ಓ ಶಿವನೆ ಜಗದ ಪಾಲಕನು ನೀನು….

Share Button


ಕೈ ಮುಗಿದು ಕೇಳುವೆ ಕೈಲಾಸಪತಿಯೆ
ಕರುಣಿಸಿ ಕಾಯೆಮ್ಮನು ಓ ಶಿವನೆ
ಜಗದ ಪಾಲಕನು ನೀನು.ಪ

ನೀನೆ ಕಾರಣ ಜಗದ ನಿಯಮಕೆಂದರಿಯದೆ ನಾನು ನಾನೆಂದು ಮೆರೆದೆ ದೇವನೇ ನಾನು ನಾನೆಂದು ಮೆರೆದೆ,
ನನ್ನ ಈ ಮದವನ್ನು ಮೂರನೆಯ ಕಣ್ಣಿಂದ ಸುಟ್ಟುಬೂದಿಯ ಮಾಡೊ ನೀ ಓ ಶಿವನೆ ಜಗದ ಪಾಲಕನು ನೀನು..1
 .
ಸತ್ಯಮಾರ್ಗದಿ ನಡೆಯಬೇಕೆಂದು ಹೊರಟರೆ ಎಷ್ಟೆಲ್ಲ ಅಡೆತಡೆಗಳು ಭಕ್ತನಿಗೆ ಎಷ್ಟೆಲ್ಲ ಅಡೆತಡೆಗಳು,
ಆದನೆಲ್ಲ ಹಿಂದಿಕ್ಕಿ ಮುಂದೆ ಸಾಗಲು ಎನಗೆ ಧೈರ್ಯವನು ದಯಪಾಲಿಸೋ ಓ ಶಿವನೆ ಜಗದ ಪಾಲಕನು ನೀನು..2
 .
ಆಲಯದಿ ಕುಳಿತಂಥ ಆದಿಶಕ್ತಿಯ ಪತಿಯೆ ಆಲಿಸೀ ಭಕ್ತನ ಮೊರೆ,
ಅನವರತವು ನಿನ್ನ ಆರಾಧಿಸುವಂತೆ ಅನುಗ್ರಹಿಸಿ ಹರಸು ನೀನು ಓ ಶಿವನೆ ಜಗದ ಪಾಲಕನು ನೀನು..3
 .
ಕಲಿಯ ಈ ಯುಗದಲ್ಲಿ ಶಿಷ್ಟರಿಗೆ ಬೆಲೆಯಿಲ್ಲ ಹೆಚ್ಚುತಿದೆ ಅಟ್ಟಹಾಸಾ, ದುರ್ಜನರ ಅಟ್ಟಹಾಸ,
ದುಷ್ಟರನು ಸಂಹರಿಸಿ ಶಿಷ್ಟರನು ರಕ್ಷಿಸಲು ಅವತರಿಸಿ ಬಾ ಬೇಗನೇ ಓ ಶಿವನೆ ಜಗದ ಪಾಲಕನು ನೀನು..4

 .

ಜಯತು ಶ್ರೀ ಶಂಕರನೆ ಜಯತು ಮೃತ್ಯುಂಜಯನೆ ಜಯತು ಶ್ರೀ ನಂದೀಶನೆ,
ಜಯತು ಜಯ ಗೌರೀಶ ಜಯತು ಜಯ ಶೈಲೇಶ ಜಯತು ಜಯ ಜಗದೀಶನೇ ಜಗದ ಪಾಲಕನು ನೀನು..5

 .

ಕೈಮುಗಿದು ಕೇಳುವೆ ಕೈಲಾಸಪತಿಯೆ ಕರುಣಿಸಿ ಕಾಯೆಮ್ಮನು ಓ ಶಿವನೆ ಜಗದ ಪಾಲಕನು ನೀನು…
.

-ಮಾಲತೇಶ ಹುಬ್ಬಳ್ಳಿ

 

1 Response

  1. Ranganath Nadgir says:

    ಪ್ರೀಯ ಮಾಲತೇಶ್, ಕೈಲಾಸಪತಿ ಶಂಕರ ಕುರಿತಾಗಿ ರಚಿಸಲಾದ ಪದ್ಯ ಸುಂದರವಾಗಿದ್ದು,
    ಶಿವರಾತ್ರಿಯ ದಿನದಂದು ಸಕಾಲದಲ್ಲಿ ಪ್ರಕಟವಾಗಿದೆ , ಕವಿತಾ ರಚಿಸಿದ ನಿಮಗೂ ಹಾಗು
    ಪ್ರಕಟಿಸಿದ ಸುರಹೊನ್ನೆ ಸಂಪಾದಕರಿಗೂ ಶಿವನು ಒಳ್ಳೆಯದನ್ನು ಮಾಡಲೆಂದು ಪ್ರಾರ್ಥಿಸುವೆನು
    ರಂಗಣ್ಣ ನಾಡಗೀರ್ , ಹುಬ್ಬಳ್ಳಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: