ಅಪ್ಪ ಎಂದರೆ ಹಾಗೆಯೇ..
ಕಣ್ಣೀರು ಹರಿಯುವುದ ನಾನು ಕಾಣಲಿಲ್ಲ ಮುಖದ ಚಹರೆ ಬದಲಾಗುವುದ ನಾ ನೋಡಲಿಲ್ಲ ಮುಗುಳ್ನಗೆಯ ಹಿಂದೆ ಏನಿದೆ ಗೊತ್ತಾಗಲೇ ಇಲ್ಲ.. ಅವರು ಹಾಗೆಯೇ..ಏನೂ ತೋರುವುದಿಲ್ಲ..! ಎಲ್ಲರ ಮುಂದೆ ನನ್ನ ಹೊಗಳುವರು ಪತ್ನಿಯ ಮುಂದೆ ಗರ್ವ ಪಡುವರು.. ನಾಳೆಯ ನೆನೆದು ಕೊಂಚ ವಿಚಲಿತರಾಗುವರು.. ಅವರು ಹಾಗೆಯೇ..ಏನೂ ತೋರುವುದಿಲ್ಲ..! ಅವರನ್ನು ಆಕಾಶವೆನ್ನಲೆ?...
ನಿಮ್ಮ ಅನಿಸಿಕೆಗಳು…