ಭಾರತೀಯ ನೃತ್ಯಕ್ಕೆ ’ವಿದೇಶಿ’ ಹೆಜ್ಜೆ

Share Button

ಹಲವರು ಪಾಶ್ಚಾತ್ಯ ನೃತ್ಯಕ್ಕೆ ಮಾರುಹೋಗುವುದು ಸಾಮಾನ್ಯ. ಆದರೆ, ಪಾಶ್ಚಾತ್ಯರೇ ಭಾರತೀಯ ನೃತ್ಯಕಲಿತರೆ? ಹಾಗೆ ಕಲಿತ ನೃತ್ಯವನ್ನುಭಾರತೀಯ ಪ್ರತಿಭೆಗಳಂತೆಯೇ ಪ್ರಸ್ತುತಪಡಿಸಿದರೆ?ಇದಕ್ಕೆ ಸಂಬಂಧಿಸಿದ ಕುತೂಹಲವನ್ನುತಣಿಸುವ ಹಾಗೆಯೇಈ ಸಲದ ಲಕ್ಷದೀಪೋತ್ಸವ ಕಂಗೊಳಿಸಿತು.ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್.ಡಿ.ಎಂ ಪೌಢ ಶಾಲಾ ಆವರಣದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಸಂಭ್ರಮಕ್ಕೆ ಸಿದ್ಧಪಡಿಸಿರುವ ವಸ್ತುಪ್ರದರ್ಶನ ಮಂಟಪದಲ್ಲಿ ಜರ್ಮನಿಯ ಕಲಾವಿದರು ಭರತನಾಟ್ಯ ಸೇರಿದಂತೆ ದೇಶದ ವಿವಿಧ ರಾಜ್ಯಗಳ ದೇಶೀಯ ಕಲೆಗಳನ್ನು ಪ್ರತಿನಿಧಿಸುವ ನೃತ್ಯಗಳನ್ನು ಪ್ರದರ್ಶಿಸಿ ಕಲಾ ರಸಿಕರನ್ನು ರಂಜಿಸಿದರು.

ಉಡುಪಿಯ ‘ದರ್ಪಣ’ ಸ್ಕೂಲ್‌ ಆಫ್‌ ಪರ್‌ಫಾರ್ಮಿಂಗ್’ನ  25  ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಲು ಆಗಮಿಸಿದ್ದರು. ಅವರಲ್ಲಿ ನಾಲ್ವರು ಜರ್ಮನಿಯವರು. ಅವರ ನೃತ್ಯ ಪ್ರದರ್ಶನ ದೇಶೀ ಪ್ರತಿಭೆಗಳಿಗೆ ಸವಾಲೆಸೆಯುವಂತಿತ್ತು. ನೃತ್ಯದ ಮೂಲಕ ಶ್ರೀಗಣೇಶನನ್ನು ವಂದಿಸಿದ ಬಗೆ ಅಲ್ಲಿದ್ದವರನ್ನೆಲ್ಲಾ ಅಕರ್ಷಿಸಿತು. ಭರತನಾಟ್ಯ, ಶ್ರೀ ಕೃಷ್ಣ ಬಾಲ ಲೀಲೆ, ಮೋಹಿನಿಯಾಟ್ಟಂ, ಚಿರ್ಮಿ ನೃತ್ಯ, ರಾಜಸ್ಥಾನದ ಕೌಲ್ ಬೇಲಿಯಾ, ನವಿಲು ನರ್ತನ, ಯೋಗ, ಮಣಿಪುರಿ, ಕತಕ್ ಹೀಗೆ ವಿವಿಧ ನೃತ್ಯಗಳನ್ನು ಪ್ರಸ್ತುತಪಡಿಸಿದರು.

ಉಡುಪಿಯ ‘ದರ್ಪಣ’ಸ್ಕೂಲ್‌ ಆಫ್‌ ಪರ್ಫಾರ್ಮಿಂಗ್’ ಆರಂಭಗೊಂಡು 4 ವರ್ಷಗಳಾಗಿದ್ದು, ಈವರೆಗೆ ಹಲವಾರು ದೇಶ ವಿದೇಶಿಯರಿಗೆ ಭಾರತೀಯ ನೃತ್ಯ ಶೈಲಿಯನ್ನು ಕುಮಾರಿ ರಕ್ಷಾ ಹಾಗೂ ರಮ್ಯ ಕಲಿಸಿಕೊಡುತ್ತಿದ್ದಾರೆ. ದೇಶದ ವಿವಿಧ ಕಡೆಗಳಲ್ಲಿ ವೈವಿಧ್ಯಮಯವಾದ ನೃತ್ಯಕಾರ್ಯಕ್ರಮಗಳ ಪ್ರದರ್ಶನ ನೀಡುತ್ತಾಬಂದಿದ್ದಾರೆ. ಅಲ್ಲದೇ, ಟಿವಿ ವಾಹಿನಿಗಳಲ್ಲಿ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು, ನಾಟ್ಯ ಮಯೂರಿ ಹಾಗೂ ಕಲಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೃತ್ತಿಯಲ್ಲಿ ಕಂಪ್ಯೂಟರ್ ಸೈನ್ಸ್‌ ಇಂಜಿನಿಯರ್‌ ಆಗಿದ್ದು, ಯಕ್ಷಗಾನ, ನೃತ್ಯ , ನಾಟಕಗಳನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾರೆ.
ಭಾರತೀಯ ನೃತ್ಯ ಶೈಲಿಯನ್ನುಕಲಿಯುವ ಆಸಕ್ತಿಯಿಂದ ಜರ್ಮನಿಯ ನಾಲ್ವರು   ಆಗಸ್ಟ್ ತಿಂಗಳಲ್ಲಿ ಉಡುಪಿಯ ’ದರ್ಪಣ ಸ್ಕೂಲ್‌ ಆಪ್‌ಪರ್ಫಾರ್ಮಿಂಗ್’ ಪ್ರವೇಶಾತಿ ಪಡೆದಿದ್ದರು.ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತೀಯ ನೃತ್ಯಕಲಿತು ಮೊದಲ ಬಾರಿಗೆ ಲಕ್ಷದೀಪೋತ್ಸವದಲ್ಲಿ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು.

ವರದಿ: ಗಾಯತ್ರಿಗೌಡ
ಚಿತ್ರಗಳು: ಅಭಿರಾಮ್ ಶರ್ಮ

2 Responses

  1. ನಯನ ಬಜಕೂಡ್ಲು says:

    ಭಾರತೀಯ ಸಂಸ್ಕೃತಿಯ ಬಗ್ಗೆ ವಿದೇಶೀಯರಿಗಿರುವ ಒಲವು ಅಪಾರ, ನಿಜ್ವಾಗ್ಲೂ ಭಾರತೀಯರೇ ಭಾರತೀಯರಾಗಿಯೂ ನಮ್ಮ ಸಂಸ್ಕೃತಿ , ಸಂಸ್ಕಾರಗಳ ಬಗ್ಗೆ ಹಲವಾರು ಬಾರಿ ಅಸಡ್ಡೆ ತೋರುತ್ತೇವೆ . ವಿದೇಶೀಯರು ಎಲ್ಲಿಂದಲೋ ಬಂದು ನಮ್ಮ ಆಚಾರ ವಿಚಾರಗಳನ್ನು ಬಹಳ ಕಡಿಮೆ ಸಮಯದಲ್ಲಿ ಅರ್ಥೈಸಿ ಅನುಸರಿಸುತ್ತಾರೆ . ಚೆನ್ನಾಗಿದೆ ಬರಹ

  2. Shankari Sharma says:

    ವಿದೇಶೀಯರನ್ನು ಕಂಡು ಮೂಗು ಮುರಿಯುವ ಬದಲು ಅವರ ನಿಷ್ಠೆ, ಇಚ್ಛಾಶಕ್ತಿಗಳನ್ನು ಗಮನಿಸದರೆ ತಿಳಿಯುವುದು ಅವರ ಪ್ರತಿಭೆ. ಸುಂದರ ಚಿತ್ರದ ಜೊತೆಗಿನ ಬಲಹ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: