ಕೂಡಲ ಸಂಗಮ
ಕೃಷ್ಣಾ ಮತ್ತು ಮಲಪ್ರಭಾ ನದಿ ಸಂಗಮಿಸುವ ಕ್ಡೇತ್ರವಾದ ಕೂಡಲ ಸಂಗಮವು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಅಣೆಕಟ್ಟಿನಿಂದ ಸುಮಾರು 35 ಕಿ.ಮಿ.ದೂರದಲ್ಲಿದೆ. ಇದು ಬಸವಣ್ಣನವರ ಐಕ್ಯ ಸ್ಥಳವಾಗಿದ್ದು, ಲಿಂಗಾಯತ ಧರ್ಮದ ಪ್ರಮುಖ ಕ್ಷೇತ್ರವಾಗಿದೆ.
ಐಕ್ಯಮಂಟಪವು ಮೊದಲು ನೆಲಮಟ್ಟದಲ್ಲಿ ಇತ್ತಂತೆ. ಆಲಮಟ್ಟಿ ಜಲಾಶಯವು ನಿರ್ಮಾಣಗೊಂಡಾಗ, ಅದರ ಹಿನ್ನೀರಿನ ವ್ಯಾಪ್ತಿಯಲ್ಲಿ ಈ ಮಂಟಪವು ಮುಳುಗಡೆಯಾಗುವುದರಲ್ಲಿತ್ತು. ಹಾಗಾಗಿ, ಮುಳುಗಡೆಯನ್ನು ತಪ್ಪಿಸಲು ಈ ಮಂಟಪಕ್ಕೆ ಸುತ್ತಲೂ ಸುಮಾರು 50 ಅಡಿ ಎತ್ತರದ ಪ್ರಾಕಾರವನ್ನು ಕಟ್ಟಿದ್ದಾರೆ. ಸುತ್ತಲೂ ನೀರಿನಿಂದ ಕೂಡಿದೆ. ವೀಕ್ಷಣೆಗಾಗಿ ಸೇತುವೆಯಲ್ಲಿ ಹೋಗಿ ಮೆಟ್ಟಿಲುಗಳ ಮೂಲಕ ಕೆಳಗಿಳಿಯುವ ವ್ಯವಸ್ಥೆಯಿದೆ.
ಬಸವಣ್ಣನವರು ಚಿಕ್ಕ ವಯಸ್ಸಿನಲ್ಲಿ ಇಲ್ಲಿಗೆ ಬಂದು ಈಶಾನ್ಯ ಗುರುಗಳೆಂದು ಖ್ಯಾತರಾಗಿರುವ ಪರಮಪೂಜ್ಯ ಜಾತವೇದ ಮುನಿಗಳಿಂದ ಶಿಕ್ಷಣ ಮತ್ತು ಮಾರ್ಗ ದರ್ಶನ ಪಡೆದರು. ಇಲ್ಲಿ ಕೃಷ್ಣ ನದಿ ಮತ್ತು ಘಟಪ್ರಭ ನದಿ ವಿಲೀನವಾಗಿ ಪೂರ್ವ ದಿಕ್ಕಿನಲ್ಲಿ ಆಂಧ್ರ ಪ್ರದೇಶ ರಾಜ್ಯದ ಶ್ರೀಶೈಲದ ಕಡೆಗೆ ಹರಿಯುತ್ತದೆ.
(ಮಾಹಿತಿ: ವಿಕಿಪಿಡಿಯ)
– ಹೇಮಮಾಲಾ.ಬಿ
ಕೂಡಲಸಂಗಮ ಕ್ಷೇತ್ರ ವು ನೋಡಲು ಆಕರ್ಷಣೀಯವೂ ಸುಂದರವೂ ಆಗಿದೆ.ಅಲ್ಲಿನ ತಣ್ಣನೆಯ ಧ್ಯಾನ ಮಂಟಪವನ್ನು ನೆನೆದಾಗ ಆನಂದವಾಗುತ್ತದೆ