ನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ!

Share Button

ಆನಂದವನ್ನು ಅನುಭವಿಸುತ್ತಾ
ನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ!
ನಾವು ಯಾವಾಗ ಹೊರಡುತ್ತೇವೆಯೋ ಯಾರಿಗೂ ತಿಳಿದಿಲ್ಲ.
ಜೀವನದಲ್ಲಿ ತೇಜೋಮಯ ಸೌಭಾಗ್ಯವನ್ನು
ಅನುಭವಿಸಲು ನಮಗೆ ಸಮಯವಿರುವುದಿಲ್ಲ –
ಆದ್ದರಿಂದ ಆನಂದವನ್ನು ಅನುಭವಿಸುತ್ತಾ  
ನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ!

ಜೀವನವು ಚಿಕ್ಕದಾಗಿ ಕಂಡರೂ
ಅನುಭವದಲ್ಲಿ ಅದು ತುಂಬಾ ದೊಡ್ಡದು
ಹೊರಡುವ ಮೊದಲು ಮಾಡಬೇಕಾದದ್ದು ಎಷ್ಟೋ ಇದೆ.
ತಪ್ಪುಗಳು ಎಷ್ಟೋ  ನಡೆಯುತ್ತಿವೆ!
ಬಹಳ ಕಾಲ ನಿಮ್ಮ ಬಲವನ್ನು ಬೆಳೆಸಿಕೊಳ್ಳಲು ಕಷ್ಟಪಡುತ್ತಿರುವೆ –
ಆದ್ದರಿಂದ ಆನಂದವನ್ನು ಅನುಭವಿಸುತ್ತಾ
ನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ!

ಕೆಲವು ಸ್ನೇಹಿತರು ನಮ್ಮೊಂದಿಗೆ ಇರುತ್ತಾರೆ,
ಇನ್ನು ಕೆಲವರು ಹೊರಟು ಹೋಗುತ್ತಾರೆ.
ನಾವು ಮೆಚ್ಚುವವರು ನಮ್ಮ ಮನಸ್ಸುಗಳಲ್ಲಿ ಉಳಿದುಹೋಗುತ್ತಾರೆ,
ಆದರೆ ಎಲ್ಲರೂ ನಮ್ಮ ಮನಸ್ಸಿನಲ್ಲಿ ಉಳಿಯುವುದಿಲ್ಲ.
ಮಕ್ಕಳು ರೆಕ್ಕೆಗಳು ಬಂದು ಹಾರಿಹೋಗುತ್ತಾರೆ.
ಕಾಲವು ಹೇಗೆ ಪರಿಣಾಮ ಬೀರುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ –
ಆದ್ದರಿಂದ ಆನಂದವನ್ನು ಅನುಭವಿಸುತ್ತಾ 
ನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ!

ಏಕೆಂದರೆ ಈ ಪ್ರಪಂಚದಲ್ಲಿ ಆಗಲಿ,
ಮೇಲಿರುವ ನಕ್ಷತ್ರ ಲೋಕದಲ್ಲಿ ಆಗಲಿ,
ಯಾರು ನಿಸ್ವಾರ್ಥವಾಗಿ ಶ್ರದ್ಧೆಯಿಂದ ನೋಡಿಕೊಳ್ಳುತ್ತಾರೋ
ಅವರೇ ಕೊನೆಗೆ ಪ್ರೀತಿಯನ್ನು ಅರ್ಥಮಾಡಿಕೊಳ್ಳುತ್ತಾರೆ.
ಸಂತೋಷವಾಗಿ ಉಸಿರಾಡಿ
ನಿಮ್ಮ ಮಾನಸಿಕ ವ್ಯಥೆಗಳು ಮಾಯವಾಗಿ ಹೋಗುತ್ತವೆ –
ಆದ್ದರಿಂದ ಆನಂದವನ್ನು ಅನುಭವಿಸುತ್ತಾ
ನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ!

ನನ್ನ ಮರಣದ ನಂತರ ಕಣ್ಣೀರನ್ನು ಸುರಿಸುತ್ತೀರಿ.
ಆದರೆ ಅದು ನನಗೆ ತಿಳಿಯುವುದಿಲ್ಲವಲ್ಲ –
ಆದ್ದರಿಂದ ಈಗ ನಾನು ಬದುಕಿರುವಾಗಲೇ
ನನ್ನ ನೋವುಗಳಲ್ಲಿ ನೀವೂ  ನನ್ನ ಜೊತೆಗೂ ರೋದಿಸಿ!

ನೀವು ನನ್ನ ಮರಣದ ನಂತರ ಹೂಗಳನ್ನು ತರುತ್ತೀರಿ.
ಆದರೆ ನಾನು ಅವುಗಳನ್ನು ಈಗ ನೋಡಲಾರೆನಲ್ಲ!
ಆದ್ದರಿಂದ ಅವುಗಳನ್ನು
ನಾನು ಬದುಕಿರುವಾಗಲೇ ತೆಗೆದುಕೊಂಡು ಬನ್ನಿ!

ನನ್ನನ್ನು ಹೊಗಳಿ ಮಾತನಾಡುತ್ತೀರಿ.
ಆದರೆ ಅದನ್ನು ನನ್ನ ಅಂತ್ಯದ ನಂತರ ಕೇಳಲು ಸಾಧ್ಯವಿಲ್ಲವಲ್ಲ!
ಆದ್ದರಿಂದ ನಾನು ಬದುಕಿರುವಾಗಲೇ ನನ್ನನ್ನು ಹೊಗಳಿ!

ನನ್ನ ಮರಣದ ನಂತರ ನನ್ನ ತಪ್ಪುಗಳನ್ನೆಲ್ಲಾ ಮರೆತುಬಿಡುತ್ತೀರಿ.
ಆದರೆ ಅದನ್ನು ಆಗ ನಾನು ತಿಳಿಯಲಾರೆನಲ್ಲ!
ಆದ್ದರಿಂದ ನಾನು ಬದುಕಿರುವಾಗಲೇ ನನ್ನನ್ನು ಕ್ಷಮಿಸಿ ಮರೆತುಬಿಡಿ!

ನನ್ನ ಮರಣದ ನಂತರ ನನ್ನ ಅಸ್ತಿತ್ವವನ್ನು ಮರೆತುಬಿಡುತ್ತೀರಿ.
ಆದರೆ ಅದು ನನಗೆ ತಿಳಿಯುವುದಿಲ್ಲವಲ್ಲ!
ಆದ್ದರಿಂದ ನನ್ನ ಅಸ್ತಿತ್ವವನ್ನು ನಾನು ಬದುಕಿರುವಾಗಲೇ ಮರೆತುಬಿಡಿ!

ನಾನು ಜೀವಂತವಾಗಿರುವಾಗ ನನ್ನೊಂದಿಗೆ ಹೆಚ್ಚು ಸಮಯ
ಕಳೆಯಬೇಕಾಗಿತ್ತು ಎಂದುಕೊಳ್ಳುತ್ತೀರಿ.
ಆದ್ದರಿಂದ ನನ್ನ ಮರಣಾನಂತರ ಆ ಕೆಲಸ ಮಾಡಿ!

ನನ್ನ ಮರಣ ವಾರ್ತೆ ಕೇಳಿ ಸಂತಾಪ ವ್ಯಕ್ತಪಡಿಸಲು
ನನ್ನ ಮನೆಗೆ ಓಡಿ ಬರುತ್ತೀರಿ.
ಆದರೆ ಕೆಲವು ವರ್ಷಗಳಿಂದ ನಾವು ಮಾತನಾಡಿಕೊಂಡಿಲ್ಲ.
ಈಗ ನನ್ನ ಮರಣದ ನಂತರ ನನ್ನನ್ನು ಹುಡುಕಿ!

ಮೂಲ: ಪ್ರೊ. ಲೀ ತ್ಸು ಫೆಂಗ್
ಅನುವಾದ: ಕೊಡೀಹಳ್ಳಿ ಮುರಳೀಮೋಹನ್

10 Responses

  1. ಶುಭಲಕ್ಷ್ಮಿ ಆರ್ ನಾಯಕ. says:

    ತಮ್ಮ ಅನುವಾದಿತ ಕವನ ಅರ್ಥಪೂರ್ಣ.

  2. ತುಂಬಾ ಅರ್ಥಪೂರ್ಣ ಕವನ…ಸಾರ್

  3. MANJURAJ H N says:

    ಕ್ಷಣಕ್ಷಣದ ಜೀವನಾನಂದ
    ಅದು ನಂದುವ ಮುನ್ನವೇ ಅನುಭವಿಸಿರೆಂಬ ಪ್ರ-ಮೋದದ ಬೋಧ !

    ಆಹಾ! ಸೊಗಸಾಗಿದೆ ಸರ್.‌ ಎಷ್ಟು ಎಚ್ಚರಿದ್ದರೂ ನಿದ್ರೆ ಹತ್ತಿಯೇ ಬಿಡುತ್ತದೆ
    ಈ ಮಂಕುಮನಸಿಗೆ. ಆಗಾಗ ಇಂಥ ಚಾಟಿ ಬೇಕು ನನಗೆ.

    ನಾನು ಟೀ ಕುಡಿಯದಿದ್ದರೂ ನೀವು ಕುಡಿಸಿಬಿಟ್ಟಿರಿ, ಈ ಮೂಲಕ. ಇದು
    ಬರೀ ಚಹಾ ಅಲ್ಲ; ಎಚ್ಚರಾಮೃತ, ಮತಿಗೆ. ಸನ್‌ ಮತಿಗೆ.

    ಅಯ್ಯೋ, ಬರೆಯಲು ಹೋದರೆ ಲೇಖನವಾಗಿಬಿಡುತ್ತದೆ. ಸಾಕು.

    ನಿಮ್ಮ ಈ ಬಗೆಯ ಅನು – ವಾದ ಮುಂದುವರೆಯಲಿ. ಅದರ
    ಬೆಳಕಲ್ಲಿ ನಾನು ಜೀವಿಸಬೇಕು. ವಂದನೆಗಳು ಕವಿಗುರುವೇ.

  4. ನಯನ ಬಜಕೂಡ್ಲು says:

    ವಿಭಿನ್ನವಾಗಿದೆ

  5. ಕೊಡೀಹಳ್ಳಿ ಮುರಳೀ ಮೋಹನ್ says:

    ಧನ್ಯವಾದಗಳು

  6. ಪದ್ಮಾ ಆನಂದ್ says:

    ಅರ್ಥಪೂರ್ಣ ಕವನ ಸೊಗಸಾಗಿದೆ.

  7. ಶಂಕರಿ ಶರ್ಮ says:

    ಅರ್ಥಪೂರ್ಣ ಕವನದ ಅನುವಾದಿತ ರೂಪವು ಅತ್ಯಂತ ಸೊಗಸಾಗಿದೆ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: