ದಿನಾಂಕ 13–02-2016 ರಂದು ಶನಿವಾರ ಸಾಯಂಕಾಲ 6-00 ಘಂಟೆಗೆ ,” ಸಪ್ತಕ” ಬೆಂಗಳೂರು ಮತ್ತು ಸ್ಥಳೀಯ “ನಯನಾ ಫೌಂಡೇಶನ್ “ಇವರ ಸಹಯೋಗದೊಂದಿಗೆ ಸಂಗೀತಾಸಕ್ತರಿಗಾಗಿ ಶಿರಸಿಯ “ವಿದ್ಯಾಧಿರಾಜ್ ಕಲಾ ಕ್ಷೇತ್ರದಲ್ಲಿ “ಸುಂದರ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಸಜ್ಜಿತ ಸಭಾಂಗಣ, ವೇಳೆಗೆ ಸರಿಯಾಗಿ ದೀಪ ಬೆಳಗುವ ಮೂಲಕ “ನಯನಾ ಫೌಂಡೇಶನ್ “ಶ್ರೀ ಮತ್ತು ಶ್ರೀಮತಿ ಡಾ . ಶಿವರಾಮ , ಡಾ ರಮೇಶ ಹೆಗಡೆ , ಮತ್ತು “ಸಪ್ತಕ”ದ ಸಂಚಾಲಕರಾದ , ಶ್ರೀ ಜಿ . ಎಸ್ . ಹೆಗಡೆಯವರು ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇವನ ಅಜ್ಜ, ಪಂಡಿತ್ ವೆಂಕಟೇಶ್, ತಂದೆ ಪಂಡಿತ ಪ್ರವೀಣ ಅವರು ಕೊಳಲು ವಾದನದಲ್ಲಿ ನಿಸ್ಸೀಮರು, ಅವರಿಂದ ಮಾ.ಷಡ್ಜನಲ್ಲಿ ಆನುವಂಶಿಕವಾಗಿ ರಕ್ತಗತವಾಗಿ, ಕೊಳಲು ವಾದನ ಹರಿದು ಬಂದಿದೆ,ಸುಮಾರು ಒಂದು ತಾಸಿನವರೆಗೆ ನಿರರ್ಗಳವಾಗಿ, ರಾಗ “ಪೂರಿಯಾ ಕಲ್ಯಾಣ” ಮತ್ತು ” ಹಂಸಧ್ವನಿ ” ರಾಗಗಳನ್ನು ಪ್ರಸ್ತುತ ಪಡಿಸಿದ ರೀತಿ ಅಮೋಘ ಹಾಗು ವರ್ಣನಾತೀತ, ಉತ್ತಮ ತಬಲಾ ಸಾಥ್ ನೀಡಿದವರು ಕಲಾವಿದನ ಚಿಕ್ಕಪ್ಪ”ಪಂಡಿತ ಕಿರಣ ಗೋಡಖಿಂಡಿ” ಯವರು.
ಕೊಳಲು ವಾದನದ ನಡುವೆ, ರಾಗ ಉತ್ತುಂಗಕ್ಕೆ ಏರಿದಾಗ , ಸಭಿಕರು ಕರತಾಡನ ಮಾಡಿದಾಗ ಮಾ. ಷಡ್ಜ ಸಭಿಕರಿಗೆ ನಮಿಸುವ ಪರಿ, ಸಹ ವಾದಕರ ತಬಲಾ ಪರಿಣತೆಗೆ “ವಾಹವ್ವಾ , ಕ್ಯಾ ಬಾತ ಹೈ ” ಎನ್ನುತ್ತಿದ್ದ ಬಾಲಕನ ರೀತಿ ನೋಡುತ್ತಾ ಇದ್ದಾರೆ ಅವರ ತಂದೆ ಪಂಡಿತ ಪ್ರವೀಣ ಅವರ ಸಂಗೀತ ಸಭೆಗಳ ನೆನಪುಗಳು ಬರ್ತಾ ಇದ್ದವು. ಶಿರಸಿಯ ಸುಸಂಸೃತ ಗಾನಪ್ರೀಯರು ,ಸಭೆಯಲ್ಲಿ ಆಸೀನರಾದ ಗೋಪಿಕಾ ಸ್ವರೂಪಿ ಸ್ತ್ರೀಯರನ್ನು ಮನಮೊಹಗೊಳ್ಳುವಂತೆ ತನ್ನ ಕೊಳಲಿನ ಸುಮಧುರ ನಾದದೊಂದಿಗೆ ಮರಳು ಮಾಡಿದ ” ಮಾ ಷಡ್ಜ” ವೇದಿಕೆಯ ಮೇಲೆ ಬಾಲಕೃಷ್ಣ ನಂತೆ ಕಂಗೊಳಿಸುತ್ತ ಇದ್ದ