ಬೊಗಸೆಬಿಂಬ

ಮನುಷ್ಯತ್ವಕ್ಕೆ ಬೆಲೆ ಕಟ್ಟಲಾದೀತೇ?

Share Button

Shruthi

“ಪ್ರೀತಿ ಮತ್ತು ಕರುಣೆಗಳು ಇಲ್ಲದೆಡೆ ಮನುಷ್ಯತ್ವಕ್ಕೆ ಸ್ಥಳವಿಲ್ಲ, ಅವು ಜೀವನದ ಅಗತ್ಯಗಳಾಗಿವೆ” – ದಲೈಲಾಮ.

ಹೌದು! ಪ್ರೀತಿ ಮತ್ತು ಕರುಣೆಗಳು ಮನುಷ್ಯನ ಬದುಕಿಗೆ ತುಂಬಾ ಅಗತ್ಯ. ಅವಿಲ್ಲದ ಬದುಕು ಊಹಿಸಲೂ ಕಷ್ಟ. ಆದರೆ, ಅದರ ಅಳವಡಿಕೆ ಎಷ್ಟರ ಮಟ್ಟಿಗೆ ಮಾಡಿದ್ದೇವೆಂಬ ಪ್ರಶ್ನೆ ನಮಗೆ ನಾವೇ ಕೇಳಿಕೊಂಡರೆ ಯಾರೇ ಆದರೂ ಕೆಲಕ್ಷಣ ಯೋಚನೆಗೊಳಗಾಗಬಹುದು. ಎಲ್ಲರೆಡೆಗೂ ನಿಜ ಪ್ರೀತಿ, ಕರುಣೆಗಳನ್ನು ಹರಿಸುವುದೂ ಕಷ್ಟವೇ. ಆದರೆ ಅಂತಹ ಕೆಲ ಘಟನೆಗಳನ್ನು ನೋಡಿದರೆ, ಕೇಳಿದರೆ ಅದನ್ನು ಹುರಿದುಂಬಿಸುವುದು, ಬೆಳಕು ಚೆಲ್ಲುವುದು ಒಂದೊಳ್ಳೆಯ ವಿಚಾರ.

ಇಲ್ಲೊಂದು ಸಂಗತಿ ನೋಡಿ.. ಕೇರಳದ ಮಲಪ್ಪುರಂ ಜಿಲ್ಲೆಯ ಹೋಟೆಲ್ ಸಬ್ರಿನಾ ಒಂದು ಸಣ್ಣ ಹೋಟೆಲ್. ಅಲ್ಲಿ ಅಖಿಲೇಶ್ ಕುಮಾರ್ ಎಂಬ ವ್ಯಕ್ತಿ ರಾತ್ರಿ ಊಟಕ್ಕೆ ಆರ್ಡರ್ ಮಾಡಿ ಕಾಯುತ್ತಿದ್ದಾಗ ನಡೆದ ಘಟನೆ.

ಹೋಟೆಲಿನ ಬಾಗಿಲಿನಲ್ಲಿ ಇಣುಕಿ ನೋಡುತ್ತಿದ್ದ ಚಿಂದಿ ಆಯುವ ಹುಡುಗನೊಬ್ಬನನ್ನು ಅಖಿಲೇಶ್ ಕಂಡಿದ್ದರು. ಆರ್ಡರ್ ಮಾಡಿದ್ದ ಊಟ ಇನ್ನೂ ಬಂದಿರಲಿಲ್ಲ. ಇಣುಕುತ್ತಿದ್ದ ಹುಡುಗನ ಕಣ್ಣುಗಳಲ್ಲಿ ಇಣುಕಿ ಮರೆಯಾಗುತ್ತಿದ್ದ ಹಸಿವೆಯನ್ನು ಕಂಡು ಅಖಿಲೇಶ್ ಕರುಳು ಕರಗಿತ್ತು.

Akhilesh    Sabrina_Bill

ಮೆತ್ತಗೆ ಸೀಟಿನಿಂದ ಎದ್ದು ಆ ಬಾಲಕನನ್ನು ಒಳಬರುವಂತೆ ಸನ್ನೆ ಮಾಡಿದ್ದರು. ನಿಜಕ್ಕೂ ಆತ ಕರೆದುದು ತನ್ನನ್ನೇ ಇರಬಹುದೇ ಎಂದು ಅನುಮಾನದಿಂದ ಹಿಂದೆ ಮುಂದೆ ನೋಡಿದ ಬಾಲಕನನ್ನು ಕರೆದು ತನ್ನ ಟೇಬಲ್ ನಲ್ಲಿ ಕೂರಿಸಿದರಾತ. ಬಾಲಕನ ಜೊತೆ ಅವನ ತಂಗಿಯೂ ಒಳಬಂದಳು. ಅವರಿಗೇನು ಬೇಕೆಂದು ಕೇಳಿ ತರಿಸಿ ಕೊಟ್ಟಿದ್ದರು ಅಖಿಲೇಶ್. ಆಹಾರವನ್ನು ನೋಡಿ ತಡೆಯಲಾರದಷ್ಟು ಖುಷಿಪಟ್ಟು ಹೊಟ್ಟೆತುಂಬಾ ಉಂಡೆದ್ದ ಹುಡುಗನನ್ನೂ ಅವನ ತಂಗಿಯನ್ನೂ ನೋಡಿ ಅಖಿಲೇಶ್ ಗೂ ತ್ರುಪ್ತಿಯಾಗಿತ್ತು.

ಊಟದ ಬಿಲ್ ಕೇಳಿದಾಗ ಬಿಲ್ ತಂದು ಕೊಟ್ಟ ವೈಟರ್. ಬಿಲ್ ತೆರೆದು ನೋಡಿದಾಗ ಆಶ್ಚರ್ಯ ಕಾದಿತ್ತು!ಅದರಲ್ಲಿ ಮೂರು ಊಟದ ಬೆಲೆಯ ಬದಲು ಹೀಗೆ ಬರೆದಿತ್ತು –

” ಮನುಷ್ಯತ್ವಕ್ಕೆ ಬಿಲ್ ಮಾಡುವ ಯಂತ್ರ ನಮ್ಮಲ್ಲಿಲ್ಲ…ನಿಮಗೆ ಒಳ್ಳೆಯದಾಗಲಿ..”!

ಅಖಿಲೇಶ್ ಕಣ್ಣುಗಳು ತುಂಬಿ ಬಂದಿದ್ದುವು.

 

– ಶ್ರುತಿ ಶರ್ಮಾ

 

7 Comments on “ಮನುಷ್ಯತ್ವಕ್ಕೆ ಬೆಲೆ ಕಟ್ಟಲಾದೀತೇ?

  1. Oಹ್….

    ಅ೦ಥ ಯ೦ತ್ರ ಬರುವುದೂ ಬೇಡ ಬಿಡಿ 🙂

    ಶುಭಾಷಯಗಳು….

  2. ನನ್ನ ಕಣ್ಣುಗಳು ತುಂಬಿ ಬಂದುವು..ಎಂಥ ಸಂವೇದನೆ..

  3. ಓದಿದ. ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು.. 🙂

  4. ಕಣ್ಣು ತೆರೆಸುವ ಪ್ರಕರಣ. “ಮೊದಲು ಮಾನವನಾಗು ಮತ್ತೆ ಮಾಧವನಾಗು” ಎನ್ನುವ ಸುಭಾಷಿತ ನೆನಪು ಮಾಡುವ ಬರಹ .ಮೆಚ್ಚಿಗೆಯಾಯ್ತು.

  5. ವಾವ್…! ಮನ ಮುಟ್ಟಿದ ವಿಷಯ..ಹಂಚಿಕೊಂಡಿದಕ್ಕೆ ಧನ್ಯವಾದಗಳು…

  6. ಇಂಗ್ಲಿಷ್ನಲ್ಲಿ ಓದಿದ್ದೆ. ಕನ್ನಡದ ಬರಹ ಚೆನ್ನಾಗಿದೆ. ಸ್ನೇಹಿತರಿಗೆ ವಾಟ್ಸಾಪ್ ಶೇರ್ ಮಾಡಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *