ಹಸಿರು ಬಟಾಣಿ – ಅಕ್ಕಿಯ ಉಂಡೆ.

Share Button

batani-carrot-akki-unde

ಈಗ ಹಸಿರು ಬಟಾಣಿಕಾಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂದು ಬೆಳಗಿನ ತಿಂಡಿಗೆ ಹಸಿಬಟಾಣಿ, ಕ್ಯಾರೆಟ್, ಒಗ್ಗರಣೆ ಸೇರಿಸಿದ ಅಕ್ಕಿಯ ಉಂಡೆ. ತಯಾರಿಸುವ ವಿಧಾನ:

4 ಕಪ್ ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೀರಲ್ಲಿ ನೆನೆಸಿ. ನೆನೆದ ಅಕ್ಕಿಗೆ 2 ಚಮಚ ಕಾಯಿ ತುರಿ, 2 ಹಸಿರುಮೆಣಸಿನಕಾಯಿ ಸೇರಿಸಿ ತರಿತರಿಯಾಗಿ ರುಬ್ಬಿ. ದೋಸೆ ಹಿಟ್ಟಿನಷ್ಟು ತೆಳ್ಳಗೆ ಇರಲಿ.

ಒಂದು ಬಾಣಲೆಯಲ್ಲಿ ಸ್ವಲ್ಪ ಕಡ್ಲೆಬೇಳೆ, ಉದ್ದಿನಬೇಳೆ, ಸಾಸಿವೆ, ಕರಿಬೇವಿನಸೊಪ್ಪು ಮತ್ತು ಎಣ್ಣೆ ಸೇರಿಸಿ ಒಗ್ಗರಣೆ ಮಾಡಿಟ್ಟುಕೊಳ್ಳಿ. ಈ ಒಗ್ಗರಣೆಗೆ ರುಬ್ಬಿಟ್ಟ ಅಕ್ಕಿಹಿಟ್ಟನ್ನು ಹಾಕಿ. 3 ಚಮಚೆಯಷ್ಟು ಸುಲಿದಿಟ್ಟ ಹಸಿ ಬಟಾಣಿ ಮತ್ತು ಸ್ವಲ್ಪ ತುರಿದ ಕ್ಯಾರೆಟ್ ಅನ್ನೂ ಸೇರಿಸಿ.

ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಈ ಮಿಶ್ರಣವನ್ನು ಸಣ್ಣ ಉರಿಯಲ್ಲಿಟ್ಟು ಸೌಟಿನಲ್ಲಿ ತಿರುವುತ್ತಾ ಕಾಯಿಸಿದಾಗ ದೊಡ್ಡ ಉಂಡೆಯಾಗುತ್ತದೆ. ಅರ್ಧ ಬೆಂದ ಈ ಹಿಟ್ಟಿನಿಂದ ದೊಡ್ಡ ನಿಂಬೆಹಣ್ಣು ಗಾತ್ರದ ಉಂಡೆಗಳನ್ನು ಮಾಡಿ, ಇಡ್ಲಿಪಾತ್ರೆಯಲ್ಲಿ ಅಥವಾ ಕುಕ್ಕರಿನಲ್ಲಿ ( ಹಬೆಯಲ್ಲಿ) ಬೇಯಿಸಿ. ಕಾಲು ಗಂಟೆಯಲ್ಲಿ ಅಕ್ಕಿಯ ಉಂಡೆ ಸಿದ್ಧವಾಗುತ್ತದೆ. ಯಾವುದಾದರೂ ಚಟ್ನಿಯ ಜೊತೆಗೆ ತಿನ್ನಲು ರುಚಿ.

 

 – ಹೇಮಮಾಲಾ.ಬಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: