ಶಿಶು ಗಾಂಧೀಜಿ ಅಂಬೆಗಾಲಿಟ್ಟರಿಲ್ಲಿ…

Share Button

ಗುಜರಾತಿನ ಆ  ಮನೆಯಲ್ಲಿ ನಾವು ಕಾಲಿಟ್ಟೊಡನೆ, ಇಲ್ಲಿ ಪುಟ್ಟ ಬಾಪು ಅಂಬೆಗಾಲಿಟ್ಟಿರಬಹುದು, ಅಲ್ಲಿ ಬಾಲಕ ಮೋಹನದಾಸ ಓಡಾಡಿರಬಹುದು ಎಂಬ ಊಹೆಯಿಂದ ನಾವು ಪುಳಕಿತರಾಗುತ್ತೇವೆ. ಹದಿನೇಳನೆಯ ಶತಮಾನದಲ್ಲಿ, ಗುಜರಾತ್ ರಾಜ್ಯದ ಪೋರ್ ಬಂದರ್ ನಲ್ಲಿರುವ ಆ ಮನೆಯಲ್ಲಿ, ಸ್ಥಳೀಯ ಮಹಿಳೆಯೊಬ್ಬರು ವಾಸವಾಗಿದ್ದರು. ಶ್ರೀ ಹರ್ ಜೀವನ್ ರಾಯ್ ದಾಸ್ ಗಾಂಧಿ ಎಂಬವರು  ಆ ಮನೆಯನ್ನು ಖರೀದಿಸಿ, ಆಮೇಲೆ ತಮಗೆ ಬೇಕಾದಂತೆ ನವೀಕರಿಸಿದರು. ಅದೇ ಮನೆಯಲ್ಲಿ ಅವರ  ಮುಂದಿನ ತಲೆಮಾರಿನ ಶ್ರೀ ಉತ್ತಮಚಂದ್ ಗಾಂಧಿ, ಅನಂತರ ಶ್ರೀ ಕರಮಚಂದ್ ಗಾಂಧಿ ಹಾಗೂ ಇತರ ಕುಟುಂಬದ ಸದಸ್ಯರೂ ವಾಸಿಸಿದ್ದರು.  ಶ್ರೀ ಕರಮಚಂದ್ ಗಾಂಧಿ ಮತ್ತು ಶ್ರೀಮತಿ ಪುತಲೀಬಾಯಿ ಅವರ ಮಗನಾಗಿ ಜನಿಸಿದ ಶಿಶುವು ಮುಂದೆ ಶ್ರೀ ಮೋಹನದಾಸ ಕರಮಚಂದ್ ಗಾಂಧಿ ಎಂದು ಕರೆಯಲ್ಪಟ್ಟು, ಸಮಾಜ ಸುಧಾರಕನಾಗಿ, ಸ್ವಾತಂತ್ರ್ಯ ಸಂಗ್ರಾಮದ ನಾಯಕನಾಗಿ, ಭಾರತದ ರಾಷ್ಟ್ರಪಿತನಾಗಿ ಲೋಕವಿಖ್ಯಾತರಾದುದು ಈಗ ಇತಿಹಾಸ.

ಮೋಹನದಾಸ್ ಕರಮಚಂದ್ ಗಾಂಧಿ ಅವರು   1869 ನೇ ಇಸವಿಯ   ಅಕ್ಟೋಬರ್  2 ರಂದು ಜನಿಸಿದರು. ಗಾಂಧೀಜಿಯವರು ಜನಿಸಿದ ಮನೆಯನ್ನು ಸ್ಮಾರಕವಾಗಿ ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ, 1944 ರಲ್ಲಿ ಅಂದಿನ ಪೋರ್ ಬಂದರ್ ನ ಆಢಳಿತಾಧಿಕಾರಿಗಳು, ಗಾಂಧೀಜಿಯವರ ಅನುಮತಿ ಪಡೆದು, ಆ ಮನೆಯನ್ನು ಮೂಲಸ್ವರೂಪದಲ್ಲಿಯೇ ಉಳಿಸಿದರು. ಅಂದಾಜು 250 ವರ್ಷದ , ಗುಜರಾತ್ ನ ‘ಹವೇಲಿ’ ಶೈಲಿಯ , ಈ ಮನೆಯ ಮೂರು ಮಹಡಿಗಳಲ್ಲಿ ಒಟ್ಟಾಗಿ 22  ಚಿಕ್ಕ, ದೊಡ್ಡ ಕೋಣೆಗಳು, ಅಲ್ಲಲ್ಲಿ ಹಸಿರು ಬಣ್ಣದ ಕಿಟಿಕಿಗಳು, ಮರದ ಏಣಿಗಳು, ಅಡುಗೆಕೋಣೆ ಇತ್ಯಾದಿ ಇವೆ. ಕೋಣೆಯೊಂದರಲ್ಲಿ, ಇದು ಗಾಂಧೀಜಿಯವರು ಜನಿಸಿದ ಸ್ಥಳ ಎಂಬ ಮಾಹಿತಿಫಲಕವಿದೆ ಹಾಗೂ ಶಿಶು ಗಾಂಧಿ ಇದ್ದ ನೆಲದ  ಮೇಲೆ  ‘ಸ್ವಸ್ತಿಕ್ ‘ ಆಕಾರದ ಗುರುತನ್ನು ಮೂಡಿಸಿದ್ದಾರೆ.

ಕಾಲಾನಂತರದಲ್ಲಿ, ಗಾಂಧೀಜಿಯವರ ಮನೆಗೆ ಹೊಂದಿಕೊಂಡಂತೆ ಭವ್ಯವಾದ ‘ಕೀರ್ತಿ ಮಂದಿರ್’ ಎಂಬ ಮ್ಯೂಸಿಯಂ ಅನ್ನು ನಿರ್ಮಿಸಿಲಾಯಿತು. ಪ್ರಸ್ತುತ ಕೀರ್ತಿಮಂದಿರದಲ್ಲಿ ಗಾಂಧೀಜಿಯವರ ಜೀವನದ ಪ್ರಮುಖ  ಘಟನಾವಳಿಗಳ ಬಗ್ಗೆ ಸಂಬಂಧಿಸಿದ ಚಿತ್ರಗಳು, ಖಾದಿ ಭಂಡಾರ್ ಹಾಗೂ ಕರಕುಶಲ ವಸ್ತುಗಳು, ಪುಸ್ತಕ ಮಳಿಗೆ,ಕ  ‘ಕಸ್ತೂರಿ ಬಾ’ ಗ್ರಂಥಾಲಯಗಳಿವೆ. ಗುಜರಾತ್ ನ  ಪ್ರಮುಖ ಪಟ್ಟಣಗಳಾದ ಅಹ್ಮದಾಬಾದ್  , ರಾಜ್ ಕೋಟ್, ಜಾಮ್ ನಗರ್ ಮೊದಲಾದ ಪಟ್ಟಣಗಳಿಂದ ಪೋರ್ ಬಂದರ್ ಗೆ ರಸ್ತೆ ಸಂಪರ್ಕವಿದೆ. ದೇಶದ ಪ್ರಮುಖ ನಗರಗಳಿಂದ ರೈಲು ಸಂಪರ್ಕವೂ ಇದೆ.

– ಹೇಮಮಾಲಾ.ಬಿ. ಮೈಸೂರು

8 Responses

  1. ನಯನ ಬಜಕೂಡ್ಲು says:

    ಸುಪರ್ಬ್ . ಒಂದೊಂದು ಮಾಹಿತಿಯೂ ನಾವು ಅಲ್ಲೆ ಇದ್ದು ಎಲ್ಲವನ್ನು ನೋಡುತ್ತಿದ್ದೇವೇನೋ ಅನ್ನೋ ಫೀಲ್ ತರುವಂತಿದೆ.

  2. ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

    ಓಹ್ ಅದೆಷ್ಟೋ ತಿಳಿಯದ ವಿಚಾರಗಳು ಈ ಲೇಖನದಲ್ಲಿವೆ.ಹೇಮಮಾಲಾ. ಗಡಿಬಿಡಿಯಲ್ಲಿ ಓದಿದ್ದು.ಸರಿಯಾಗಿ ಇನ್ನೊಮ್ಮೆ ಓದುವೆ.ಈಗ ಬೇರೆ ಕೆಲಸದ ಒತ್ತಡವಿದೆ.

  3. Savithri bhat says:

    ಉತ್ತಮ ಮಾಹಿತಿ ಇರುವ ಲೇಖನ..ಎಲ್ಲ ವಿಷಯವೂ ಕಣ್ಣಿಗೆ ಕಟ್ಟುವಂತೆ ಬರೆದಿರುವಿರಿ.. ಧನ್ಯವಾದಗಳು

  4. Anonymous says:

    ಹೌದು,ಅಲ್ಲಿ ಮಹಾತ್ಮಾ ಪುಟ್ಟು ಶಿಶುವಾಗಿ ಮಲಗಿದ್ದರೆಂಬ ಕಲ್ಪನೆಯೇ ರೋಮಾಂಚನಕಾರಿ. ಅಲ್ಲೇ ನಿಂದು ಕಳೆದುಹೋಗಿದ್ದ ನನ್ನನ್ನು
    ನನ್ನವರರು ವಾಸ್ತವಕ್ಕೆ ಕರೆಯಬೇಕಾಗಿ ಬಂದಿತ್ತು.ಅವರ್ಣನೀಯ ಅನುಭವವೇ ಸರಿ

  5. Parvathikrihna says:

    ಹೌದು ಅವರ್ಣನೀಯ ಅನುಭವವೇ ಸರಿ . ಮಹಾತ್ಮಾ ಪುಟ್ಟು ಮಗುವಾಗಿ ಮಲಗಿದ್ದಾರಿಲ್ಲಿ ಎಂಬ ಊಹೆಯಲ್ಲಿ ಕಳೆದುಹೋದ ನನ್ನನ್ನು ವಾಸ್ತವಕ್ಕೆ ತಂದುದು ನನ್ನವರ ಕರೆ .

    • Hema says:

      ಹೌದು..ಇಂತಹ ಸ್ಥಳಗಳು ನಮ್ಮನ್ನು ಇತಿಹಾಸಕ್ಕೆ ಕರೆದೊಯ್ಯುತ್ತವೆ. ಧನ್ಯವಾದಗಳು…

  6. Shankari Sharma says:

    ಅಪರೂಪದ, ಉತ್ತಮ ಮಾಹಿತಿಯುಕ್ತ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: