Author: Dr.H N Manjuraj
ನನ್ನ ಮೂಗಿನ ನೇರ
ಗೆಳೆಯರೊಬ್ಬರು ಫೋನ್ ಸಂಭಾಷಣೆಯಲ್ಲಿ ನಿರತರಾಗಿ ಜೋರಾಗಿ ಕೂಗುತ್ತಿದ್ದರು. ನಾ ಕಂಡಂತೆ ಸಾಮಾನ್ಯವಾಗಿ ಅವರು ಅಷ್ಟು ಕಿರುಚುವುದಿಲ್ಲ. ‘ಏನೋ ಎಡವಟ್ಟಾಗಿದೆ’ ಎಂದುಕೊಂಡೆ. ಈ ಸಮಯದಲ್ಲಿ ಅವರನ್ನು ಕಾಣಲು ಬರಬಾರದಿತ್ತು ಎಂದೆನಿಸಿತು. ‘ಬಂದಾಗಿದೆ; ಇನ್ನು ಆ ಭೂತಕಾಲ ಪ್ರಪಂಚದ ಗೊಡವೆ ಬೇಡ’ವೆಂದು ಮುಂದಾಗುವುದಕ್ಕೆ ಸಿದ್ಧನಾದೆ. ಒಂದಷ್ಟು ಹೊತ್ತು ಮಾತಾಡಿ, ಫೋನಿಟ್ಟರು....
ಕಾಕಪುರಾಣಂ
ಏಪ್ರಿಲ್ 27 ರಂದು ಅಂತಾರಾಷ್ಟ್ರೀಯ ಕಾಗೆ ದಿನವೆಂದು ಮಾನ್ಯ ಮಾಡಲಾಗಿದೆಯಂತೆ. ಕೆ ರಾಜಕುಮಾರ್ ಎಂಬ ಕನ್ನಡದ ಮಹತ್ವದ ಬರೆಹಗಾರರಿಂದ ನನಗಿದು ಗೊತ್ತಾಯಿತು. ಏನೇನೋ ದಿನಾಚರಣೆಗಳು ಬಂದು ದಿನಗಳ ಮಹತ್ವವೇ ಮಂಕಾಗಿರುವ ಕಾಲವಿದು. ಆದರೆ ಕೆಲವೊಂದು ದಿನಾಚರಣೆಗಳಿಗೆ ನಿಜಕ್ಕೂ ಅರ್ಥವಿರುತ್ತದೆ; ವ್ಯರ್ಥವಾಗುವುದಿಲ್ಲ ಎಂಬುದಕ್ಕೆ ಈ ಕಾಗೆದಿನ ಸಾಕ್ಷಿ. ದಿನನಿತ್ಯದ...
ಧರ್ಮ – ವೀರ
ನಮ್ಮ ಭರತಖಂಡವು ಪುಣ್ಯಭೂಮಿ; ಭಾರತೀಯರಾದ ನಾವು ಅದೃಷ್ಟವಂತರು. ಕಾರಣ, ಈ ನೆಲವು ಅಸಂಖ್ಯಾತ ಸಂತರು, ಅವಧೂತರು ಮತ್ತು ಋಷಿಸದೃಶ ಗುರು ಪರಂಪರೆಯ ತವರು. ಇಂಥ ಮಹಾಮಹಿಮರಲ್ಲಿ ಭಗವಾನ್ ವರ್ಧಮಾನ ಮಹಾವೀರರೂ ಒಬ್ಬರು. ಇವರ ಕಾಲಾವಧಿ: ಕ್ರಿ ಪೂ 599 ರಿಂದ 527. ಬಿಹಾರದ ವೈಶಾಲಿ ನಗರದಲ್ಲಿ ಜನನ,...
ಇಡ್ಡಲಿಗೆ ಎಂಬ ದಿವಿನಾದ ಕೊಡುಗೆ !
ನಮ್ಮೆಲ್ಲರ ಅಚ್ಚುಮೆಚ್ಚಿನ ಅಂತರ್ಜಾಲ ಪತ್ರಿಕೆಯಾಗಿರುವ ‘ಸುರಹೊನ್ನೆ’ಯು ದೋಸೆಯನ್ನು ಕುರಿತ ಥೀಮ್ ಕೊಟ್ಟಿತ್ತು. ಈ ಥೀಮ್ ಬರೆಹ ನನ್ನನ್ನು ಆಕರ್ಷಿಸಿದ್ದರಿಂದ ನೆನಪುಗಳ ಮೀಟುಗೋಲಲ್ಲಿ ಬರೆದೇ ಬಿಟ್ಟೆ. ‘ದೋಸೆಯಾಸೆ’ ಎಂದು ಹೆಸರನ್ನೂ ಕೊಟ್ಟೆ; ಪ್ರಕಟವೂ ಆಯಿತು. ಈ ಲಲಿತ ಪ್ರಬಂಧಕ್ಕೆ ಅಪಾರ ಜನಮೆಚ್ಚುಗೆಯೂ ದೊರೆಯಿತು. ಆದರೆ ನನಗೆ ದೋಸೆಯಷ್ಟೇ ಇಡ್ಲಿಯೂ...
ಅಹಮಿಳಿದ ಹೊತ್ತು ………
ಮರವಾಗಲಾರೆ !ಹಸಿರೆಲೆಯಾಗಿ ಜೀವಸತ್ವವ ಹೀರಿಪ್ರಾಣವಾಯುವ ಹಾಗೆಯೇ ತೂರಿ,ತರಗೆಲೆಯಾಗುದುರಿ ಗೊಬ್ಬರವಾಗುವೆ ಹೂದೋಟವಾಗಲಾರೆ !ನೇಸರನುದಯಕೆ ಅರಳುವ ಹೂವೊಂದರದಳಕಂಟಿರುವ ಪರಾಗರೇಣುವ ಅಣುವಾಗಂಟಿಪರಿಮಳ ಪಸರಿಸುತ ಪಾವನವಾಗುವೆ ಸಾಗರವಾಗಲಾರೆ !ಮಳೆಹನಿಯಾಗಿ ಕೆಳಗಿಳಿದು ಅಪಾರಪಾರಾವಾರದಲೊಂದಾಗಿ ಜೀಕುವ ಅಲೆಯಜೊತೆ ಜಾಗರವಾಡುತ ದಡವ ಮುತ್ತಿಕ್ಕುವೆ ಗ್ರಹತಾರೆಯಾಗಲಾರೆ !ತಣ್ಣಗುರಿವ ಹಣತೆಯ ಬೆಳಕಾಗಿ ಕೈ ಹಿಡಿದವರದಾರಿದೀಪವಾಗಿ ಧನ್ಯವಾಗುತ, ಸ್ವಲ್ಪ ಹೊತ್ತಷ್ಟೇಪ್ರಜ್ವಲಿಸಿ ಗಾಳಿಯಲೊಂದಾಗುವೆ...
ಪ್ರಾಣದೇವ (ಒಂದು ಅಂತರ್ಯಾತ್ರೆಯ ಕಥನ)
ಗುರುಗಳನ್ನು ಕಾಣಲು ಯಾಕಿಷ್ಟು ಧಾವಂತ? ಎಂದು ನನ್ನನ್ನೇ ಕೇಳಿಕೊಂಡೆ. ಗುಡ್ಡ ಹತ್ತುವಾಗ ಏದುಸಿರು. ಕೇವಲ ಬಿಸಿಲು; ಮೈಯ್ಯಲ್ಲಿ ಬೆವರು. ಆದರೂ ಜೀವಾತ್ಮದಲಿ ಏನೋ ಪವರು! ಒಂಥರಾ ತುಡಿತಮಿಡಿತವದು. ನಲ್ಲನೊಬ್ಬ ತನಗಾಗಿ ಕಾದಿರುವ ನಲ್ಲೆಗಾಗಿ ಏನನೂ ಲೆಕ್ಕಿಸದೇ ಬಿಲ್ಲಿನಿಂದ ಬಿಟ್ಟ ಬಾಣದ ತೆರದಿ ಸುಯ್ಯನೆ ಹೊರಟು ಬಿಡುತ್ತಾನಲ್ಲ! ಅಂಥ...
ಸಖ್ಯದ ಆಖ್ಯಾನ!
ಜಗತ್ತಿನಲ್ಲಿ ಪ್ರೀತಿ ವಾತ್ಸಲ್ಯ ಮಮತೆಗಳಿಲ್ಲದೇ ನರಳುವವರ ಸಂಖ್ಯೆಯು ನಿಚ್ಚಳವಾಗಿ ಹೆಚ್ಚಿದೆ. ಇದಕ್ಕೆ ಏನು? ಮತ್ತು ಯಾರು ಕಾರಣ? ಎಂಬುದು ಒತ್ತಟ್ಟಿಗಿರಲಿ, ಸಂತೈಸುವಿಕೆಗಾಗಿ ಕಾದಿರುವವರೇ ಬಹಳ. ಒಂದು ತುತ್ತು ಅನ್ನವೀಗ ಹೇಗಾದರೂ ದೊರೆಯುತ್ತದೆ; ಆದರೆ ಒಂದು ಬೊಗಸೆ ಪ್ರೀತಿಯನ್ನು ಪಡೆಯುವುದು ದುಸ್ತರ. ಕದನಕ್ಕೆ ಹೇಗೆ ಇಬ್ಬರ ಅಗತ್ಯವಿದೆಯೋ ಹಾಗೆಯೇ...
ನವಿಲ ನರ್ತನಕೆ ಕೊಳಲ ಗಾನದಿಂಪು ಜೊತೆಯಾಗಿ
(ಕುವೆಂಪು ಅವರ ಪ್ರಾರಂಭಿಕ ಕವನಗಳನ್ನು ಕುರಿತು) ಕನ್ನಡ ಸಾಂಸ್ಕೃತಿಕ ಲೋಕದ ದೊಡ್ಡಪ್ಪ ಕೆ ವಿ ಪುಟ್ಟಪ್ಪ. ಕನ್ನಡದ ಕನ್ನಡಿಯಾಗಿ ಅದರ ಪ್ರತಿಬಿಂಬ ತಿದ್ದಿದವರು, ಸರಿಪಡಿಸಿ ಬೆಳೆಸಿದವರು, ಪಂಪ ರನ್ನ ಕುಮಾರವ್ಯಾಸರಂತೆ ನಿತ್ಯ ನೆನಪಿಟ್ಟುಕೊಳ್ಳುವ ಕೆಲಸ ಮಾಡಿದವರು. ಇಂಥ ಕುವೆಂಪು ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲೂ ಕೃತಿ ರಚಿಸಿ,...
ನಿಮ್ಮ ಅನಿಸಿಕೆಗಳು…