ಧಾರವಾಡ ಸಾಹಿತ್ಯ ಸಂಭ್ರಮ - ಸೂಪರ್ ಪಾಕ

ಪೇಡಾ….ಬೇಡಾ ಅನ್ನೋರು ಉಂಟೇ?

Share Button

 

Peda

 

ಬೇಡಾ ಅನ್ನೋರು ಉಂಟೆ…ಪೇಡಾ….ಬೇಡಾ ಅನ್ನೋರು ಉಂಟೇ?

ಧಾರವಾಡದ ಸಿಗ್ನೇಚರ್ ಸ್ವೀಟ್ ‘ಪೇಡಾ’. ಪೇಡಾ ತಯಾರಕರು ಹಲವು ಮಂದಿ ಇರಬಹುದಾದರು ‘ಬಾಬುಸಿಂಗ್ ಠಾಕೂರ್ ಪೇಡಾ’ ಮಂಚೂಣಿಯಲ್ಲಿದೆ ಮತ್ತು ತನ್ನದೇ ಆದ ಚರಿತ್ರೆಯನ್ನೂ ಹೊಂದಿದೆ.ಉತ್ತರಪ್ರದೇಶದಿಂದ ಸುಮಾರು 150 ವರ್ಷಗಳ ಹಿಂದೆ ಧಾರವಾಡಕ್ಕೆ ವಲಸೆ ಬಂದಿದ್ದ ಠಾಕೂರ್ ವಂಶದ ಶ್ರೀ ರಾಮ್ ರತನ್ ಸಿಂಗ್ ಎಂಬವರು ಈ ಸಿಹಿಯನ್ನು ತಯಾರಿಸಲು ಆರಂಭಿಸಿದರು.

ಕಾಲಕ್ರಮೇಣ ಇದು ಬಹಳ ಪ್ರಸಿದ್ಧಿ ಪಡೆಯಿತು. ಇವರ ಮೊಮ್ಮಗನಾದ ಶ್ರೀ ಬಾಬು ಸಿಂಗ್ ಠಾಕೂರ್ ಅವರು ಪೇಡಾಕ್ಕೆ ಇನ್ನಷ್ಟು ಖ್ಯಾತಿ ದೊರಕಿಸಿಕೊಟ್ಟರು. ಧಾರವಾಡದಲ್ಲಿ ಇವರ ಅಂಗಡಿ ಮುಂದೆ ಕ್ಯೂ ನಿಂತು ಜನರು ಪೇಡಾ ಖರೀದಿಸುತ್ತಿದ್ದರಂತೆ. ಈಗ ‘ಬಾಬು ಸಿಂಗ್ ಠಾಕೂರ್ ಪೇಡಾ’ ಹಲವಾರು ಬ್ರಾಂಚ್ ಗಳಲ್ಲಿ ಲಭ್ಯ. (ಮಾಹಿತಿ:ಅಂತರ್ಜಾಲ)

– ಹೇಮಮಾಲಾ.ಬಿ

4 Comments on “ಪೇಡಾ….ಬೇಡಾ ಅನ್ನೋರು ಉಂಟೇ?

  1. ಹೌದು ಮೇಡಂ,ನಾನೂ ಪ್ರತಿ ಸಾರಿಯೂ ಸರತಿಯಲ್ಲಿ ನಿಂತು,ಘಂಟೆಗಟ್ಟಲೆ ಕಾದು, ಖರೀದಿಸಿದ್ದೆ.ಬೆಳಗ್ಗೆ ೭ ರಿಂದ ೮-ಅಂದರೆ ಒಂದೇ ಘಂಟೆ ಮಾತ್ರ ಅಂಗಡಿ ತೆರೆದಿರುತ್ತಿತ್ತು

  2. ನಿಜ ನಾವು ಸ್ಕೂಲ ಗೆ ಹೋಗುವ ಸಮಯದಲ್ಲಿನ ಮಾತು
    ಪರೀಕ್ಷೆ ಪಾಸಾದ್ರೆ ಕೊಡುವ ಸ್ಟಿಟ ಇದೆ.ಬೆಳ್ಳಗಿನ ೬ ಗಂಟೆಗೆ ಹೋಗಿ ಸಾಲಿನಲ್ಲಿ ನಿಲ್ಲುವುದು ಇನ್ನೂ ಹಸಿರಾಗಿಯೇ ಇದೆ.ಆದರೆ ಇಂದು ಅನೇಕ ಬ್ರಾಂಚ ಆಗಿವೆ ಸಾಲಿನಲ್ಲಿ ನಿಲ್ಲುವಂತೆಇಲ್ಲ.

  3. ಮುಂಜಾನೆದ್ರ ಬೇಕು ಚಹಾ, ಊಟ ಆದ ಮ್ಯಾಲ ಪಾನ ಬೀಡಾ
    ಖಾರ ಅಂದ್ರ ಮಿರ್ಚಿ ಭಜಿ, ಸಿಹಿ ತಿಂದ್ರ ಧಾರವಾಡ ಪೇಡಾ
    ಕಟ್ಟಿ ಮ್ಯಾಲ ಕುಂತ ಹಾಕತೀವಿ ಅಡ್ಡಾ ದೋಸ್ತರ ಗುಡಾ
    ಉತ್ತರ ಕರ್ನಾಟಕ ಮಂದಿ ನಾವು, ಕೇಳ್ರಿ ಇದು ನಮ್ ಹಾಡ !!!

  4. Beda annoru untu dibetiesnavru beda annodu untu.adre nannalla.nanu kuda peda priya. Alli gokakada karadantu sikkare omme try madi nodi.

Leave a Reply to Prashant Joshi Cancel reply

 Click this button or press Ctrl+G to toggle between Kannada and English

Your email address will not be published. Required fields are marked *