ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 2 :ಅಡಾಲಜ್ ವಾವ್

Share Button

ಅಡಾಲಜ್ ಸೋಪಾನ ಬಾವಿಗೆ ‘ವಾವ್ ‘ ಅನ್ನಿ

ಮಂಜು ಮುಸುಕಿದೆಯೆಂಬ ಕಾರಣಕ್ಕೆ ಬೆಂಗಳೂರಿನಿಂದ ಅರ್ಧ ಗಂಟೆ ತಡವಾಗಿ ಹೊರಟ ಇಂಡಿಗೋ ವಿಮಾನ ಮಧ್ಯಾಹ್ನ ಒಂದು ಗಂಟೆಗೆ  ನಮ್ಮನ್ನು ಅಹ್ಮದಾಬಾದ್ ಗೆ ತಲಪಿಸಿತು. ವಿಮಾನನಿಲ್ದಾಣಕೆಕ್ ಬಂದಿದ್ದ  ಟ್ರಾವೆಲ್ಸ್ 4 ಯು  ಸಂಸ್ಥೆಯ ಶ್ರೀ ಗಣೇಶ್ ಅವರು ನಮ್ಮನ್ನು ಮತ್ತಿತರ ಸಹಪ್ರವಾಸಿಗರನ್ನು,  ಬಸ್ಸಿನ ಮೂಲಕ  ಹೋಟೆಲ್ ಮೆಟ್ರೋ ಪಾರ್ಕ್ ಗೆ  ಕರೆದೊಯ್ದರು.  ಹೋಟೆಲ್ ನಲ್ಲಿ ಅಚ್ಚುಕಟ್ಟಾದ ಊಟ ಕೊಟ್ಟರು. ರೂಮಿನಲ್ಲಿ ನಮ್ಮ ಲಗೇಜುಗಳನ್ನಿರಿಸಿ, ನಾಲ್ಕು ಗಂಟೆಗೆ ಕೆಳಗೆ ಬರಲು ಹೇಳಿದರು.

ಮೊದಲನೆಯದಾಗಿ ಅಹ್ಮದಾಬಾದ್ ನಿಂದ 15 ಕಿ.ಮೀ ದೂರದಲ್ಲಿರುವ   ‘ಅಡಾಲಜ್  ಸ್ಟೆಪ್ ವೆಲ್’  ಎಂಬ ಮೆಟ್ಟಿಲುಗಳುಳ್ಳ ಸುಂದರವಾದ ಕಲ್ಯಾಣಿಗೆ ನಮ್ಮನ್ನು ಕರೆದೊಯ್ದರು.  ಅದ್ಭುತವಾದ ಕುಸುರಿಕಲೆಗಳ ಶಿಲ್ಪವೈಭವವನ್ನು ಹೊಂದಿದ ಪ್ರಾಕಾರವಿದು.  ಕೊಳಕ್ಕೆ ಮೂರು ಕಡೆಯಿಂದ ಮೆಟ್ಟಿಲುಗಳಿದ್ದು, ಆಷ್ಟಕೋನಾಕಾರದಲ್ಲಿ ಐದು ಮಹಡಿಗಳಿಂದ ಸುತ್ತುವರಿದಿದೆ. ಈ ಮಹಡಿಗಳಲ್ಲಿ ಅಲ್ಲಲ್ಲಿ ದೇವರ ವಿಗ್ರಹಗಳಿವೆ. ಇಸ್ಲಾಮ್ ಶೈಲಿಯ ವಾಸ್ತುಶಿಲ್ಪವೂ ಇದೆ. ಮೆಟ್ಟಿಲುಗಳನ್ನು  ಇಳಿಯುತ್ತಾ ಹೋದಾಗ ಕೊನೆಗೆ ವೃತ್ತಾಕಾರದ ಬಾವಿ ಕಾಣಸಿಗುತ್ತದೆ. ಅಂದಿನ ಕಾಲದಲ್ಲಿ, ಮಳೆಯ ಪ್ರಮಾಣಕ್ಕನುಗುಣವಾಗಿ, ನೀರಿನ ಮಟ್ಟ ಹೆಚ್ಚಿರುತ್ತಿತ್ತಂತೆ. ಪ್ರಾಕಾರದ ಒಳಗೆ ತಂಪಾಗಿರುತ್ತಿದ್ದುದರಿಂದ ಜನರು ನೀರನ್ನು ಒಯ್ಯುಲೆಂದು  ಬಂದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಮಾಡುತ್ತಾ ಸಂತೋಷಿಸುತ್ತಿದ್ದರಂತೆ.

ಅಡಾಲಜ್  ಸ್ಟೆಪ್ ವೆಲ್

ಸ್ಥಳೀಯ ಭಾಷೆಯಲ್ಲಿ ಕಲ್ಯಾಣಿಯನ್ನು ‘ವಾವ್ ‘ ಎನ್ನುವುದರಿಂದ ಈ ಬಾವಿಗೆ ‘ಅಡಾಲಜ್ ವಾವ್’ ಅಂತಲೂ ಕರೆಯುತ್ತಾರೆ.   ಈ ಕೊಳವನ್ನು 1498 ರಲ್ಲಿ , ಅಂದಿನ  ವಘೇಲ ವಂಶದ ರಾಜ ರಣವೀರ್ ಸಿಂಗ್, ತನ್ನ ರಾಜ್ಯದ ಜನರಿಗೆ ನೀರಿನ ಅಗತ್ಯಕ್ಕಾಗಿ ಕಟ್ಟಿಸಲು ಆರಂಭಿಸಿದನಂತೆ. ಕೆಲಸ ಪೂರ್ಣವಾಗುವ ಮೊದಲು ಮುಸ್ಲಿಂ ರಾಜ ಮೊಹಮ್ಮದ್ ಬೇಗ್ದನು ಆಕ್ರಮಿಸಿದನು. ಆ ಯುದ್ಧದಲ್ಲಿ ವಘೇಲ ರಾಜನು ಮರಣ ಹೊಂದಿದ. ಯುದ್ಧದಲ್ಲಿ ಗೆದ್ದ ಮೊಹಮ್ಮದ್ ಬೇಗ್ದನು, ಬಹಳ ರೂಪಸಿಯಾಗಿದ್ದ ರಾಣಿ ರುದಾಬಾಯಿಯನ್ನು ತನ್ನನ್ನು ಮದುವೆಯಾಗಬೇಕೆಂದು  ಪೀಡಿಸಿದ. ರುದಾಬಾಯಿಯು ಆಗಿನ ಕಾಲದ ‘ಸತಿ’ ಪದ್ಧತಿಯಂತೆ, ಪತಿಯ ಮರಣಾನಂತರ ಪ್ರಾಣತ್ಯಾಗ ಮಾಡಲು ನಿರ್ಧರಿಸಿದ್ದಳು. ಆದರೆ, ತನ್ನ ಗಂಡನು  ರಾಜ್ಯದ ಜನರಿಗೆ ಉಪಯೋಗವಾಗಲೆಂದು ಕಟ್ಟಿಸಲು  ಆರಂಭಿಸಿದ್ದ ಕಲ್ಯಾಣಿಯ ಕೆಲಸವನ್ನು ಪೂರ್ಣಗೊಳಿಸಬೇಕೆಂಬ ಸದುದ್ದೇಶವನ್ನು ಹೊಂದಿದ್ದಳು .  ಹಾಗಾಗಿ ಆಕೆಯು ತಾನು ಮೊಹಮ್ಮದ್ ಬೇಗ್ದನನ್ನು ಮದುವೆಯಾಗುವೆನೆಂದೂ, ಆದರೆ, ಮೊದಲು ಕಲ್ಯಾಣಿಯ ಕೆಲಸ ಸಂಪೂರ್ಣವಾಗಬೇಕೆಂದೂ ಶರತ್ತು ವಿಧಿಸುತ್ತಾಳೆ. ರುದಾಬಾಯಿಯ ಚೆಲುವಿಗೆ ಮನಸೋತಿದ್ದ ಬೇಗ್ದನು, ಷರತ್ತಿಗೆ  ಒಪ್ಪಿ  ಒಂದು ವರ್ಷದಲ್ಲಿಯೇ ಕಲ್ಯಾಣಿಯನ್ನು ಕಟ್ಟಿಸುವ ಕೆಲಸವನ್ನು  1499 ರಲ್ಲಿ  ಪೂರ್ಣ ಮಾಡಿ, ರಾಣಿಯ ಬಳಿ ತನ್ನನ್ನು ವಿವಾಹವಾಗಲು ನೆನಪಿಸುತ್ತಾನೆ. ಆದರೆ, ರುದಾಬಾಯಿಯು ತನ್ನ ಉದ್ದೇಶ ನೆರವೇರಿದ ಮೇಲೆ ಕೊಳಕ್ಕೆ ಬಿದ್ದು ಪ್ರಾಣತ್ಯಾಗ ಮಾಡುತ್ತಾಳೆ. ದಂತಕಥೆಯ ಪ್ರಕಾರ, ಬೇಗ್ದನು, ಕೊಳವನ್ನು ನಿರ್ಮಿಸಿದ ಐದು ಜನ ಶಿಲ್ಪಿಗಳನ್ನು ಕರೆಸಿ, ಇದೇ ರೀತಿಯ ಇನ್ನೊಂದು ಕೊಳವನ್ನು ಕಟ್ಟಲು ನಿಮ್ಮಿಂದ ಸಾಧ್ಯವೇ ಎಂದು ಪ್ರಶ್ನಿಸುತ್ತಾನೆ. ಅವರುಗಳು ‘ಸಾಧ್ಯ’ ಎಂದು ಉತ್ತರಿಸಿದಾಗ,  ಇಂತಹ ಅದ್ಭುತ ಕಲಾಕೌಶಲವುಳ್ಳ ಇನ್ನೊಂದು ಕೊಳ ನಿರ್ಮಾಣವಾಗಬಾರದೆಂದು ಆ ಶಿಲ್ಪಿಗಳನ್ನು ಕೊಲ್ಲಿಸಿದನಂತೆ!

ಈಗ ಬಾವಿಗೆ ತಂತಿ ಜಾಲರಿಯನ್ನು ಹಾಕಿದ್ದಾರೆ. ಅಲ್ಲಿಂದ ಮೇಲೆ ನೋಡುವಾಗ ಆಕಾಶ ಕಾಣಿಸುತ್ತದೆ. ಸೂರ್ಯನ ಕಿರಣಗಳು ಈ ಪ್ರಾಕಾರದ ಹೆಚ್ಚಿನ ಭಾಗಕ್ಕೆ ನೇರವಾಗಿ ಬೀಳದ ಕಾರಣ ಕೊಳದ ಆಸುಪಾಸಿನ ವಾತಾವರಣ ತಂಪಾಗಿರುತ್ತದೆ.  ಈ ಬಾವಿಯನ್ನು, ಅದರ ಪ್ರಾಕಾರವನ್ನೂ ನೋಡಿದಾಗ ನಾವು  ‘ವಾವ್’ ಎಂದು ಉದ್ಗರಿಸುತ್ತೇವೆ!

ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆhttp://surahonne.com/?p=30475

-ಹೇಮಮಾಲಾ.ಬಿ
(ಮುಂದುವರಿಯುವುದು)

11 Responses

  1. sudha says:

    i have also seen one

  2. ಬಿ.ಆರ್.ನಾಗರತ್ನ says:

    ನಾವು ನಿಮ್ಮ ಪ್ರವಾಸದ ಬರಹಕ್ಕೆ ವಾವ್ ಎನ್ನುತ್ತಾ ಮುಂದೆ ಓದಲು ಸಜ್ಜಾಗಿದ್ದೇವೆ ಹೇಮಾ.

    • Hema says:

      ಬರಹವನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿರುವ ನಿಮಗೆ ಅನಂತ ಧನ್ಯವಾದಗಳು.

  3. ಶಂಕರಿ ಶರ್ಮ, ಪುತ್ತೂರು says:

    ವಾವ್….ಹಿಂದಿನಕಾಲದ ಅತ್ಯದ್ಭುತ ಕಲಾನೈಪುಣ್ಯತೆಯನ್ನು ನೋಡುವ ಭಾಗ್ಯವು ಲಭಿಸುವುದೇ ನಮ್ಮ ಪುಣ್ಯ! ಸೊಗಸಾದ ನಿರೂಪಣೆ ಮಾಲಾ..ಧನ್ಯವಾದಗಳು.

  4. Krishnaprabha says:

    ಚಂದದ ಲೇಖನ…ವಾವ್ …..

  5. ನಯನ ಬಜಕೂಡ್ಲು says:

    ಬ್ಯೂಟಿಫುಲ್. ಇತಿಹಾಸದ ಮಾಹಿತಿಗಳನ್ನೂ ಒಳಗೊಂಡ ಪ್ರವಾಸ ಕಥನ ತುಂಬಾ ಚೆನ್ನಾಗಿದೆ.

  6. Anonymous says:

    ಚೆನ್ನಾಗಿದೆ. ಪುನಃ ಗುಜರಾತ್ ನೆನಪು ಮರುಕಳಿಸುತಿದೆ.

  7. Hema says:

    ಬರಹವನ್ನು ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು .

  8. VeenaTN says:

    Neevu baredu kondu hogiruva reethi Thumba Chennagide, oadugaranna haage seledukondu hoguthade.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: