ಪ್ರಕೃತಿ-ಪ್ರಭೇದ

ಡ್ರಾಗನ್ ಪ್ರೂಟ್

Share Button

ಈ ಹೂವು ನೋಡಲು ಬ್ರಹ್ಮ ಕಮಲದಂತೆ ಕಾಣುತ್ತದೆ.ಇದು ಎಷ್ಟು ಚೆನ್ನವೋ ಅದಕ್ಕಿಂತಲೂ ಇದರಹಣ್ಣು ಇನ್ನೂ ಚೆನ್ನ.
ಈ ಸೃಷ್ಟಿಕರ್ತ ಊಹೆಗೆ ನಿಲುಕದಂತಹ ನಿಗೂಡತೆಯ ಕಲಾಕಾರ. ಯಾಕೆಂದರೆ ಒಂದೊಂದು ಹೂವಿಗೂ ಒಂದೊಂದು ಬಣ್ಣ. ಬೇರೆ ಬೇರೆ ಪರಿಮಳ.ವಿದವಿಧದ ಅಂದದ ಆಕಾರ .ತರತರದ ಸ್ಪರ್ಶಮೃದುತ್ವ .ಅದನ್ನು ಹೊರುವ ಗಿಡಗಳೂ ಕೂಡಾ ಒಂದಕ್ಕಿಂತ ಒಂದು ಎಲೆ ಕಾಂಡ ಎಲ್ಲವೂ ವಿಭಿನ್ನ ವಾಗಿವೆ.

ಹಣ್ಣುಗಳೂ ಅಷ್ಟೆ.ಮಾವಿನ ಹಣ್ಣಿದ್ದಂತೆ ಇನ್ನೊಂದಿಲ್ಲ. …ಬಾಳೆಯ ಹಣ್ಣಿದ್ದಂತೆ ಮತ್ತೊಂದಿಲ್ಲ.ಎಲ್ಲಕ್ಕೂ ಸುವಾಸನೆ ರುಚಿ , ಶಕ್ತಿ, ಒಳ ಹೊರಗು ,ತೊಗಟೆ ತಿರುಳು ,ಅಂಟು ,ಬೀಜಗಳು ಎಲ್ಲವೂ ಯಾವುದೂ ಒಂದನ್ನೊಂದು ಹೋಲಿಕೆ ಇಲ್ಲದ್ದು.. ಹೇಳುತ್ತಾ ಹೋದರೆ ಮನುಷ್ಯ ನ ರೂಪ ಕೂಡಾ ಒಬ್ಬರಂತೆ ಒಬ್ಬರಿಲ್ಲ. ಬಿಳಿಯರು ಕರಿಯರು.ದೇಶ ವಿದೇಶಗಳ ಬೌಗೋಳಿಕಾ ಚರ್ಯೆ,ಬೆಳೆ ತಿನಿಸು ಸಂಸ್ಕೃತಿ ನೀತಿನಿಯಮ ಕೂಡಾ ಬೇರೆಯೆ ಇರುತ್ತದೆ.ಸೃಷ್ಟಿಕರ್ತ ಎಂತಹ ಲೋಕೋಭಿರುಚಿ ತಿಳಿದವನು.

ಏನೋ ಹೇಳಲು ಹೊರಟವಳು ,ಏನೋಹೇಳಿದೆ!ಪಕ್ಕದ ಮನೆಯವರು ಬೆಳೆಸಿದ ಈಗಿಡ ಕಾಂಪೌಂಡ್ ದಾಟಿ ನಮ್ಮ ಮಗಳ ಮನೆಯ ಒಳಾವರಣಕ್ಕೂ ಇಳಿಬಿದ್ದಿದೆ. ಈ ಹಣ್ಣಿನ ಹೊರಾವರಣಕ್ಕೆ ಇದರ ಕರ್ತೃ ಕುಂಚದಿಂದ ಕಡು ಗುಲಾಬಿಬಣ್ಣವನ್ನು ಬಳಿದಿದ್ದಾನೆ .ಅದೆಂತಹ ಬಣ್ಣ ಎಂದರೆ ಕಣ್ಣಿಗೆ ರಾಚುವಂತೆ. ಬಣ್ಣಗಳೆಲ್ಲ ನಾಚುವಂತಿರುವ ಕಣ್ಸೆಳೆಯುವ ಬಣ್ಣ. ಒಳಗೆ ಸಣ್ಣಸಣ್ಣ ಎಳ್ಳಿನಂತಹ ಕಪ್ಪು ಬೀಜದ ಸಮೇತ ತಿನ್ನುವ ರುಚಿವತ್ತಾದ ತಿರುಳಿನಿಂದ ಕೂಡಿದೆ.

 


ಇದಕ್ಕೆ ಇಲ್ಲಿ ಡ್ರಾಗನ್ ಪ್ರೂಟ್ ಎನ್ನುತ್ತಾರೆ. ಇದನ್ನು (pitahaya)ಅಂತಲೂ ಹೇಳುವ ಇದು ಕ್ಯಾಕ್ಟಸ್ ಜಾತಿಗೆ ಸೇರಿದೆ.ಹೂವುಗಳು ಅರಳಿ ಒಂದೇದಿನದಲ್ಲಿ ಮುದುಡಿ ಹಣ್ಣುಗಳು ಬಿಡಲು ಪ್ರಾರಂಭವಾಗುತ್ತದೆ. ಈ ಹಣ್ಣಿನಲ್ಲಿ ಬಿ 1ಬಿ2ಬಿ3 ಮೂರು ವಿಟಮಿನ್ ಗಳು ಹೇರಳವಾಗಿ ದ್ದು ಜೀರ್ಣಕ್ರಿಯೆಗೆ ಸಹಾಯವಾಗಿ ಫೈಬರ್ ಇದ್ದು ಆರೋಗ್ಯಯುಕ್ತವಾದ ಹಣ್ಣು ಇದಾಗಿದೆ. ವಿಟಮಿನ್ ಸಿ ಮತ್ತು ಐರನ್ ಹೆರಳವಾಗಿದ್ದು ಮೂಳೆ ಮತ್ತು ಹಲ್ಲುಗಳು ಬಲಗೊಳ್ಳುತ್ತವೆಎಂದು ಹೇಳಲಾಗುತ್ತದೆ ಮಾರುಕಟ್ಟೆಯಲ್ಲಿ ಇದು ತುಂಬಾ ದುಬಾರಿ.  ಇದನ್ನು ಬೆಳೆಯಲು ಅವಕಾಶವಿದ್ದವರು ಬೆಳೆಯಲು ಪ್ರಯತ್ನಿಸಬಹುದು.

.

 -ಪುಷ್ಪಾ ನಾಗತಿಹಳ್ಳಿ

 

One comment on “ಡ್ರಾಗನ್ ಪ್ರೂಟ್

Leave a Reply to Shruthi Cancel reply

 Click this button or press Ctrl+G to toggle between Kannada and English

Your email address will not be published. Required fields are marked *