ಧಾರವಾಡ ಸಾಹಿತ್ಯ ಸಂಭ್ರಮ - ನಮ್ಮೂರ ಸುದ್ದಿ

ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 1

Share Button

Ranganna Nadagir

ಈ  ಮೊದಲು ಧಾರವಾಡದ ಬೇಂದ್ರೆ ಅವರ ಸಾಧನಕೇರಿ  ನೋಡಲು ಮತ್ತು ಧಾರವಾಡದ ಫೆಡೆ ಕೊಳ್ಳಲು ಜನರು ಇಲ್ಲಿಗೆ ಬರುತ್ತಿದ್ದರು, ಇದಕ್ಕೆ ಇನ್ನೊಂದು ಗರಿಯಾಗಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ 4 ವರ್ಷಗಳಿಂದ ಸೇರ್ಪಡೆಯಾಗಿದೆ. ಕರ್ನಾಟಕ ವಿಶ್ವ  ವಿದ್ಯಾಲಯದ ಆವರಣದಲ್ಲಿಯ  ಡೈಮಂಡ್  ಕಟ್ಟಡದಲ್ಲಿ ಪ್ರತಿವರ್ಷ ಸಂಕ್ರಮಣದ  ಆಸು ಪಾಸಿನಲ್ಲಿ  ಇದನ್ನು  ಹಮ್ಮಿಕೊಳ್ಳಲಾಗುವದು ವರ್ಷದಿಂದ  ವರ್ಷಕ್ಕೆ  ಜನ  ಜಾಸ್ತಿ ಆಗುತ್ತಾ  ಇದ್ದು , ಜಾತ್ರೆಯ ಸ್ವರೂಪ ಬರುತ್ತಾ ಇದೆ, ಸಾಹಿತ್ಯ, ಸಂಗೀತ ಮನೋರಂಜನೆಗಳನ್ನು  ಇಲ್ಲಿ ಸವಿಯಲು ಕರ್ನಾಟಕದ ಎಲ್ಲ  ಭಾಗಗಳಿಂದ ಅಷ್ಟೇ  ಅಲ್ಲದೆ ಹೊರ  ರಾಜ್ಯಗಳಿಂದಲೂ ಜನ ಆಗಮಿಸಿದ್ದರು.
 .
ಮೊದಲ ದಿನ ಸದಸ್ಯರ ನೊಂದಣಿಗಾಗಿ ಸರತಿ ಸಾಲಿನಲ್ಲಿ  ನಿಂತು ಬ್ಯಾಜ್ , ಪುಸ್ತಕ  ಇತ್ತ್ಯದಿಗಳ ಕಿಟ್ ಪಡೆಯಲು  ಬಂಡ ವ್ಯಕ್ತಿಗಳ ಮುಖದಲ್ಲಿ  ಸಂತೋಷದ ಛಾಯೆ ಇತ್ತು. ನಂತರ ಸೆಕ್ಯೂರಿಟಿ ಮುಖಾಂತರ  ಒಳಗೆ ಪ್ರವೇಶ ಪಡೆದು . ಉಪಹಾರದ ನಂತರ ಎಲ್ಲರೂ ಮೊದಲ ಗೋಷ್ಟಿಗೆ ಸಜ್ಜಾಗಿ  ಕುಳಿತರ ಮೊದಲ ದಿನದ ಮೊದಲ ಗೋಷ್ಠಿ, ದಿವಂಗತ ಕಲಬುರ್ಗಿ ಹಾಗು ಕಳೆದ ಸಾಲಿನಲ್ಲಿ ಮೃತರಾದ ಎಲ್ಲ ಲೇಖಕರು, ಕವಿಗಳಿಗೆ  ಮೌನದ ಮೂಲಕ ನಮನ  ಸಲ್ಲಿಸಿದ  ನಂತರ “ಕಲಬುರ್ಗಿ ನೆನಪು “ ಎಂಬ ಪುಸ್ತಕ ಬಿಡುಗಡೆ  ಮಾಡಲ್ಪಟ್ಟಿತು.
 .
ಶ್ರೀ ಚಂದ್ರಶೇಖರ್ ಕಂಬಾರ ಅವರ  ನಿರ್ದೇಶನದಲ್ಲಿ  ” ಆಸಹಿಷ್ಣುತೆ”  ಎಂಬ ಸಮಕಾಲೀನ ವಿಷಯದ ಮೇಲೆ ಶ್ರೀ ಟಿ . ಪಿ..ಅಶೋಕ ,ಶ್ರೀ  ಹುಳಿಯಾರ ನಟರಾಜ್, ಶ್ರೀ  ಜಿ. ಬಿ. ಹರೀಶ್ ,ಅವರಿಂದ ಸಾಕಷ್ಟು ವಾದ ವಿವಾದ  ಮಂಡಿಸಲ್ಪಟ್ಟವು ,ನಟ ಅಮೀರಖಾನ , ಪ್ರಧಾನ ಮಂತ್ರಿ ಮೋದಿ  ಅವರ  ಪಾಕಿಸ್ತಾನ ಭೆಟ್ಟಿ, ರಾಜಕಾರಣಿಗಳ ದ್ವಂದ ವ್ಯಕ್ತಿತ್ವ  ಎಲ್ಲವೂ ಬಂದಾಗ್ಯೂ  ಈ ಗೋಷ್ಠಿ ಕೆಲ ಸಭಿಕರಿಗೆ  ಸಮಂಜಸವೆನಿಸಲಿಲ್ಲ.   ಸಭಿಕರು ಸಾಕಷ್ಟು ಪ್ರಶ್ನೆ ಕೇಳಿದರೂ  ತೃಪ್ತಿಕರವಾದ ಉತ್ತರ ಸಿಗದೇ ಇದ್ದುದರಿಂದ  ಸಭೆಯಲ್ಲಿ  ಸ್ವಲ್ಪ ವಿಧಾನ ಸಭೆ ನಡೆದಂತೆ ತೋರಿತು.
 
ನಮಗೆ ಸಾಹಿತ್ಯ ಏಕೆ ಬೇಕು ಎಂಬ ವಿಷಯದಲ್ಲಿ ವಿಷಯ ಕುರಿತಾಗಿ ಶ್ರೀ ಏನ್ ಎಸ್,ಲಕ್ಷ್ಮಿ  ನಾರಾಯಣ ಭಟ್ಟರು ಉದಾಹರಣೆಗಳೊಂದಿಗೆ  ವಿಷಯ ಮಂಡಿಸಿದ ರೀತಿ  ಸಭಿಕರನ್ನು ಮಂತ್ರ  ಮುಗ್ಧರನ್ನಾಗಿಸಿತು . ಸಾಹಿತ್ಯ ಮೂಲಕ  ಸಿಗುವ   ಆನಂದ , ರಸಾನುಭಾವಗಳ ಸರಣಿಯನ್ನೇ ನಮ್ಮ ಮುಂದೆ  ಇಟ್ಟರು.  ಚಾರಿತ್ರಿಕ ಕಥಾ ವಚನದಲ್ಲಿ  ಭಾಗ ವಹಿಸಿದ  1) ಧಾರವಾಡದ  ಶ್ರೀಮತಿ  ಮತ್ತಿಹಳ್ಳಿ   ಪ್ರಜ್ಞ , ದುರ್ಗಾಸ್ತಮಾನದ ಸನ್ನಿವೇಶ  2) ಶ್ರೀಮತಿ ವಿದ್ಯಾ ಶರ್ಮ  ಬೆಟಗೇರಿ ಕೃಷ್ಣ ಶರ್ಮರ ಮಲ್ಲಿಕಾರ್ಜುನ ಕಾದಂಬರಿಯ  ಪಟ್ಟಾಭಿಷೇಕ  ಪ್ರಸಂಗ   3) ರಂಗಭೂಮಿ ಕಲಾವಿದೆ ಮಂಗಳಾ ಮಸ್ತಿ ವೆಂಕಟೇಶ್ ಅಯ್ಯಂಗಾರ್  ಅವರ “ಚಿಕ್ಕ ವೀರರಾಜೇಂದ್ರ ‘  ಕಾದಂಬರಿಯಲ್ಲಿಯ  ಅವನ ಬಾಲ್ಯ, ಕುಂಟ ಬಸ್ಯಾ ನೊಡನೆ  ಸಹವಾಸ್, ಅದರಿಂದಾದ ಚಪಳತನ ಇತ್ತ್ಯದಿಗಳನ್ನು  ಹಾವ  ಭಾವ  ದೊಂದಿಗೆ
ಪ್ರಸ್ತುತ ಪಡಿಸಿದರು. ನಂತರ 4 ನೆಯ  ವಾಚನ  ಶ್ರೀ ಎಂ , ಗಣೇಶ್ ಅವರು ಶ್ರೀ ಮೊಹಮ್ಮದ ಕುಂಞಿ  ವಿರಚಿತ  “ಪ್ರವಾದಿ ಮೊಹಮ್ಮದ ಪೈಗಂಬರರ ” ಜೀವನ ಕುರಿತು ಓದಿದರು. ನಾಲ್ಕು ವಾಚಕರ  ಓದಿನಿಂದಾಗಿ ಚಾರಿತ್ರಿಕ ಕಾದಂಬರಿಗಳನ್ನು  ಓದಲೇ ಬೇಕೆಂಬ  ಹಂಬಲ ಸಾಕಷ್ಟು ಜನರಲ್ಲಿ ಉಂಟಾಗಿರಲೇಬೇಕು , ಆ ರೀತಿ ಇತ್ತು ಅವರ  ಓದುವಿಕೆ ಹಾಗು ದೃಶ್ಯ ಕಲ್ಪನೆ.Sambhrama1

