ನೀವೊಮ್ಮೆ ಬಂದು ನೋಡಿ ಹೊನ್ನಾವರ
ಹೊನ್ನಾವರ ತಾಲೂಕು ಕೇಂದ್ರ ಭಟ್ಕಳದಿಂದ 28 ಕಿ.ಮಿ. ಮತ್ತು ಕುಮಟಾದಿಂದ ಕೇವಲ 19 ಕಿಮಿ. ಅಂತರದಲ್ಲಿದೆ. ಹಿಂದೆ ಹೊನ್ನಾವರ ಓನೋರ, ಹೊನ್ನುರು ಎಂದೆಲ್ಲ ಕರೆಸಿಕೊಳ್ಳುತ್ತಿತ್ತು ಎಂದು ಹೇಳಲಾಗುತ್ತಿತ್ತು. ಕಿ.ಶ. 800 ರ ಸುಮಾರಿಗೆ ಆಳಿದ ರಾಣಿ ಹೊನ್ನಮ್ಮನಿಂದಾಗಿ ಈ ಹೆಸರು ಬಂದಿರಬಹುದು ಎಂದು ಕೆಲವರು ಹೇಳುತ್ತಾರೆ. ಅರಬ್ಬಿ ತುರ್ಕಿ ದೊರೆಗಳು ಹೊನ್ನಾವರದ ಮೂಲಕ ವಿಜಯನಗರದ ರಾಜರೊಡನೆ ಕುದುರೆ ವ್ಯಾಪಾರ ಮಾಡುತ್ತಿದ್ದರು ಎಂಬುದಾಗಿ ಉಲ್ಲೇಖಗಳಿವೆ. ಇಲ್ಲಿನ ಶರಾವತಿ ಸೇತುವೆ ರಾಜ್ಯದಲ್ಲಿಯೆ ಅತಿಉದ್ದದ ಸೇತುವೆಯಾಗಿದೆ. ಇಲ್ಲಿನ ಪ್ರವಾಸಿತಾಣದಲ್ಲಿ ಕರ್ನಲ್ ಹಿಲ್, ರಾಮತೀರ್ಥ, ಇಡಗುಂಜಿ, ಗುಂಡಬಾಳ, ಕರಿಕಾನಮ್ಮ, ಬಸವರಾಜದುರ್ಗ, ಗುಣವಂತೆ, ಕುದ್ರಗಿ, ಗೇರುಸೊಪ್ಪ ಮತ್ತು ಅಪ್ಸರಕೊಂಡ ಮೊದಲಾದವುಗಳು ಅತ್ಯಂತ ಆಕರ್ಷಣೀಯವಾಗಿದೆ. ರಾಮತೀರ್ಥ ಹೊನ್ನಾವರದಿಂದ ಕೇವಲ ೩ಕಿಮಿ. ಅಂತರದಲ್ಲಿದೆ. ಇಲ್ಲಿ ಸರ್ವಕಾಲಕ್ಕೂ ಬೀಳುವ ತೀರ್ಥ ಅನೇಕ ರೋಗಗಳಿಗೆ ದಿವ್ಯ ಔಷದಿ.
ಅಪ್ಸರಕೊಂಡ
ಹೊನ್ನಾವರದಿಂದ ಭಟ್ಕಳ ಬರುವ ಮಾರ್ಗದಲ್ಲಿ 5 ಕಿ.ಮಿ.ದೂರ ಕ್ರಮಿಸಿದರೆ ಅಪ್ಸರಕೊಂಡ ಕಾಣಸಿಗುತ್ತದೆ.
ಹೊನ್ನಾವರ ದೀಪಸ್ಥಂಭ
ಇಡಗುಂಜಿ
15 ಕಿ.ಮಿ. ದೂರದಲ್ಲಿದೆ ಪ್ರಸಿದ್ದ ಯಾತ್ರಾಸ್ಥಳ ಇಡಗುಂಜಿ. ಇಲ್ಲಿ ಶ್ರೀ ಮಹಾಗಣಪತಿ ನೆಲೆಸಿದ್ದಾನೆ. ಇಡಗುಂಜಿ ಮಹಾಗಣಪತಿ ಮಹಾಮುನಿ ಪರಸುರಾಮನಿಂದ ಪ್ರತಿಷ್ಠಾಪಿತ ವಾಗಿರುದಾಗಿ ಉಲ್ಲೇಖವಿದೆ. ಇಲ್ಲಿ ನಿತ್ಯ ಪೂಜೆ ಅನ್ನಸಂತರ್ಪಣೆ ವ್ಯವಸ್ಥೆ ಇದೆ. ಇಲ್ಲಿ ಗಣಪನಿಗೆ ಪಂಚಕಜ್ಜಾಯ ಸೇವೆ ಮುಖ್ಯಸೇವೆಯಾಗಿದೆ.
ಹಳದಿಪುರ
ಹಿಂದೆ ಹೈದರಾಲಿ, ಮೈಸೂರು ಅರಸರು,ಬಿದನೂರಿನ ಅರಸರು ಆಳಿದ ಹಂದಿಪುರ ಎಂದು ಕರೆಯಲ್ಪಡುತ್ತಿದ್ದ ಹಳದಿಪುರ ಅಂದು ಮುಖ್ಯ ಕೇಂದ್ರವಾಗಿತ್ತೆಂದು ವಿದೇಶಿ ಬರಹಗಾರ ಬುಕಾನಾನ್ ಹೇಳಿದ್ದಾನೆ. ಇಲ್ಲಿ ವೀಮಲನಾಥ ತೀರ್ಥಂಕರರ ಬಸಿದಿ, ಗೋಪಾಲಕೃಷ್ಣ, ಮುಖ್ಯಪ್ರಾಣ ದೇವರ ದೇವಾಲಯಗಳಿವೆ. ಕೊಂಕಣ ವೈಶ್ಯ ಸಮಾಜದವರು ನಿರ್ಮಿಸಿದ ಶ್ರೀ ಕೃಷ್ಣಾಶ್ರಮ ಮಠ ಅತ್ಯಂತ ಸುಂದರವಾಗಿದೆ.
ರಾಮತೀರ್ಥ:
ಗೆರುಸೊಪ್ಪ ಚತುರ್ಮುಖ ಬಸಿದಿ
ಇಡಗುಂಜಿ ಮಾರ್ಗವಾಗಿ ಸುಮಾರು 25 ಕಿ.ಮಿ. ದೂರ ಕೃಮಿಸಿ ನಂತರ ಕಾಲ್ನಡಿಗೆಯಲ್ಲಿ ಸ್ವಲ್ಪ ದೂರ ಅರಣ್ಯ ಮಾರ್ಘವಾಗಿ ಮುಂದಕ್ಕೆ ಸಾಗಿದರೆ ಅದ್ಬುತವಾದ ಐತಿಹಾಸಿಕ ಕಟ್ಟಡ ಚತುರ್ಮುಖ ಬಸಿದಿ ನಮ್ಮನ್ನಾ ಸ್ವಾಗತಿಸುತ್ತದೆ. ಈ ಬಸಿದಿಯ ವಿಶಿಷ್ಠವೆಂದರೆ. ನಾಲ್ಕುದಿಕ್ಕಿನಲ್ಲಿ ಯಾವುದೇ ದಿಕ್ಕಿನಿಂದ ನೋಡಿದರೂ ಸಹ ಇದೆ ಮುಖದ್ವಾರ ಎಂದೆನಿಸುತ್ತದೆ. ಅದೆಷ್ಟೋ ಪ್ರಯತ್ನಿಸಿದರೂ ಇಲ್ಲಿ ಒಂದಿಷ್ಟು ವ್ಯತ್ಯಾಸ ಹುಡುಕುವುದು ಮಾತ್ರ ಅಸಾಧ್ಯವಾದ ಮಾತೆ ಸರಿ. ನೇಮಿನಾಥ, ಚಂದ್ರನಾಥ ಮೊದಲಾದವರ ವಿಗ್ರಹಗಳು ಶಿವ ದೇವಾಯ ಮತ್ತು ವಿಷ್ಣು ದೇವಾಲಯ ಇಲ್ಲಿದೆ. ಚೆನ್ನಭೈರಾದೇವಿಯ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯ ನಿರ್ಮಿತವಾಗಿದೆ ಎಂದು ಹೇಳಲಾಗಿದೆ.
ಶರಾವತಿ ನದಿ ಕಣಿವೆಯ ವಿಹಂಗಮ ನೋಟ ಗೇರಸೊಪ್ಪ.
ಕರಿಕಾನಮ್ಮನ ಗುಡ್ಡ
ತಾಲೂಕು ಕೇಂದ್ರದಿಂದ 15 ಕಿ.ಮಿ. ದೂರದಲ್ಲಿ ಸಹ್ಯಾದ್ರಿಯ ತಪ್ಪಲಲ್ಲಿ ಕರಿಕಾನಮ್ಮನ ದೇವಾಲಯವಿದೆ.
– ಉಮೇಶ ಮುಂಡಳ್ಳಿ, ಭಟ್ಕಳ
Nice information.
.
thank u