ಬಾಲ್ಯ-ಜೀವನ.
ಬಾಲ್ಯ-ಜೀವನ
ಮನೆ ಅಂಗಳದ ಕೈ
ತೋಟದಲಿ ಅರಳಿನಿಂತ
ಬಗೆ ಬಗೆಯ ಹೂವುಗಳ
ಚಲವು ಚಿತ್ತಾರಕೆ ಸೊತು
ಮರುಳಾಗಿತ್ತು ನನ್ನ ಮನ.
ವಿದ ವಿದ ಹೂವುಗಳ
ಆಕರ್ಷಣೆಗೆ ಹಾರಿಬಂದ
ಬಣ್ಣ ಬಣ್ಣದ ಚಿಟ್ಟಗಳ
ಕಂಡು ನೆನಪಾಯ್ತು ನನಗೆ
ಚಿಟ್ಟೆಹಿಡಿಯಲು ಹೋಗಿ
ಬಿದ್ದೆದ್ದು ಪರದಾಡಿದ
ನನ್ನ ಬಾಲ್ಯದಾ ಜೀವನ.
ಶರಣು
ದಂಡಿಗೆ ಹೆದರದ
ದಾಳಿಗಳಿಗೆ ಹೆದರದ
ಗಂಡೆದೆ ಗುಂಡಿಗೆಯ
ಬಂಟನೆನಿದ ಅವನು,
ತುಂಡು ಲಂಗದ
ಹುಡುಗಿಯೊಬ್ಬಳ
ಕಣ್ಣಂಚಿನ ಕಿರುನೋಟ
ಮುಗುಳು ನಗೆಗೆ
ಸೋತು ಶರಣಾದನು.
– ಜಿ.ಎಸ್.ನಾಗರಾಜ್, ತರೀಕೆರೆ