ಗೊಂದಲವನ್ನು ಕೂಡ ಅರ್ಥಪೂರ್ಣವಾಗಿಸಬಹುದು 

Share Button
Confusion
ಯಂತ್ರ ಮಾನವರಿಗೆ ಯಾವುದೇ ಗೊಂದಲ ಇರುವುದಿಲ್ಲ. ಈಗ ಆಯ್ಕೆ ನಿಮ್ಮದೇ.ಗೊಂದಲ ಸುದ್ದಿಯಾಗುತ್ತದೆ. ಆದರೆ ಸುದ್ದಿಯಲ್ಲಿ ಗೊಂದಲ ಇದ್ದರೆ ಅದು ಸುದ್ದಿಯಲ್ಲ, ರದ್ದಿ. ಗೊಂದಲಗಳಿಗೆ ಉತ್ತರವನ್ನು ಹೊರಗೆ ಹುಡುಕುವುದಕ್ಕಿಂತ ಆಂತರಿಕವಾಗಿ ಕಂಡುಕೊಳ್ಳುವುದು ಪರಿಣಾಮಕಾರಿ. ಯಾಕೆಂದರೆ ಗೊಂದಲಗಳು ಹೆಚ್ಚಾಗಿ ಮನಸ್ಸಿಗೆ ಸಂಬಂಧಿಸಿವೆ. ಗೊಂದಲ ಮತ್ತು ಕಸಿವಿಸಿಗೆ ಬೇಸರಪಡಬೇಕಾಗಿಲ್ಲ. ಸ್ಪಷ್ಟವಾದ ಬೆಳವಣಿಗೆಗೆ ಮುನ್ನ ಇದೆಲ್ಲ ಸಹಜ ಪ್ರಕ್ರಿಯೆ.

ಅರ್ಥ ಆಗದಿರುವುದೇ ಗೊಂದಲದ ಮೂಲ. ಅರ್ಥ ಆದ ತಕ್ಷಣ ಆ ಗೊಂದಲ ಇರುವುದಿಲ್ಲ. ಮತ್ತೆ ಗೊಂದಲ ಆಗೋದು ಅರ್ಥವಾಗದ ಮತ್ತೊಂದು ಗೊಂದಲ ಎದುರಾದಾಗ.ಕ್ರಿಕೆಟ್‌ನಲ್ಲಿ ಗೊಂದಲದ ಪರಿಣಾಮ ರನೌಟ್ ಆಗುತ್ತಾರೆ, ಕ್ಯಾಚ್ ಕೈ ಚೆಲ್ಲುತ್ತಾರೆ. ಜೀವನದಲ್ಲೂ ಅಷ್ಟೇ, ಗೊಂದಲದ ಪರಿಣಾಮ ಏನೇನೋ ಆಗಿ ಹೋಗುತ್ತವೆ. ಆದರೆ ಅಷ್ಟು ಮಾತ್ರಕ್ಕೇ ಎಲ್ಲವೂ ಮುಗಿದು ಹೋಗುವುದಿಲ್ಲ. ಗೊಂದಲ ಒಂದು ಭಾಗ ಮಾತ್ರ.ಯಾವುದೇ ವಿಚಾರದಲ್ಲಿ ಮನಸ್ಸು ಒಂದೇ ನಿರ್ಧಾರ ತಾಳುವ ತನಕ ಗೊಂದಲ ಮಾಯವಾಗುವುದಿಲ್ಲ. ನಮ್ಮಲ್ಲಿ ಎರಡು ಮನಸ್ಸುಗಳು ಇರುತ್ತವೆ. ಒಂದು ಹಳೆಯ ಮನಸ್ಸು. ಅದು ಹಳೆಯ ಅಭ್ಯಾಸಗಳ ಫಲವಾಗಿ ಸರಪಳಿಯಂತೆ ಬಿಗಿಯಾಗಿರುತ್ತದೆ. ಮತ್ತೊಂದು ಎಚ್ಚರದಲ್ಲಿರುವ ಮನಸ್ಸು. ಇವೆರಡೂ ಒಂದೇ ಆದಾಗ ಗೊಂದಲ ಇರುವುದಿಲ್ಲ. ಇಲ್ಲವಾದಲ್ಲಿ ಗೊಂದಲ ಸಹಜ. ಎಲ್ಲಿ ಗೊಂದಲ ಇದೆಯೋ ಅಲ್ಲಿ ಸೃಜನಶೀಲತೆ ಇದೆ. ಉದಾಹರಣೆಗೆ ಜಾಹೀರಾತುಗಳು.ಎಲ್ಲರೂ ಒಂದೇ ಎಂಬ ಭಾವ ಉತ್ಕಟವಾಗಿದ್ದಾಗ ಮನಸ್ಸು ಪ್ರಸನ್ನವಾಗುತ್ತದೆ. ಆಗ ಯಾರಾದರೂ ಜಗಳ ಕಾದರೂ ಕೋಪ ಬರುವುದಿಲ್ಲ, ಅವರಲ್ಲಿಯೂ ನಿಮ್ಮನ್ನೇ ಕಾಣುವುದರಿಂದ ಭೇದ ಕಾಣಲು ಸಾಧ್ಯವಾಗುವುದಿಲ್ಲ. ಭೇದ ಇಲ್ಲದಿದ್ದಾಗ ಜಗಳ ಮುಂದುವರಿಯುವುದಿಲ್ಲ. ವ್ಯತ್ಯಾಸವೆಲ್ಲ ನಗುವಿನಲ್ಲಿ ಅಂತ್ಯವಾಗುತ್ತದೆ.ಸಾಧನೆಗೆ ಬದುಕೇ ದೊಡ್ಡ ಅವಕಾಶ ಕೊಟ್ಟಿದೆ. ಆದ್ದರಿಂದ ಅವಕಾಶ ಸಿಗುತ್ತಿಲ್ಲ ಎನ್ನುವುದು ಕಾಲ್ಪನಿಕ. ತಾನು ಕೆಲಸಕ್ಕೆ ಬಾರದವನು ’ ಎಂಬ ಭಾವನೆ ಇನ್ನಿಲ್ಲದಂತೆ ಕುಗ್ಗಿಸುತ್ತದೆ. ಆದ್ದರಿಂದ ಆ ಭಾವನೆಯನ್ನು ಕಿತ್ತೊಗೆಯಬೇಕು. ಎಲ್ಲ ಅಪನಂಬಿಕೆಗಳನ್ನೂ ನಂಬಿಕೆಯಾಗಿ ಪರಿವರ್ತಿಸಿದರೆ ಅತ್ಯಂತ ಉಪಯುಕ್ತ ಶಕ್ತಿಯಾಗುತ್ತದೆ.

ಪ್ರತಿಭೆ ವ್ಯಕ್ತವಾಗಿಲ್ಲ ಎಂದ ಮಾತ್ರಕ್ಕೇ ಇಲ್ಲ ಎಂದಲ್ಲ..ಪ್ರತಿಯೊಬ್ಬರಲ್ಲಿಯೂ ಅವರದ್ದೇ ಆದ ಪ್ರತಿಭೆ ಇರುತ್ತದೆ. ಅದನ್ನು ಕಸಿಯಲು ಯಾರಿಗೂ ಅಸಾಧ್ಯ. ಆದರೆ ಅದನ್ನು ವ್ಯಕ್ತಪಡಿಸಬೇಕಾದದ್ದು ಅವರವರೇ. ಆದರೆ ಏನಾಗುತ್ತದೆಯೋ ಎಂಬ ಅಪನಂಬಿಕೆಯಿಂದ ವ್ಯಕ್ತಪಡಿಸಲು ಹಿಂಜರಿಯುತ್ತೇವೆ. ಆದಕಾರಣ ಮೊದಲ ಅಪನಂಬಿಕೆಯನ್ನು ಅಳಿಸಿ ಹಾಕಬೇಕು.

ಪ್ರತಿಭೆ ವ್ಯಕ್ತವಾಗಬೇಕಾದರೆ ನಂಬಿಕೆ ಬೇಕು. ನಂಬಿಕೆ ಇಲ್ಲದಿದ್ದಲ್ಲಿ ಪ್ರತಿಭೆ ಅವ್ಯಕ್ತವಾಗಿರುತ್ತದೆ. ಬಾಳಿನಲ್ಲಿ ಬಂದು ಹೋಗುವ ಬತ್ತದ ದುಃಖ, ಬಡತನ, ನೋವು, ಎಲ್ಲೋ ಚೂರು ಸಂತಸ ಎಲ್ಲವನ್ನೂ ಕಾವ್ಯದಂತೆ ಕಂಡು ಸಾಕ್ಷಿಯಾಗಿ ಇದ್ದು ಬಿಡಬಹುದು.

ಕಾರಣ ಇಲ್ಲದಿದ್ದರೆ ದುಃಖವನ್ನು ಹೇಳಿಕೊಳ್ಳಲಾಗುವುದಿಲ್ಲ..ಅದನ್ನು ಸಹಿಸುವುದು ಬಹಳ ಕಷ್ಟ. ಬಾಳಿನಲ್ಲಿ ಬಂದು ಹೋಗುವ ಬತ್ತದ ದುಃಖ, ಬಡತನ, ನೋವು, ಎಲ್ಲೋ ಚೂರು ಸಂತಸ ಎಲ್ಲವನ್ನೂ ಕಾವ್ಯದಂತೆ ಕಂಡು ಸಾಕ್ಷಿಯಾಗಿ ಇದ್ದು ಬಿಡಬಹುದು.

ಎಲ್ಲರೂ ನಮ್ಮ ಹಾಗೆ ಆಲೋಚನೆ ಮಾಡಬೇಕೆಂದು ನಿರೀಕ್ಷಿಸುವುದು ತಪ್ಪು. ಒಂದು ವೇಳೆ ಎಲ್ಲರೂ ನಮ್ಮ ಹಾಗೆ ಆಲೋಚನೆ ಮಾಡಿದರೆ ವೈವಿಧ್ಯತೆ, ಅನ್ವೇಷಣೆ, ಸೃಜನಶೀಲತೆಗೆ ಸ್ಥಳ ಇರುತ್ತಿತ್ತಾ ? ಮನುಷ್ಯ ಎಂದ ಮೇಲೆ ಪ್ರೀತಿ, ಪ್ರೇಮ, ಕೋಪ, ತಾಪ ಎಲ್ಲ ಇದ್ದದ್ದೇ. ಆದರೆ ಆತನಿಗೆ ಅದನ್ನು ಮೀರಿ ನಿಲ್ಲಲೂ ಸಾಧ್ಯವಿದೆ. ಆತ ಭಾವನೆಗಳ ದಾಸನಾಗಬೇಕೆಂದೇನಿಲ್ಲ.

– ಕೇಶವಪ್ರಸಾದ .ಬಿ. ಕಿದೂರು.

3 Responses

  1. Niharika says:

    ಗೊಂದಲದಿಂದ ಇಷ್ಟು ಲಾಭವಿದೆಯೆ ..ಚೆನ್ನಾಗಿದೆ.

  2. Prasad Sms says:

    Oh.. Bahala chennagide…simpallagi jelabekadre…aritu munnade….

  3. krisnaveni kidoor says:

    ಪ್ರತಿಭೆ ವ್ಯಕ್ತವಾಗಿಲ್ಲ ಎಂದಮಾತ್ರಕ್ಕೆ ಇಲ್ಲವೆಂದಲ್ಲ……………………………………………………………………ಆದ ಕಾರಣ ಮೊದಲು ಅಪನಂಬಿಕೆಯನ್ನು ಅಳಿಸಿ ಹಾಕಬೇಕು . ಯಾವಾಗಲೂ ನೆನಪಿನಲ್ಲಿರಬೇಕಾದ ಅಮೃತ ವಾಕ್ಯಗಳು. ತುಂಬ ಹಿಡಿಸಿತು. ಅತ್ತ್ಯುತ್ತಮ ಲೇಖನ .

Leave a Reply to Niharika Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: