81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನು!

Share Button
Hema6

– ಹೇಮಮಾಲಾ.ಬಿ

 

ಓಡೋಡಿ ಹೋಗಿ ಗೋಡೆ ಮುಟ್ಟಿ ವಾಪಸ್ ಬಂದವರಂತೆ, ಅರ್ಧ ದಿನದ ಮಟ್ಟಿಗೆ, ಶ್ರವಣಬೆಳಗೊಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ಬಂದೆ. ಫೆಬ್ರವರಿ 2 ರಂದು, ಬೆಳಗ್ಗೆ, ಗೆಳತಿಯರಾದ ಶ್ಯಾಮಲಾ, ರುಕ್ಮಿಣಿಮಾಲಾ ಮತ್ತು ಸುಜಾತಾರೊಂದಿಗೆ ಮೈಸೂರು ಬಿಟ್ಟು, ಸುಮಾರು 80 ಕಿ.ಮೀ ದೂರದಲ್ಲಿರುವ ಶ್ರವಣಬೆಳಗೊಳ ತಲಪಿದಾಗ 10 ಗಂಟೆ ಆಗಿತ್ತು.

ಮುಖ್ಯ ಸಭಾಂಗಣದ ಒಳ ಹೊಕ್ಕು ನೋಡಿದರೆ, ಆ ಸಮಯದಲ್ಲಿ, ಮುಕ್ಕಾಲಂಶ ಕುರ್ಚಿಗಳು ಖಾಲಿ ಇದ್ದುವು. ಸ್ವಲ್ಪ ಸಮಯ ಕುಳಿತು ಕೇಳಿದ್ದಾಯಿತು. ಅಲಂಕೃತವಾದ, ಅಚ್ಚುಕಟ್ಟಾದ ವೇದಿಕೆಯಲ್ಲಿ ಈಗಾಗಲೇ ಬಹುಚರ್ಚಿತ ವಿಷಯವೊಂದರ ಬಗ್ಗೆ ಗೋಷ್ಠಿ ನಡೆಯುತ್ತಿತ್ತು. ‘ಸಾಹಿತ್ಯ ಸಭಾಂಗಣ’ದಲ್ಲಿ ಆಗಾಗ ಸೌತೆಕಾಯಿ, ಕಡ್ಲೆಕಾಯಿ ಮಾರುವ ಪುಟ್ಟ ಹುಡುಗರನ್ನು ನೋಡಿದಾಗ, ಈ ಹುಡುಗರು ಪ್ರಾಥಮಿಕ ವಿದ್ಯಾಭ್ಯಾಸದಿಂದ ವಂಚಿತರಿರಬಹುದು…..ಎಂತಹ ವಿರೋಧಾಭಾಸ ಎನಿಸಿ.. ಮನಸ್ಸಿಗೆ ಖೇದವೆನಿಸಿತು.

ಪುಸ್ತಕಮಳಿಗೆಗಳನ್ನು ನೋಡಲು ಹೊರಟೆವು. ಹಲವಾರು ಮಳಿಗೆಗಳು ಸಾಕಷ್ಟು ಪುಸ್ತಕಗಳನ್ನು ಒದಗಿಸಿದ್ದವು. ಆದರೂ ತುಂಬಾ ಜನರು ಸೇರುವ ಕಡೆ ಸಂಭವಿಸಬಹುದಾದ ವ್ಯವಸ್ಥೆ-ಅವ್ಯವಸ್ಥೆ ಎರಡೂ ಅಲ್ಲಿದ್ದುವು. ದೂರದಲ್ಲಿ ಕೆಲವರು ಯಾರೋ ಪುಸ್ತಕ ವ್ಯಾಪಾರಿಗಳೊಂದಿಗೆ ಯಾವುದೋ ವಿಚಾರವಾಗಿ ಏರುದನಿಯಲ್ಲಿ ಮಾತನಾಡುತ್ತಾ ಅವರನ್ನು ಅಲ್ಲಿಂದ ಸ್ಥಳಾಂತರಿಸಿದರು. ಎಳೆಯ ಯುವಕರಾಗಿದ್ದ ಆ ಪುಸ್ತಕವ್ಯಾಪಾರಿಗಳು ಸಪ್ಪೆಮುಖ ಹೊತ್ತು ತಮ್ಮ ಸರಕುಗಳನ್ನು ಜೋಡಿಸುತ್ತಿದ್ದರು. ಇಲ್ಲೂ ಬೇಜಾರೆನಿಸಿತು.

ಇನ್ನು ಮುಂದೆ ತಿಂಡಿ-ತಿನಿಸು, ಆಟಿಕೆಗಳು,ಕಬ್ಬಿನಹಾಲು ….ಇತ್ಯಾದಿಗಳ ಮಳಿಗೆಗಳು. ಎಲ್ಲಾ ವಸ್ತುಪ್ರದರ್ಶನಗಳಲ್ಲಿರುವಂತೆ ಇಲ್ಲೂ ವ್ಯವಸ್ಥೆ-ಅವ್ಯವಸ್ಥೆ, ಸ್ವಚ್ಛತೆ -ಅಸ್ವಚ್ಛತೆ, ನೂಕು ನುಗ್ಗಲು-ಖಾಲಿತನ …ಹೀಗೆ ವಿರೋಧಾಭಾಸಗಳೇ ಇದ್ದು ಅಲ್ಲಿಂದ ಹೊರಬಂದೆವು. ಆಗ ಮಧ್ಯಾಹ್ನ 12.30 ಗಂಟೆ ಆಗಿತ್ತು.

ಅಷ್ಟರಲ್ಲಿ ಬಹಳಷ್ಟು ಮಂದಿ ಇನ್ನೊಂದು ದೊಡ್ಡ ಪೆಂಡಾಲ್ ಕಡೆ ಹೋಗುತ್ತಿರುವುದು ಕಾಣಿಸಿತು. ನಾವೂ ಹಿಂಬಾಲಿಸಿದೆವು. ಅದು ಭೋಜನಾಲಯ. ವಿಶಾಲವಾಗಿ, ಸ್ವಚ್ಛವಾಗಿತ್ತು. ಇನ್ನೂ ಊಟ ಕೊಡಲಾರಂಭಿಸಿರಲಿಲ್ಲ. ಆದರೆ ಆಗಲೇ ಜನ ಜಮಾಯಿಸುತ್ತಿದ್ದರು. ಒಂದು ಗಂಟೆಗೆ ಊಟ ಕೊಡುತ್ತಾರೆಂದು ಗೊತ್ತಾಯಿತು. ಇನ್ನೂ ಸಮಯವಿದೆಯಲ್ಲಾ ಎಂದು ಅಲ್ಲಿಂದ ಹೊರಟೆವು. ಮತ್ತೊಂದು ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ಯಾಕೋ ನಮಗೆಲ್ಲರಿಗೂ ‘ಇನ್ನೇನು ಮಾಡುವುದು’ ಎಂಬಂತಹ ಭಾವವಿತ್ತು.

ಸುಮಾರು ಒಂದು ಕಿ.ಮಿ ದೂರದಲ್ಲಿದ್ದ ವಿಂಧ್ಯಗಿರಿಯಲ್ಲಿ ಶೋಭಿತನಾಗಿದ್ದ ಬಾಹುಬಲಿಯು ಎತ್ತರದಿಂದಲೇ ನಮ್ಮ ಪೇಚಾಟ ನೋಡುತ್ತಾ ನಗುತ್ತಿದ್ದಿರಬೇಕು. ಮೈಸೂರಿನಿಂದ ಇಲ್ಲಿ ವರೆಗೆ ಬಂದು, ಸಮ್ಮೇಳನದಲ್ಲೂ ಪಾಲ್ಗೊಳ್ಳದೆ ಹಿಂತಿರುಗುವ ಬದಲು, ಇಲ್ಲಿಗೆ ಮೆಟ್ಟಿಲು ಹತ್ತಿ ಬನ್ನಿ, ಸ್ವಲ್ಪ ಕೊಬ್ಬಾದರೂ ಕರಗೀತು, ಕನಿಷ್ಟ ಫೇಸ್ ಬುಕ್ ನಲ್ಲಿ ಗೀಚಲು ವಿಷಯವಾದರೂ ಸಿಕ್ಕೀತು, ಎಂದು ಆದೇಶ ಕೊಟ್ಟ. ಸರಿ, ಈ ಆಲೋಚನೆಯನ್ನು ಗೆಳತಿಯರ ಮುಂದಿಟ್ಟಾಗ ಒಕ್ಕೊರಲ ಸಮ್ಮತಿ ಲಭಿಸಿತು. ಸಮ್ಮೇಳನದ ಜಾಗದಿಂದ ಕಾಲ್ಕಿತ್ತು, ಬೆಟ್ಟದ ಕಡೆಗೆ ಪಾದ ಬೆಳೆಸಿದೆವು.

ಬೆಟ್ಟದ ಕೆಳಗಿರುವ ಒಂದು ಜೈನ ಭೋಜನಾಲಯದಲ್ಲಿ ಉಂಡು, ಬೆಟ್ಟ ಏರಿದೆವು. ಆಗಲೇ ನೂರಾರು ಮಂದಿ ಬೆಟ್ಟಹತ್ತುವುದು ನಮಗೆ ಕಾಣಿಸುತ್ತಿತ್ತು. ಸುಮಾರು 700 ಮೆಟ್ಟಿಲುಗಳು. ಬಿಸಿಲಿದ್ದರೂ ತಂಗಾಳಿ ಬಹಳ ಆಹ್ಲಾದಕರವಾಗಿ ಬೀಸುತ್ತಿತ್ತು. ಹಾಗಾಗಿ ದಣಿವಾಗಲಿಲ್ಲ. ಬೆಟ್ಟ ಹತ್ತಿ, ಬಾಹುಬಲಿಯ ಪದತಲಕ್ಕೆ ನಮಿಸಿ ಕುಳಿತು ಸುತ್ತಮುತ್ತಾ ನೋಡುವಾಗ ದೂರದಲ್ಲಿ ಕಾಣಿಸುವ ಸಮ್ಮೇಳನದ ಬೃಹತ್ ಪೆಂಡಾಲ್ ಬಹಳ ಸೊಗಸಾಗಿ ಕಾಣಿಸಿತು.

Sahitya sammelana- arial view

 

ಅಲ್ಲಿಗೆ ಸಮ್ಮೇಳನದ ಕಾರ್ಯಕ್ರಮಗಳ ದ್ವನಿಯು ಚೆನ್ನಾಗಿ ಕೇಳಿಸುತ್ತಿತ್ತು. “ಹಚ್ಚೇವು ಕನ್ನಡದ ದೀಪ” ಹಾಡು ಅಲೆಅಲೆಯಾಗಿ ತೇಲಿ ಬಂದಾಗ ಬಹಳ ಹಾಯೆನಿಸಿತು .ನಮ್ಮ ಜತೆ, ಬಾಹುಬಲಿಯೂ ತಲೆದೂಗಿರಬಹುದು.

ನಮ್ಮ ಆ ದಿನದ ಒಟ್ಟಾರೆ ಕಾರ್ಯಕ್ರಮದಲ್ಲಿ ನನ್ನ ಅಭಿರುಚಿಗೆ ಹಿಡಿಸಿದ್ದು ಇದು ಮಾತ್ರ. ಅಲ್ಲಿಂದಲೇ ಮೈಸೂರಿಗೆ ಮರಳಿದೆವು. ಅವರವರ ಭಾವಕ್ಕೆ ಅವರವರ ಭಕುತಿ!

 

— ಹೇಮಮಾಲಾ.ಬಿ

 

 

12 Responses

  1. ಬಸವರಾಜ ಜೋತಿಬಾ ಜಗತಾಪ says:

    ನಾನು ಸಮ್ಮೇಳನಕ್ಕ ಹೋಗಿ ಬಂದಂಗನಿಸಿತು ನೀಮ್ಮ ವಿವರಣೆ……

  2. Dinakar Rao says:

    ಬಹುತೇಕ ಕನ್ನಡ ಸಮ್ಮೇಳನಕ್ಕೆ ಹೋಗಿಬಂದವರ ಅನುಭವ ಇದೇ ತರದ್ದು….ಸರ್ಕಾರದ ಖರ್ಚಿನಲ್ಲಿ ನಡೆಯುವ ಜಾತ್ರೆ ಅಷ್ಟೇ…. ಅದರಲ್ಲೂ ಇದರ ಸದುಪಯೋಗ ಹೇಗೆ ಮಾಡಬಹುದು ಎಂಬ ನಿಮ್ಮ ವಿವರಣೆ ಖುಷಿಕೊಟ್ಟಿತು…..

  3. nice writing.. Government and Kannada Sahitya Parishath should learn from Mohan Alva’s ‘Alvas NUDISIRI’ that how organise a Sammelan.

  4. Veeralinganagoudra says:

    ಸಮ್ಮೇಳನವನ್ನು ಹೀಗೂ ನೋಡಬಹುದು ಅನ್ನೋ ಸಂದೇಶವನ್ನು ನಿಮ್ಮ ಲೇಖನ ರವಾನಿಸಿದೆ. ಧನ್ಯವಾದಗಳು

  5. E Basavaraju Eregowda says:

    ನಾನೂ ಎರಡನೆ ದಿನ ಬೆಳಿಗ್ಗೆ 11ಕ್ಕೆ ಹೋದೆ. ಊಟದ ಹಾಲ್ ಬಿಟ್ಟು ಎಲ್ಲ ಕಡೆ ಸುತ್ತಾಡಿದೆ. ಗೋಷ್ಠಿಗಳಲ್ಲಿ ಜನ ಇದ್ದುದು ಒಳ್ಳೆ ಬೆಳವಣಿಗೆ ಅನಿಸಿತು. ಮೂಢ ನಂಬಿಕೆಗಳ ವಿರುದ್ದದ ಗೋಷ್ಠಿಯಲ್ಲಿ ಎಲ್ಲರೂ ಚೆನ್ನಾಗಿ ಮಾತನಾಡಿದರು. ಅದರಲ್ಲೂ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ಅಧ್ಯಕ್ಷೀಯ ಭಾಷಣ ಉತ್ತಮವಾಗಿತ್ತು. ಚಪ್ಪಾಳೆಗಳನ್ನು ಗಿಟ್ಟಿಸಿತು.

  6. Venu Gopal says:

    interesting…..

  7. Girish Kotagi says:

    Nice.est chennagi bardiddeera andre nane hogi idanella anubjavisida hagide.naanu evaga karnatakadallilla.sammelana bahala miss madkolta idde.nimma e lekhana odi nane alligodastu khushiyagide.dhannyavadagalu

  8. Pushpa Nagathihalli says:

    ನಾನು ಸಹ ಒಂದು ದಿನಾ ಅಲ್ಲೇ ಉಳಿದು ಸಮ್ಮೇಳನವೀಕ್ಷ್ಸಿಸಿಬಂದೆ.ಸಪ್ಪೆ ಎನಿಸಿದ್ದು ನಿಜ. ಆದರೂ ಹಾವೇರಿ ಯಲ್ಲಿ ನಡೆಯಬೇಕಿದ್ದ ಸಮ್ಮೇಳನ ವಿವಾದಗಳಿಂದ ಶ್ರವಣಬೆಳಗೊಳಕ್ಕೆ ಬದಲಾವಣೆಯಾಗಬೆಕಾಯಿತು.ಕಡಿಮೆ ಅವದಿಯಲ್ಲಿಈ ಮಟ್ಟಿಗೆ ನಡೆದದ್ದೇ ಹೆಚ್ಚು..ಎಲ್ಲಾ ಸಾಹಿತ್ಯ ಸಮ್ಮೇಳನದಲ್ಲು ಅವ್ಯವಸ್ಥೆ ಇದ್ದದ್ದೆ.ಆದರೂ ದೂರದ ಊರುಗಳಿಂದ ಬಂದಿದ್ದ ಸಾಹಿತ್ಯಾಭಿಮಾನಿಗಳನ್ನ ನೋಡಿದರೆ ಕನ್ನಡಕ್ಕೆ ಇನ್ನು ಭವಿಷ್ಯವಿದೆಎನಿಸುವುದು.ಅದೂ ಸೋತವನಿಗೆ ಗೆದ್ದವನು ರಾಜ್ಯ ಧಾರೆಯೆರೆದ ತ್ಯಾಗಮಯಿ ಬಾಹುಬಲಿಯ ಊರನ್ನು ಮತ್ತೊಮ್ಮೆ ನೋಡುವ ಖುಷಿಯ ಜೊತೆಗೆ ಒಳ್ಳೆಯ ಪುಸ್ತಕಗಳು ದೊರೆತವು.ಚರ್ಚೆ ವಿಚಾರಸಂಕಿರಣಗಳೆಲ್ಲ ಕಾರ್ಯರೂಪಕ್ಕೆ ಬರಬೇಕು. ಬರೀಕಾರ್ಯಕ್ರಮವಾಗಬಾರದು

  9. Basavaraj Gb says:

    Istvagilladannu ellarigu istvaguva hage heliddu tumba kushiyaithu adarallu Gommatana paadakke namisi kulithaga HACHEU KANNADA DA DEEPA ee sabda nanna romanchana golisithu

  10. Purnima says:

    Your report is interesting

  11. Sneha Prasanna says:

    ವೆರಿ ನೈಸ್ ಮೇಡಂ…

  12. Hema says:

    ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

Leave a Reply to Purnima Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: