ಟಿವಿ ಸೀರಿಯಲ್ ಗಳೂ ಮನೆಯಲ್ಲಾಗುವ ತೊಡಕುಗಳೂ..

Share Button


ಟಿವಿ ಸೀರಿಯಲ್ ನಿಂದಾಗಿ ಮನೆಯಲ್ಲಿನ ಸಂಬಂಧಗಳು ಕೆಡುತ್ತವೆಯೆ? ಬಹುಶ: ಹೌದು ಎಂದು ಹೇಳಬೇಕಾಗುತ್ತದೆ ಏಕೆಂದರೆ ಹೆಚ್ಚಾಗಿ ಮನೆಯಲ್ಲಿ ಇರುವರು ಮಹಿಳೆಯರು ಸಮಯ ಸಿಕ್ಕಾಗ ಧಾರಾವಾಹಿಗಳನ್ನು ಪ್ರಸಾರವಾಗುವ ವೇಳೆಯಲ್ಲಿ ಅವುಗಳನ್ನು ನೋಡುತ್ತಾ ಅದಕ್ಕೆ ಎಷ್ಟು ವ್ಯಸನಿಗಳಾಗಿರುತ್ತಾರೆ ಏಕೆಂದರೆ ಅವರು ಅವರಿಗೆ ಅದು ಒಂದು ದಿನ ತಪ್ಪಿದರು  ಏನೋ ಕಳೆದುಕೊಂಡಂತಾಗುತ್ತದೆ ನೋಡದಿದ್ದರೆ ಚಡಪಡಿಸುತ್ತಾರೆ. ಅದು ನಮ್ಮ ಮನೆಯಲ್ಲಿ ನಡೆದಿರುವ, ನಡೆಯುತ್ತಿರುವ ಘಟನೆಗಳನ್ನು ಎನ್ನುವಂತೆ ಉತ್ತಮ ಯಾರಾಗಿರುತ್ತಾರೆ. ಕೆಲವೊಮ್ಮೆ ಅದರಲ್ಲಿ ಸಂತೋಷದ ಕ್ಷಣಗಳನ್ನು ಅವರ ಮುಖದಲ್ಲಿ ನಗು ಅಲ್ಲಿ ದುಃಖದ ಸನ್ನಿವೇಶಗಳಿದ್ದರೆ ಇವರಿಗೂ ಸುಖವನ್ನು ಅನುಭವಿಸುತ್ತಾರೆ. ಗೆಳೆಯರು ಅಥವಾ ಗೆಳತಿಯರ ಸೇರಿದಾಗ ಸಭೆ-ಸಮಾರಂಭ ಬಸ್ಸುಗಳಲ್ಲಿ ಪ್ರಯಾಣಿಸುವ ಬಗ್ಗೆ ಮಾತನಾಡುತ್ತಾರೆ.

ನಿಜ ಜೀವನದ ಪಾತ್ರಗಳೇನು ಎಂಬಂತೆ ಅವುಗಳೊಂದಿಗೆ ಇವರು ತಮ್ಮ ಅಸ್ತಿತ್ವವನ್ನು ತಳಕು ಹಾಕಿಕೊಂಡು ಇರುತ್ತಾರೆ ಅವರ ಕಷ್ಟಗಳಲ್ಲಿ ಇವರ ಜೀವನದಲ್ಲಿ ನಡೆಯುತ್ತಿರುವಂತೆ ಬೇರೆಯೇ ಲೋಕಕ್ಕೆ ಹೋಗಿರುತ್ತಾರೆ. ಧಾರಾವಾಹಿಯಲ್ಲಿ ನಾಯಕಿ, ನಾಯಕರು ಹಾಕಿಕೊಂಡಿರುವ ಉಡುಪುಗಳು ಸೀರೆಗಳು ಆಭರಣಗಳನ್ನು ನೋಡಿ ತಾವು  ಹಾಗೆ ಅಲಂಕಾರ ಮಾಡಿಕೊಳ್ಳಬೇಕು ಎಂದು ಗಂಡನ ಬಳಿ ಹಣಕ್ಕಾಗಿ ಪೀಡಿಸುವ ಹೆಂಡತಿಯರು ಇರಬಹುದು. ಗೃಹಿಣಿಯರು ಹೊರಗೆ ಹೋಗಲು ಅವಕಾಶ ಇಲ್ಲದಿರುವಾಗ ಅವರ ನೋವು ದುಃಖವನ್ನು ಮರೆಸುವ (ಬರಿಸುವ) ಒಂದು ಸಾಧನವಾಗಿದೆ. ಟಿವಿ ಸೀರಿಯಲ್ ಆದರೆ ಅವರು ಅದರ ಮೇಲೆ ಗಮನವನ್ನು ಕೇಂದ್ರೀಕರಿಸಿ ಮನೆಯ ಕೆಲಸಗಳನ್ನು ಸರಿಯಾಗಿ ಮಾಡದೆ ಮನೆಯ ಆಗುಹೋಗುಗಳ ಬಗ್ಗೆ ವಿಚಾರ ಮಾಡಲು ಆಗದೇ  ಮಕ್ಕಳ ವಿದ್ಯಾಭ್ಯಾಸ ಅವರ ಆರೋಗ್ಯದ ಕಡೆಗೆ ಗಮನ ಹರಿಸಲಾಗುವುದಿಲ್ಲ.ಇದರಿಂದಾಗಿ ಮನೆಯಲ್ಲಿ ಮಕ್ಕಳು ಹಿರಿಯರ ಜೊತೆ ಕಾಲ ಕಳೆಯಲಾಗದೆ ಅವರ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳದೆ ಅವರು ಏನು ಹೇಳಿದರು ನಾವು ಏನೋ ತಿಳಿದು ನಾವು  ಇನ್ನೊಂದು ತಿಳಿದು ಅವರ ಬಗ್ಗೆ  ಮಾತನಾಡುತ್ತೇವೆ.

ಇದರಿಂದ ಕೇಳಿದವರಿಗೆ ಇರಿಸು -ಮುನಿಸು ಆಗುತ್ತದೆ. ಮಾತುಗಳ ಮಧ್ಯೆ ಅರ್ಥ ವ್ಯತ್ಯಾಸವಾಗಿ ಮನಸ್ಸುಗಳ ನಡುವೆ ಬಿರುಕು ಉಂಟಾಗಿ ಚಿಕ್ಕ ಚಿಕ್ಕ ವಿಷಯಗಳು ಕೂಡ ದೊಡ್ಡದಾಗುತ್ತದೆ ಹಾಗಾಗಿ ನಿಜಜೀವನದ ಸನ್ನಿವೇಶವೇ ಬೇರೆ ಕಾಲ್ಪನಿಕ ಜೀವನವೇ ಬೇರೆ  ಎಂದು ತಿಳಿಯಬೇಕು. ಧಾರಾವಾಹಿಗಳನ್ನು ಕೇವಲ ಮನರಂಜನೆಗಾಗಿ ನೋಡಬೇಕೇ ಹೊರತು ಅದನ್ನು ಹೆಚ್ಚಾಗಿ ವಾಸ್ತವ ಜೀವನಕ್ಕೆ ಅಳವಡಿಸಿಕೊಳ್ಳಲು ಹೋಗಬಾರದು ಸಮಯಸಿಕ್ಕಾಗ ನೋಡುತ್ತಾ ಅದರ ಜೊತೆಯಲ್ಲಿ ಗೊತ್ತಿರುವ ಕರಕುಶಲ ಕಲೆಗಳನ್ನು ಹೆಚ್ಚು ಹೆಚ್ಚು ಬಳಸುವುದು ಪುಸ್ತಕಗಳನ್ನು ಓದುವುದು. ಮನೆಯಲ್ಲಿ ಎಲ್ಲರ ಜೊತೆ ಕೂತು ಮಾತನಾಡುವುದು ಹೀಗೆ ಮಾಡಿದರೆ ಸಂಬಂಧಗಳು ಉಳಿಯುತ್ತವೆ. ಸಮಯದ ಸಾರ್ಥಕತೆಯೂ ಕೂಡ ಆಗುತ್ತದೆ. ಮನೋರಂಜನೆಗಾಗಿ ಸ್ವಲ್ಪ ಸಮಯ ಮೀಸಲಿಟ್ಟರೆ ತಪ್ಪಲ್ಲ ಆದರೆ ಸಂಪೂರ್ಣವಾಗಿ ಅದರಲ್ಲಿ ಮಗ್ನರಾಗಬಾರದು.

ಹೊರಗಡೆ ಹೋಗಿ ದುಡಿದು ಬಂದ ಪೋಷಕರಿಗೆ, ಶಾಲೆಯಿಂದ ಬಂದ ಮಕ್ಕಳ ಜೊತೆ ಸ್ವಲ್ಪ ಸಮಯ ಕಳೆದು ಅವರ ದಿನಚರಿ ಹೇಗಿತ್ತು ದಿನದಲ್ಲಿ ಏನು ಆಯಿತು ಎಂದೂ, ಹೊರಗಡೆ ಹೋಗಿ ದುಡಿದು ಬಂದ ಗಂಡನಿಗೆ ಶಾಲೆಯಿಂದ ಬಂದ ಮಕ್ಕಳ ಜೊತೆ ಸ್ವಲ್ಪ ಸಮಯ ಕಳೆದು ಅವರ ದಿನಚರಿ ಹೇಗಿತ್ತು ದಿನದಲ್ಲಿ ಏನು ಆಯಿತು ಎಂದು ಕೇಳಿದಾಗ ಅವರಿಗೂ ಕೂಡ ಸಂತೋಷವಾಗುತ್ತದೆ. ಮನಸುಗಳು ಅರಳುತ್ತವೆ ಅದರ ಹೊರತು ಅವರನ್ನು ವಿಚಾರಿಸದೇ ಕೇವಲ ಟಿವಿ ನೋಡುವುದರಲ್ಲಿ ಮಗ್ನರಾದರೆ.  ಇರುವು ಸಂಬಂಧಗಳು ಕೆಡುತ್ತವೆ. ಸಂಬಂಧಗಳ ಬೆಲೆ ಉಳಿಯುವುದಾದರೂ ಹೇಗೆ ಕೊಂಚ ಯೋಚಿಸಿ.

-ವಿದ್ಯಾ ಶ್ರೀ ಬಿ. ಬಳ್ಳಾರಿ

2 Responses

  1. ನಯನ ಬಜಕೂಡ್ಲು says:

    ಸಕಾಲಿಕ ಬರಹ. ಇತ್ತೀಚೆಗೆ ಬರುವ ಸೀರಿಯಲ್ ಗಳಗಂತೂ ಅಸಂಬದ್ಧ, ಮನೆಹಾಳು ಐಡಿಯಾ ಗಳಿಂದ ತುಂಬಿ ತುಳುಕಾಡುವಂತದ್ದು

  2. Shankari Sharma says:

    ಅತಿಯಾದರೆ ಅಮೃತವೂ ವಿಷವಾಗುವಂತಾಗಿದೆ ಈ ಟಿ.ವಿ ಸೀರಿಯಲ್ ವೀಕ್ಷಣೆ. ಸ್ವಲ್ಪ ಒಳ್ಳೆಯ ಕಾರ್ಯಕ್ರಮಗಳು ಇವೆಯೇನೋ ಎಂದು ಹುಡುಕುವುದೇ ಕಷ್ಟವಾಗ್ತಾ ಇದೆ. ಸಕಾಲಿಕ ಬರಹ ಚೆನ್ನಾಗಿದೆ.

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: