ಪ್ರಥಮಗಳಿಗೆಲ್ಲಾ ಪ್ರಥಮರು ಭಾರತೀಯರು

Share Button

ಇತ್ತೀಚೆಗೆ ಯಾರೋ ಒಬ್ಬರು ಸಾಮಾಜಿಕ ಜಾಲತಾಣವೊಂದರಲ್ಲಿ “ಭಾರತೀಯರಿಗೆಲ್ಲಾ ಒಂದು ರೀತಿಯ ಒಣ ಜಂಭ.ಜಗತ್ತಿನ ಅನೇಕ ಪ್ರಮುಖ ಅನ್ವೇಷಣೆಗಳನ್ನು ತಾವೇ ಮಾಡಿದ್ದೇವೆ.ಆ ಮೂಲಕ ಪ್ರಪಂಚದ ಅನೇಕ ವಿಷಯಗಳಿಗೆ,ಪ್ರಥಮ ಘಟನೆಗಳಿಗೆಲ್ಲಾ ತಾವೇ ಪ್ರಥಮರು ಎಂದು ಕೊಚ್ಚಿಕೊಳ್ಳುತ್ತಾರೆ.ಇಂದಿನ ವಿಮಾನಕ್ಕೂ ರಾಮಾಯಣದ ಪುಷ್ಪಕ ವಿಮಾನಕ್ಕೂ ನಂಟು ಕಲ್ಪಿಸುತ್ತಾರೆ.ರಾಮಸೇತುವೆಯ ಮೂಲಕ ಜಗತ್ತಿನ ಅತೀ ಉದ್ದದ ಸೇತುವೆಯನ್ನು ಮೊದಲಿಗೆ ತಾವೇ ನಿರ್ಮಿಸಿದ್ದು ಎನ್ನುತ್ತಾರೆ.ಎಲ್ಲವೂ ಅರ್ಥವಿಲ್ಲದ ಮಾತುಗಳು.ಒಟ್ಟಿನಲ್ಲಿ ಭಾರತೀಯರಿಗೆ ಜಗತ್ತಿನ ಎಲ್ಲವನ್ನೂ ತಮ್ಮದೆಂದು ಹೇಳಿಕೊಳ್ಳುವ ಹುಚ್ಚು” ಎಂದು ಬರೆದಿದ್ದರು.ಆದರೆ ಆ ರೀತಿ ಬರೆದವರಿಗೆ ಯಾವ ಪ್ರಚಾರವೂ ಸಿಗಲಿಲ್ಲ.ಹಾಗಾದರೆ ಭಾರತೀಯರು ಪ್ರಥಮಗಳಿಗೆಲ್ಲಾ ಪ್ರಥಮರು ಹೌದೇ,ಅಥವಾ ಸುಮ್ಮನೇ ಅರ್ಥವಿಲ್ಲದೇ ಹೇಳುತ್ತಾರೆಯೇ ಎಂದು ನಾವು ತಿಳಿದುಕೊಳ್ಳಬೇಕಿದೆ.

 

ಇತ್ತೀಚೆಗಷ್ಟೇ ಶ್ರೀರಾಮನ ಹುಟ್ಟಿದ ದಿನಾಂಕವನ್ನು ಖಚಿತವಾಗಿ ನಿರ್ಧರಿಸಿದ್ದಾರೆ.ಕ್ರಿ.ಪೂ. ಜನವರಿ 10-5114 ರಂದು ಶ್ರೀರಾಮ ಜನಿಸಿದ ಎಂಬುದಕ್ಕೆ ಆಧಾರಗಳಿವೆ.ಅಲ್ಲದೇ ರಾಮಾಯಣ ನಡೆದದ್ದು ನಿಜ ಎಂಬುದಕ್ಕೂ ಅನೇಕ ಅಧಾರಗಳು ಸಿಕ್ಕಿದೆ.ಅಮೇರಿಕಾದ ‘ನಾಸಾ’ ಕೂಡ ಲಂಕೆಗೆ ನಿರ್ಮಿಸಲಾಗಿರುವ ರಾಮಸೇತುವಿನ ದೃಶ್ಯವನ್ನು ಅನೇಕ ಬಾರಿ ಉಪಗ್ರಹದಿಂದ ಸೆರೆಹಿಡಿದು ಕೊಟ್ಟಿದೆ.ಇದೆಲ್ಲವೂ ನಿಜ ಎಂದಾದರೆ ರಾಮಸೇತುವನ್ನು ನಿರ್ಮಿಸಿದ್ದು ಭಾರತೀಯರೇ ಎಂದಾಯಿತಲ್ಲವೇ.ರಾಮಾಯಣ ಕಾಲದ ನಲ ಮತ್ತು ನೀಲ ಜಗತ್ತು ಕಂಡ ಮೊದಲ ಇಂಜಿನಿಯರ್ ಗಳೆಂದು ಸಾಬೀತಾಯಿತಲ್ಲವೇ.ಆ ಕಾಲದಲ್ಲೇ ಒಂದು ಸಾವಿರ ಯೋಜನಗಳಷ್ಟು ದೂರ ಸೇತುವೆ ನಿರ್ಮಿಸಿದದ್ದರಿಂದ  ಜಗತ್ತಿನ ಅತೀ ಉದ್ದದ ಸೇತುವೆಯನ್ನು ಮೊದಲು ಭಾರತೀಯರು ಕಟ್ಟಿದ್ದು ಎಂದು ನಾವೆಲ್ಲಾ ಹೆಮ್ಮೆಪಡಬೇಕು ತಾನೆ.ರೈಟ್ ಸಹೋದರರು ಬಹಳ ಕಷ್ಟಪಟ್ಟು ವಿಮಾನವನ್ನು ಕಂಡುಹಿಡಿದು ನವಯುಗಕ್ಕೆ ನಾಂದಿ ಹಾಡಿದರು ಎಂದು ಅನೇಕರು ಹೇಳುತ್ತಾರೆ.ಹಾಗಾದರೆ ರಾಮಾಯಣದ ಪುಷ್ಪಕ ವಿಮಾನ ಯಾವ ರೀತಿಯದು?ಎಷ್ಟು ದೂರಕ್ಕೆ ಬೇಕಾದರೂ ಹಾರಬಲ್ಲ,ಎಷ್ಟು ಜನರನ್ನು ಬೇಕಾದರೂ ಹೊತ್ತೊಯ್ಯಬಲ್ಲ ಶಕ್ತಿ ಇದ್ದಂತಹ ಹಾರುವ ಹಕ್ಕಿಯನ್ನು ತ್ರೇತಾಯುಗದ ಕಾಲದಲ್ಲೇ ಭಾರತೀಯರು ಹೊಂದಿದ್ದರು. ಯಾವುದೇ ವಿಜ್ಞಾನದ ಹಿನ್ನಲೆ ಇಲ್ಲದೇ ಹಾರುವ ವಾಹನವನ್ನು ನಿರ್ಮಿಸುವುದು ಅಸಾಧ್ಯ.ಹಾಗಾದರೆ ವಿಮಾನವನ್ನು ನಿರ್ಮಿಸುವಷ್ಟು ಬುದ್ಧಿವಂತಿಕೆ ಭಾರತೀಯರಲ್ಲಿ ಬಹಳ ಮೊದಲೇ ಇತ್ತು ಎಂದು ಎಲ್ಲರೂ ಒಪ್ಪಿಕೊಳ್ಳಬೇಕಲ್ಲವೇ.ಪುರಾಣ ಕಾಲದ ವಾಸ್ತುಶಿಲ್ಪಿ ‘ಮಯ’. ಈತ ನಾಗರೀಕತೆಗಳು ಸರಿಯಾಗಿ ಬೆಳೆಯುವುದಕ್ಕೂ ಬಹಳ ಮೊದಲೇ ಸುಂದರವಾದ ದೇಗುಲಗಳನ್ನು,ಕಟ್ಟಡಗಳನ್ನು ಕಟ್ಟಿದ್ದ.ಹಾಗಾಗಿ ಮಯ ಜಗತ್ತಿನ ಮೊದಲ ವಾಸ್ತುಶಿಲ್ಪಿ ಎಂದು ಒಪ್ಪಿಕೊಳ್ಳಬೇಕಲ್ಲವೇ.

