ರಾಗಿ ಸೂಪ್
ಚಳಿಗಾಲ ಆರಂಭವಾಗಿದೆ. ಬಿಸಿಬಿಸಿಯಾಗಿ, ರುಚಿರುಚಿಯಾಗಿ, ಆರೋಗ್ಯಕ್ಕೆ ಹಿತಕರವಾದ ಸೂಪ್ ಅನ್ನು ಸವಿಯಲು ಸಕಾಲ. ‘ರಾಗಿ ಸೂಪ್ ‘ ನ ತಯಾರಿಕಾ ವಿಧಾನ ಇಲ್ಲಿದೆ :
- ಒಂದು ಕ್ಯಾರೆಟ್, 5-6 ಬೀನ್ಸ್ ಚಿಕ್ಕ ಕ್ಯಾಬೇಜಿನ ಹೋಳು, ಒಂದು ಈರುಳ್ಳಿ, ಒಂದು ಹಸಿರುಮೆಣಸಿನಕಾಯಿ, ಸ್ವಲ್ಪ ಕರಿಬೇವಿನ ಎಲೆಗಳು..ಇವಿಷ್ಟನ್ನು ಚಿಕ್ಕದಾಗಿ ಹೆಚ್ಚಿ ಬಾಣಲೆಯಲ್ಲಿ ಹುರಿಯಿರಿ.
- ಬೇಕೆನಿಸಿದರೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪವನ್ನು ಸೇರಿಸಿಕೊಳ್ಳಬಹುದು.
- ಎರಡು ಚಮಚ ರಾಗಿಹಿಟ್ಟನ್ನು ನಾಲ್ಕುಲೋಟ ನೀರಿನಲ್ಲಿ ಗಂಟುಗಳಿಲ್ಲದಂತೆ ಕಲೆಸಿ, ಬೆಂದ ತರಕಾರಿಗೆ ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು, ಕಾಳುಮೆಣಸಿನ ಪುಡಿ ಸೇರಿಸಿ, ಸೌಟಿನಲ್ಲಿ ಕೈಯಾಡಿಸುತ್ತಾ ಕುದಿಸಿ .
- ಅವರವರ ಆಯ್ಕೆಗೆ ತಕ್ಕಂತೆ ಬೇಯಿಸಿದ ಬಟಾಣಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹಣ್ಣಿನ ರಸವನ್ನೂ ಸೇರಿಸಿಕೊಳ್ಳಬಹುದು.
ಬಿಸಿಬಿಸಿಯಾದ ರಾಗಿ ಸೂಪ್ ಸವಿಯಲು ಸಿದ್ಧವಾಗುತ್ತದೆ.
– ಭಾರತಿ. ಎಂ.ಎನ್ , ಮೈಸೂರು
ವಾಹ್ ಚುಮು ಚುಮು ಚಳಿಗೆ ಘಮ ಘಮ ರಾಗಿ ಸೂಪ್ ಸೂಪರ್
ಥ್ಯಾಂಕ್ಯೂ .. ನಮ್ಮನೇಲಿ ಮಾಡ್ತೀವಿ..
ನಾನು ಮಾಡಿ ನೋಡ್ತೇನೆ.
ಭಾರತಿಯವರೇ
ಈ ಸೂಪು ಸವಿಯಲು ನಿಮ್ಮ ಮನೆಗೆ ಬರುವೆ .