ಅವನಿಗೆ ಪೋಟಾಪೋಟಿಯಾಗಿ
ಗಂಟಲು ಹೆಚ್ಚಿಸುವುದು ಆಕೆಗೆ ಗೊತ್ತಿದೆ.
ಮಾತಿಗೆ ಮಾತು ಗುಂಡಿನಂತೆ
ಸಿಡಿಸುವ ಕಲೆ ಆಕೆಗೆ ಬರುತ್ತದೆ.
ವ್ಯಂಗ್ಯದ ಬಾಣಗಳನ್ನು ನೇರವಾಗಿ
ಹೃದಯಕ್ಕೆ ಚುಚ್ಚಬಲ್ಲಳು.
ಇವೆಲ್ಲಾ ತಿಳಿದರೂ ಆಕೆ ಮಾಡುವುದಿಲ್ಲ.
ವಿತಂಡ ವಾದನೆ, ಅನಾವಶ್ಯಕ ವಾದನೆ
ಎಂದು ಆಕೆಗೆ ಗೊತ್ತಿದೆ.
ಯಾವ ಮಟ್ಟಿಗೆ ಹೃತ್ಪೂರ್ವಕವಾಗಲಿ,
ಸಮತೋಲನದಿಂದಾಗಲಿ
ಮಾತನಾಡುವುದು ಗೊತ್ತಿಲ್ಲದ
ಒಂದು ಅಹಂಕಾರದ ರೂಪದೊಂದಿಗೆ
ಮಾತುಗಳನ್ನು ಹೆಚ್ಚಿಸಿ ತನ್ನನ್ನು
ತಗ್ಗಿಸಿಕೊಳ್ಳುವುದಕ್ಕಿಂತ
ಮೌನದ ಧಿಕ್ಕಾರವೇ
ಆಕೆ ಆರಿಸಿಕೊಂಡ ಮಾರ್ಗ!
ಆಕೆಯ ಮನಸ್ಸಿಗೆ ‘ಆಲೋಚನೆ’
ಎಂಬುದೇ ಬಾರದಂತೆ
ಪ್ರತಿ ಕ್ಷಣವೂ ಆಳುತ್ತಿದ್ದಾನೆ.
ಆಕೆ ಮಾತಾಡುವುದಿಲ್ಲ,
ಅವನ ಮಾತು ಕೇಳುವುದಿಲ್ಲ,
ಅವನು ಹೇಳಿದ್ದು ಮಾಡುವುದಿಲ್ಲ.
ಹುಡುಕಿಕೊಳ್ಳಬಲ್ಲವನಾದರೆ
ಆಕೆಯ ಮೌನದಲ್ಲೇ
ಅವನಿಗೆ ಉತ್ತರಗಳು ಸಿಗುತ್ತವೆ.
ಮೌನವೂ ಒಂದು ಭಾಷೆಯೇ!
ಮೌನವೂ ಒಂದು ಸಂವಹನವೇ!
ಆಕೆಯ ಧಿಕ್ಕಾರ ಘೋಷಣೆ ಮೌನವೇ!
ತೆಲುಗುಮೂಲ : ಡಾ. ಚೆಂಗಲ್ವ ರಾಮಲಕ್ಷ್ಮಿ
ಕನ್ನಡ ಅನುವಾದ : ಕೊಡೀಹಳ್ಳಿ ಮುರಳೀ ಮೋಹನ್
ಮೌನವೂ ದಿಕ್ಕಾರವೇ..ಅರ್ಥಪೂರ್ಣ ಕವನ ಚಿಂತನೆ ಗೆ ಹಚ್ಚುವ ಕವನ ಸಾರ್
ಧನ್ಯವಾದಗಳು
ಚೆನ್ನಾಗಿದೆ
ಧನ್ಯವಾದಗಳು
ಮೌನದ ಮಹತ್ವವನ್ನು ತಿಳಿಯಪಡಿಸುವ ಅರ್ಥಪೂರ್ಣ ಅನುವಾದ.
ಧನ್ಯವಾದಗಳು
ಹೌದು…ಮೌನವೂ ಪ್ರತಿಭಟನೆಯನ್ನು, ಧಿಕ್ಕಾರವನ್ನು ತೋರ್ಪಡಿಸುವ ಭಾಷೆ! ಕವನದ ಸೊಗಸಾದ ಭಾವಾನುವಾದ.