ರೈತನ ನೋವ ಕಂಡ ಭುವಿಯ ಮೊರೆ ಇರಬಹುದೆ?
ರೈತನ ಕಥೆ ಕೇಳಿತಿದಿರಿ ನೋಡತಿದಿರಿ ದಿನಾ ಟಿವಿ ನ್ಯೂಸ್.ರೇಡೀಯೋ, ಸುದ್ದಿ ಮಾದ್ಯಮಗಳಲ್ಲಿ ಓದತ್ತಾ ಇದ್ದಿರಿ.ಕಬ್ಬು ಬೆಳೆದ ರೈತರ ಸಾವುಗಳೊಂದ ಕಡೆಯಾದರೆ ಇನ್ನೊಂದ ಕಡೆ ಮಳೆ ಇಲ್ಲದೆ ಬೆಳೆ ಒಣಗಿ ಹೋಗತಿರೊ ರೈತರ ಬಾಧೆ.ಮತ್ತೊಂದಕಡೆ ನೆರೆ ಹಾವಳಿ ಅಧಿಕಮಳೆಯಿಂದ ಕೊಚ್ಚೀ ಹೋದ ಅನ್ನದಾತನ ಬದುಕು.
ಹೀಗೆ.ಎಲ್ಲೆ ಹೋದರ ಒಂದಾನೊಂದು ಕಷ್ಟದಲ್ಲಿ ಸಿಕ್ಕಾಹಾಕೊಂಡ ನರಳಿ ನರಳಿ ಸಾಯೋಕು ಆಗದೆ ಬದುಕೋಕು ಆಗದೆ ಜೀವನ ಸಾಗಸುತ್ತಾ ಇರೊರೆ ರೈತರು.ಒಂದ ಕಡೆ ಬೆಳೆ ಬಂದರೆ ವೈಜ್ಞಾನಿಕ ಬೆಲೆ ಸಿಗದೆ ನಷ್ಟ ಅನುಭವಿಸ್ತಾನೆ.ದಲ್ಲಾಳಿಗ ಹಾವಳಿಯಂತು ಹೇಳತಿರದು ಅದೊಂದ ದೊಡ್ಡ ಕಥೆಯಾಗುತ್ತೆ ಮುಂದೆ ಬರಿಯೊ ಪ್ರಯತ್ನ ಮಾಡತಿನಿ. ಇನ್ನೂ ರಾಜಕಾರಣಿಗಳು ಜನನಾಯಕರು ಅನಿಸಿಕೊಂಡವರು ರೈತನ ನೋವಿಗೆ ಬೆಲೆ ಕೊಡದ ಸಂಗತಿ ಬಹಳ ವಿಷಾದನಿಯ.ನಮ್ಮ ಕರ್ನಾಟಕದಲ್ಲಿ ಸರ್ಕಾರ ಇದೆಯೇ ಇಲ್ಲವೋ ಶಂಶವಾಗುತ್ತಿದೆ.ಇಲ್ಲಿ ಕರ್ನಾಟಕದ ಎಲ್ಲಾ ಕಡೆನೂ ನೀರಾವರಿ ಇಲ್ಲ.ಮಾನ್ಸೂನ್ ಮಾರುತವನ್ನ ಅವಲಂಬಿಸಿರುವ ರೈತನ ಮನದಾಳದ ಮಾತಿದೆ.ಅವನ ಜೀವನವೇ ಮಾನ್ಸೂನ್ನಿನೊಂದಿಗೆ ಜೂಜಾಟವಾಗಿದೆ.ಹಾಗೆ ನೊಂದ ರೈತನ ಮನದಾಳದ ಮಾತು ಭೂಮಿತಾಯಿಯುವು ಸಹ ಮೇಘರಾಜನಿಗೆ ಹೀಗೊಮ್ಮೆ ವಿನಂತಿಸರಬಹುದೆ ಎಂದು ನೇಗಿಲ ಯೋಗಿಯ ಮನದ ಮಾತನ್ನ ಹೇಳಲು ಪ್ರಯತ್ನ ಮಾಡಿದ್ದೆನೆ.ತಪ್ಪುಗಳಿದ್ದರೆ ಕ್ಷಮಿಸಿ ಬಿಡಿ.
——ನೀನಿಲ್ಲದೆ ಎನಿಲ್ಲ——-
ಯಾಕೆ ಮೋಸದ ಆಟ ನೀ ಆಡಾಕತಿ
ನಿನ್ನ ದಾರಿಕಾಯ್ದ ಮನಸ ಮರಮರ ಮರಗೈತಿ
ಆ ಆಷಾಡದ ಗಾಳಿನೂ ನಿಂತ ಹೋಗೆತಿ
ನೀ ಬರದ ಮನದಂಗಳ ಒಣಗೆತಿ
ನಿನ್ನ ನಂಬಿ ಅಂವಾ ರೈತ ಬೀಜಾ ಬಿತ್ಯಾನ
ಬಿರು ಬಿಸಲಿಗೆ ಭೂವಿಯ ಉದರವು ಅಧರೆತಿ
ಮಗಳ ಮದುವಿಗೆ ಮೂರತಿಂಗಳೈತಿ
ಬಿತ್ತಿದ ಬೆಳಿಯಲ್ಲಾನೂ ಒಣಗೆ ಹೋಗೈತಿ
ಎಲ್ಲೆ ಹ್ವಾದರೂ ನಯಾ ಪೈಸಾ ಸಿಗಂದಂಗಾಗೆತಿ
ಇದರಾಗೆನ ಅವರದ ಕುಂತಂತರೈತಿ
ಹೊಲದಾಗ ಹಾಡಕೊಂಡ ರೈತ ಅಳತೈತಿ
ಮಕ್ಕಳಮಾರಿ ನೋಡಕೊತ ಮನಿಮುಂದ ಕುಂತೈತಿ
ಮಾನ್ಸೂನ್ ಅಂತ ನಿನಗ ಹೆಸರೈತಿ
ದನಕರಗಳ ಹೊಟ್ಟಿನೆತ್ತಿ ನೋಡುದ ನಿನ್ನ ಧರ್ಮೈತಿ
ಮನಸ್ಯಾನ ಕಷ್ಟ ನಿನಗ್ಯಾಕ ತಿಳಿವಲ್ಲದಾಗೈತಿ
ಬಂದ ಬಿಡು ನೋಡೊಣೊಮ್ಮೆ ಆರ್ಭಟಿಸಿ
ಭಾನು ಭೂಮಿ ಎರಡುನೂ ಏಕಾಎಕಾಗಿಸಿ
ಕೇಳಲಿ ಅವರಿಗೆ ಮಿಂಚು ಸಿಡಿಲಿನ ಗದ್ದರಿಕಿ
ಮಿಂಚಿಗೆ ಹೆದರಿ ಬಂದ ಆಗಬೇಕವರ ಕಛೇರಿ ಕಿಡಕಿ
ಸಿಡ್ಲಿನ ಸಪ್ಪಳಕ ಅಳಗ್ಯಾಡಬೇಕವರ ಮೇಜು ಖುರ್ಚಿ
ಹಂಗಾದಾಗರ ಅವರಿಗೆನರ ಅನ್ನದಾತನ ಗೋಳ ತಿಳಿತೈತಿ
.
– ಗೌಡಗಟ್ಟಿ ಬಸವಣ್ಣ.
” ನೀನಿಲ್ಲದೆ ಏನಿಲ್ಲ ” ಅದ್ಭುತವಾಗಿ ಮೋಡಿ ಬಂದಿದೆ. ಮನದಾಳಕ್ಕೆ ಕಂತುವ ನೋವು ಕವಿ ಮೂಡಿಸಿದ್ದು ಅತ್ತ್ಯುತ್ತಮವಾಗಿದೆ .