ಮತ್ತೊಂದು ಗೋಷ್ಠಿ ‘ಅಷ್ಟಾವಧಾನ’, ಪ್ರೇಕ್ಷ ಕರನ್ನು  ಮಂತ್ರಮುಗ್ಧರನ್ನಾಗಿ ಮಾಡಿದ  ಶ್ರೀ ಶತಾವಧಾನಿ  ಆರ್. ಗಣೇಶ್  6 ಜನರು  ನೀಡಿದ ಚಿತ್ರ ವಿಚಿತ್ರ ಪ್ರಶ್ನೆಗಳಿಗೆ ಉತ್ತರ ,ಸಮಸ್ಯ ಪೂರ್ತಿ, ಕಾವ್ಯವಾಚನ,  ಅಶು ಕವಿತೆ , ಸಂಖ್ಯಾ ಬಂಧಗಳನ್ನು ಬಿಡಿಸಿದರು. ನಿಮಿಷದಲ್ಲಿ ಚೌಪದಿ ರಚಿಸಿದರು, ಇವೆಲ್ಲ ಕಾರ್ಯಗಳಲ್ಲಿ ಅವರಿಂದ  ಹಾಸ್ಯದ  ಹೊನಲು ಹರಿಯುತ್ತಾ ಇತ್ತು, ಇದೊಂದು  ಕಾಯಮ್ಮಾಗಿ  ಮನದಲ್ಲಿ ಉಳಿದ  ಸಂಗತಿ . ಶತಾವಧಾನಿಗಳಿಗೆ  ಶಂಭರ  ಪ್ರಣಾಮಗಳು.

ಸಮಾರಂಭದ ಮೊದಲ ದಿನದ  ಕೊನೆಯ ಕಾರ್ಯಕ್ರಮ — ಪಂಡಿತ್ ಕೈವಲ್ಯ ಕುಮಾರ ಗುರವ  ಅವರ ಅಮೋಘ ಸಂಗೀತ .ಶ್ರೀ ಕುಮಾರ  ಗಂಧರ್ವ ಅವರ ಸುಪುತ್ರ . ತಂದೆಗೆ ತಕ್ಕ ಮಗ, ಇವರ ಲಾಲಿತ್ಯ ಪೂರ್ಣವಾದ ಸಂಗೀತ ಆಲಿಸುವದೆ  ನಮ್ಮೆಲ್ಲರ  ಸೌಭಾಗ್ಯ,ಅಂದು ಪ್ರಸ್ತುತ ಪಡಿಸಿದ ರಾಗ .”ಶುದ್ಧ ಕಲ್ಯಾಣ’ ಅದನ್ನು ವಿಸ್ತರಿಸುತ್ತಾ ನಮ್ಮನ್ನೆಲ್ಲಾ  ಯಾವದೋ ಲೋಕಕ್ಕೆ ಒಯ್ಯುವಲ್ಲಿ  ಸಫ಼ಲರಾದರು,   ಬಾರೋ . ರಂಗಯ್ಯ  ಹಾಡಿನಲ್ಲಿ  ಕೀರಿಟಧಾರಿ, ಕಮಲ ಕುಂಡಲ ಗಳೊಂದಿಗೆ  ಶೋಭಿಸುವ ಆ  ದೇವರನ್ನೇ ನಮ್ಮ ಮುಂದೆ  ತಂದು  ನಿಲ್ಲಿಸಿದರು.  ಅಪೂರ್ವ ಸಂಗೀತದ ತರಂಗಗಲ್ಲಿ ತೇಲುತ್ತಾ  ಮನೆಗೆ ಹೋದಾಗ ರಾತ್ರಿ 10.30. ಮರುದಿನದ ಸಂಭ್ರಮದಲ್ಲಿ  ಭಾಗವಹಿಸಲೆಬೇಕೆಂಬ  ವಿಚಾರಗಳಿಂದ  ನಿದ್ರಾ ಲೋಕಕ್ಕೆ ಜಾರಿದೆ.

( ಮುಂದುವರಿಯುವುದು)
– ರಂಗಣ್ಣ ಕೆ. ನಾಡಗೀರ್ 
 .

6 Comments on “ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 1

  1. ತುಂಬಾ ಉತ್ತಮ ಬರಹ, ಶೈಲಿ. ಈ ಬಾರಿಯ ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಳ್ಳಲಾಗದಿದ್ದರೂ ತಮ್ಮ ಲೇಖನ ಓದಿದಾಗ ಸಾಹಿತ್ಯವೂ ಸಂಭ್ರಮವೂ ಒಂದೇ ಬಾರಿಗೆ ಅನುಭವಕ್ಕೆ ಬಂತು. ಚಿತ್ರಕ ಶೈಲಿಯಲ್ಲಿದೆ ತಮ್ಮ ಬರಹ. ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ. 🙂

    1. ನನ್ನ ಮೊದಲ ಪ್ರಯತ್ನಕ್ಕೆ ಸರಿಯಾದ ಪ್ರತಿಫ಼ಲ ದೊರೆತಿದೆ . ನನ್ನ ಲೇಖನವನ್ನು “ಸುರಹೊನ್ನೆ”
      ಪತ್ರಿಕೆಯಲ್ಲಿ ಪ್ರಕಟಿಸಲು ಸಹಾಯ ಮಾಡಿದ ಶ್ರೀಮತಿ ಹೇಮಮಾಲ.ಬಿ ಅವರಿಗೆ ಧನ್ಯವಾದಗಳು .
      ಹಾಗೆಯೆ ಉತ್ತಮ ಪ್ರತಿಕ್ರಿಯೆ ನೀಡಿದ ಶ್ರೀಮತಿ ಶ್ರುತಿ ಶರ್ಮ ಅವರಿಗೂ ವಂದನೆಗಳು

      .

      1. ತುಂಬಾ ಚೆನ್ನಾಗಿದೆ ಸರ್. ಬಹಳ ವಸ್ತು ನಿಷ್ಟವಾಗಿ ಬರೆದಿದ್ದೀರಿ .

  2. Vivarane tumba manadattaguv reetiyallide. Yaradaroo sambram karyakramakke hogiradiddaru Sri Ranganna Nadgeravr vivarane odutta hodare naven sahity sambra karyakramadalli kuntiveno anta anisuttade. Chanbagi varnane needid Ranganna Nadger ivrige danyavadgalu.

Leave a Reply to Ranganath Nadgir Cancel reply

 Click this button or press Ctrl+G to toggle between Kannada and English

Your email address will not be published. Required fields are marked *