಗೆಯುವ ಕಾಯಕ ಸಲ್ಲದು. ಅದರ ಪ್ರತಿಫಲ ಶೀಘ್ರದಲ್ಲೇ ಅನುಭವಿಸಲು ನಾವು ಸಿದ್ಧರಿರಬೇಕು.
ಇಂದಿನ ಕಾಲದಲ್ಲಿ ಕಲಿಸುವವರು ಬಹಳ ಕಡಿಮೆ ಏಕೆಂದರೆ ಅವರು ತಮಗಿಂತ ಎತ್ತರಕ್ಕೆ ಬೆಳಯುತ್ತಾರೆಂಬ ಅಸೂಯೆ, ಇದು ಗುರುವಿನ ಲಕ್ಷಣವಲ್ಲ. ತಲೆಬಾಗಿ ಕಲಿತ ವಿಧ್ಯೆ ಭವಿಷ್ಯದಲ್ಲಿ ನಾವು ತಲೆ ಏತ್ತಿ ನಿಲ್ಲುವಂತೆ ಮಾಡುತ್ತದೆ.
ಕೊನೆಗೆ ನಾವು ತಿಳಿಯಬೇಕಾದದ್ದು ಇಷ್ಟೇ:-
- ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಮುಖ್ಯ
- ತುಳಿದು ಬದುಕಿದವರು ಬಹು ಬೇಗ ಅಳಿಯುತ್ತಾರೆ
- ತಿಳಿದು ಬದುಕಿದವರು ಅಳಿದ ಮೇಲೂ ಉಳಿಯುತ್ತಾರೆ
– ಸುರೇಂದ್ರ ಪೈ , ಭಟ್ಕಳ