ರಂಗು ರಂಗಿನ ಮಳೆ….
ರಂಗುರಂಗಿನ ಮಳೆಯಲಿ.. ಆಹಾ.. ಅದೇನು ವಿ–ಚಿತ್ರ ಮಳೆಹನಿಯೋ.. ಜೀವದೊಳಗೆ ರಂಗು ತುಂಬುವ ಮಾಯವೋ…! ಮಕ್ಕಳ ಆಟದ ರಂಗು ಪ್ರೇಮಿಗಳ ಕುಡಿನೋಟದ ರಂಗು ನವ ವಧು–ವರರ ಮೋಹದ ರಂಗು ಇಳಿ ವಯಸಿನ ಮಾಸದ ನೆನಪಿನ ರಂಗು..! ಮಳೆಹನಿಯೇ ನಿನಗದೆಷ್ಟುರಂಗು…? ಹರುಷದ ಹೊನಲಿನ ರಂಗು ಪ್ರೇಮದ ಕನಸಿನ ರಂಗು ಮರುಜೀವದ ನನಸಿನ ರಂಗು ಕೊನೆಗಾನದ ಒಲವಿನ ರಂಗು ಮಳೆಹನಿಯೇ ನಿನಗದೆಷ್ಟು ರಂಗು…? , – ಅಶೋಕ್ ಕೆ. ಜಿ. ಮಿಜಾರ್. +154
ನಿಮ್ಮ ಅನಿಸಿಕೆಗಳು…