ಕಾಳಿದಾಸ ಉಲ್ಲೇಖಿಸಿರುವ ಚಾತಕ ಪಕ್ಷಿ
ಒಳ್ಳೆ ಚಾತಕ ಪಕ್ಷಿತರ ಕಾದು ಕುಳಿತೆ, ಕಾದದ್ದಾಯಿತು, ಕಾಯಬೇಕೆ ಇತರೆ ಮಾತು ಆಡು ಭಾಷೆಯಲ್ಲಿ ಬಹಳ ಪ್ರಸ್ತುತ. ಸಾಕಷ್ಟು ತಾಳ್ಮೆಯಿಂದ ಕಾಯಬೇಕಾದರೆ ಹಾಗೆ ಈ ಮಾತು ಬಂದುಬಿಡುತ್ತದೆ. ಇದಕ್ಕೆ ಕಾರಣ ನಮ್ಮ ಜನಪದದಲ್ಲಿ ಚಾತಕ ಪಕ್ಷಿ ಮಳೆ ನೀರಿಗಾಗಿ ಎಷ್ಟೆ ಬಾಯಾರಿಕೆಯಾದರೂ ಕಾದು ಕುಡಿಯುತ್ತದೆ ಎಂಬ ಉಲ್ಲೇಖವಿದೆ (ಇದನ್ನು ಪ್ರಮಾಣಿಸಲು ವಿಜ್ಞಾನದಲ್ಲಿ ದಾಖಲೆಗಳಿರುವುದಿಲ್ಲ). ಅದಿರಲಿ, ಭಾರತದ ಮುಂಗಾರು ಮಳೆಗೆ, ಅದರಲ್ಲೂ ದಕ್ಷಿಣಭಾರತದ ಮುಂಗಾರಿಗೂ ಈ ಚಾತಕ ಪಕ್ಷಿಗೂ ಅವಿನಾಭಾವ ಸಂಭಂದವಿದೆ. ಮುಂಗಾರಮೋಡ ಬರುವ ಸುಮಾರು ಒಂದುವಾರದ ಮುಂಚೆ ಹಠಾತ್ತನೆ ಹಲಾವಾರು ಸಂಖ್ಯೆಯಲ್ಲಿ ಅಲ್ಲಲ್ಲಿ ಕಾಣಿಸುವ ಈ ಹಕ್ಕಿ ಮುಂಚಿತವಾಗಿ ಮುಂಗಾರಿನ ಆಗಮನವನ್ನು ಸೂಚಿಸುತ್ತದೆ. ಆಫ್ರಿಕಾ ಖಂಡದಿಂದ ವಲಸೆ ಬರುವ ಚಾತಕ ಪಕ್ಷಿ ಮುಂಗಾರಿನ ಗಾಳೆಯಲ್ಲಿ ಅದೇ ದಿಕ್ಕಿನಲ್ಲಿ ಕ್ರಮಿಸಿ ದಕ್ಷಿಣ ಭಾರತಕ್ಕೆ ಬಂದಿಳಿಯುತ್ತದೆಂಬ ಸಿದ್ಧಾಂತವಿದೆ.
ಮೇ ತಿಂಗಳ ಅಂತ್ಯ ಅಥವ ಜೂನ್ ಮೊದಲವಾರ ಇದ್ದಕ್ಕಿದ್ದಂತೆ ಕಾಣಿಸಿಬಿಡುತ್ತವೆ, ನವೆಂಬರ್ ದಿಸೆಂಬರ್ ನಲ್ಲಿ ವಾಪಸ್ಸಾಗುತ್ತದೆ. ವಲಸೆ ಹಕ್ಕಿಗಳಂತೆ ನಿವಾಸಿಗ ಹಕ್ಕಿಗಳನ್ನು ಕರ್ನಾಟಕದಲ್ಲಿ ಕಾಣಬಹುದು. ಕೋಗಿಲೆ ಜಾತಿಯ ಈ ಹಕ್ಕಿ ಪರರ ಗೂಡಿನಲ್ಲಿ ಮೊಟ್ಟೆಯಿಟ್ಟು ಪೇರಿ ಕೀಳುತ್ತದೆ!
ಚಾತಕ ಪಕ್ಷಿಗೆ ಇಂಗ್ಲೀಷ್ನಲ್ಲಿ ಪಯ್ಡ್ ಕುಕ್ಕೂ ಅಥವಾ ಜಾಕೊಬಿನ್ ಕುಕ್ಕೂ ಎಂದು ಕರೆಯುತ್ತಾರೆ.‘
ಮಾಹಿತಿಪೂರ್ಣ, ಉತ್ತಮ ನಿರೂಪಣೆ 🙂
ಧನ್ಯವಾದಗಳು
Good information 🙂
Thank you