ಜನಮನ ಸೆಳೆವ ಮಣ್ಣಿನ ಪಾತ್ರೆಗಳು
ಅನಾದಿ ಕಾಲದ ಮಣ್ಣಿನ ಪಾತ್ರೆಗಳಿಗೆ ಮರುಜೀವ ದೊರೆತಿದೆ. ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದರ ಮೂಲಕ ಪ್ರಕೃತಿಯನ್ನು ಸಂರಕ್ಷಿಸಿ ಎಂಬ ಸಂದೇಶವನ್ನು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವದ ಮೂಲಕ ಸಾರಲಾಗುತ್ತಿದೆ.
ಮಣ್ಣಿನ ಪಾತ್ರೆಗಳು ಪರಿಸರ ಸ್ನೇಹಿಯಾಗಿವೆ. ಯಾವುದೇ ರಾಸಾಯನಿಕ ಅಂಶಗಳ ಮಿಶ್ರಣವಿಲ್ಲದಿರುವುದರಿಂದ ಪ್ರಕೃತಿಗೆ ಯಾವುದೇ ಹಾನಿಯಾಗುವುದಿಲ್ಲ. ಹಾಗೇ ಇದರ ಶುಚಿತ್ವಕ್ಕೆ ಸಾಬೂನಿನ ಅಗತ್ಯವಿರುವುದಿಲ್ಲ. ಇದರಿಂದ ನೀರನ್ನು ಕಡಿಮೆ ಮಟ್ಟದಲ್ಲಿ ಉಪಯೋಗಿಸಬಹುದು. ಇದರೊಂದಿಗೆ ಅಲ್ಯೂಮಿನಿಯಂ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸಿ ರೋಗಗಳಿಗೆ ಆಹ್ವಾನ ನೀಡುವುದರ ಬದಲು, ಈ ನೈಸರ್ಗಿಕ ಕಚ್ಚಾವಸ್ತುಗಳನ್ನು ಉಪಯೋಗಿಸುವುದರಿಂದ ಆರೋಗ್ಯವು ವೃದ್ದಿಸುತ್ತದೆ. ಜೊತೆಗೆ ಪರಿಸರವನ್ನು ಸಂರಕ್ಷಿಸಿದ ಹಾಗೆ ಆಗುತ್ತದೆ ಎಂದು ಸ್ಥಳೀಯ ಗ್ರಾಹಕ ಹರೀಶ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕಳೆದ ಒಂದು ವರ್ಷಗಳಿಂದ ಮಂಗಳೂರು ನಗರದಲ್ಲಿ ಜಯರಾಜ್ ಪವನ್ ಕಾರ್ಪೋರೇಷನ್ ಕಂಪನಿ ನಡೆಸುತ್ತಿದ್ದಾರೆ. ಮಣ್ಣಿನ ಪಾತ್ರೆಗಳ ಪ್ರಾಮುಖ್ಯತೆಯನ್ನು ನಾಡಿನೆಲ್ಲೆಡೆ ಪಸರಿಬೇಕೆಂಬ ಉದ್ದೇಶದಿಂದ ಪರಿಸರ ಸ್ನೇಹಿ ಉದ್ಯಮ ಸ್ಥಾಪಿಸಿದ್ದಾರೆ. ಬೆಂಗಳೂರಿನ ಓರ್ವ ವಾಣಿಜ್ಯೋದ್ಯಮಿಯಿಂದ ಪ್ರೇರಣೆ ಪಡೆದ ಜಯರಾಜ್, ಆ ಉದ್ಯಮಿ ಬಳಿ ಮಣ್ಣಿನ ಉತ್ಪನ್ನಗಳ ಮಾಹಿತಿ ಪಡೆದು ಪರಿಸರಸ್ನೇಹಿ ಉದ್ಯಮವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಇದೇ ಮೊಟ್ಟಮೊದಲ ಬಾರಿಗೆ ವಸ್ತುಪ್ರದರ್ಶನ ಮಳಿಗೆಯಲ್ಲಿ ಈ ವ್ಯಾಪಾರವನ್ನು ಆರಂಭಿಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಹೇಳಿದರು. ಹಿಂದಿನ ಪಾರಂಪರಿಕ ಆಚಾರ ವಿಚಾರಗಳನ್ನು ಉಳಿಸಿ ಬೆಳಸಬೇಕೆಂಬ ಉದ್ದೇಶದಿಂದ ಅಂಗಡಿಯನ್ನು ಆರಂಭಿಸಿದ್ದೇನೆ. ಆಧುನಿಕತೆಯ ಸ್ಪರ್ಶದಿಂದ ನಮ್ಮ ಸಂಪ್ರದಾಯಿಕ ಜೀವನ ಶೈಲಿ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಇಂದಿನ ಬಿಡುವಿಲ್ಲದ ಯಾಂತ್ರಿಕ ಬದುಕಿಗೆ ಒಗ್ಗಿಹೋಗಿರುವ ನಾವು ಪ್ಲಾಸ್ಟಿಕ್, ಕೋಪರ್, ಸ್ಟಿಲ್ ಪಾತ್ರೆಗಳ ಮೊರೆಹೋಗುತ್ತಿದ್ದೇವೆ. ಪರಿಣಾಮವಾಗಿ ಮಣ್ಣಿನ ಪಾತ್ರೆ ಕಣ್ಮರೆಯಾಗುತ್ತಿದೆ ಎಂದು ಹೇಳಿದರು.
.
ಎಸ್‌ಡಿಎಂ ಕಾಲೇಜು, ಉಜಿರೆ
ಬರಹ ಇಷ್ಟವಾಯಿತು. ಆಧುನಿಕ ಅಡುಗೆಮನೆಗಳಲ್ಲಿ ಮರೆಯಾಗುತ್ತಿರುವ ಮಣ್ಣಿನ ಪಾತ್ರೆಗಳನ್ನು ನೋಡಿದಾಗ ಹಳೆಯ ನೆನಪುಗಳು ಮರುಕಳಿಸಿದುವು.
ಮಣ್ಣಿನ ಪಾತ್ರೆಕೊಳ್ಳಬೇಕೆಂಬ ಅಮ್ಮ ಹಿಡಿಸಿದ ಆಸೆಗೆ ಇಂಬುಕೊಡುವ ಲೇಖನ. ನನಗೆ ತಿಳಿದಹಾಗೆ ಪುತ್ತೂರಿನಲ್ಲೂ ಕುಂಬಾರರ ಸಂಘದ ಸಾಂಪ್ರದಾಯಿಕ ಮಡಿಕೆ-ಕುಡಿಕೆಗಳ ಘಟಕವೊಂದರ ಜೊತೆಗೆ, ನವೀನ ವಿನ್ಯಾಸದ ಪರಿಸರಸ್ನೇಹಿ ಮಣ್ಣಿನ ಪಾತ್ರೆಗಳು ದೊರಕುವ ಎರಡು ಅಂಗಡಿಗಳಿವೆ.