1. ಕೆಂಪು ಕೊಡೆಯ ಹುಡುಗಿ ದಿನವೂ ಸಿಗ್ನಲ್ ಬಳಿ ಬಂದಾಗ, ಕೆಂಪು ಕೊಡೆ ಹಿಡಿದ ಪುಟಾಣಿ ಹುಡುಗಿ ಕಾಣಿಸುತ್ತಿದ್ದಳು. ಪುಟ್ಟಪುಟ್ಟ ಹೆಜ್ಜೆಯಿಟ್ಟು ಓಡೋಡಿ ರಸ್ತೆ ದಾಟುತ್ತಿದ್ದಳು. ಅವಳ ಪುಟ್ಟ ಕಿವಿಗೆ ದೊಡ್ಡ ಹಿಯರಿಂಗ್ ಮೆಶಿನ್. ಅದೊಂದು ಕರಾಳ ದಿನ…! ಯಾರೋ ಪುಂಡ ನಿಯಮ ಮುರಿದ; ಜೋರಾಗಿ ಹಾರನ್ ಹೊಡೆದು, ಬೈಕ್ ಓಡಿಸಿದ. ಕೆಂಪು ಕೊಡೆಯ ಹುಡುಗಿ ದಾಟುತ್ತಿದ್ದಳು….! ಏನಾಯಿತೆಂದು ಅರಿವಾಗುವಷ್ಟರಲ್ಲಿ ಹೆಣವಾಗಿದ್ದಳು. ಕೊಡೆ ಇನ್ನೂ ಕೆಂಪಗಾಗಿತ್ತು….! ಅವಳ ಶಾಲೆಯ ಚೀಲದಿಂದ ಹಿಯರಿಂಗ್ ಮೆಶಿನ್ ರಸ್ತೆಗೆ ಬಿದ್ದಿತ್ತು…..! ********************************************************************* 2. ಸಾಕ್ಷಿ ಎಲ್ಲಿದೆ…? ಶೌರ್ಯನ ಕೊಲೆಯಾಗಿತ್ತು. ಕ್ರೌರ್ಯ ಕಟಕಟೆಯಲ್ಲಿ ನಿಂತಿದ್ದ. ಕೊಲೆ ಕಣ್ಣಾರೆ ನೋಡಿದವಳು ಶಾಂತಿ; ನ್ಯಾಯಾಲಯದಲ್ಲೂ ಮಾತಾಡಲಿಲ್ಲ…! ಕ್ರೌರ್ಯ ಬಿಡುಗಡೆಯಾದ. ಮತ್ತೆ...
ನಿಮ್ಮ ಅನಿಸಿಕೆಗಳು…