ಗೆಲೆಲಿಯೋ,ಅರಿಸ್ಟಾಟಲ್.ಸಾಕ್ರೆಟಿಸ್ ಇವರನ್ನೆಲ್ಲಾ ಜಗತ್ತಿನ ಶ್ರೇಷ್ಟ ಜ್ಯೋತಿಷ್ಯತಜ್ಞರು,ಗಣಿತಜ್ಞರು,ಖಗೋಳ ಶಾಸ್ತ್ರಜ್ಞರು,ತತ್ವಜ್ಞಾನಿಗಳು ಎಂದೆಲ್ಲಾ ಜನರು ಕರೆಯುತ್ತಾರೆ.ಹಾಗಾದರೆ ಭಾಸ್ಕರಾಚಾರ್ಯರು,ಆರ್ಯಭಟ ಇವರೆಲ್ಲಾ ಯಾರು.ಆರ್ಯಭಟ ಮತ್ತು ಭಾಸ್ಕರಾಚಾರ್ಯರು ಗೆಲೆಲಿಯೋ,ಅರಿಸ್ಟಾಟಲ್,ಸಾಕ್ರೆಟಿಸ್ ಇವರಿಗಿಂತಲೂ ಎಷ್ಟೋ ಮೊದಲೇ ಈ ಭೂಮಿಯಲ್ಲಿ ಬದುಕಿ ಬಾಳಿದವರು. ಗೆಲೆಲಿಯೋ ಟೆಲಿಸ್ಕೋಪ್ ನೋಡಿ ಗ್ರಹಗಳ ಚಲನೆಯನ್ನು,ಗ್ರಹಣಕಾಲವನ್ನು,ಹವಾಮಾನವನ್ನು ನಿರ್ಧರಿಸುತ್ತಿದ್ದರೆ, ಭಾಸ್ಕರಾಚಾರ್ಯರು ಕೇವಲ ತಮ್ಮ ಜ್ಞಾನದಿಂದಲೇ ಗ್ರಹಗತಿಗಳನ್ನು ತಿಳಿಯುತ್ತಿದ್ದರು.ಅಲ್ಲದೇ ಗ್ರಹಗತಿಗಳನ್ನು,ಗ್ರಹಣದ ಸಮಯವನ್ನು ನಿಖರವಾಗಿ ತಿಳಿಸುವಂಥ ಯಂತ್ರವೊಂದನ್ನು ಸಹ ಭಾಸ್ಕರಾಚಾರ್ಯರು ತಯಾರಿಸಿದ್ದರು.ಗಣಿತದಲ್ಲಿಯೂ ಪರಿಣತರಾಗಿದ್ದ ಆಚಾರ್ಯರು ಭೂಮಿಯಿಂದ ಸೌರಮಂಡಲಕ್ಕಿರುವ ದೂರವನ್ನು,ಮತ್ತು ಇನ್ನೂ ಅನೇಕ ಸಮಸ್ಯೆಗಳನ್ನೂ ತಮ್ಮ ಗಣಿತದ ಜ್ಞಾನವನ್ನು ಉಪಯೋಗಿಸಿಕೊಂಡು ಪರಿಹರಿಸುತ್ತಿದ್ದರು.ಅಲ್ಲದೇ ಜ್ಯೋತಿಷ್ಯದಲ್ಲಿ ಅಪ್ರತಿಮ ಪರಿಣತಿಯನ್ನು ಸಾಧಿಸಿ,ಎಂಟನೇ ಶತಮಾನದಲ್ಲೇ ಗಣಿತ ಮತ್ತು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ‘ಲೀಲಾವತಿ’ ‘ಸಿದ್ಧಾಂತ ಶಿರೋಮಣಿ’ ‘ಬೀಜಗಣಿತ‘ ಮುಂತಾದ ಅಮೂಲ್ಯ ಗ್ರಂಥಗಳನ್ನು ಬರೆದಿದ್ದರು.ಈ ಜಗತ್ತಿನಲ್ಲಿ ಎಲ್ಲವೂ ಶೂನ್ಯದಿಂದ ಆರಂಭವಾಗಿ ಶೂನ್ಯದಲ್ಲೇ ಅಂತ್ಯವಾಗುತ್ತದೆ ಎಂದು ಅನೇಕ ತತ್ವಶಾಸ್ತ್ರಜ್ಞರು ಹೇಳುತ್ತಾರೆ.ವಿದೇಶಿಯರಿಗೆ ಶೂನ್ಯ ಎಂದರೆ ಏನು ಎಂದೇ ಗೊತ್ತಿರಲಿಲ್ಲ.ಹಾಗಿದ್ದಾಗ ಆರ್ಯಭಟ ಮೊಟ್ಟಮೊದಲ ಬಾರಿಗೆ ಸೊನ್ನೆಯನ್ನು ಪರಿಚಯಿಸಿ ಗಣಿತಶಾಸ್ತ್ರದ ಬೆಳವಣಿಗೆಗೆ ಕಾರಣನಾದ ಮಹಾನ್ ಪುರುಷನಾದ.ಗೆಲೆಲಿಯೋಗಿಂತಲೂ ಮೊದಲೇ ಆರ್ಯಭಟ ಭೂಮಿ ತನ್ನ ಅಕ್ಷದ ಸುತ್ತ ಸುತ್ತುತ್ತಲೇ ಸ್ಥಿರವಾಗಿರುವ ಸೂರ್ಯನ ಸುತ್ತ ಸುತ್ತುತ್ತದೆ ಎಂದು ಮೊದಲ ಬಾರಿಗೆ ಹೇಳಿದ್ದ.ಇದನ್ನು ಅರ್ಥಮಾಡಿಕೊಳ್ಳಲು ನಂತರ ಬಂದ ವಿಜ್ಞಾನಿಗಳಿಗೆ ಶತಮಾನಗಳೇ ಬೇಕಾದವು.ಬೆಳಕನ್ನು ಪ್ರತಿಫಲಿಸುವ ಶಕ್ತಿ ಚಂದ್ರನಿಗಿದೆ,ಎಲ್ಲಾ ಗ್ರಹಗಳಿಗೂ ಉಪಗ್ರಹಗಳಿವೆ ಎಂಬಂತಹ ಮಹತ್ವದ ಸಂಗತಿಗಳನ್ನು ಮೊದಲಿಗೆ ಜಗತ್ತಿಗೆ ತಿಳಿಸಿದವನು ಆರ್ಯಭಟ.ಹಾಗಿದ್ದರೆ ಖಗೋಳ ಶಾಸ್ತ್ರದಲ್ಲೂ ನಾವೇ ಮೊದಲಿಗರು ಎಂದಾಯಿತಲ್ಲ.

ಇಂದು ಮಕ್ಕಳಿಲ್ಲದವರಿಗೆ ಪ್ರನಾಳ ಶಿಶು(ಟೆಸ್ಟ್ ಟ್ಯೂಬ್ ಬೇಬಿ) ವರದಾನವಾಗಿ ಪರಿಣಮಿಸಿದೆ.ಎಷ್ಟೋ ಜನರು ಈ ವಿಧಾನದ ಮೂಲಕ ಮಕ್ಕಳನ್ನು ಪಡೆದಿದ್ದಾರೆ.ಆದರೆ ಇದರ ಇತಿಹಾಸವನ್ನು ನಾವು ಗಮನಿಸಬೇಕು.ಮಹಾಭಾರತ ಕಾಲದಲ್ಲಿ ಗರ್ಭಿಣಿಯಾಗಿದ್ದ ಗಾಂಧಾರಿ ತನಗೆ ಎಷ್ಟು ತಿಂಗಳುಗಳು ಕಳೆದರೂ ಪ್ರಸವವಾಗದೇ ಇದ್ದುದ್ದರಿಂದ ಹತಾಶಗೊಂಡು ತನ್ನ ಹೊಟ್ಟೆಯನ್ನು ಒಡೆದುಕೊಂಡು ಗರ್ಭವನ್ನು ಹೊರಗೆ ಬಿಸಾಕುತ್ತಾಳೆ.ಇದನ್ನು ನೋಡಿದ ವೇದವ್ಯಾಸರು ತುಂಡು ತುಂಡಾಗಿ ಬಿದ್ದಿದ್ದ ಪಿಂಡವನ್ನು ಮಡಕೆಯಲ್ಲಿಟ್ಟು ಅದಕ್ಕೆ ತಕ್ಕ ಪೋಷಕಾಂಶಗಳನ್ನು ಕೊಟ್ಟು ಬೆಳೆಸುತ್ತಾರೆ.ಇದರಿಂದ ಕೌರವರು ಜನಿಸುತ್ತಾರೆ.ಹಾಗಾದರೆ ಜೀವವನ್ನು ಗರ್ಭದ ಹೊರಗೂ ಬೆಳೆಸುವ ವಿದ್ಯೆ ಭಾರತೀಯರಿಗೆ ಮಹಾಭಾರತ ಕಾಲದಲ್ಲೇ ತಿಳಿದಿತ್ತು ತಾನೆ.ಇನ್ನು ಆಧುನಿಕ ವಿಜ್ಞಾನ ಬೆಳೆದ ಬಳಿಕ ಭಾರತದ ಕೋಲ್ಕತ್ತಾದ ವೈದ್ಯರಾದ ಡಾ.ಸುಭಾಶ್ ಮುಖೋಪಾದ್ಯಾಯ 1997ರಲ್ಲೇ ಪ್ರನಾಳ ಶಿಶು ವಿಧಾನದಲ್ಲಿ ಪರಿಣತಿಯನ್ನು ಸಾಧಿಸಿರುತ್ತಾರೆ.ಆದರೆ ಅವರು ತಮ್ಮ ಬೇಗ ತೀರಿಹೋಗಿದ್ದರಿಂದ ಪ್ರನಾಳಶಿಶು ವಿಧಾನದಲ್ಲಿ ಹೆಚ್ಚಿನ ಸಂಶೋಧನೆ ನಡೆಸಿದ ಇಬ್ಬರು ಬ್ರಿಟನ್ ವೈದ್ಯರು ನೋಬೆಲ್ ಪ್ರಶಸ್ತಿ ಪಡೆಯುತ್ತಾರೆ.ಇನ್ನು ಯಾವ ರೀತಿಯಿಂದ ನೋಡಿದರೂ ಭಾರತದ ಸುಶೃತ ಜಗತ್ತಿನ ಮೊದಲ ಶಸ್ತ್ರಚಿಕಿತ್ಸಕ.ಈಗಿನ ವೈದ್ಯರು ಕಷ್ಟದಿಂದ ಮಾಡುವ ಪ್ಲಾಸ್ಟೀಕ್ ಸರ್ಜರಿಗಳನ್ನು ಸಹ ಸುಶೃತ ಮಾಡುತ್ತಿದ್ದ.ಚರಕ ‘ಚರಕ ಸಂಹಿತೆ’ ಬರೆಯುವ ಮೂಲಕ ಭಾರತದ ವದ್ಯಕೀಯ ಪಿತಾಮಹನಾದ.ಅಲ್ಲದೇ ಸತ್ತವನನ್ನೂ ಬದುಕಿಸುವಂತಹ ಸಂಜೀವಿನಿಯನ್ನು ಹೊಂದಿದ್ದಂತಹ ಆಯುರ್ವೇದ ಸಂಪತ್ತು ಭಾರತದಲ್ಲಿತ್ತು.

ಮಹಾಯುದ್ಧದ ಕಾಲದಲ್ಲಿ ಹಿರೋಶಿಮಾ,ನಾಗಸಾಕಿಗಳ ಮೇಲೆ ಅಣುಬಾಂಬ್ ಪ್ರಯೋಗ ಮಾಡಿ ಲಕ್ಷಾಂತರ ಜೀವರಾಶಿಗಳನ್ನು ಕೊಲ್ಲಲಾಯಿತು.ಆದರೆ ಅಣುಬಾಂಬ್ ಗೆ ಸಮನಾದ ಒಂದು ಅಸ್ತ್ರವನ್ನು ಭಾರತೀಯರು ಪುರಾಣಕಾಲದಲ್ಲೇ ಹೊಂದಿದ್ದರು.ಅದುವೇ ‘ಬ್ರಹ್ಮಾಸ್ತ್ರ’.ಬ್ರಹ್ಮಾಸ್ತ್ರ ಪ್ರಯೋಗ ಮಾಡಿದಾಗ ಭೂಮಿ ನಡುಗುತ್ತಿತ್ತು.ನದಿ ಸಮುದ್ರಗಳೆಲ್ಲ ಉಕ್ಕಿ ಹರಿಯುತ್ತಿದ್ದವು.ಬಿರುಗಾಳಿ ಬೀಸಿ ಅನೇಕ ಜೀವ ರಾಶಿಗಳು ಕ್ಷೋಭೆಗೊಳ್ಳುತ್ತಿದ್ದವು.ಒಂದು ರೀತಿಯಲ್ಲಿ ನೋಡುವುದಾದರೆ ಅಣುಬಾಂಬ್ ಗಿಂತಲೂ ಭೀಕರವಾದ ಪರಿಣಾಮವನ್ನು ಬ್ರಹ್ಮಾಸ್ತ್ರ ಉಂಟು ಮಾಡುತ್ತಿತ್ತು.ರಾಜಕೀಯದಲ್ಲೂ ಭಾರತೀಯರೇ ಮುಂದು.ಶ್ರೀಕೃಷ್ಣ ಈ ಭೂಮಂಡಲದ ಮೊದಲ ರಾಜಕಾರಣಿ.ಕೌರವರೊಂದಿಗೆ ಸಂಧಿಗೆ ಹೋಗುವುದು,ನ್ಯಾಯದ ಪರ ನಿಂತು ಪಾಂಡವರಿಗೆ ಸಹಾಯ ಮಾಡಿದ್ದು,ಧರ್ಮರಾಯನಿಗೆ ಮಾರ್ಗದರ್ಶನ ಮಾಡಿದ್ದು,ಅನೇಕ ಸಲ ಪಲಾಯನವಾದವನ್ನು ಅನುಸರಿಸಿದ್ದು ಎಲ್ಲವೂ ಆತ ಎಷ್ಟು ದೊಡ್ಡ ರಾಜಕಾರಣಿಯಾಗಿದ್ದ ಎಂಬುದಕ್ಕೆ ನಿದರ್ಶನಗಳು.

ಹಣವನ್ನು ಯಾವಮಾರ್ಗದಿಂದಾದರೂ ಸಂಪಾದಿಸಬಹುದು,ಹೇಗೆ ಬೇಕಾದರೂ ಖರ್ಚು ಮಾಡಬಹುದು ಎಂದು ಅನೇಕರು ತಿಳಿದುಕೊಂಡಿದ್ದ ಸಮಯದಲ್ಲಿ ‘ಅರ್ಥಶಾಸ್ತ್ರ’ವನ್ನು ಬರೆದು ಜನರಿಗೆ ಮಾರ್ಗದರ್ಶನ ಮಾಡಿ,ಹೊಸ ಅರ್ಥವ್ಯವಸ್ಥೆಗೆ ನಾಂದಿ ಹಾಡಿದವನು ಭಾರತದ ಕೌಟಿಲ್ಯ.ಹಾಗಾಗಿ ಕೌಟಿಲ್ಯ ಜಗತ್ತಿನ ಮೊದಲ ಅರ್ಥಶಾಸ್ತ್ರಜ್ಞ.ಇನ್ನು ಲೈಂಗಿಕತೆಯಲ್ಲೂ ಭಾರತೀಯರೇ ಮುಂದು.ಕಾಮವನ್ನು ಯಾವಾಗ,ಹೇಗೆ ಬೇಕಾದರೂ ಅನುಭವಿಸಬಹುದು ಎಂದು ಜನರು ತಿಳಿದಿದ್ದ ಕಾಲದಲ್ಲಿ ಮನುಷ್ಯರು ಪ್ರಾಣಿಗಳಂತೆ ವರ್ತಿಸಬಾರದು,ಲೈಂಗಿಕ ಕ್ರಿಯೆಗೂ ಒಂದು ರೀತಿ,ನೀತಿ ಇದೆ.ಕ್ರಮಗಳಿವೆ ಎಂದು ಜಗತ್ತಿಗೆ ಮೊಟ್ಟಮೊದಲ ಬಾರಿಗೆ ತಿಳಿಸಿ ಭಾರತದ ವಾತ್ಸಾಯನ ‘ಕಾಮಸೂತ್ರ’ ಪುಸ್ತಕವನ್ನು ಬರೆದ.ಹಾಗಾಗಿಯೇ ಭಾರತದಲ್ಲಿ ವಿದೇಶಗಳಂತೆ ಮುಕ್ತ ಲೈಂಗಿಕತೆಯಿಲ್ಲದೇ ಕಾಮವು ನಾಲ್ಕು ಗೋಡೆಗಳ ಒಳಗೆ ಸೀಮಿತವಾಗಿದೆ.

ಆದರೆ ಇದು ಯಾವುದೂ ಇಂದಿನ ತಲೆಮಾರಿನ ಅನೇಕರಿಗೆ ಗೊತ್ತಿಲ್ಲ.ಭಾರತವೆಂದರೆ ಈಗಲೂ ಹಿಂದುಳಿದ ದೇಶವೆಂದೇ ಅನೇಕರು ಭಾವಿಸಿಕೊಂಡಿದ್ದಾರೆ.ಇಡೀ ಜಗತ್ತನ್ನು ಉಳಿಸಬಲ್ಲ ಅನೇಕ ಸಾಧನೆಗಳಿಗೆ ಬಹಳ ಹಿಂದೆಯೇ ನಾವು ಕಾರಣವಾಗಿದ್ದೇವೆ ಎಂದು ಅನೇಕರಿಗೆ ತಿಳಿದಿಲ್ಲ.ಅನೇಕ ಭಾರತೀಯರು ವಿದೇಶಿಯರು ಹೇಳಿದ್ದನ್ನೇ ನಂಬಿ%E

Follow

Get every new post on this blog delivered to your Inbox.

Join other followers: