ವಸುಧೇಂದ್ರರ “ತೇಜೋ ತುಂಗಭದ್ರಾ”.
ಕೊರೋನ ಕೊಟ್ಟ ಗೃಹವಾಸದ ಓದಿನ ಶುಭ ಹೊತ್ತಿನಲಿ ಪ್ರಾರಂಭವಾದ ತೇಜೋ ತುಂಗಭದ್ರಾ ಯಾತ್ರೆ ನಿಜಕ್ಕೂ ಕಣ ಕಣವನ್ನೂ ಮುಟ್ಟಿ ಮೂಕವಿಸ್ಮಿತಳಾಗುವಂತೆ ಮಾಡಿದೆ. ತೇಜೋ ತುಂಗಭದ್ರಾ 1492-1518ರ ವರೆಗಿನ ಲಿಸ್ಬನ್, ವಿಜಯನಗರ, ಗೋವಾದ ಇತಿಹಾಸವನ್ನು ಸಾರಿ ಹೇಳುವ ಮೈನವಿರೇಳಿಸುವ ಕಾದಂಬರಿ.ಇದರಲ್ಲಿ ಬೇರೆ ಬೇರೆ ದೇಶವಾಸಿಗಳು ಪಾತ್ರಧಾರಿಗಳಾಗಿ ಅವರ ಜೀವನಕ್ರಮ, ಮನಸ್ಸಿನ ತಳಮಳ,ಏರಿಳಿತಗಳು ಅಲೆಗಳಂತೆ ತಮ್ಮ ಆಕಾರ ಕೊಡುತ್ತಲೇ ನದಿಗುಂಟ ಚಲಿಸಿವೆ.
ತೇಜೋ ತುಂಗಭದ್ರದಲ್ಲಿ ಏನೇನೆಲ್ಲಾ ಇವೆ?ಏನೇನೆಲ್ಲಾ ಇಲ್ಲ?ಧರ್ಮ,ಆಚಾರ, ಸಂಸ್ಕೃತಿ, ಸಂಪ್ರದಾಯ, ವಾಣಿಜ್ಯ, ಪ್ರೀತಿ, ಕರುಣೆ, ಪ್ರೇ
ಜಲಮಾರ್ಗವನ್ನು ಕಂಡುಹಿಡಿದ ವಾಸ್ಕೋ ಡ ಗಾಮ ,ಕಡಲಯಾನ, ಯಾತ್ರೆಯಲ್ಲಾಗುವ ಅನುಭವಗಳು, ಆಹಾರಕ್ರಮ ಇವುಗಳನ್ನೆಲ್ಲಾ ಓದುವಾಗ ನಿಜಕ್ಕೂ ಇತಿಹಾಸವನ್ನು ಹತ್ತಿರದಿಂದ ಕಾಣುವಷ್ಟು ಅತ್ಯಂತ ಹೃದ್ಯಭಾಷೆಯಲ್ಲಿ ಕಟ್ಟಿಕೊಟ್ಟಿಕೊಟ್ಟಿದ್ದಾರೆ. ಈ ಕಾದಂಬರಿ ಬರೆಯಲು ವಸುಧೇಂದ್ರರು ನಡೆಸಿದ ಸಂಶೋಧನೆ, ಅಧ್ಯಯನ ಹಾಗೂ ಅದನ್ನು ನಮಗೆ ಉಣಬಡಿಸಿದ ವೈಖರಿ ಹಾಗೂ ಶ್ರದ್ಧೆಯ ಬಗ್ಗೆ ಹೇಳುವುದಾದರೆ ಚರಿತ್ರೆಯ ಕೆಲವು ಪುಟಗಳನ್ನೇ ಆತ್ಮೀಯವಾಗಿ ತೆರೆದಿಟ್ಟಿದ್ದಾರೆ.
ಪುಟ ಪುಟಗಳಲ್ಲೂ ನಮ್ಮನ್ನು ತಟ್ಟುವ ವಿಶಿಷ್ಠ ಅನುಭವಗಳು,ಕರುಣೆಯಿಲ್ಲದ ರಾಜರು, ವ್ಯವಸ್ಥೆಯ ಹುದುಲಲ್ಲಿ ಸಿಲುಕಿ ಬಲಿಯಾಗುವ ದುರ್ಬಲರ ಯಾತನೆಗಳು ಇವುಗಳನ್ನೆಲ್ಲಾ ಎದೆಗಿಳಿಸಿ ಮನದಲ್ಲಿ ಉಳಿಯುವ ಹಾಗೆಯೂ ಪದೇ ಪದೇ ಕಾಡುವಂತೆಯೂ ಮಾಡಿರುವುದು ತೇಜೋ ತುಂಗಭದ್ರಾದ ಗೆಲುವೆಂದರೇ ಅಕ್ಷರಶಃ ಜೈಕಾರ ಹೇಳಲೇಬೇಕು.
ಭೀಕರ ಬೀಜ ಬಿತ್ತಿರುವ ಕೊರೋನಾದ ಭೀತಿಯ ನೆರಳಿನಲ್ಲಿದ್ದರೂ ಓದೆಂಬ ಧ್ಯಾನಸ್ಥ ಸ್ಥಿತಿಯಲ್ಲಿ ತೇಜೋ ತುಂಗಭದ್ರಾದೊಳಗೆ ಮುಳುಗಿದ್ದಾಗ ಗೃಹವಾಸ ನಿಜಕ್ಕೂ ತ್ರಾಸೆನಿಸಲಿಲ್ಲ.ಈ ಮೇರು ಕೃತಿಯ ಪ್ರತಿ ಪುಟಗಳ ಬಗೆಯೂ ಬರೆಯಬಹುದು.ಆದರೆ ಓದಿನಲ್ಲಿ ಸಿಗುವ ಸುಖ ಓದಿಯೇ ಸವಿಯಬೇಕು.ಅರಿವು ಮತ್ತು ಆಳ ಈ ಎರಡೂ ಯಥೇಚ್ಛವಾಗಿ ಮೇಳೈಸಿರುವ ಈ ಕಾದಂಬರಿಯಲ್ಲಿ ಸುಮಾರು ನಾನೂರ ಐವತ್ತೊಂದು ಪುಟಗಳಿವೆ.ಮುನ್ನೂರ ಎಂಭತ್ತು ರೂಪಾಯಿ ಬೆಲೆಯಾಗಿದ್ದು ಇದೊಂದು ಅಧ್ಯಯನ ಯೋಗ್ಯ ಮತ್ತು ಸಂಗ್ರಹ ಯೋಗ್ಯ ಕೃತಿಯೆಂಬುದನ್ನು ಹೆಮ್ಮೆಯಿಂದ ಹೇಳಬಹುದಾಗಿದೆ.
ವಸುಧೇಂದ್ರರ ಕೃತಿಯ ಕುರಿತು ವಿಮರ್ಶೆ ಬರೆಯುವಷ್ಟು ನಾನು ಪ್ರಬುದ್ಧಳಲ್ಲ.ಬರೆದ ಸಾಲುಗಳಷ್ಟೂ ಓದು ಕೊಟ್ಟ ಅನಿಸಿಕೆಯಷ್ಟೆ.ಓದಲೇ ಬೇಕಾದ ತೇಜೋ ತುಂಗಭದ್ರಾ ವಸುಧೇಂದ್ರರು “ಇತಿಹಾಸವೆಮಗೆ ಗುರು” ಎನ್ನುತ್ತಲೇ ಕನ್ನಡ ಪುಸ್ತಕ ಪ್ರೇಮಿಗಳಿಗೆ ಕೊಟ್ಟ ಬಂಗಾರದ ತುಣುಕು.
-ಸುನೀತ ಕುಶಾಲನಗರ.
Sundar review. Lekhakara shrama saartakavadantide. Ibbarigoo abhinandanegalu….
ಸೊಗಸಾದ ಕೃತಿ ಪರಿಚಯ..ನನಗೂ ಈ ಪುಸ್ತಕವನ್ನು ಕೊಂಡು ಓದಬೇಕು.
Well written sunitha..waiting for book shops to open..will definitely buy n read
ಈ ಪುಸ್ತಕದ ಕುರಿತಾಗಿ ಹಲವರ ವಿಮರ್ಶೆ ಓದಿದೆ, ಇದೂ ಕೂಡ ವಸುಧೇಂದ್ರರ ಪುಸ್ತಕದ ಕುರಿತಾಗಿ ಕುತೂಹಲ ಹುಟ್ಟಿಸುವಂತಹ ಉತ್ತಮ ವಿಮರ್ಶೆ
ಉತ್ತಮ vimarshe
ನಿಮ್ಮ ವಿಮರ್ಶೆ ನನ್ನಲ್ಲೂ ಪುಸ್ತಕ ಓದುವಂತೆ ಮಾಡಿದೆ…
ವಸುಧೇಂದ್ರರ ಕೃತಿಗಳಲ್ಲಿ ವಿಶೇಷತೆಗಳಿದ್ದೇ ಇರುತ್ತವೆ. ಅವರ ಹೆಚ್ಚಿನ ಪುಸ್ತಕಗಳನ್ನು ಓದಿರುವೆ. ಅವರದೊಂದು ಕೃತಿ ಪರಿಚಯ ಇಷ್ಟವಾಯಿತು..ಧನ್ಯವಾದಗಳು.