ಹಾಯ್ಕುಗಳು
ಅಳು ಚೆನ್ನಾಗಿ
ತೊಲಗಲಿ ಲವಣ
ಉಳಿಸಿ ನೀರ ||
.
ಕಂಬನಿ ಬಿತ್ತು
ಉಪ್ಪು ಫಸಲ ಕೊಯ್ಲು
ಕಣ್ಣಿನ್ನು ವಾಸಿ ||
.
ಕಣ್ಣ ಹಡಗು
ಲಂಗರು ರೆಪ್ಪೆಯಲಿ
ಚಲಿಸೊಳಗೆ ||
.
ಮಳೆ ಕಂಬನಿ
ಹನಿ ಹನಿ ಸುರಿಯೆ
ಇಳೆ ಕಂಪನಿ.. ||
.
ಕಂಬಳಿ ಹೊದ್ದ
ರಾತ್ರಿಗೆ ನಡುಗಿರೆ
ಹಗಲೇ ಸುಖ ||
.
ಹಗಲ ಸಖ
ಅಗಲುವಿಕೆಯ ದುಃಖ
ಇರುಳ ಮುಖ ||
‘
ಕಾಫಿ ಕುಡಿದು
ಮೇಲೆದ್ದಾಗ ನೆನಪು
ಹಲ್ಲುಜ್ಜೋ ಸಮಯ..||
.
ಕಾಡಿನ ಸಿಂಹ
ಹಲ್ಲುಜ್ಜುವುದು ದಿನಾ
ಮೆಲ್ಲುತ್ತ ಬೇಟೆ ||
.
ನಮಗಿಲ್ಲದ್ದು
ಚಿಂತೆಯದಲ್ಲ ಬಿಡಿ
– ನಾಗೇಶ ಮೈಸೂರು
ಹಾಯ್ಕುಗಳು ಅರ್ಥಗರ್ಭಿತವಾಗಿವೆ….
ಧನ್ಯವಾದಗಳು ಹೇಮಾ ಮೇಡಂ.. ಮೊದಮೊದಲ ಯತ್ನ