ಜೀವನ ಹೋರಾಟ

ಎಷ್ಟೆಷ್ಟೋ ಸ್ನೇಹದ ಹಸ್ತಗಳು,
ಇಷ್ಟಿಷ್ಟೂ ಬಂಧಗಳ ಅನುಬಂಧ ಬಲಗಳು,
ಹಸಿರು ಗಿಡವಾಗಿ ತುಂಬಿ ನಿಂತ ನಿನ್ನ,
ಪಕ್ಷಿಗಳ ಬಾಯಿಂದ ವಿಶಿಷ್ಟ ರಾಗಾಲಾಪನೆಗಳು,
ನಿರಂತರವಾಗಿ ಮೊಳಗುತ್ತಿವೆ.
ವಿಕಟಗೊಂಡ ಪ್ರಕೃತಿಯು,
ನಗುವ ಮೋಸದ ಮನುಷ್ಯನಾಗಗಳು,
ನಿನ್ನ ಅತ್ಯವಶ್ಯಕ ಆಮ್ಲಜನಕದ ದ್ವಾರಗಳನ್ನು ಮುಚ್ಚಿ,
ಮಿಂಚಿನ ಹಕ್ಕಿಗಳಂತೆ ರಾತ್ರಿಯಲ್ಲಿ ಅಡಗಿಕೊಳ್ಳುತ್ತಾರೆ.
ಬಲಗಳೆಂದು ಭಾವಿಸಿದವು ಭ್ರಮೆಗಳೆಂದು ತೇಲಿಹೋಗುತ್ತಿವೆ,
ಮೋಡಗಳೆಷ್ಟೋ ಮುಚ್ಚಿಕೊಳ್ಳುತ್ತಿವೆ,
ಕರುಣಿಸುವವೆಂದು ಭಾವಿಸಿದ ನಕ್ಷತ್ರಗಳು,
ಕಣ್ಮರೆಯಾಗುತ್ತಿವೆ. ನೀನು ನೀನಾಗಿ ಉಳಿಯದೆ,
ಬೇರೆಯೇನೋ ಆಗಿರುವಂತೆ, ಸ್ವಲ್ಪ ಅರ್ಥವಾಗುತ್ತದೆ.
ಆಗ… ಆಗ ಅಲ್ಲವೆ?
ಪುಟವಿಟ್ಟು ಜ್ವಾಲೆಯಂತೆ ಹೊತ್ತ ನಿನ್ನಲ್ಲಿ,
ಪದಾರ್ಥವಿದ್ದರೆ ಉಳಿಯುವುದು!
ಆ ಉಳಿದ ತೇಜಸ್ಸಿಗಾಗಿಯೇ ಅಲ್ಲವೇ,
ನಿರಂತರ ಜೀವನದ ಹೋರಾಟವು,
ಅಂತರ್ಝರಿಯಂತೆ ಸಾಗುವುದು!
ತೆಲುಗು ಮೂಲ : ಸಡ್ಲಪಲ್ಲಿ ಚಿದಂಬರ ರೆಡ್ಡಿ
ಕನ್ನಡ ಅನುವಾದ : ಕೊಡೀಹಳ್ಳಿ ಮುರಳೀ ಮೋಹನ್
ಚಂದದ ಕವಿತೆ ಸಾರ್..
ಧನ್ಯವಾದಗಳು ಮೇಡಮ್
ಜೀವನದ ಹೋರಾಟವು ಜೀವದ ಹೋರಾಟವೂ ಆಗಿದೆ ಎಂಬುದು ಇದರ ಅಂತರಾಳ.
ನಮ್ಮ ಮನೋಧರ್ಮದ ಸ್ಥಿತಿಗತಿಯಂತೆ ಪ್ರ-ಕೃತಿ ಕಾಣುತಿದೆ
ನನ್ನ ಮೂಲಕ ನಿಸರ್ಗ ಮೈದಾಳುತಿದೆ
ಹಾಗೆ ನೋಡಿದರೆ ಮಾನವ ಪ್ರಕೃತಿಯೂ ಪ್ರಕೃತಿಯೂ ತನ್ನುಳಿವಿಗಾಗಿ
ಹೋರಾಡುತಲೇ ಇದೆ; ಡಾರ್ವಿನ್ನನ ಥಿಯರಿಯೂ ಇದೇ ಆಗಿದೆ!
ತೆಲುಗುಮೂಲದ ಕವಿತೆಯನು ಪರಿಚಯಿಸಿ, ಕನ್ನಡಿಸಿದ್ದಕಾಗಿ ತಮಗೆ
ವಂದನೆ, ಈ ರೀತಿ ಆಲೋಚಿಸಲು ನಿಮ್ಮ ಪದ್ಯಪಾದ ಪ್ರೇರಣೆ.
ಧನ್ಯವಾದಗಳು ಸರ್
ಧನ್ಯವಾದಗಳು ಸರ್
Nice
ಧನ್ಯವಾದಗಳು ಮೇಡಮ್
ಅರ್ಥವತ್ತಾದ ಸುಂದರ ಕವನ.
ಧನ್ಯವಾದಗಳು ಮೇಡಮ್
ಪ್ರಕೃತಿಯ ಮೇಲೆ ನಡೆಯುತ್ತಿರುವ ಮಾನವನ ಅನಾಚಾರದ ಸೂಕ್ಷ್ಮ ಚಿತ್ರಣವನ್ನು ಕಾಣಬಹುದಾದಂತಹ ಅನುವಾದಿತ ಕವನ ಚೆನ್ನಾಗಿದೆ.
ಧನ್ಯವಾದಗಳು ಮೇಡಮ್