ಪ್ರವಾಸ

ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ-11

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ದಿನ 8

ಬೆಳಗಿನ ಕಾರ್ಯಕ್ರಮ ಮತ್ತು ಉಪಹಾರ ಮುಗಿಸಿದ ನಂತರ ನಮ್ಮ ಪ್ರಯಾಣ ಕ್ಯೂಕೆನ್ಹಾಫ್ ಗಾರ್ಡೆನ್ಸ್ (Keukenhof Gardens) ಕಡೆಗೆ. ಇದೊಂದು ಸುಪ್ರಸಿದ್ಧ ಹೂವಿನ ತೋಟ. ಕ್ಯುಕೆನ್ಹಾಫ್ ಪುಷ್ಪೋದ್ಯಾನವನ ವಸಂತ ಋತುವಿನ, ಪ್ರಪಂಚದಲ್ಲೇ ಅತ್ಯಂತ ಸುಂದರ ಉದ್ಯಾನವನ, ಆಮ್ಸ್ಟರ್ಡಾ೦ ನಗರದಿ೦ದ 20 ಕಿ ಮಿ ದೂರದಲ್ಲಿರುವ ಈ ಹೂದೋಟ ಇಂಗ್ಲಿಷ್ ಮಾದರಿಯ ಜಪಾನೀಸ್ ತೋಟ. ವರ್ಷದಲ್ಲಿ ಕೇವಲ ಎರಡು ತಿಂಗಳು ಮಾತ್ರ ತೆರೆದಿರುವ ಈ ಉದ್ಯಾನವನದಲ್ಲಿ ಟ್ಯುಲಿಪ್ ಡ್ಯಾಫೋಡಿಲ್, ಮತ್ತು ಹಯಸಿ೦ತ್ ಪುಷ್ಪಗಳು ಪ್ರದರ್ಶನಕ್ಕಿವೆ. 1949 ರಲ್ಲಿ 20 ಪ್ರಮುಖ ಹೂ ಬೆಳೆಗಾರರು, ಬೇಟೆಯ ತಾಣವಾಗಿದ್ದ ಈ ಜಾಗವನ್ನು, ತಮ್ಮ ಉತ್ಪನ್ನಗಳ ಪ್ರದರ್ಶನಕ್ಕಾಗಿ ಉಪಯೋಗಿಸಲು ಪ್ರಾರಂಭಿಸಿದರು. 1957ರಲ್ಲಿ ಇದರ ವಿನ್ಯಾಸ ಬದಲಾಯಿಸಿದರು. ಈಗ ಏಳು ಮಿಲಿಯನ್ ಹೂಗಳ, 800 ಜಾತಿಯ ಪುಷ್ಪಗಳನ್ನು 80 ಎಕರೆ ಪ್ರದೇಶದಲ್ಲಿ ಪ್ರದರ್ಶನಕ್ಕೆ ಇವೆ. ವಿವಿಧ ಆಕಾರ. ವಿವಿಧ ಬಣ್ಣಗಳ.. ವಿವಿಧ ಜಾತಿಯ ಹೂವುಗಳು. ಅದರಲ್ಲೂ ಅಷ್ಟೊ೦ದು ಬಗೆಯ ಟ್ಯುಲಿಪ್ ಪುಷ್ಪಗಳನ್ನು ನೋಡಿ ಆಶ್ಚರ್ಯವಾಯಿತು. ಸುಮಾರು ಎಕರೆ ಗಟ್ಟಳೆ ಜಾಗದಲ್ಲಿ ಒಂದೇ ಬಣ್ಣದ ಒಂದೇ ಜಾತಿಯ ಹೂವುಗಳು. ಈ ತೋಟ ಮೇ ತಿಂಗಳ 12 ರ ವರೆಗೆ ಮಾತ್ರ ತೆರೆದಿರುತ್ತದೆ . ನೂರಾರು ಫೋಟೋಗಳನ್ನು ತೆಗೆದುಕೊಂಡು ನಿಗದಿತ ಸಮಯಕ್ಕೆ ಹೊರಗೆ ಬಂದೆವು.

ಮಧ್ಯಾಹ್ನದ ಊಟಕ್ಕೆ ಮತ್ತೆ ಇಂಡಿಯನ್ ರೆಸ್ಟೋರೆಂಟ್. ಮೊದಲೇ ತಿಳಿಸಿದಂತೆ ಕಿಷ್ಕಿ೦ಧೆ ಊಟದ ಜಾಗ, ಒಂದೇ ಬಾತ್ರೂಮ್, ಟಾಯ್ಲೆಟ್ ವಾಶ್ ರೂ೦. ನಮ್ಮ ಸ್ನೇಹಿತರೊಬ್ಬರು ಸರತಿಯಲ್ಲಿ ನಿಂತು ಕೊಂಡಿರುವಾಗ ನಮ್ಮ ಗೈಡ್ ಎಲ್ಲರು ಬಂದಿದ್ದಾರೆ ಎಂದು ತಿಳಿದು ಕ್ರೂಯಿಸ್ ರೈಡ್ ಗೆ ಎಲ್ಲರನ್ನೂ ಕರೆದುಕೊ೦ಡು ಹೋದರು.. ಅಲ್ಲಿ ಟಿಕೆಟ್ ತೆಗೆದುಕೊಳ್ಳಲು ತಲೆಗಳನ್ನು ಎಣಿಸಿದಾಗ ಇಬ್ಬರು ಕಡಿಮೆ ಇರುವುದು ಗೊತ್ತಾಯಿತು. ಅವರು ಯಾರು ಎ೦ದು ಗೊತ್ತಾದ ಮೇಲೆ ಫೋನ್ ನಲ್ಲಿ ಸಂಪರ್ಕಿಸಿದರೆ ಅವರು ಇನ್ನೂ ಹೋಟೆಲ್ ಬಳಿಯೇ ಇದ್ದರು. ವಾಷ್ ರೂ೦ಗೆ ಸರತಿಯಲ್ಲಿ ನಿ೦ತಿದ್ದರು. . ನಮ್ಮ ಗೈಡ್ ವಿವರಿಸಿದರೂ ಅವರಿಗೆ ನಾವಿರುವ ಜಾಗಕ್ಕೆ ಬರುವ ದಾರಿ ಗೊತ್ತಾಗಲಿಲ್ಲ. ನ೦ತರ ನಮ್ಮ ಗೈಡ್ ಹೋಗಿ ಅವರನ್ನು ಕರೆದುಕೊ೦ಡು ಬ೦ದರು.

ಆಮ್ಸ್ಟರ್ಡಾ೦ ನ್ನು “ಉತ್ತರದ ವೆನಿಸ್”ಎ೦ದೂ ಕರೆಯುತ್ತಾರೆ. ಸುಮಾರು 100 ಕಿ ಮಿ ಜಲ ಮಾರ್ಗ ಹೊ೦ದಿರುವ ಈ ನಗರ ವೀಕ್ಷಣೆಗೆ, ಕೆನಾಲ್ ಕ್ರೂಸ್ ಅತ್ಯ೦ತ ಸೂಕ್ತವಾದ ಆಯ್ಕೆ. ಸುಮಾರು ಒ೦ದು ಗ೦ಟೆಯ ಈ ಜಲ ಪ್ರಯಾಣದಲ್ಲಿ ಸುಪ್ರಸಿದ್ದ ಗ್ರಾ೦ಡ್ ಮರ್ಚ೦ಟ್ ಹೌಸ್, ಚರ್ಚ್, ಮ್ಯೂಸಿಯ೦, ಮತ್ತು ಪ್ರಾಚೀನ ಕಟ್ಟಡ ಗಳ ವೀಕ್ಷಣೆ ಮಾಡಿದೆವು.

ಈ ಕಾರ್ಯಕ್ರಮದ ನಂತರ ನಮ್ಮ ಪ್ರಯಾಣ ಜರ್ಮನಿ ಕಡೆಗೆ. ಆದರೆ ಆ ದಿನ ಸಂಜೆಯಾಗಿದ್ದರಿಂದ ನಮ್ಮ ವಾಸ್ತವ್ಯ ಕೊಲೋ ಗ್ನೆ ಎನ್ನುವ ಸ್ಥಳದಲ್ಲಿ +ಹೆಚ್ ಹೋಟೆಲ್ ನಲ್ಲಿ.. ಇದು ಯುರೋಪ್ ನ ದಕ್ಷಿಣದ ಕಡೆಗೆ.

(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44644

ಟಿ.ವಿ.ಬಿ.ರಾಜನ್ , ಬೆಂಗಳೂರು

6 Comments on “ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ-11

  1. ಬರಹ ಚೆನ್ನಾಗಿದೆ. ಯುರೋಪ್ ಗೆ ಹೋದ ಅನುಭವ…. ಮುಂದಿನ ಲೇಖನವನ್ನು ಎದುರು ನೋಡುತ್ತಿದ್ದೇವೆ.

  2. Bicycle riding is more comman in Amsterdam than using cars, thereby less pollution. We can see everywhere Bicycles parked on road side. As said Tulip flowers cultivation is extensive and a feast for Nature lovers. May month is best to visualize the beauty of it.

  3. ಪ್ರವಾಸ ಕಥನ ದ ಬರೆಹ ಈ ಸಾರಿ ಚಿಕ್ಕದಾದ ನಿರೂಪಣೆಯೊಂದಿಗೆ ಬಂದಿದೆ ಎನಿಸಿತು ….

  4. ಹಲವು ತೊಂದರೆಗಳ ನಡುವೆಯೂ ನಮ್ಮನ್ನು ಸುಂದರ ಟ್ಯುಲಿಪ್ ಹೂದೋಟಕ್ಕೆ ಒಯ್ದ ಪ್ರವಾಸ ಲೇಖನ ಚೆನ್ನಾಗಿದೆ

  5. ಹಲವಾರು ಮಾಹಿತಿಗಳನ್ನು ನೀಡುತ್ತಾ ಯುರೋಪ್ ಪ್ರವಾಸ ಕಥನ ಮುಂದೆ ಚಂದದಿಂದ ಸಾಗಿದೆ.

Leave a Reply to Dr P Kumar Cancel reply

 Click this button or press Ctrl+G to toggle between Kannada and English

Your email address will not be published. Required fields are marked *