ಯುವ ಪೀಳಿಗೆ ಮತ್ತು ಗಾಂಧಿ
ಮೊನ್ನೆ ನಾನು ಫೇಸ್‌ಬುಕ್ ನೊಡುವಾಗ ಗಾಂಧೀಜಿಯವರ ಬಗ್ಗೆ ಒಂದು ಪೋಸ್ಟ್ ನೋಡ್ದೆ, ಅದರ ಪ್ರಕಾರ ಗಾಂಧಿ ಒಬ್ಬ ವಿಕೃತ ಕಾಮಿ, ದುರಾಳ ಮನಸಿನ ವ್ಯಕ್ತಿ ಅದನ್ನ ನೋಡಿ ಒಂದು ಕ್ಷಣ ನನ್ನ ಧಮನಿ ನಿಂತ ಅನುಭವ!!! ಮೊದಲಿನಿಂದಲೂ ಗಾಂಧೀಜಿಯವರ ಕಟ್ಟ ಅಭಿಮಾನಿ ನಾನು, ಅವರ ಅಘಾದವಾದ ವ್ಯಕ್ತಿತ್ವದಲ್ಲಿ ಒಂದು ಸೂಜಿಯಶ್ಟಾದರು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ಆಸೆ ನನದು. ಹೀಗಿರುವಾಗ ಇಂಥ ಒಂದು ಪೋಸ್ಟ್ ನೋಡಿ ಇದರ ಬಗ್ಗೆ ನನ್ನ ಸ್ನೇಹಿತರನ್ನು ಕೇಳ ಹೊದ್ರೆ ಅವರದು ಅಷ್ಟೇ ನಿಷ್ಟೋರವಾದ ಉತ್ತರ! ಅವರ ಪ್ರಕಾರ ನಮ್ಮ ದೇಶದ ಈಗಿನ ಸ್ಥಿತಿಗೆ ಗಾಂಧೀಜಿಯವರೇ ಕಾರಣ!!
ಈಗಿನ ಯುವ ಪೀಳಿಗೆ ಸೊಷಿಯಲ್ ಮೀಡಿಯದಲ್ಲಿ ಯಾರದ್ದಾದರು ಬಗ್ಗೆ ಪೋಸ್ಟ್ ಮಾಡುವ ಮೊದಲು ಅದು ನಿಜವೂ ಸುಳ್ಳೂ ಎಂದು ಕಿಂಚಿತ್ತು ಯೋಚಿಸದೇ ಪೋಸ್ಟ್ ಬಟನ್ ಒತ್ತಿಬಿಡಿತ್ತಾರೆ. ನಾನು ಯಾರ ಯೋಚನಾ ಶಕ್ತಿಯನ್ನು ಇಲ್ಲಿ ಪ್ರಶ್ನಿಸುತ್ತಿಲ್ಲ, ನನ್ನ ಕಳಕಳಿಯ ಮನವಿ ಏನೆಂದರೆ ನೀವು ತಪ್ಪಾಗಿ ಪ್ರಚಾರ ಮಾಡುತ್ತಿರುವುದು ನಮ್ಮ ಮಹಾತ್ಮನ ಮೇಲೆ ಎಂಬುದು ನೆನಪಿರಲಿ.ಜನರಲ್ಲಿ ನಾನು ಸಂವಹಿಸುವಾಗ ಅವರು ಗಾಂಧಿಯನ್ನು ದ್ವೇಷಿಸಲು ಕೆಲವು ಕಾರಣಗಳು ತಿಳಿದವು. ಅದಕ್ಕೆ ನನಗೆ ತಿಳಿದ ಉತ್ತರಗಳನ್ನು ನಿಮ್ಮ ಮುಂದಿಡುವ ಒಂದು ಪ್ರಾಮಾಣಿಕ ಪ್ರಯತ್ನ ಇದು.
ದೇಶದ ಇಬ್ಬಾಗ ಮತ್ತು ಗಾಂಧಿ: ನಮ್ಮ ಯುವ ಪೀಳಿಗೆಯು ಗಾಂಧಿಯನ್ನು ದ್ವೇಷಿಸಲು ಪ್ರಮುಖ ಕಾರಣ ಎರಡು ದೇಶ ನೀತಿ. ನಾನು ಓದಿ ತಿಳಿದಿರುವ ಪ್ರಕಾರ ಗಾಂಧೀಜಿ ಎಂದಿಗೂ ಎರಡು ದೇಶ ನೀತಿಯನ್ನು ಪ್ರತಿಪಾದಿಸಿದವರಲ್ಲ ಭಾರತ ಇಬ್ಬಾಗವಾಗುವುದಾದರೆ ನನ್ನ ಹೆಣದ ಮೇಲೆ ಎಂದು ಉದ್ಗರಿಸಿದ ವ್ಯಕ್ತಿ ಆತ.
ಎರಡು ದೇಶ ನೀತಿಯನ್ನು ಪ್ರಮುಖವಾಗಿ ಪ್ರತಿಪಾದಿಸಿದವರು ಅಂದಿನ ಭಾರತದ ಮುಸ್ಲಿಂ ಲೀಗ್ ಮುಖಂಡ ಮೊಹಮ್ಮದ್ ಅಲಿ ಜಿನ್ಹ ಮತ್ತು ಅವರಿಗೆ ಬೆಂಗಾವಲಾಗಿ ನಿಂತವರು ಅಂದಿನ ಭಾರತದ ಜೆನರಲ್ ಗವರ್ನರ್ ಮೌನ್ಟ್ ಬ್ಯಾಟನ್. ಅಧಿಕಾರದ ಆಸೆ ಇದ್ದ ಜಿನ್ಹ ತನ್ನ ಮುಸ್ಲಿಂ ಲೀಗ್ ಜೊತೆಗೂಡಿ, ದೇಶ ಇಬ್ಬಾಗವಾಗದಿದ್ದರೆ ಹಿಂದುಗಳು ನಮ್ಮನ್ನು ತುಳಿಯುತ್ತಾರೆ ಎಂದೆಲ್ಲ ಕಥೆಕಟ್ಟಿ ಎರಡು ದೇಶ ನೀತಿಯನ್ನು ಭಾರತೀಯರಲ್ಲಿ ಹುಟ್ಟುಹಾಕಿದರು, ದುಃಖದ ಸಂಗತಿಯೆಂದರೆ ಇದಕ್ಕೆ ನಮ್ಮ ಕೆಲವು ರಾಜಕೀಯ ಮುಖ್ಯಸ್ಥರು ಸಾಥ್ ನೀಡಿದ್ದರು.
ಗಾಂಧೀಜಿ ಭಗತ್ ಸಿಂಗ್‌ರನ್ನು ನೇಣಿನಿಂದ ತಪ್ಪಿಸಬಹುದಿತ್ತು:
ನಮ್ಮ ಬಾಲಿವುಡ್ ಸಿನಿಮಾಗಳು ಬಿಂಬಿಸುವ ಪ್ರಕಾರ ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜ್ ಗುರು ಇವರನ್ನು ನೇಣಿಗೇರಿಸುವುದನ್ನು ಗಾಂಧೀಜಿ ತಪ್ಪಿಸುವ ಎಲ್ಲಾ ಅವಕಾಶಗಳು ಇದ್ದರು ಅವರು ತಪ್ಪಿಸಲಿಲ್ಲ ಎಂಬುದು.
ಆದರೆ ಒಮ್ಮೆ ಯೋಚಿಸಿ ನಮ್ಮ ಬಾಲಿವುಡ್‌ನ ಎಷ್ಟು ಸಿನಿಮಾಗಳು ಇದ್ದ ವಿಷಯವನ್ನು ಇದ್ದಹಾಗೆ ಪ್ರಾಮಾಣಿಕವಾಗಿ ಬಿಂಬಿಸುತ್ತವೆ ? ಅವರು ಭಗತ್ ಸಿಂಗ್ ಕೈಲಿ ಡುಯೆಟ್, ಮಿಲ್ಕಾ ಸಿಂಗ್ ರೊಮ್ಯಾನ್ಸ್ ಎಲ್ಲಾ ಮಾಡಿಸುತ್ತಾರೆ. ಹೌದು ಗಾಂಧೀಜಿಯ ಧೋರಣೆಗು ಭಗತ್ ಸಿಂಗ್‌ರ ಧೋರಣೆಗಳಿಗೂ ಸಾಕಷ್ಟು ವ್ಯತ್ಯಾಸಗಳಿದ್ದವು. ಗಾಂಧಿಯದು ಶಾಂತಿಯ ನಿಲುವಾದರೆ, ಭಗತ್‌ರದ್ದು ಕ್ರಾಂತಿಯದ್ದು. ಗಾಂಧೀಜಿ ತಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನು ನೇಣು ತಪ್ಪಿಸಲು ಮಾಡಿದರು, ಆದರೆ ಲಾರ್ಡ್ ಐರ್‍ವಿನ್ ಪ್ರಾಭಲ್ಯಸಾಧಿಸಿ ಸಾವುನ್ಡ್‌ರ್‍ಸ್ ಸಾವಿನ ದ್ವೇಷ ತೀರಿಸಿಕೊಂಡರು.
ಗಾಂಧಿ, ನೆಹರು ಮತ್ತು ಪಟೇಲ್:
ಮತ್ತೊ ಕೆಲವರ ಪ್ರಕಾರ ಗಾಂಧೀಜಿ ಪಟೇಲ್‌ರಿಗೆ ಮೋಸ ಮಾಡಿ ನೆಹರುರಿಗೆ ಪಟ್ಟ ಕಟ್ಟಿದರು ಎಂದು. ಹೌದು ಗಾಂಧೀಜಿಗೆ ಇದು ತಪ್ಪೆಂದು ಗೊತ್ತಿತ್ತು, ಆದರೆ ಆಗಿನ ಪರಿಸ್ಥಿತಿಯಲ್ಲಿ ನೆಹರುರವರಿಗೆ ಸಹಾಯ ಮಾಡದಿದ್ದರೆ ಅದು ದೇಶಕ್ಕೆ ಬಹಳ ದುಬಾರಿಯಾಗುವುದು ಎಂದು ಅವರಿಗೆ ತಿಳಿದಿತ್ತು. ಆದರು ಸಹ ಗಾಧೀಜಿ ನೆಹರುರವರಿಗೆ ಅರ್ಥೈಸಲು ಬಹಳ ಪ್ರಯತ್ನ ಪಟ್ಟರು ಅದು ಫಲಕಾರಿಯಾಗಲಿಲ್ಲ. ಅದು ಅಲ್ಲದೇ ಆಗಿನ ಕಾಂಗ್ರೆಸ್ ಕಮಿಟಿಯ ಬಹುಪಾಲು ಮಂದಿಗೆ ನೆಹರು ಪ್ರಧಾನಿಯಾಗುವುದು ಇಷ್ಟವಿರಲಿಲ್ಲ, ಇದೆಲ್ಲದರ ಮಧ್ಯೆಯು ನೆಹರು ತನ್ನ ಹಟ ಬಿಡದ ಕಾರಣ, ಗಾಂಧೀಜಿ ಪಟೇಲರಿಗೆ ಇದ್ದ ಪರಿಸ್ಥಿತಿಯನ್ನು ವಿವರಿಸಿದರು, ಗಾಂಧಿಯ ಮೇಲೆ ಅಪಾರ ಗೌರವವುಳ್ಳ ಪಟೇಲರು ತನ್ನ ಅರ್ಜಿಯನ್ನು ಹಿಂಪಡೆದರು. ನೆಹರುರನ್ನು ವಿರೋಧಿಸಿದರೆ ಅದು ಎಲ್ಲಿ ಭಾರತದ ಸ್ವತಂತ್ರ್ಯದ ಮೇಲೆ ಪ್ರಭಾವ ಬೀರುತ್ತದೊ ಎನ್ನುವ ಒಂದೇ ವಿಷಯದಿಂದ ಗಾಂಧೀಜಿ ನೆಹರುರನ್ನು ಬೆಂಬಲಿಸಿದರು.
ಸೊಷಿಯಲ್ ಮೀಡಿಯಾದಲ್ಲಿ ಗಾಂಧಿ:
ನಾನು ಮೊದಲೇ ಹೇಳಿದಂತೆ ಈ ಸೊಷಿಯಲ್ ಮೀಡಿಯಾದಲ್ಲಿ ಗಾಂಧೀಜಿಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿವವರಿಗೆ ಗಾಂಧಿಯ ಪೂರ್ಣ ಹೆಸರು ಕೂಡ ತಿಳಿದಿರುವುದಿಲ್ಲ. ಅವರ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲದ ಜನರಿಗೆ ಗಾಂಧಿ ಒಬ್ಬ ಸಲಿಂಗ ಕಾಮಿ, ತಮ್ಮ ಆಶ್ರಮದಲ್ಲಿದ್ದ ಮಹಿಳೆಯರನ್ನು ತಮ್ಮ ಇಷ್ಟದಂತೆ ಬಳಸಿಕೊಳ್ಳುತ್ತಿದ್ದರು ಎಂದೆಲ್ಲ ಪೋಸ್ಟ್ ಮಾಡುವುದು ಎಷ್ಟು ಸರಿ ? ಅಂಥವರು ಭಾರತದ ಸ್ವತಂತ್ರ್ಯ ಹೋರಾಟದ ದಿನಗಳ ಕಷ್ಟವನ್ನು ಒಮ್ಮೆ ಗೂಗಲ್ ಮಾಡಿ ನೋಡಿ.
ಕೆಟ್ಟದ್ದು ಕಣ್ಣಿಗೆ ಬೇಗ ಇಷ್ಟವಾದುತ್ತದೆ. ಅಂತಜ್ರಾಲದಲ್ಲಿ ಹರಿದಾಡುವುದೆಲ್ಲ ಪರಮ ಸತ್ಯವಲ್ಲ ಎಂಬುದು ಜನರಿಗೆ ಅರ್ಥವಾಗಬೇಕು. ನಾನು ಇಲ್ಲಿ ಗಾಂಧೀಜಿ ಮಾಡಿದ್ದೆಲ್ಲ ಸರಿ ಅಥವಾ ತಪ್ಪು ಎಂದು ಹೇಳುತ್ತಿಲ್ಲ. ಅಂಥ ಮಹಾತ್ಮನ ಬಗ್ಗೆ ಮಾತಾಡುವುದಕ್ಕೂ ಒಂದು ಅರ್ಹತೆ ಇರಬೇಕು. ಗಾಂಧಿ ನಂಬಿದ ಅಹಿಂಸೆ, ಸತ್ಯದ ಹಾದಿಯಲ್ಲಿ ನೆಡೆಯುವುದಕ್ಕೆ ಬಹು ಅಪರಿಮಿತ, ಅಮೂಲ್ಯ, ಸೂಕ್ಷ್ಮ ಮನಃಸ್ಥತಿ ಬೇಕು. ಅವರು ಹೇಳಿದ ದಾರಿಯಲ್ಲಿ ನೆಡೆದರೆ ಈ ಯುದ್ಧ, ಭಯೊತ್ಪಾದನೆ ಇವೆಲ್ಲ ಇಲ್ಲವಾಗುತ್ತಿತ್ತು. ಅಹಿಂಸೆಯ ದಾರಿ ದುರ್ಘಮವಾದರು ಗೆಲುವು ಶಾಶ್ವತ, ಆದರೆ ಕ್ರಾಂತಿಯ ಗೆಲುವು ಕ್ಷಣಿಕ ಎಂಬುದು ಎಲ್ಲರಿಗೂ ಅರ್ಥವಾಗಬೇಕು.
ನಿಮಗೆ ಗಾಂಧಿ ಇಷ್ಟವಾಗದಿದ್ದರೆ ಬೇಡ, ಆದರೆ ಕನಿಷ್ಠ ಪಕ್ಷ ಅವರ ಬಗ್ಗೆ ಇಲ್ಲದುದ್ದನ್ನೆಲ್ಲ ಹರಡಬೇಡಿ, ಅವರು ಭಾರತದ ಏಳಿಗೆಯಷ್ಟೇ ಬಯಸಿದ್ದರು ಎಂಬುದು ಎಲ್ಲರಿಗೂ ಗೊತ್ತರುವ ಸಂಗತಿ. ಭಾರತ ಎಂದಾಕ್ಷಣ ಎಂಥವರಿಗೂ ನೆನಪಾಗುವ ಮೊದಲ ಹೆಸರು ಮಹಾತ್ಮ ಗಾಂಧಿ, ಎಲ್ಲೊ ಗಾಂಧಿಯನ್ನು ಅವಮಾನಿಸಲು ಹೊಗಿ ನಮ್ಮ ದೇಶವನ್ನೇ ನಾವು ಅವಮಾನಿಸುತಿದ್ದೇವೆ. ಇಂದಿಗೂ ನಮ್ಮ ಮಹಾತ್ಮನ ಪ್ರತಿಮೆಯನ್ನು ವಿದೇಶಗಳಲ್ಲಿ ನಿರ್ಮಿಸುತ್ತಾರೆ ಎಂದರೆ ಆತನ ವ್ಯಕ್ತಿತ್ವ ಎಂಥದ್ದು ಎಂದು ನೀವೇ ಊಹಿಸಿ. ಅಂದು ೩೦೦ ಮಿಲಿಯಲ್ ಜನ ಒಂದು ಧ್ವನಿಗೆ ಒಗ್ಗೂಡುತ್ತಿದ್ದರು ಎಂದರೆ ಆ ಧ್ವನಿಯ ಶಕ್ತಿ ಅಪರಿಮಿತ!!!
.
-ನಿಷ್ಕಲಾ ಗೊರೂರು
ಬಹಳ ದಿನಗಳಿಂದ ಒಂದು ಕುತೂಹಲ ನನ್ನನ್ನು ಕಾಡುತ್ತಿದೆ.ಗಾಂಧೀಜಿಯವರು ಅಷ್ಟೊಂದು ಒಳ್ಳೆ ದೇಶ ಸೇವೆ ಮಾಡಿದ್ರೂ ಅವ್ರಿಗೆ ನೋಬೆಲ್ ಪ್ರಶಸ್ತಿ ಯಾಕೆ ಕೊಟ್ಟಿಲ್ಲ ಅಂತ!
ರಾಜಕೀಯ ಸರ್ ರಾಜಕೀಯ!!!!!!