ಕರಿಘಟ್ಟ …ಹಸಿರುಘಟ್ಟವಾಗಲಿ!
ಶ್ರೀರಂಗಪಟ್ಟಣದಲ್ಲಿ ‘ಕರಿಘಟ್ಟ’ ಎಂಬ ಸಣ್ಣ ಬೆಟ್ಟವಿದೆ. ಭೌಗೋಳಿಕವಾಗಿ ಅತಿ ಕಡಿಮೆ ಮಳೆ ಬೀಳುವ ‘ಮಳೆ ನೆರಳು’ ಪ್ರದೇಶವಾಗಿ ಗುರುತಿಸಲ್ಪಟ್ಟ ಸ್ಥಳವಿದು. ಈ ಬೆಟ್ಟದ ಮೇಲೆ ಸುಂದರವಾದ ವೆಂಕಟರಮಣ ಸ್ವಾಮಿಯ ದೇವಾಲಯವಿದೆ. ಒಂದು ಕಾಲದಲ್ಲಿ ಕರಿ(ಆನೆ)ಗಳು ಓಡಾಡುತ್ತಿದ್ದುದರಿಂದ ಇಲ್ಲಿಗೆ ಕರಿಘಟ್ಟವೆಂಬ ಹೆಸರಾಯಿತಂತೆ. ಆಗಾಗ್ಗೆ ಬೆಂಕಿ ಬಿದ್ದು ಮರಗಿಡಗಳು ಸುಟ್ಟು ಹೋಗಿ ಬೆಟ್ಟವು ಕಪ್ಪಾಗಿ ಕಾಣಿಸುವುದರಿಂದಲೂ ‘ಕರಿಘಟ್ಟ’ವೆಂಬ ಹೆಸರಾಯಿತಂತೆ!
‘ಕರಿಘಟ್ಟ’ ಬೆಟ್ಟವನ್ನು ಹತ್ತುವ ಮೆಟ್ಟಿಲುಗಳ ಪಕ್ಕದಲ್ಲಿಯೇ ಇದ್ದ ಪುಟ್ಟ ಸಸಿಯೊಂದಕ್ಕೆ ಡ್ರಿಪ್ಸ್ ಪೈಪ್ಅಳವಡಿಸಿದ ನೀರಿನ ಬಾಟಲಿಯೊಂದನ್ನು ತೂಗು ಹಾಕಿ, ಹನಿ ನೀರಾವರಿಯ ಸೌಲಭ್ಯ ಕಲ್ಪಿಸಿದ್ದುದು ಗಮನ ಸೆಳೆಯಿತು. ಅಲ್ಲಲ್ಲಿ ಗಿಡಗಳಿಗೆ ನೀರು ಹನಿಸುವುದರ ಜೊತೆಗೆ, ಅಳಿಲು ಮತ್ತು ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲವಾಗುವಂತೆ ಹಲವಾರು ಗಿಡಗಳಿಗೆ ಅರ್ಧ ಮಾಡಿದ ನೀರಿನ ಕ್ಯಾನ್ ಗಳನ್ನು ತೂಗು ಹಾಕಿದ್ದರು. ಈ ಬೆಟ್ಟವನ್ನು ‘ಹಸಿರು ಬೆಟ್ಟ’ವನ್ನಾಗಿಸಬೇಕೆಂಬ ಸಂಕಲ್ಪ ತೊಟ್ಟ ಪರಿಸರ ಪ್ರೇಮಿ ಶ್ರೀ ರಮೇಶ ಅವರ ನಿಸ್ವಾರ್ಥ ಸೇವೆಯ ನಿದರ್ಶನಗಳಿವು.
ಇತ್ತೀಚೆಗೆ, ರಮೇಶ್ ಅವರ ಶ್ರಮವನ್ನು ಗುರುತಿಸಿದ ಆಸಕ್ತರು ಅವರ ಜೊತೆಗೆ ಕೈಜೋಡಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ರಮೇಶ್ ಅವರ ಪರಿಸರ ಪ್ರೇಮದ ಬಗ್ಗೆ ಹೆಚ್ಚಿನ ವಿವರಗಳಿಗೆ ‘ಪಬ್ಲಿಕ್ ಹೀರೊ’ ಯೂ-ಟ್ಯೂಬ್ ಕೊಂಡಿಯನ್ನು ಕ್ಲಿಕ್ಕಿಸಿ.
https://www.youtube.com/watch?v=dM9B_U43Ngw
-ಹೇಮಮಾಲಾ.ಬಿ, ಮೈಸೂರು
ನಾನು ಕರಿಘಟ್ಟಕ್ಕೆ ಹೋದಗಲೆಲ್ಲ ಪ್ರತಿ ಗಿಡಕ್ಕು ಮಾಡಿರುವ ಹನಿ ನೀರವಾರಿ ಬಾಟಲ್ ಮುಖಂತರ ಮಾಡಿರುವುದನ್ನು ಗಮನಿಸಿದ್ದೆ ಇದರ ಇತಿಹಾಸ ತಿಳಿಸಿದಕ್ಕ ಧನ್ಯವಾದಗಳು
ಅವರ ಧ್ಯೇಯ ಗುರಿತಲುಪಲಿ ಎಂದು ಹಾರೈಸೋಣ.