ಫಿಟ್‌ನೆಸ್‌ : ಒಂದು ಮರುಕಲ್ಪನೆ

Share Button

ಬಹುಶಃ ಜಗತ್ತಿನಲ್ಲಿಯೇ ಅತಿ ಹೆಚ್ಚು ತಪ್ಪಾಗಿ ಅರ್ಥೈಸಲಾದ ಒಂದು ಪದವೆಂದರೆ ಫಿಟ್ನೆಸ್. ತಮಗಿದು ಸ್ಪಷ್ಟವಾಗಿ ಅರ್ಥವಾಗಿದೆ ಎಂದು ಎಲ್ಲರೂ ಅಂದುಕೊಂಡು, ತಪ್ಪಾಗಿ ಅರ್ಥಮಾಡಿಕೊಂಡಿರುವ ಕಾನ್ಸೆಪ್ಟ್ ಕೂಡ ಇದೇ ಎಂದು ನನ್ನ ಅನಿಸಿಕೆ. ದಿನವೂ ಯಾವುದಾದರೊಂದು ಹೊಸ ಫಿಟ್‌ನೆಸ್ ಥಿಯರಿಯನ್ನು ಜಾಹಿರಾತುಗಳಲ್ಲಿ ನೋಡುತ್ತಿರುತ್ತೇವೆ. ಈಗಂತೂ ಅಮ್ಮಂದಿರ, ಅಜ್ಜಿಯಂದಿರ ಬಾಯಲ್ಲೂ ಕೇಳುವಂತಾಗಿದೆ. ಪುರಾವೆಗಳಿಲ್ಲದ ಈ ಕ್ಲೇಮ್‌ಗಳು ಕೋವಿಡ್‌ನಿಂದೀಚೆಗೆ ಬಹಳ ಹೆಚ್ಚಾಗಿವೆ. ಇತ್ತೀಚೆಗೆ, ದಿನವೂ ಸಂಜೆ ಹೊತ್ತಲ್ಲಿ ಮದ್ಯ ಸೇವಿಸುವ ಹವ್ಯಾಸವಿರುವ ನಮ್ಮ ಸಂಬಂಧಿಯೊಬ್ಬರು ‘ಪ್ರೊಟೀನ್ ಹೆಚ್ಚು ತಿಂದರೆ ಕಿಡ್ನಿಗೆ ಸಮಸ್ಯೆಯಾಗುವುದೆಂದೂ, ಆಗಾಗ ದೇಹಕ್ಕೆ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸಬೇಕೆಂದೂ’ ಸಲಹೆ ನೀಡಿದರು. ನಾನೂ ‘ಆಗಲಿ ಅಂಕಲ್’ ಎಂದು ಹೇಳಿ ಅವರಿಗೆ ಸೆನ್ಸ್ ಆಫ್ ಅಕಂಪ್ಲೀಷಮೆಂಟ್ ಕೊಟ್ಟೆ. ಸರಿಯಾದ, ವೈಜ್ಞಾನಿಕ ಆಧಾರವುಳ್ಳ ಫಿಟ್‌ನೆಸ್ ಸಲಹೆಗಳನ್ನು ಕೊಡುವ ಮಂದಿಯನ್ನು ಹುಡುಕುವುದೆಂದರೆ ಪರ್ವತದಲ್ಲಿ ಸೂಜಿ ಹುಡುಕಿದಂತೆ. ಈಗಂತೂ ಸೋಷಿಯಲ್ ಮೀಡಿಯಾ ಕಾಲ. ಇದರಲ್ಲಿ ಎಲ್ಲರೂ ನಮ್ಮ ಜೀವನವನ್ನು ಇನ್ನೂ ಉತ್ತಮಗೊಳಿಸುವ ಹಲವು ಸಲಹೆ, ಉಪದೇಶ ಮತ್ತು ಟಿಪ್ಸುಗಳನ್ನು ಕೊಟ್ಟು ಕಂಗಾಲಾಗಿಸುತ್ತಾರೆ. ಸರಿಯಾದ ಫಿಟ್‌ನೆಸ್ ಕಂಟೆಂಟ್ ಅನ್ನು ಕನ್ನಡ ಭಾಷೆಯಲ್ಲಿ ನಾನಂತೂ ಇದುವರೆಗೂ ನೋಡಲಾಗಿಲ್ಲ.

ಮೊದಲ ಬಾರಿ ಜಿಮ್‌ಗೆ ಹೋದಾಗ ನನಗಾಗ ಹದಿನಾಲ್ಕು ವರ್ಷ. ಆಗ ತಾನೇ ಹೈಸ್ಕೂಲು ಮುಗಿಸಿದ್ದ ನನಗೆ ಜಿಮ್ ಗೆ ಹೋಗಿ ಚೆನ್ನಾಗಿ ಬಾಡಿ ಬಿಲ್ಡಿಂಗ್ ಮಾಡಿ ಕಾಲೇಜಿನಲ್ಲಿ ಒಂದು ಮರ್ಯಾದೆಯನ್ನು ಪಡೆಯಬೇಕೆಂಬ ಭ್ರಾಮಕ ಕಲ್ಪನೆ. ಬೇಸಿಗೆ ರಜೆಯಲ್ಲಿ ಅಲ್ಲೇ ಹತ್ತಿರದಲ್ಲಿದ್ದ ಜಿಮ್ ಒಂದಕ್ಕೆ ಪ್ರವೇಶ ಪಡೆದು, ತಿಂಗಳಿಗೆ ಇನ್ನೂರೈವತ್ತು ಶುಲ್ಕ ಪಾವತಿಸಿದ್ದೆ. ಆ ಜಿಮ್ನ ಓನರ್ ಆದವರಿಗೆ ನನ್ನ ತಂದೆಯ ಪರಿಚಯ ಇದ್ದುದರಿಂದ ಪ್ರವೇಶಾತಿ ಶುಲ್ಕ ಬೇಡ ಎಂದು ದೊಡ್ಡ ಮನಸ್ಸು ಮಾಡಿದರು. ಆತನ ಬಿಸಿನೆಸ್‌ಗೆ ಹೊಡೆತ ಬೀಳಬಹುದು ಎಂದು ಗೊತ್ತಿದ್ದರೂ ಹದಿನಾಲ್ಕನೇ ವಯಸ್ಸಿಗೆ ಜಿಮ್ಮಲ್ಲಿ ವ್ಯಾಯಾಮ ಮಾಡುವುದರಿಂದ ಬೆಳವಣಿಗೆ ಕುಂಠಿತವಾಗುವುದೆಂದೂ ಶೋಲ್ಡರ್‌ ಪ್ರೆಸ್‌ನಂತಹ ವ್ಯಾಯಾಮಗಳನ್ನು ಮಾಡಬಾರದೆಂದೂ ಸಲಹೆ ನೀಡಿ ಏನೋ ದೊಡ್ಡ ರಿಸ್ಕ್ ತೆಗೆದುಕೊಂಡ ಹಾಗೆ ನನ್ನನ್ನು ಸೇರಿಸಿಕೊಂಡರು. ವಾಸ್ತವವಾಗಿ ಹಾಗೇನು ಇಲ್ಲ ಎಂಬುದೀಗ ನನಗೆ ಮನದಟ್ಟಾಗಿದೆ. ನಾನು ಈಗ ಹೋಗುವ ಜಿಮ್ಮಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆತರುವುದು ಸರ್ವೇ ಸಾಮಾನ್ಯವಾಗಿದೆ.

ಆ ಅಂಗಸಾಧನೋಪಕರಣಗಳ ಮತ್ತು ಅಲ್ಲಿನ ವಾತಾವರಣದ ಬಗ್ಗೆ ಕೊಂಚವೂ ಜ್ಞಾನ ಇಲ್ಲದಿದ್ದ ನನಗೆ, ಅಲ್ಲಿ ಅವರು ಫುಲ್ ವಾಲ್ಯೂಮ್‌ನಲ್ಲಿ ಕೇಳಿಸುತ್ತಿದ್ದ ಹಿಮೇಶ್ ರೇಶಿಮಿಯಾನ ಹಾಡುಗಳು ಇಷ್ಟವಾಗುತ್ತಿದ್ದವು. ಏನೋ ಅವರಿವರು ಮಾಡುತ್ತಿದುದ್ದನ್ನು ನೋಡಿ ಕೆಲವು ವ್ಯಾಯಾಮಗಳನ್ನು ಸುಮಾರಾಗಿ ಕಲಿಯುವ ಹೊತ್ತಿಗೆ ಬೇಸಿಗೆ ರಜೆಗಳು ಮುಗಿದು ಕಾಲೇಜು ಶುರು ಆಗಿ ಹೋಯಿತು. ನಾನು ಪಿಯುಸಿಯಲ್ಲಿ ಸೈನ್ಸ್ ವಿದ್ಯಾರ್ಥಿಯಾಗಿದ್ದರಿಂದ ಜಿಮ್ ಅನ್ನು ಮುಂದುವರಿಸಲು ಸಮಯ ಸಿಗದೇ ಹೋದ ಕಾರಣ ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು. 

ಕಾಲೇಜಿನಲ್ಲಿ ಮರ್ಯಾದೆ ಮೇನ್‌ಟೇನ್‌ ಮಾಡಬೇಕೆಂಬ ಈ ವಿಫಲ ಪ್ರಯತ್ನದ ನಂತರ ನಾನು ಫಿಟ್‌ನೆಸ್ ಬಗ್ಗೆ ಮತ್ತೆ ಗಮನ ಹರಿಸಿದ್ದು ಎರಡನೇ ವರ್ಷದ ಇಂಜಿನಿಯರಿಂಗ್‌ನಲ್ಲಿರುವಾಗ. ಆಗಲೇ ನನ್ನ ಬಳಿ ಒಂದು ಬೈಕ್ ಇತ್ತು. ಕಾಲೇಜಿನ ಸಮಯ ಮುಗಿದು ಜಿಮ್‌ಗೆ ಹೋಗುವುದು ಅಷ್ಟೊಂದು ಕಷ್ಟವಾಗಿರಲಿಲ್ಲ. ಅಲ್ಲೇ ಮನೆ ಹತ್ತಿರದ ಜಿಮ್ ಗೆ ಜಾಯನ್‌ ಆಗಿ ಪ್ರತಿದಿನ ತಪ್ಪದೆ ಹೋಗಲು ಆರಂಭಿಸಿದೆ. ಪರೀಕ್ಷೆಯ ಸಮಯದಲ್ಲಿ ಹೋಗದೆ ಇದ್ದಿದ್ದು ಬಿಟ್ಟರೆ ಕಾಲೇಜು ದಿನಗಳಲ್ಲಿ ಹೆಚ್ಚೇನೂ ತಪ್ಪಿಸುತ್ತಿರಲಿಲ್ಲ. ಆದರೆ ಜಿಮ್‌ಗೆ ಹೋಗಿ ವರ್ಕೌಟ್ ಮಾಡಬೇಕು ಎಂಬುದು ಮನಸ್ಸಿನಲ್ಲಿತ್ತೇ ಹೊರತು ಅದಕ್ಕೆ ಪೂರಕವಾಗಿ ಯಾವ ಆಹಾರ? ಹೇಗೆ ಸೇವಿಸಬೇಕು? ಎಷ್ಟು ನಿದ್ದೆ ಮಾಡಬೇಕು ಎಂಬುದೆಲ್ಲ ಖಂಡಿತ ಗೊತ್ತಿರಲಿಲ್ಲ. ನಾನು ಶುದ್ಧ ಸಸ್ಯಾಹಾರಿಯಾದ ಕಾರಣ, ಎರಡು ವರ್ಷ ಕಷ್ಟ ಪಟ್ಟರೂ, ಆಹಾರದಲ್ಲಿ ಪ್ರೊಟೀನ್ ಚೆನ್ನಾಗಿ ತೆಗೆದುಕೊಳ್ಳದೆ ಇದ್ದುದರಿಂದ ಅಂತಹ ನಿರೀಕ್ಷಿತ ಫಲಿತ ದೊರಕಲಿಲ್ಲ.

ಕೋವಿಡ್‌ನಿಂದೀಚೆಗೆ, ಕಳೆದ ಐದು ವರ್ಷಗಳಿಂದ ಫಿಟ್‌ನೆಸ್‌ ಅನ್ನು ಸಾಕಷ್ಟು ಸೀರಿಯಸ್ ಆಗಿ ತೆಗೆದುಕೊಂಡೆ. ಎಷ್ಟು ಸಾಧ್ಯವೋ ಅಷ್ಟು ಆಹಾರದಲ್ಲಿ ಡಿಸಿಪ್ಲಿನ್ ಕಂಡುಕೊಂಡೆ. ನಿಧಾನವಾಗಿ ನನಗೆ  ಫುಡ್‌ ಕಾರ್ವಿಂಗ್ಸ್‌ ಮಾಯವಾಗತೊಡಗಿತು. ನಾನು ಇಂಗ್ಲೆಂಡಿಗೆ ಮೂವ್ ಆದ ಮೇಲಂತೂ ನಾನೇ ನನ್ನ ಅಡುಗೆಮನೆಯ ಇನ್‌ಚಾರ್ಜ್ ಇದ್ದಿದ್ದರಿಂದ, ನನಗೆ ಏನು ಬೇಕೋ ಎಷ್ಟು ಬೇಕೋ ಅಷ್ಟನ್ನು ಮಾಡಿಕೊಳ್ಳಲು ಸುಲಭವಾಯಿತು. ಒಂದು ವರ್ಷದ ಕೆಳಗೆ, ಲೆವೆಲ್ 2 ಪರ್ಸನಲ್ ಟ್ರೈನಿಂಗ್ ಮತ್ತು ಸ್ಪೋರ್ಟ್ಸ್ ನ್ಯುಟ್ರಿಷಿಯನ್ ಎಂಬ ಕೋರ್ಸ್ ಅನ್ನು ಸಹ ಪಾಸ್ ಮಾಡಿಕೊಂಡೆ. ಅದರಿಂದ ನನಗೆ ಸಂಪಾದನೆ ಆಗದಿದ್ದರೂ, ನನ್ನ ಜೀವನದ ಒಂದು ಮುಖ್ಯ ಭಾಗವಾಗಿರುವ ಫಿಟ್‌ನೆಸ್‌ಗೆ ಗೌರವ ಸಲ್ಲಿಸಲು ಕಲಿಕಾರ್ಥಿಯಾಗಿ ಆ ಸರ್ಟಿಫಿಕೇಟ್ ಪಡೆದೆ. ಸುಮಾರು ಐದು ವರ್ಷಗಳ ಇಂಟೆನ್ಸ್‌ ಡಿಸಪ್ಲಿನ್ ಮತ್ತು ಕನ್ಸಿಸ್ಟೆನ್ಸಿಯು ಇಂದು ಫಲಿತಾಂಶ ನೀಡಿದೆ. ಇಂದಿಗೂ ಶುದ್ಧ ಸಸ್ಯಾಹಾರಿಯಾಗಿರುವ ನನ್ನ ದೇಹದ ಕೊಬ್ಬಿನಂಶ ಕೇವಲ 15.2% ಮತ್ತು 72 ಕೆಜಿ ತೂಕವಿರುವ ನನ್ನಲ್ಲಿ 35 ಕೆಜಿಯಷ್ಟು ಮಜ಼ಲ್‌ ಮಾಸ್‌ (ಸ್ನಾಯುವಿನ ದ್ರವ್ಯರಾಶಿ) ಇದೆ.

ನಮ್ಮಲ್ಲಿ ಬಹಳಷ್ಟು ಜನರಿಗೆ ಜಿಮ್ಗೆ ಹೋಗುವುದೆಂದರೆ ಸಣ್ಣ ಆಗಲು ಅಂದರೆ ತೂಕ ಕಳೆದುಕೊಂಡು ಸ್ಮಾರ್ಟ್ ಆಗಲು ಮಾತ್ರ ಎಂಬ ಭಾವನೆ ಇದೆ. ವಾಸ್ತವವೇನೆಂದರೆ, ಜಿಮ್ ಎಂಬುದೊಂದು ಕೇವಲ ವ್ಯಾಯಾಮ ಶಾಲೆ ಅಷ್ಟೇ. ಜಿಮ್‌ನಲ್ಲಿ ವ್ಹೇಟ್‌ ಟ್ರೈನ್‌ ಮಾಡುವುದರಿಂದ ದೇಹದಲ್ಲಿನ ಸ್ನಾಯುಗಳು ಬೆಳವಣಿಗೆ ಆಗುತ್ತವೆ, ಪಚನಕ್ರಿಯೆ ಬೂಸ್ಟ್ ಆಗಿ, ಕೊಬ್ಬು ಕರಗುತ್ತದೆ, ಮೈಕಟ್ಟು  ಕೇವಲ ಚೆನ್ನಾಗಿ ಕಾಣುವುದಷ್ಟೇ ಅಲ್ಲದೆ, ಕೀಲುಗಳು ಹಾಗೂ ಅವುಗಳು ಪರಸ್ಪರ ಘರ್ಷಣೆ, ಡಿಸ್‌ಪ್ಲೇಸ್‌ ಆಗದಂತೆ ತಡೆದು, ವೃದ್ಧಾಪ್ಯದಲ್ಲಿ ಮೂಳೆ ಸಂಬಂಧಿತ ಕಾಯಿಲೆಗಳು ಬರದಂತೆ ನೆರವಾಗುತ್ತದೆ.

ವ್ಹೈಟ್‌ ಟ್ರೈನಿಂಗ್‌ ಅಥವಾ ಸ್ಟ್ರೆನ್ತ್‌ ಟ್ರೈನಿಂಗ್‌ ಎಂದರೆ ಇಷ್ಟೇ : ನಿಯಮಿತವಾಗಿ ದೇಹದಲ್ಲಿನ ಸ್ನಾಯುಗಳನ್ನು ಕೆಲಸಕ್ಕೆ ಒಡ್ಡುವುದು. ದೇಹದಲ್ಲಿನ  ಸ್ನಾಯುಗಳು ಮಜ಼ಲ್‌ ಫೈಬರ್ ಎಂಬ ಅತಿ ಚಿಕ್ಕ ದಾರದಂಥ ಎಳೆಗಳಿಂದ ಆಗಿವೆ. ಒಂದು ಗ್ರೂಪ್ನ ಸ್ನಾಯುಗಳಿಂದ, ಉದಾಹರಣೆಗೆ, ತೋಳುಗಳಿಂದ ಭಾರ ಎತ್ತುವುದರಿಂದ ಮಜ಼ಲ್‌ ಫೈಬರ್‌ನಲ್ಲಿ ಸಣ್ಣ ಗಾಯಗಳಾಗುತ್ತವೆ (ಮೈಕ್ರೋ ಟಿಯರ್ಸ್‌). ಆಗ ಮಜ಼ಲ್‌ ಫೈಬರ್‌ನಲ್ಲಿರುವ ಸ್ಟೆಮ್‌ ಸೆಲ್‌ಗಳು ತಕ್ಷಣ ಅಂಥವನ್ನು ರಿಪೇರಿ ಮಾಡಲು ಸಜ್ಜಾಗುತ್ತವೆ. ಇದನ್ನು ರಿಪೇರಿ ಮಾಡಲು ಬೇಕಾಗಿರುವ ಅತ್ಯಮೂಲ್ಯ ಅಂಶವೆಂದರೆ ಪ್ರೊಟೀನ್. ಇದರಲ್ಲಿರುವ ಅಮೈನೊ ಆಸಿಡ್‌ ಎಂಬ ರಾಸಾಯನಿಕವು ಮಜ಼ಲ್‌ ಫೈಬರ್‌ಗಳನ್ನು ರಿಪೇರಿ ಮಾಡುತ್ತವೆ. ವರ್ಕೌಟ್ ಆದ ನಂತರ ದೇಹ ವಿಶ್ರಾಂತಿ ತೆಗೆದುಕೊಳ್ಳುವಾಗ ಈ ಪ್ರಕ್ರಿಯೆ ನಡೆಯುತ್ತದೆ. ನಮ್ಮ ದೇಹ ಎಷ್ಟು ಬುದ್ಧಿವಂತ ಎಂದರೆ, ಪ್ರತೀ ಬಾರಿ ಇಂಥ ಮೈಕ್ರೋ ಟಿಯರ್ಸ್‌ ಆದಾಗ ಮುಂದಿನ ಬಾರಿ ಹೆಚ್ಚು ಹೊರೆಯಾಗದಂತೆ ತುಸು ಚೆನ್ನಾಗಿಯೇ ರಿಪೇರಿ ಮಾಡುತ್ತದೆ. ಹಾಗಾಗಿ ಪ್ರತಿ ಬಾರಿ ಈ ಪ್ರಕ್ರಿಯೆ ನಡೆದಾಗಲೂ ಸ್ನಾಯುಗಳು ಹೆಚ್ಚು ಸದೃಢವಾಗುತ್ತವೆ, ಇನ್ನು ಸ್ವಲ್ಪ ದೊಡ್ಡದಾಗಿ, ದೃಢವಾಗಿ ಬೆಳೆಯುತ್ತವೆ. ಇದರಿಂದಾಗಿ, ಇನ್ನೂ ಹೆಚ್ಚು ಹೆಚ್ಚು ಭಾರ ಎತ್ತುವಂತಾಗುತ್ತದೆ. ಇದನ್ನು ಹೈಪರ್‌ಟ್ರೋಫಿ ಎಂದು ಕರೆಯುತ್ತಾರೆ. ಕೇವಲ 30 ಕೆಜಿಯಷ್ಟು ಡೆಡ್‌ಲಿಫ್ಟ್‌ ಮಾಡಲು ಕಷ್ಟಪಡುತ್ತಿದ್ದ ನಾನು, ಇವತ್ತು ಸಾಕಷ್ಟು ಆರಾಮವಾಗಿ 170 ಕೆಜಿ ಭಾರ ಎತ್ತಬಲ್ಲವನಾಗಿದ್ದೇನೆ. ಇದು ಜಿಮ್‌ನಲ್ಲಿ ತರಬೇತಿ ಪಡೆದ ಮತ್ತು ಅಂಗಸಾಧನೋಪಕರಣಗಳನ್ನು ಬಳಸಲು ಕಲಿತದ್ದರ ಫಲಿತಾಂಶ. ಜೊತೆಗೆ ಆಹಾರದಲ್ಲಿ ವೈಜ್ಞಾನಿಕತೆ ಅಳವಡಿಸಿಕೊಂಡಿದ್ದು.

ಪ್ರೊಟೀನ್ ಅಂಶವಿರುವ ಆಹಾರವನ್ನು ಸಾಕಷ್ಟು ಪ್ರಮಾಣದಲ್ಲಿ ದಿನವೂ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಕೇವಲ ಜಿಮ್‌ನಲ್ಲಿ ಭಾರ ಎತ್ತುವವರು ಮಾತ್ರ ಪ್ರೊಟೀನ್ ತೆಗೆದುಕೊಳ್ಳಬೇಕೆಂದಿಲ್ಲ. ದಿನದಲ್ಲಿ ಯಾವುದೇ ವ್ಯಾಯಾಮ ಮಾಡದಿದ್ದರೂ, ದೇಹಕ್ಕೆ ಪ್ರೊಟೀನಿನ ಆವಶ್ಯಕತೆಯಿದೆ. ಒಂದು ಸ್ಟ್ಯಾಂಡರ್ಡ್  ಅಂದರೆ ಅಳತೆಗೋಲಿನ ಪ್ರಕಾರ, ಒಬ್ಬ ಮನುಷ್ಯ ಯಾವುದೇ ವ್ಯಾಯಾಮ ಮಾಡದಿದ್ದರೂ, ದೇಹದ ಪ್ರತೀ ಕೆಜಿ ತೂಕದ 0.8 ಗ್ರಾಂ ಪ್ರೊಟೀನನ್ನು ದಿನವೂ ಸೇವಿಸಬೇಕು. ಅಂದರೆ, ಒಬ್ಬ ಮನುಷ್ಯ 70 ಕೆಜಿ ತೂಗುತ್ತಿದ್ದರೆ, 70 x 0.8 ರಷ್ಟು ಅಂದರೆ ಸುಮಾರು 56 ಗ್ರಾಂ ಪ್ರೊಟೀನು ಬೇಕಾಗುತ್ತದೆ. ಬಹಳಷ್ಟು ಆಕ್ಟಿವ್ ಆಗಿದ್ದರೆ, 1.2 – 1.4 ಗ್ರಾಂ ಹಾಗೂ ಜಿಮ್‌ನಲ್ಲಿ ಕಸರತ್ತು ಮಾಡುವವರಾಗಿದ್ದರೆ, 1.6 – 2 ಗ್ರಾಂ ತನಕ ತೆಗೆದುಕೊಳ್ಳಬಹುದು. ಇದು ಜಗತ್ತಿನ ಸ್ಟ್ಯಾಂಡರ್ಡ್, ಮಹಿಳೆಯರಿಗೆ ಬೇರೆ ಸ್ಟ್ಯಾಂಡರ್ಡ್ ಇದೆ – ದೇಹಕ್ಕೆ ಅನುಗುಣವಾಗಿ, ವೈದ್ಯರ ಸಲಹೆ ಪಡೆದು ಅಳತೆಯನ್ನು ನಿರ್ಧರಿಸಿಕೊಳ್ಳಬೇಕು.

ಮಾಂಸಾಹಾರದಿಂದ ಮತ್ತು ಸಸ್ಯಾಹಾರದಿಂದ ದೊರಕುವ ಪ್ರೊಟೀನುಗಳಲ್ಲಿ ವ್ಯತ್ಯಾಸವಿದೆ. ಮಾಂಸಾಹಾರದ ಪ್ರೊಟೀನಿನಲ್ಲಿ ಸಾಮಾನ್ಯವಾಗಿ ಎಲ್ಲ ಒಂಬತ್ತು ಬಗೆಯ ಅಮೈನೋ ಆಮ್ಲಗಳು ದೊರಕುತ್ತವೆ. ಹೀಗಾಗಿ ಇದನ್ನು ಪರಿಪೂರ್ಣ ಪ್ರೊಟೀನ್ ಆಕರವಾಗಿ ಪರಿಗಣಿಸಬಹುದು. ಸಸ್ಯಾಹಾರ ಅಥವಾ ಪ್ಲಾಂಟ್‌ ಬೇಸ್ಡ್‌ ಪ್ರೊಟೀನ್ ಆಕರಗಳಲ್ಲಿ ಈ ಎಲ್ಲ ಬಗೆಯ ಅಮೈನೋ ಆಸಿಡ್‌ಗಳಿರುವುದಿಲ್ಲ. ಸಸ್ಯಾಹಾರಿಯಾಗಿದ್ದವರು ಮಜ಼ಲ್‌ ಬಿಲ್ಡ್‌ ಮಾಡಲು ಸಾಧ್ಯವೇ ಆಗದು ಎಂಬುದು ತಪ್ಪು. ಸ್ವಲ್ಪ ಕಷ್ಟ ಪಡಬೇಕು ಮತ್ತು ರುಚಿಗೆ ರಾಜಿಯಾಗಬೇಕು. ಕೇವಲ ಪ್ರೊಟೀನನ್ನು ಸರಿಯಾಗಿ ತೆಗೆದುಕೊಂಡರಷ್ಟೇ ಸಾಲದು. ಇದಕ್ಕೆ ಪೂರಕವಾಗಿ ಫೈಬರ್, ಕಾಂಪ್ಲೆಕ್ಸ್ ಕಾರ್ಬೋಹೈಡ್ರೈಟ್ ಮತ್ತು ಆರೋಗ್ಯಕರ ಕೊಬ್ಬನ್ನು (ಹೆಲ್ತಿ ಫ್ಯಾಟ್ಸ್‌) ಆಹಾರದಲ್ಲಿ ಅಳವಡಿಸಿಕೊಳ್ಳಬೇಕು. ಅವುಗಳನ್ನು ದಿನದ ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ಎಂಬುದಕ್ಕೆ ಆಯುರ್ವೇದದಲ್ಲಿ ಸ್ಪಷ್ಟ ಉಲ್ಲೇಖಗಳಿವೆ. ಇವೆಲ್ಲವೂ ಒಂದು ಊಟದಲ್ಲಿ ಇದ್ದರೆ, ಅದನ್ನು ಪರಿಪೂರ್ಣ ಆಹಾರ (ಕಂಪ್ಲೀಟ್‌ ಮೀಲ್) ಎಂದು ಕರೆಯಬಹುದು.

ಒಬ್ಬ ಮನುಷ್ಯನ ದೇಹ ಪ್ರಕೃತಿ ಮತ್ತು ಆತನ ಪ್ರತಿದಿನದ ಚಟುವಟಿಕೆಗಳಿಗೆ ಅನುಗುಣವಾಗಿ ಪ್ರತಿದಿನ ಎಷ್ಟು ಕ್ಯಾಲೊರಿಗಳನ್ನು ಸೇವಿಸಬೇಕು? ಎಂದು ಕಂಡು ಹಿಡಿಯಬಹುದು. ಇದನ್ನು ಮೇನ್‌ಟೇನ್‌ನೆನ್ಸ್‌ ಕ್ಯಾಲೊರಿಸ್‌ ಎಂದು ಕರೆಯುತ್ತಾರೆ. ಇಂಟರ್ನೆಟ್‌ನಲ್ಲಿ ಕ್ಯಾಲೋರಿ ಕ್ಯಾಲ್ಕುಲೇಟರ್ ಎಂದು ಸರ್ಚ್ ಮಾಡಿದರೆ ಸಿಗುತ್ತದೆ. ಅದಕ್ಕಿಂತ ಕಡಿಮೆ ಕ್ಯಾಲೊರಿಗಳನ್ನು ಸೇವಿಸಿ, ಪ್ರೊಟೀನ್ ಮತ್ತು ಉಳಿದ ಮ್ಯಾಕ್ರೋ ನ್ಯೂಟ್ರಿಷಿಯಸ್‌ಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುತ್ತಾ, ಅಚ್ಚುಕಟ್ಟಾಗಿ ನಿಗದಿತ ವ್ಯಾಯಾಮ ಮಾಡಿದರೆ ದೇಹದ ತೂಕ ಕಡಿಮೆಯಾಗಿ, ಸ್ನಾಯುಗಳು ಗಟ್ಟಿಯಾಗುತ್ತವೆ. ವೈಜ್ಞಾನಿಕವಾಗಿ ತೂಕ ಕಡಿಮೆ ಮಾಡಿಕೊಳ್ಳುವ ಏಕೈಕ ವಿಧಾನವಿದು. ವ್ಯಾಯಾಮವಿಲ್ಲದ, ಆಹಾರದಲ್ಲಿ ಶಿಸ್ತೇ ಇಲ್ಲದ ತೂಕ ಕಡಿಮೆ ಮಾಡುವ ವಿಧಾನಗಳನ್ನು ಪರಿಚಯಿಸುವ ಬಹಳಷ್ಟು ಜಾಹಿರಾತುಗಳನ್ನು ನಾವು ನೋಡುತ್ತಿರುತ್ತೇವೆ. ಖಂಡಿತವಾಗಲೂ ಇಂಥವು ಫಲಿತ ನೀಡುವುದಿಲ್ಲ.

ಮೇನ್‌ಟೆನ್‌ನೆಸ್‌ ಕ್ಯಾಲೊರಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ತೂಕ ಹೆಚ್ಚಾಗುತ್ತದೆ. ದೇಹಕ್ಕೆ ಬೇಕಾಗಿರುವುದು ಎನರ್ಜಿ – ಅದಕ್ಕೆ ಪ್ರಮಖವಾಗಿ ಬೇಕಾಗಿರುವುದು ಸಕ್ಕರೆ. ಕಾರ್ಬೋಹೈಡ್ರೇಟ್‌ಗಳು ಸಾಮಾನ್ಯವಾಗಿ ದೇಹಕ್ಕೆ ಬೇಕಾಗಿರುವ ಎನರ್ಜಿಯನ್ನು ಒದಗಿಸುತ್ತವೆ. ನಾವು ತೆಗೆದುಕೊಳ್ಳುವ ಬಹುತೇಕ ಆಹಾರಗಳು ಕಾರ್ಬೋಹೈಡ್ರೇಟ್‌ನಿಂದ ಆಗಿವೆ. ಬ್ರೆಡ್, ಅನ್ನ, ಚಪಾತಿ, ಪಾಸ್ಟಾ ಎಲ್ಲವು ಕಾರ್ಬೋಹೈಡ್ರೇಟ್ ಆಕರಗಳು. ಎರಡು ಬಗೆಯ ಕಾರ್ಬೋಹೈಡ್ರೇಟ್‌ಗಳಿವೆ. ಸಿಂಪಲ್ ಮತ್ತು ಕಾಂಪ್ಲೆಕ್ಸ್ ಎಂದು ಅವನ್ನು ವಿಭಾಗಿಸಬಹುದು.

ದೇಹ ಇದನ್ನು ಎಷ್ಟು ಬೇಗ ಗ್ಲುಕೋಸ್ ಆಗಿ ಪರಿವರ್ತನೆ ಮಾಡುತ್ತದೆ ಎನ್ನುವುದರ ಮೇಲೆ ಸಿಂಪಲ್ ಮತ್ತು ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್‌ಗಳನ್ನು ವಿಂಗಡಣೆ ಮಾಡಲಾಗಿದೆ. ಬೇಗ ಪರಿವರ್ತನೆಯಾದರೆ, ಅದು ಬೇಗನೆ ಎನರ್ಜಿ ಆಗಿ ಬದಲಾಗಿದೆ ಎಂದರ್ಥ. ಅದನ್ನು ಬೇಗ ಖರ್ಚು ಮಾಡದಿದ್ದರೆ, ರಕ್ತದಲ್ಲಿ ಸಕ್ಕರೆಯ ಪ್ರಮಾಣ ಜಾಸ್ತಿಯಾಗುತ್ತದೆ. ಇದನ್ನು ನಿಭಾಯಿಸಲು, ಇನ್ಸುಲಿನ್ ಬಿಡುಗಡೆಯಾಗುತ್ತದೆ (ಇನ್ಸುಲಿನ್‌ ಸ್ಪೈಕ್). ಮಿಕ್ಕ ಗ್ಲುಕೋಸ್ ಗ್ಲೈಕೊಜೆನ್ ಆಗಿ ಬದಲಾಗಿ ಲಿವರಿನಲ್ಲಿ, ಸ್ನಾಯುಗಳಲ್ಲಿ ಶೇಖರಿಸಲ್ಪಡುತ್ತವೆ. ಇದಕ್ಕೂ ಮೀರಿದರೆ, ಇದನ್ನು ದೇಹ ತನ್ನ ಸೇವಿಂಗ್ಸ್ ಅಕೌಂಟಿನಲ್ಲಿ ಶೇಖರಿಸುತ್ತದೆ. ಆ ಸೇವಿಂಗ್ಸ್ ಅಕೌಂಟೇ ಫ್ಯಾಟು. ಸಿಂಪಲ್‌ ಕಾರ್ಬ್ಸ್‌ಗಳ ಜೊತೆಗೆ, ಆದಷ್ಟು ಕಾಂಪ್ಲೆಕ್ಸ್‌ ಕಾರ್ಬ್ಸ್‌ ಅನ್ನು ಸೇವಿಸುವುದರಿಂದಲೂ ಸಾಕಷ್ಟು ನಾರಿನಾಂಶ (ಫೈಬರ್ಸ್‌) ವನ್ನು ಜೊತೆಗೂಡಿಸುವುದರಿಂದಲೂ ಇದರಿಂದ ಬಚಾವಾಗಬಹುದು.

ಕೇವಲ ಇದಿಷ್ಟೇ ಅಲ್ಲದೆ, ಮೈಕ್ರೋ ನ್ಯೂಟ್ರಿಷಿಯಸ್ ಅಂದರೆ, ವಿಟಮಿನ್ಸ್, ಮಿನರಲ್ಸ್ ಕೂಡ ದೇಹಕ್ಕೆ ಬೇಕಾಗುತ್ತದೆ. ಇವೆಲ್ಲವನ್ನು ಸರಿಯಾದ ಪ್ರಮಾಣದಲ್ಲಿ ಸರಿಯಾದ ಸಮಯದಲ್ಲಿ ಸೇವಿಸಿ, ನಿಗದಿತ ಪ್ರಮಾಣದಲ್ಲಿ ವ್ಯಾಯಾಮ ಮಾಡಿದರಷ್ಟೇ ಆರೋಗ್ಯವಾಗಿರಲು ಸಾಧ್ಯ . ಇದಕ್ಕೆ ಯಾವುದೇ ಅಡ್ಡದಾರಿ (ಶಾರ್ಟ್‌ ಕಟ್)‌ ಗಳಿಲ್ಲ; ಇದುವರೆಗೂ ಕಂಡು ಹಿಡಿದಿಲ್ಲ! ಯಾವುದೇ ಒಂದು ಕಾನ್ಸೆಪ್ಟ್ ಅಭ್ಯಾಸವಾಗಿ ಬದಲಾಗಲು ಎರಡರಿಂದ ನಾಲ್ಕು ತಿಂಗಳುಗಳು ಬೇಕೆಂದು ಮಾನಸಿಕ ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ. ಆರೋಗ್ಯಕರ ಜೀವನಶೈಲಿಯನ್ನು ಒಂದು ಬಾರಿ ಮೈಗೂಡಿಸಿಕೊಂಡರೆ, ಅದರಿಂದ ಹೊರಬರಲು ಮನಸ್ಸು ಒಪ್ಪುವುದಿಲ್ಲ! ನಾನು ಮೈನಸ್‌ ಎಂಟು (-08) ಡಿಗ್ರಿ ಸೆಲ್ಸಿಯಸ್‌ನಲ್ಲೂ ಸೈಕಲ್ ಚಲಾಯಿಸಿಕೊಂಡು ಜಿಮ್‌ಗೆ ಹೋಗಿದ್ದಿದೆ. ನನ್ನ ಕೆಲಸದ ನಿಮಿತ್ತ ಅದರೊಂದು ಭಾಗವಾಗಿ, ಹಲವಾರು ದೇಶಗಳನ್ನು ಸುತ್ತುಬೇಕಾಗಿದ್ದು, ಎಲ್ಲಿಗೆ ಹೋದರೂ ನನ್ನ ಫಿಟ್‌ನೆಸ್ ರೊಟೀನನ್ನು ಬಿಟ್ಟು ಕೊಡುವುದಿಲ್ಲ. ನನಗಿದು ಹೆಮ್ಮೆ ಮತ್ತು ಅಭಿಮಾನದ ಸಂಗತಿ. ಕೊನೆಗೆ ನಾನು ಕಲಿತದ್ದಿಷ್ಟೇ: ಫಿಟ್‌ನೆಸ್ ಸೈನ್ಸ್ ಗೊತ್ತಿದ್ದರೆ, ಫಿಟ್‌ನೆಸ್ ಅಡ್ವೈಸಿನ ಆವಶ್ಯಕತೆ ಖಂಡಿತ ಬೇಕಾಗುವುದಿಲ್ಲ. ನಾವೇ ನಮ್ಮ ಪರ್ಸನಲ್‌ ಟ್ರೈನರ್ ಆಗಬಹುದು.

ಚಾರು ಮಂಜುರಾಜ್‌, ವಾರಿಕ್‌, ಇಂಗ್ಲೆಂಡ್‌                                 

48 Responses

  1. MANJURAJ H N says:

    ನಮ್ಮ ಹೆಮ್ಮೆಯ ಪುತ್ರ ಚಾರು ಮಂಜುರಾಜ್‌ ಲೇಖನ !
    ಓದುವುದು ಚೆಂದ; ಕನ್ನಡದಲಿ ಬರೆದದ್ದು ಇನ್ನೂ ಅಂದ !!

    ಅದರಲೂ ನಮ್ಮ ಸುರಹೊನ್ನೆಯಲಿ ಪ್ರಕಟಿತ; ಮಹದಾನಂದ !!!

    ಪ್ರಕಟಿಸಿದ ಸಂಪಾದಕರಿಗೆ ಅನಂತ ಧನ್ಯವಾದಗಳು. ನಿಮ್ಮ ಪ್ರೀತಿಯ
    ಪ್ರೋತ್ಸಾಹಕೆ ನೂರು ಪ್ರಣಾಮಗಳು.

  2. ಪದ್ಮಾ ಆನಂದ್ says:

    ಅತ್ಯಂತ ನಿಖರ ಮಾಹಿತಿಗಳೊಂದಿಗೆ, ಸೂಕ್ತ, ವೈಜ್ಞಾನಿಕ ಕಾರಣಗಳನ್ನು ನೀಡುತ್ತಾ ಹಲವಾರು ಸಂದೇಹಗಳನ್ನು ನಿವಾರಿಸಿದ ಉಪಯುಕ್ತ ಲೇಖನ.

    • MANJURAJ H N says:

      ಧನ್ಯವಾದಗಳು ಮೇಡಂ,

      ನಿಮ್ಮ ಪ್ರತಿಕ್ರಿಯೆಯನು ಚಾರುವಿಗೆ ತಲಪಿಸುವೆ.

  3. ಫಿಟ್ನೆಸ್ ಬಗ್ಗೆ ವಿಸೃತವಾದ ಲೇಖನ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಸುಪುತ್ರ ನಿಗೆ ಅಭಿನಂದನೆಗಳನ್ನು ತಿಳಿಸಿ ಸರ್

  4. ಶಂಕರಿ ಶರ್ಮ says:

    ತೂಕ ಇಳಿಸುವಿಕೆ ಅಥವಾ ಫಿಟ್ನೆಸ್ ಕುರಿತು ಸ್ವಾನುಭವದ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ. ಬರೆಹದಲ್ಲಿ ತಂದೆಯಂತೆ ಮಗನಾಗಲಿ ಎಂಬ ಹಾರೈಕೆಯೊಂದಿಗೆ…. ಅಭಿನಂದನೆಗಳು ಹಾಗೂ ಶುಭಾಶಯಗಳು.

  5. ನಯನ ಬಜಕೂಡ್ಲು says:

    ಬಹಳ ಚೆನ್ನಾಗಿದೆ. ಮಾಹಿತಿಪೂರ್ಣ

  6. MANJURAJ H N says:

    ಧನ್ಯವಾದ ಮೇಡಂ

  7. Niranjan R S says:

    Good,
    Complete information about fitness
    Congratulations

  8. Veena. says:

    ನನ್ನ ಮಗ ಜಿಮ್ ಅಂದಾಗ ಮೂಗ ಮುರಿತ್ತಿದ್ದೆ …..ಇತ್ತೀಚಿನ ಹೃದಯ ಕಾಯಿಲೆಗೆ ಜಿಮ್ ಕಾರಣ ಅಂತ ನನ್ನ ಭಾವನೆ ಆಗಿತ್ತು.ಆ ಕಾರಣಕ್ಕೆ ಮಗನಿಗೆ ಬೇಡ ಅಂತೇಳಿದ್ದು..ಈಗ ಈ ಲೇಖನ ಸಮಾಧಾನ ತಂದಿದೆ…thank you..

  9. Anonymous says:

    Chaaru kannadadalli ishtu sogasaagi, maahitipoornavaagi, swaanubhava baredu dhakhalisi, Adu prakatavaagiddu atyanta santosha. Chaaruvina bhaashaa shyly gamanisidaaga tandeyannu meerisuva Ella’lakshanagalu gochariside. Heege dehadaardyadondige kannada bhashaabhimaanavannu ulisi belesalendu haaraisuva Sandhya dwarakanath

  10. ಮಂಜುಳಮಿರ್ಲೆ says:

    ನಮಸ್ತೆ ಸರ್,
    ಆರೋಗ್ಯ ಪೂರ್ಣ ಸಮತೋಲಿತ ಆಹಾರ ಹಾಗೂ ಫಿಟ್ನೆಸ್ ಬಗ್ಗೆ ಒಂದು ಉತ್ತಮ ವೈಜ್ಞಾನಿಕ ಬರಹ. ಸುಂದರ ಹಾಗೂ ಸರಳವಾಗಿ ವಿವರಿಸುವ ಕಲೆ ಆನುವಂಶೀಯವಾಗಿ ದಕ್ಕಿಸಿಕೊಂಡ ತಮ್ಮ ಪುತ್ರ ಅದನ್ನು ವಿದೇಶದಲ್ಲಿರೂ ಮರೆಯದೆ ಚಂದದ ಕನ್ನಡದಲ್ಲಿ ಸೊಗಸಾಗಿ ವಿವರಿಸಿದ್ದಾರೆ. ಇಬ್ಬರಿಗೂ ಅಭಿನಂದನೆಗಳು ಸರ್

  11. Sandhya Dwarakanath says:

    Chaaru ishtu chennagi , maahitipoornavaagi kannadadalli barediruvudu nodidare, tandeyannu meerisuva haage kaanutte. Nanna preeti poorvaka abhinandanegalannu chaaruvige tilisi.

  12. Naga belur says:

    Priya charu, lekhana tumba chennagide. ಸರಾಗವಾಗಿ ಓದಿಸಿಕೊಂಡು ಹೋಗತ್ತೆ.
    ಇಲ್ಲಿಗೆ ಬಂದಾಗ ನೋಡೋಣ
    ಬೆಸ್ಟ್ ವಿಷಸ್.

  13. BALASUBRAMANYA NS says:

    Informative in simple terms.

  14. GOWTHAMI says:

    ಮಾಹಿತಿ ತುಂಬಾ ಮಹತ್ವಪೂರ್ಣವಾಗಿದೆ, ಪ್ರಸಕ್ತ ಕಾಲಕ್ಕೆ ಪ್ರಶಸ್ತವಾಗಿದೆ.

  15. ರೇಖಶ್ರೀ ಹೆಚ್. ಎಸ್.‌ says:

    ಮಾಹಿತಿಯು ಬಹಳ ಉಪಯುಕ್ತ ಹಾಗೂ ಅರ್ಥಪೂರ್ಣವಾಗಿದೆ

  16. Anonymous says:

    Usha Narasimhan

  17. Trinesha TR says:

    ತುಂಬಾ ಉಪಯುಕ್ತ ಮಾಹಿತಿ. ಧನ್ಯವಾದ

  18. ಚೆಂದವಾದ ಉಪಯುಕ್ತ ಲೇಖನ ಚಾರು.ಗೊತ್ತಿಲ್ಲದ ಎಷ್ಡೋ ವಿಚಾರಗಳು ತಿಳಿದಂತಾಯಿತು

  19. Anonymous says:

    ಅಗತ್ಯ ಮಾಹಿತಿಯನ್ನು ತಿಳಿಸಿಕೊಟ್ಟ ಚಾರು ಮಂಜು ರಾಜ್ ರವರಿಗೆ ಧನ್ಯವಾದಗಳು.

  20. Janhavi Rao says:

    ಅತ್ಯಂತ ಉಪಯುಕ್ತ ಮಾಹಿತಿ. ಸರಳ ವಾದ ವೈ ಜ್ಞಾನಿಕವಾದ ವಿವರಣೆ.ತಂದೆಯಂತೆ ಮಗನು ಉತ್ತಮ ಬರಹಗಾರ.
    ಕೃಷ್ಣನ ಆಶೀರ್ವಾದ annatha vagerali.
    ಶುಭಾಶಯಗಳು.

  21. ಮಂಜುನಾಥ್ ಸಿ ಟಿ says:

    ಆರೋಗ್ಯಕರ ಅಂಕಣ,
    ದೈಹಿಕ ಆರೋಗ್ಯದ ಒಳಗುಟ್ಟುಗಳು ಇಷ್ಟು ಬೇಗ ಪುಕ್ಕಟೆಯಾಗಿ ದೊರೆಯುವುದು ಅಪರೂಪ
    ಕಲಿತವರು ಕಲಿಸುವುದು ಹೃದಯವಂತಿಗೆ.
    ಇದೇ ವಿಷಯವನ್ನು ಕೋಚಿಂಗ್ ಕ್ಲಾಸ್ ನಲ್ಲಿ ಕಾಸ್ ಕೊಟ್ಟು ಕೇಳ್ತಾರೆ ನಮ್ಮ ಗುರುಗಳಂತೆ ಗುರುಪುತ್ರರೂ ಸುಗಂಧಿತ ಪುಷ್ಪ
    ಬಚ್ಚಿಟ್ಟರೂ ಪರಿಮಳವ ಹಿಡಿಯಲಾಗದು.
    ಅಕ್ಷರ ಸೇವೆ ಹಾಗೂ ಸರಳ ಜೀವನ ಸೂತ್ರ ತಂದೆಯಂತೆ ಸಿದ್ಧಿಸಿದೆ.
    ಗುರುಪುತ್ರರನ್ನು ತಾಯಿ ಸರಸ್ವತಿ ಸದಾ ಕಾಲ ಕೈಹಿಡಿದು ನಡೆಸಲಿ ಎಂದು ಪ್ರಾರ್ಥಿಸುತ್ತೇನೆ.

  22. Anonymous says:

    ಫಿಟ್ನೆಸ್ ಕುರಿತು ಸ್ವಾನುಭವದ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ. …. ಅಭಿನಂದನೆಗಳು ಹಾಗೂ ಶುಭಾಶಯಗಳು.

  23. Lakshminarasimha says:

    ಹಲವಾರು ಸಂದೇಹಗಳಿಗೆ ಮತ್ತು ತಪ್ಪು ಕಲ್ಪನೆಗಳಿಗೆ ಬಹಳ ಸೊಗಸಾಗಿ ಪರಿಹಾರಗಳನ್ನು ಚಾರು ತಿಳಿಸಿದ್ದಾರೆ. ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ.

  24. Suresh C says:

    ಆತ್ಮೀಯ ಚಾರು ಮಂಜುರಾಜ್ ರವರೇ,

    ಫಿಟ್ನೆಸ್ ಕುರಿತು ತಮ್ಮ ಬರೆಹ ನಿಜದಲ್ಲಿ ಮಿಥ್ಯ – ಭೆದಿಯೇ ಸರಿ. ಈಗ ಮಧ್ಯವಯಸ್ಕನಾಗಿರುವ ನಾನು ನಿಮ್ಮ ಹಾಗೆಯೇ ಹರೆಯದಲ್ಲಿ ಅಂಗಸಾಧನೆ ಮಾಡ ಹೊರಟವ. ಸೂಕ್ತ ಮಾರ್ಗದರ್ಶನವಿಲ್ಲದೆ, ಕೈಬಿಟ್ಟೆ . ಆನಂತರ ಹಲವು ಬಾರಿ ಪ್ರಯತ್ನಿಸಿದರೂ, ನಿರಂತರತೆ ಉಳಿಸಿಕೊಳ್ಳಲಾಗಳಿಲ್ಲ. ಕಾರಣ, ನಿರಂತರತೆ ಕಾಯ್ದುಕೊಳ್ಳುವುದರ ಮಹತ್ವದ ಬಗ್ಗೆ ಹಾಗೂ ಸರಳ ವೈಜ್ಞಾನಿಕ ರೀತಿಯಲ್ಲಿ ವ್ಯಾಯಾಮ ಮಾಡುವುದರ ಕುರಿತು ಸ್ಫುಟವಾಗಿ ತಿಳಿಸುವ ಬರೆಹಗಳು ಕನ್ನಡದಲ್ಲಿ ಸಿಗುತ್ತಿರಲಿಲ್ಲ. ಕನ್ನಡದಲ್ಲಿನ ಈ ರೀತಿಯ ವ್ಯಾಯಾಮ ಸಾಹಿತ್ಯದ ಅಲಭ್ಯತೆಯನ್ನು ಭರಿಸುವ ಒಂದು ಉತ್ತಮ ಮತ್ತು ಸಫಲ ಪ್ರಯತ್ನವನ್ನು ನೀವು ಮಾಡಿರುವಿರಿ. ಅದಕ್ಕಾಗಿ ಧನ್ಯವಾದಗಳು.
    ಬರೆಹದಲ್ಲಿ ತಮ್ಮ ವೈಯಕ್ತಿಕ ಅನುಭವವನ್ನು ವೈಜ್ಞಾನಿಕ ಸಂಗತಿಗಳ ಜತೆಗೆ ನಿರಾಯಾಸವಾಗಿ ಬೆಸೆದು, ವ್ಯಾಯಾಮವನ್ನು ಕೇವಲ ವಿಚಾರದ ಮಾತನ್ನಾಗಿಸದೆ ಪ್ರಯೋಗದ ವಸ್ತು ಹೌದೆಂಬುದನ್ನು ತಿಳಿಸಿದ್ದೀರಿ.
    ನಿಮ್ಮಲ್ಲಿ ಒಂದು ಮನವಿ. ಜಿಮ್ಮಿಗೆ ಹೋಗದೆ ಮನೆಯಲ್ಲೇ ವ್ಯಾಯಾಮ ಮಾಡುವ ಕುರಿತು ಬರೆಹವನ್ನು ಬರೆಯಬಹುದೇ?ಬರೆದಲ್ಲಿ ಬಹಳ ಉಪಕಾರವದೀತು!

  25. ಎನ್ ನಾಗರಾಜು says:

    ನೂಲಿನಂತೆ ಸೀರೆ ತಾಯಿಯಂತೆ ಮಗಳು ತಂದೆಯಂತೆ ಮಗ. ಆಹಿ ಏನು ಚಂದ ಚಾರುವಿನ ಸಂಪೂರ್ಣ ವೖಜ್ಞಾನಿಕ ಫಿಟ್ನೆಸ್ ಲೇಖನ.
    ದೇಹಕ್ಕೆ ಬೇಕಾಗುವ ಅಗತ್ಯ ಅನ್ನಾಂಗಾಂಶಗಳು ಖನಿಜಗಳು ಸರ್ಕರ ಪಿಷ್ಟಗಳು ಇತ್ಯಾದಿಗಳನ್ನು ಒದಗಿಸುವ ಆಹಾರವನ್ನು ಸೇವಿಸುವಂತೆ ನಮ್ಮ ಶರೀರ ಪ್ರೇರೇಪಿಸುತ್ತದೆ. ಇದನ್ನು ಸ್ಪೆಸಿಫಿಕ್ ಹಂಗರ್ ಎಂದು ಕರೆಯುತ್ತಾರೆ.
    ನಾವೇ ಸ್ವಯಂಪಾಕ ಸಿದ್ಧಪಡಿಸುವವರಾದರೆ ಇದನ್ನು ಮನಗಾಣಬಹುದು.ಅದರ ವಿವರಣೆಯನ್ನು ಚಾರು ಚಂದವಾಗಿ ವಿವರಿಸಿದ್ದಾನೆ. ಅನಗತ್ಯ ಬಾಯಿಚಪಲದ ಆಹಾರಗಳು ನಮ್ಮ ಆರೋಗ್ಯವನ್ನು ಹದಗೆಡಿಸುತ್ತವೆ.
    ಒಬೇಸಿಟಿಗೆ ಕಾರಣವನ್ನೂ ನಿರೂಪಿಸಿದ್ದಾನೆ. ಶರೀರದ ಆರೋಗ್ಯದ ಹೋಮಿಯೋಸ್ಟಾಟಿಕ್ ನಯಮವನ್ನೂ ನೀರೂಪಿಸಿದ್ದಾನೆ.
    ಚಾರು ಕನ್ನಡ ನುಡಿ ತೇರನ್ನ ನಿನ್ನ ವೖಜ್ಞಾನಿಕ ದೖಷ್ಟಿಯಲ್ಲಿ ಸಿಂಗರಿಸು ಎಂದು ಮನದುಂಬಿ ಹಾರೖಸುತ್ತೇನೆ.

  26. MURALIDHAR H K says:

    Proud of you Chaaru. Ur article enlightened me also. U have written many new things which are very much useful in the so called busy life nowadays.
    Good to read and adopt.
    God bless you and expect more from you

    • ಹರಿ ಪ್ರಸಾದ್ says:

      ಶಿಸ್ತನ್ನು ಕೇವಲ ವ್ಯಾಯಾಮದಲ್ಲಷ್ಟೇ ಅಲ್ಲ, ಆಹಾರದಲ್ಲೂ ರೂಡಿಸಿಕೊಳ್ಳಬೇಕು ಎಂದು ಸರಳವಾಗಿ ವಿವರಿಸಿದ್ದಾರೆ.

      ಪುಸ್ತಕಗಳನ್ನು ಓದಿಯೋ ಅಥವಾ ಇಂಟರ್ನೆಟ್ ಮುಖಾಂತರ ಸಂಪಾದಿಸಿದ ಜ್ಞಾನವನ್ನು (ರಸವನ್ನು) ತಮ್ಮದೇ ಆದ (ಬಾಟಲಿನಲ್ಲಿ) ಪದಗಳಲ್ಲಿ ಇತರರಿಗೆ ಹಂಚುವ ಲೇಖನಗಳನ್ನು ಓದಿ ಬೇಸರಿಸುತ್ತಿದ್ದ ಮನಕ್ಕೆ ಈತನ ಅನುಭವ ಆಧಾರಿತ ಮಾಹಿತಿ ಇಷ್ಟವಾಯಿತು.

      • MANJURAJ H N says:

        ನಿಮ್ಮ ಕಣ್ಣಮುಂದಿನ ಹುಡುಗ. ನಿಮ್ಮಿಂದಾಗಿ ಈಗವನು ಇಂಥ ಬೆರಗ !

        ಧನ್ಯವಾದ ಸರ್‌, ನಿಮ್ಮ ಆಶೀರ್ವಾದವೇ ಶ್ರೀರಕ್ಷೆಯವನಿಗೆ.

  27. SOMASHEKAR A K says:

    Super

  28. Shobha says:

    Manjuraj sir baraha oodida hage annistide. Barahada style nalli sir barahada reflection ede.adunika jeevanakke arogya kara upayuktha mahiti sikkide nice.

  29. Anonymous says:

    ಮಾಹಿತಿ ಹೃದ್ಯವಾಗಿದೆ.ಭಾಷೆ ಸರಳವಾಗಿದ್ದು ಜಿಮ್ ಬಗ್ಗೆ ನನಗಿದ್ದ ಹೆದರಿಕೆ ಮತ್ತು ಭ್ರಮೆಯನ್ನು ದೂರಮಾಡಿದೆ.

  30. Anonymous says:

    ಹೌದು ಫಿಟ್ ನೆಸ್ ಇತ್ತಿಚಿಗೆ ಆಕರ್ಷಕವಾಗಿ ಹಿಡಿದುಕೊಂಡು ಬಿಡುತ್ತದೆ ಪ್ರೈಮರಿ ಶಾಲೆ ಓದುವ ಮಕ್ಕಳು ಶರ್ಟ್ ಬಟನ್ ಬಿಚ್ಚಿಕೊಂಡು ತಿರುಗಾಡುತ್ತವೆ. ಲೇಖನ ಅರ್ಥಪೂರ್ಣ .

  31. MANJURAJ H N says:

    ಒಂದು ಪದ ತಿದ್ದುಪಡಿ: ಲೇಖನದ ಶೀರ್ಷಿಕೆಗೆ ಅನುಗುಣವಾದ ಚಿತ್ರವಿರುವ ನಂತರದ ಪ್ಯಾರಾದಲ್ಲಿ
    “ನಿಧಾನವಾಗಿ ನನಗೆ ಫುಡ್‌ ಕಾರ್ವಿಂಗ್ಸ್‌ ಮಾಯವಾಗತೊಡಗಿತು” ಎಂಬ ಸಾಲಿನಲ್ಲಿ ಬಂದಿರುವ
    ಫುಡ್‌ ಕಾರ್ವಿಂಗ್ಸ್‌ ಪದವನ್ನು ಟೈಪಿಸುವಾಗ ತಪ್ಪಾಗಿದೆ. “ಅದು ಫುಡ್‌ ಕಾರ್ವಿಂಗ್ಸ್‌ ಅಲ್ಲ; ಅದು ಫುಡ್ ಕ್ರಾವಿಂಗ್ಸ್‌”
    food cravings !

    ಈ ಫುಡ್‌ ಕ್ರಾವಿಂಗ್ಸ್‌ ಎಂದರೇನೆಂದು ಕೇಳಿದೆ:
    ಹಾಳೂ ಮೂಳೂ ತಿನ್ನುವುದು, ಬಾಯಿಚಪಲದ ತಿಂಡಿ ತಿನಿಸು ಎಂದರ್ಥವಂತೆ! ಈ ಅಕ್ಷರಸ್ಖಾಲಿತ್ಯಕ್ಕೆ ಕ್ಷಮೆಯಿರಲಿ.

  32. MANJURAJ H N says:

    ಎಲ್ಲರ ಅಭಿಪ್ರಾಯ, ಅನಿಸಿಕೆ ಮತ್ತು ಮೆಚ್ಚುಮಾತುಗಳನ್ನು ಓದಿದೆ.
    ತುಂಬಾ ಸಂತೋಷವಾಯಿತು. ಅನಂತ ಪ್ರಣಾಮಗಳು.

    ಇದರಿಂದ ಒಂದು ಪ್ಲಸ್ಸು ಮತ್ತು ಇನ್ನೊಂದು ಮೈನಸ್ಸು ಆದಂತಾಗಿದೆ:
    ಪ್ಲಸ್ಸೆಂದರೆ, ಚಾರು ತನ್ನ ಬಿಡುವಿನ ಸಮಯದಲ್ಲಿ ತನ್ನ ಅನುಭವಜನ್ಯ
    ವಿಚಾರ ಸಂಗತಿಗಳನ್ನು ಇನ್ನಷ್ಟು ಬರೆಯುವುದು; ಪ್ರಕಟಿಸಲು ಕಳಿಸುವುದು.

    ಮೈನಸ್ಸೆಂದರೆ, ಚಾರುವಿಗೆ ಮುಜುಗರವಾಗಿರುವುದು. ಏಕೆಂದರೆ ಅವನ
    ಸ್ವಭಾವ ಎಲ್ಲರಂತಲ್ಲ. ಇಪ್ಪತ್ತೈದರಲ್ಲೇ ಎಪ್ಪತ್ತೈದರ ತತ್ತ್ವಜ್ಞಾನಿ. ಅವನಿಗೆ
    ಹೊಗಳಿಕೆ, ಮೆಚ್ಚಿಕೆ, ಹೆಸರು ಫೋಟೊ ಬರುವುದು, ಹೆಸರಿಗಾಗಿ ಒದ್ದಾಡುವುದು
    ಮುಂತಾದ ಯಾವ ಲೌಕಿಕ ಉಪಾಧಿಗಳಲ್ಲಿ ಅವನಿಗೆ ಲವಲೇಶ ಆಸಕ್ತಿಯಿಲ್ಲ;
    ಸದ್ದು ಸುದ್ದಿ ಅವನಿಗೆ ಇಷ್ಟವಿಲ್ಲ. ತನ್ನ ಹಮ್ಮನು ಮೆರೆಸೋ ಹಂಬಲವು ಇಲ್ಲ !
    ಅತ್ಯಂತ ಸಮೀಪದಿಂದ ಅವನನ್ನು ಕಂಡವರಿಗೆ ಇದು ಚೆನ್ನಾಗಿ ಗೊತ್ತಿದೆ.

    ನಿಮ್ಮೆಲ್ಲರ ಕಣ್ಣಮುಂದಿನ ಹುಡುಗನವನು. ಈ ಬರೆಹವನ್ನು ಓದಿದ ನನ್ನ ಅತ್ಯಂತ
    ಹಿರಿಯ ಸನ್ಮಿತ್ರರೂ ಅಪರೂಪದ ಜೆನ್‌, ಸೂಫಿ, ಓಶೋ ಅಭಿಮಾನಿಯೂ ಆದ
    ಮೈಸೂರಿನ ಫಾಲ್ಕನ್‌ ಟೈರ್ಸ್‌ ಚಂದ್ರಶೇಖರ್‌ ಸರ್‌ ಅವರು “ಲೇಖನ ಓದಿ ಖುಷಿಯಾಯ್ತು.
    ನಮ್ಮ ಜೊತೆ ಗೊಜ್ಜು ಮಜ್ಜಿಗೆ ಹುಳಿ,ಸಾರು ಮುಂತಾದುವನ್ನು ಆಸ್ವಾದಿಸಿ ಬೆಳೆದ ಮಗು
    ಆಹಾರದ ಬಗ್ಗೆ ನಡೆಸಿರುವ ಆಳವಾದ ಅಧ್ಯಯನ ಹಾಗೂ ವಿವರಿಸಿರುವ ಶೈಲಿ ಚೆನ್ನಾಗಿದೆ.”
    ಎಂದು ವಾಟ್ಸಾಪಿಸಿದ್ದಾರೆ! ಚಂದ್ರು ಸರ್‌ ಅವರಂತೆ, ಇನ್ನೂ ಅನೇಕರು ವಾಟ್ಸಾಪಿಸಿ ಶ್ಲಾಘಿಸಿದ್ದಾರೆ.

    ಚಂದ್ರಶೇಖರರ ಈ ಮಾತಿನಲ್ಲಿ ವಿನೋದ ಬೆರೆತ ವ್ಯಂಗ್ಯವೂ ಇದೆ; ಅಭಿಮಾನದ ಮೆಚ್ಚುಗೆಯೂ ಇದೆ!!
    ಅಂದರೆ ಇಲ್ಲೆಲ್ಲೋ ನಮ್ಮ ಕಣ್ಣಮುಂದಿನ ಕೂಸು ಅಲ್ಲೆಲ್ಲೋ ಹೋಗಿ ಏನೇನೋ ಸಾಧನೆ ಮಾಡಿ
    ಇಂತಹುದನ್ನೆಲ್ಲಾ ಬರೆದು ಬೆರಗಾಗಿದ್ದಾನಲ್ಲ ಎಂಬ ಸಖೇದಾಶ್ಛರ್ಯ ಅವರದು.

    ಅನಿಸಿಕೆ, ಅಭಿಪ್ರಾಯ, ಹೃದಯತುಂಬಿದ ಹಾರೈಕೆ, ಸಂತಸಬೆರೆತ ಚಪ್ಪಾಳೆ ಎಲ್ಲವೂ ನಿಮ್ಮೆಲ್ಲರ
    ಮಾತುಗಳಲ್ಲಿವೆ. ನನ್ನ ಬರೆಹಗಳನ್ನು ಓದುವ ರೆಗ್ಯುಲರ್‌ ಓದುಗರು, ಆತ್ಮೀಯರು, ಸಂಬಂಧಿಕರು,
    ಸಹೋದ್ಯೋಗಿ ಸನ್ಮಿತ್ರರು, ಕುಟುಂಬಮಿತ್ರರು ಎಲ್ಲರೂ ಬಿಡುವು ಮಾಡಿಕೊಂಡು ನಿಮ್ಮ ಸಮಯ
    ಮೀಸಲಿಟ್ಟು ಓದಿ ಸುರಹೊನ್ನೆಯ ವೇದಿಕೆಯಲ್ಲೇ ಬರೆದು ಮುದ ತಂದಿದ್ದೀರಿ. ಎಲ್ಲರಿಗೂ ಚಾರು
    ಪರವಾಗಿ ಅನಂತಾನಂತ ಧನ್ಯವಾದ ಮತ್ತು ಸಪ್ರೇಮಪೂರ್ವಕ ವಂದನೆಗಳು.

    ಈ ಸಕಾರಾತ್ಮಕ ಮಾತುಗಳೆಲ್ಲ ಚಾರುವಿಗೆ ಆಶೀರ್ವಾದ ರೂಪದ ಹಾರಯಿಕೆಗಳಾಗಿ ಅವನ
    ಬೆಳವಿಗೆ ಇನ್ನಷ್ಟು ಮತ್ತಷ್ಟು ಪುಷ್ಟಿ ತರುವುದು ಖಂಡಿತ. ಇದೀಗ ಅವನು ನಿಮ್ಮೆಲ್ಲರ ಕಣ್ಮಣಿ.
    ಇನ್ನಾದರೂ ಅವನು ತನ್ನ ಬಿಡುವಿನ ಅವಧಿಯಲ್ಲಿ ತಾನು ಕಂಡುಂಡ ಸತ್ಯ ಮಿಥ್ಯಗಳನ್ನು ಈ
    ತೆರನಾಗಿ ಬರೆಹವಾಗಿಸಲಿ; ಕನ್ನಡದ ವೈಜ್ಞಾನಿಕ ಸಾಹಿತ್ಯಕ್ಕೆ ಕೊಡುಗೆಯಾಗಲಿ ಎಂದು
    ನಿಮ್ಮೆಲ್ಲರ ಮೂಲಕ ಒತ್ತಾಯಿಸುತ್ತಿದ್ದೇನೆ. ನಮಸ್ಕಾರ. ಎಲ್ಲಕಿಂತ ಮುಖ್ಯವಾಗಿ ಪ್ರಕಟಿಸಿದ
    ಸುರಹೊನ್ನೆಗೆ ಇನ್ನೊಮ್ಮೆ ನನ್ನ ಮನಃಪೂರ್ವಕ ವಂದನೆಗಳು.

  33. ಸಮತಾ ಆರ್ says:

    ತುಂಬಾ ಚೆನ್ನಾಗಿದೆ ಲೇಖನ..ಮಗನಿಗೆ ಅಭಿನಂದನೆಗಳನ್ನುತಿಳಿಸಿ

  34. ರೂಪ ಮಂಜುನಾಥ says:

    ಅಬ್ಬಾ! ಎಂಥ ದೃಢವಾದ ಮನಸ್ಸು ಸರ್ ಹುಡುಗನದ್ದು! ಪರದೇಶಗಳಿಗೆ ಹೋಗಿ ಬೇಡದ ಅಭ್ಯಾಸಗಳನ್ನ ರೂಢಿಸಿಕೊಳ್ಳುವವರ ಮಧ್ಯೆ ಚಾರು,ನನ್ನ ಭಾವನೆಯಲ್ಲಿ ಒಬ್ಬ ಅಪರೂಪದ ರತ್ನ! ಇಂಥ ಪುತ್ರ ತಂದೆತಾಯಿಯರ ಗರ್ವ .

  35. Ravi L H says:

    ಪ್ರಾರಂಭದಿಂದ ಕಡೆತನಕ ಓದಿಸಿಕೊಂಡು ಹೋಗುತ್ತದೆ ಲೇಖನದ ವಿಷಯ ಮತ್ತು ವಿಶ್ಲೇಷಣೆ. ಚಾರೂ ಬರವಣಿಗೆ ಸೊಗಸಾಗಿದೆ.❤❤❤

  36. Vijayashree k says:

    Very informative article

  37. Dr.Ganesh GS says:

    ತುಂಬಾ ಚೆನ್ನಾಗಿ ಮೂಡಿಬಂದಿದೆ ಲೇಖನ ಇನ್ನಷ್ಟು ಲೇಖನಗಳನ್ನು ಬರೆಯುವುದನ್ನು ಮುಂದುವರೆಸು ಚಾರು.

  38. ಎಂ. ಆರ್. ಆನಂದ says:

    ಫಿಟ್ ನೆಸ್ ಎಂದರೆ ಸರಿ ಅಥವಾ ತಪ್ಪು ಎಂದು ನಿಖರವಾಗಿ ಹೇಳಲಾಗದೆ ಗೊಂದಲಕ್ಕೆ ಈಡಾಗಿರುವ ನನ್ನಂತಹ ಅನೇಕರ ಕಣ್ಣು ತೆರಸುವ ಲೇಖನ.

  39. Dr. HARSHAVARDHANA C N says:

    Nice article sir,
    ತುಂಬಾ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದೀರ.
    ಫಿಟ್ನೆಸ್ ( ಧೈಹಿಕ ಆರೋಗ್ಯ ಕೂಡ ) ಇಂದಿನ ಅತೀ ವೇಗದ,,ಶ್ರಮವಿಲ್ಲದ, ಅಲಸ್ಯತನದಿಂದ ಕೂಡಿದ ಬದುಕಿಗೆ ಅತೀ ಅವಶ್ಯಕ.

    ಧನ್ಯವಾದಗಳು

  40. Anonymous says:

    Very nicegood information to today generation.

  41. Udayakumar.S. T. says:

    ತುಂಬಾ ಅದ್ಭುತವಾಗಿ ಕನ್ನಡದಲ್ಲಿ ಫಿಟ್ನೆಸ್ ಕುರಿತು ಲೇಖನ ಮೂಡಿಬಂದಿದೆ ಸರ್.. ತಮ್ಮ ಮಗ ಚಾರುಗೆ ನನ್ನ ಶುಭಾಶಯಗಳು

Leave a Reply to Sandhya Dwarakanath Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: